Breaking News

Daily Archives: ಫೆಬ್ರವರಿ 26, 2025

ರೌಡಿಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಮಂಡ್ಯ : ಪುಡಿ ರೌಡಿಗಳ ಅಟ್ಟಹಾಸ ನಿಯಂತ್ರಣಕ್ಕೆ ಮುಂದಾಗಿರುವ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ, ಮೂರು ಪ್ರಕರಣಗಳಲ್ಲಿ 17 ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಗೆ ಗುಂಡೇಟು ನೀಡಿದ್ದಾರೆ. ಐದಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಭಾಷ್ ಅಲಿಯಾಸ್​​ ಸುಬ್ಬು ಎಂಬಾತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಮಂಡ್ಯ ತಾಲೂಕಿನ ಬಿ.ಹೊಸೂರು ಸಮೀಪ ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಬಂಧಿಸಲಾಗಿದೆ. ಈತ​​ ಬಿ.ಹೊಸೂರು ಸಮೀಪ …

Read More »

ಬೆಳಗಾವಿಯಲ್ಲಿ ಕಟರ್ ಬಳಸಿ ಎಟಿಎಂ ಹಣ ಕಳ್ಳತನ

ಬೆಳಗಾವಿ : ಗ್ಯಾಸ್​​​ ಕಟರ್​ ಮಷಿನ್​ ಬಳಸಿ ದುಷ್ಕರ್ಮಿಗಳು ಎಟಿಎಂ ಹಣ ಕಳ್ಳತನ ಮಾಡಿರುವ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಮಧ್ಯರಾತ್ರಿ‌ 2 ಗಂಟೆ ಸುಮಾರಿಗೆ ನಡೆದಿದೆ. ಸಾಂಬ್ರಾ ಗ್ರಾಮದ ಮುಖ್ಯ ರಸ್ತೆಯಲ್ಲಿ ಇರುವ ಎಸ್​ಬಿಐ ಬ್ಯಾಂಕ್​ ಎಟಿಎಂ ಇದಾಗಿದ್ದು, ಕೇವಲ 7 ನಿಮಿಷದಲ್ಲಿ ಕಳ್ಳರು ಗ್ಯಾಸ್ ಕಟರ್ ಬಳಸಿ ಎಟಿಎಂ ಕಳ್ಳತನ ಮಾಡಿದ್ದಾರೆ. ಎಟಿಎಂ‌ನಲ್ಲಿದ್ದ 75,600 ‌ರೂಪಾಯಿ ಹಣ ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ …

Read More »

ಬಂದರು ಕಾಮಗಾರಿಗೆ ವಿರೋಧಿಸಿ ಸಮುದ್ರಕ್ಕಿಳಿದು ಪ್ರತಿಭಟನೆ

ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡ ಸಮುದ್ರ ದಂಡೆಯ ಟೊಂಕಾ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮಂಗಳವಾರ ಪೊಲೀಸ್ ಸರ್ಪಗಾವಲಿನಲ್ಲಿ ಮೋಜಣಿ (ಸರ್ವೆ) ಕಾರ್ಯ ನಡೆಸಲಾಗಿದೆ. ಪ್ರದೇಶದ ಸುತ್ತಮುತ್ತ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಫೆಬ್ರವರಿ 26ರ ರಾತ್ರಿ 10 ಗಂಟೆವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮತ್ತೊಂದು ಆದೇಶ ಹೊರಡಿಸಿದ್ದಾರೆ. ಮಂಗಳವಾರ ಮೀನುಗಾರ ಮಹಿಳೆಯರು ಮತ್ತು ಮೀನುಗಾರರು ಸಮುದ್ರಕ್ಕೆ ಇಳಿದು ಎದೆಮಟ್ಟದ ನೀರಿನಲ್ಲಿ ಮುಳುಗಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಮುದ್ರದ ಅಲೆಗಳು …

Read More »

ಅಧಿಕಾರಿಗಳ ದಾಳಿ ವೇಳೆ ಗೋಡೌನ್​ನಲ್ಲಿ ಪತ್ತೆಯಾದ ಪೌಷ್ಟಿಕ ಆಹಾರದ ಚೀಲಗಳು

ಹುಬ್ಬಳ್ಳಿ, ಫೆಬ್ರವರಿ 26: ಹುಬ್ಬಳ್ಳಿಯ ಗಬ್ಬೂರಿನಲ್ಲಿರುವ ಗೋದಾಮಿನೊಂದರ ಮೇಲೆ ಫೆ. 15ರಂದು ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ, ಬಡ ಮಕ್ಕಳಿಗೆ, ಬಾಣಂತಿಯರಿಗೆ ಮತ್ತು ಗರ್ಭಿಣಿಯರಿಗೆ ವಿತರಣೆ ಮಾಡಬೇಕಾದ ಲಕ್ಷಾಂತರ ರೂ. ಮೌಲ್ಯದ ಪೌಷ್ಟಿಕ ಆಹಾರದ ಪಾಕೇಟ್‌ಗಳು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿತ್ತು. ಇದೇ ಪ್ರಕರಣದಲ್ಲಿ ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸರು 18 ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 26 ಜನರನ್ನು ಬಂಧಿಸಿದ್ದರು. ಆದರೆ, ಪ್ರಕರಣದ ಮುಖ್ಯ ಕಿಂಗ್‌ಪಿನ್‌ಗಳು ದಾಳಿ ನಡೆದು 13 ದಿನವಾದರೂ …

Read More »

ಬೆಳಗಾವಿ-ಮಿರಜ್ ರೈಲು ಸಂಚಾರ ಭಾಗಶಃ ರದ್ದು

ಹುಬ್ಬಳ್ಳಿ, ಫೆಬ್ರವರಿ 26: ವಿವಿಧ ಕಾರ್ಯಾಚರಣೆಯ ಕಾರಣಗಳಿಂದಾಗಿ, ಈಗಾಗಲೇ ತಾತ್ಕಾಲಿಕವಾಗಿ ರದ್ದುಗೊಂಡಿರುವ ಕೆಲವು ರೈಲು (Train) ಸೇವೆಗಳ ರದ್ದತಿಯನ್ನು ಮತ್ತು ಭಾಗಶಃ ರದ್ದತಿಯನ್ನು ವಿಸ್ತರಲಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ (South Western Railway zone) ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ. ಮಿರಜ್-ಕ್ಯಾಸಲ್ ರಾಕ್ ರೈಲುಗಳ ಭಾಗಶಃ ರದ್ದತಿ ವಿಸ್ತರಣೆ ಹುಬ್ಬಳ್ಳಿ ರೈಲ್ವೆ ವಿಭಾಗದ ಕ್ಯಾಸಲ್ ರಾಕ್-ಲೋಂಡಾ ಭಾಗದಲ್ಲಿ ನಡೆಯ ತಿರುವ ರೈಲ್ವೆ ವಿದ್ಯುದೀಕರಣ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳಿಂದಾಗಿ, ಈ ಕೆಳಗಿನ …

Read More »

ಕರಾಳ ದಿನ ಅನಿಸಿದ್ದಂತು ಸತ್ಯ.

ಪ್ರಾಯಾಗರಾಜ ಯಾತ್ರೆ ಮುಗಿಸಿ ತಿರುಗಿ ಬರುವಾಗ ಜಬಲ್ಪುರ ನಗರಕ್ಕೆ ಬಂದು ನಿನ್ನೆ ರಾತ್ರಿ ವಾಸ್ತವ್ಯ ಮಾಡಿದ್ವಿ ಇವತ್ತು ಬೆಳಗ್ಗೆ 7 ಕೆ ಜಳಕ ಪೂಜಾ ಮುಗಿಸಿ ಹೊರಡಬೇಕು ಅನ್ನೋ ಹೊತ್ತಿಗೆ ನಮ್ಮ ಬೆಳಗಾವಿ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ Sandeep Deshpande ಅವರು ಪೋನ್ ಮಾಡಿ ಎಲ್ಲಿದ್ದೀರಿ ನಿನ್ನೆ ನೀವು ಜನಲ್ಪುರ ದಲ್ಲಿ ವಸತಿ ಇದ್ರಿ ಅಲ್ವಾ ಅಂದ್ರು ಹೌದು ಎಂದ ನಂತರ ಅರ್ಜೆಂಟಾಗಿ ಜಿಲ್ಲಾಧ್ಯಕ್ಷರಿಗೆ ಕಾಲ್ ಮಾಡಿ …

Read More »

ಗ್ರಾಮೀಣ ಪ್ರದೇಶದ ಜನರು ತಾಲೂಕಾ ಕೇಂದ್ರವಾಗಿರುವ ಮೂಡಲಗಿ ಮತ್ತು ಗೋಕಾಕ್ ನಗರಕ್ಕೆ ಹೋಗಲು ಬಸ್ ಪ್ರಯಾಣಿಕರ ತಂಗುದಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಜನರು ತಾಲೂಕಾ ಕೇಂದ್ರವಾಗಿರುವ ಮೂಡಲಗಿ ಮತ್ತು ಗೋಕಾಕ್ ನಗರಕ್ಕೆ ಹೋಗಲು ಬಸ್ ಪ್ರಯಾಣಿಕರ ತಂಗುದಾನಗಳ ಅವಶ್ಯಕತೆ ಬಹಳಷ್ಟು ಇತ್ತು ಅದನ್ನು ಮನಗಂಡು ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ಗ್ರಾಮಗಳಲ್ಲಿ ಬಸ್ ತಂಗುದಾನ ನಿರ್ಮಾಣ ಮಾಡಲಾಗಿದೆ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕರೆ ನೀಡಿದರು. ಮೂಡಲಗಿ ತಾಲೂಕಿನ ಶಿವಾಪೂರ (ಹ), ಮುನ್ಯಾಳ ಮತ್ತು ಕಮಲದಿನ್ನಿ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ನಿರ್ಮಿಸಲಾದ …

Read More »

2024 – 25ರಲ್ಲಿ ಪಂಚ ಗ್ಯಾರಂಟಿಗೆ ಬಿಡುಗಡೆಯಾದ SCSPTSP ಹಣವೆಷ್ಟು? –

ಬೆಂಗಳೂರು: ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಗಣನೀಯವಾಗಿ ಪರಿಶಿಷ್ಠರಿಗೆ ಮೀಸಲಿಟ್ಟ ಅನುದಾನ ಬಳಕೆ ಮಾಡಲಾಗುತ್ತಿದೆ. ಗ್ಯಾರಂಟಿಗಳಿಗೆ ಬಹುಪಾಲು ಹಣ ಬಳಕೆಯಾಗುತ್ತಿರುವುದು ಎಸ್​ಸಿಎಸ್​ಪಿ ಮತ್ತು ಟಿಎಸ್​​ಪಿ ಹಣ. ಈ ಸಂಬಂಧ ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಅಷ್ಟಕ್ಕೂ ಈವರೆಗೆ ರಾಜ್ಯ ಸರ್ಕಾರ ಎಸ್​ಸಿಎಸ್​ಪಿ ಮತ್ತು ಟಿಎಸ್​​ಪಿ ಅನುದಾನದಿಂದ ಪಂಚ ಗ್ಯಾರಂಟಿಗಳಿಗಾಗಿ ಹಣ ಬಿಡುಗಡೆ ಮಾಡಿದ್ದೆಷ್ಟು ಎಂಬ ಸಮಗ್ರ ವರದಿ ಇಲ್ಲಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ …

Read More »