ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮುಂಬೈನ ಅಂಧೇರಿ ಸಮೀಪದ ಚಾಂದೀವಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಸೀಂಖಾನ್ ಕಚೇರಿಗೆ ತೆರಳಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಮವಾರ ತಡರಾತ್ರಿ ಸಿಎಂ ಏಕನಾಥ ಶಿಂಧೆ ಖಾನ್ ಅವರ ಕಚೇರಿ ಮುಂದೆ ತೆರಳುತ್ತಿದ್ದರು. ಈ ವೇಳೆ ಆ ಪಕ್ಷದ ಕಾರ್ಯಕರ್ತರು “ವಿಶ್ವಾಸಘಾತಕ’ ಎಂದು ಘೋಷಣೆ ಹಾಕಿದ್ದರು. ಜತೆಗೆ ಶಿಂಧೆ ಕಾರನ್ನು ತಡೆಯಲು ಯತ್ನಿಸಿದರು ಎಂದು ಆರೋಪಿಸಲಾಗಿದೆ. ಇದರಿಂದ ಕೋಪಗೊಂಡ ಅವರು ಕಾರಿನಿಂದ ಇಳಿದು ಅಭ್ಯರ್ಥಿಯ ಕಚೇರಿಗೆ …
Read More »Yearly Archives: 2024
ರಾಹುಲ್ ತೊರೆದ ವಯನಾಡಲ್ಲಿ ಗೆಲ್ಲುತ್ತಾರಾ ಪ್ರಿಯಾಂಕಾ ಗಾಂಧಿ ?
ವಯನಾಡ್: ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ಕೇರಳದ ವಯನಾಡ್ ಲೋಕಸಭೆ ಕ್ಷೇತ್ರದ ಉಪಚುನಾವಣೆ ಬುಧವಾರ(ನ.13) ನಡೆಯಲಿದೆ. ಕಾಂಗ್ರೆಸ್‌ನ ಗಾಂಧಿ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆಯಿಂದಾಗಿ ಈ ಉಪಚುನಾವಣೆಯು ದೇಶದ ಗಮನ ಸೆಳೆದಿದೆ. ಇಲ್ಲಿಂದ ಗೆದ್ದರೆ ಪ್ರಿಯಾಂಕಾ ಅವರು ಅಧಿಕೃತವಾಗಿ ಚುನಾವಣ ರಾಜಕಾರಣಕ್ಕೆ ಪ್ರವೇಶ ಪಡೆಯಲಿದ್ದಾರೆ. ಆಗಸ್ಟ್‌ನಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ತತ್ತರಿಸಿರುವ ವಯನಾಡು ಜನರು ಆರೇಳು ತಿಂಗಳಲ್ಲೇ ಮತ್ತೂಮ್ಮೆ ತಮ್ಮ ಬೆರಳಿಗೆ ಶಾಯಿ ಹಚ್ಚಿಸಿಕೊಳ್ಳಲು ಸಿದ್ಧರಾಗಿದ್ದಾರೆ. …
Read More »ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ
ಬೆಂಗಳೂರು: ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬುಧವಾರ ಮತದಾನ ನಡೆಯಲಿದ್ದು, ಚುನಾವಣ ಆಯೋಗ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 45 ಅಭ್ಯರ್ಥಿ ಗಳ ಭವಿಷ್ಯವನ್ನು ಮತದಾರ ಬರೆಯ ಲಿದ್ದಾನೆ. ಶಿಗ್ಗಾಂವಿ, ಸಂಡೂರು, ಚನ್ನ ಪಟ್ಟಣ ಸೇರಿ 3 ವಿಧಾನಸಭಾ ಕ್ಷೇತ್ರ ಗಳಲ್ಲಿ 7 ಲಕ್ಷಕ್ಕೂ ಅಧಿಕ ಮತ ದಾರ ರಿದ್ದು, ಮತದಾನಕ್ಕಾಗಿ 770 ಮತಗಟ್ಟೆ …
Read More »ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!
ಬೆಂಗಳೂರು: ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರು ಭ್ರಷ್ಟರ ಬೇಟೆ ಮುಂದುವರಿಸಿದ್ದು, ಮಂಗಳವಾರ ರಾಜ್ಯಾದ್ಯಂತ ಏಕಕಾಲಕ್ಕೆ 8 ಅಧಿಕಾರಿಗಳಿಗೆ ಸೇರಿದ 37 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ದಾಳಿಗೆ ಒಳಗಾದ ಅಧಿಕಾರಿಗಳ ಬಳಿ 22.50 ಕೋಟಿ ರೂ. ಮೌಲ್ಯದ ಆದಾಯ ಮೀರಿದ ಆಸ್ತಿ ಪತ್ತೆಯಾಗಿದೆ. ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಳಗಾವಿಯಲ್ಲಿ 2, ಹಾವೇರಿ, ದಾವಣಗೆರೆ, ಬೀದರ್, ಮೈಸೂರು, ರಾಮನಗರ ಮತ್ತು ಧಾರವಾಡದಲ್ಲಿ ತಲಾ ಒಂದರಂತೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ …
Read More »ರಿಕ್ಷಾ ಚಾಲಕನ ಮೇಲೆ ಅಪರಿಚಿತ ದುಷ್ಕರ್ಮಿಗಳ ದಾಳಿ
ಬೆಳಗಾವಿ: ಆಟೋ ರಿಕ್ಷಾ ಚಾಲಕನ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿ ಕತ್ತು ಸೀಳಿ ಹಲ್ಲೆ ಮಾಡಿದ ಘಟನೆ ನಗರದ ಎಸ್.ಸಿ.ಮೋಟರ್ಸ್ ಬಳಿ ನ.11ರ ಸೋಮವಾರ ತಡರಾತ್ರಿ ನಡೆದಿದೆ. ತಾಲೂಕಿನ ಉಚಗಾಂವ ಗ್ರಾಮದ ರಿಯಾಜ್ ತಹಶೀಲ್ದಾರ (55) ಎಂಬ ರಿಕ್ಷಾ ಚಾಲಕನ ಮೇಲೆ ಅಜ್ಞಾತರ ಗುಂಪು ದಾಳಿ ನಡೆಸಿದ್ದು, ಕತ್ತು ಸೀಳಿ ಹಲ್ಲೆ ಮಾಡಿದೆ. ಗಾಯಗೊಂಡ ಆಟೋ ಚಾಲಕ ರಿಯಾಜ್ ಕೂಡಲೇ ಮಾರ್ಕೆಟ್ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ವಿಷಯ …
Read More »ಬೆಳಗಾವಿ: ಮೂವರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ
ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಮೂರು ಕಡೆ ಮೂವರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತರು ಮಂಗಳವಾರ ದಾಳಿ ನಡೆಸಿದರು. ಸದ್ಯ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿರುವ ವೆಂಕಟೇಶ ಮಜುಂದಾರ್ ಅವರ ಬೆಳಗಾವಿ ಮನೆ ಮೇಲೆ ದಾಳಿ ನಡೆದಿದೆ. ಈ ಮೊದಲು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದ ವೆಂಕಟೇಶ ಇಲ್ಲೂ ಮನೆ ಖರೀದಿಸಿದ್ದಾರೆ. ಗೋವಿಂದ ಹನುಮಂತಪ್ಪ ಭಜಂತ್ತಿ ಅವರ ಮನೆ ಇನ್ನೊಂದೆಡೆ, ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಶಿವಪ್ಪ ಅವರ …
Read More »ಹಾವೇರಿಯಲ್ಲಿ ಲೋಕಾ ದಾಳಿ ವೇಳೆ ಹೈಡ್ರಾಮ! 9 ಲಕ್ಷ ಹಣವನ್ನು ಗಂಟು ಕಟ್ಟಿ ಮನೆಯಿಂದ ಹೊರಗೆಸೆದ ಅಧಿಕಾರಿ
ಇಂದು ಬೆಳಗ್ಗೆ ಹಾವೇರಿ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಳಗ್ಗೆಯಿಂದ ಅಧಿಕಾರಿಗಳ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಇದರ ನಡುವೆ ಹಾವೇರಿಯ ಅಧಿಕಾರಿಯೊಬ್ಬರ ನಿವಾಸದಲ್ಲಿ ಭಾರಿ ಹೈಡ್ರಾಮ ನಡೆದಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಕಾಶೀನಾಥ ಭಜಂತ್ರಿ ಮನೆಯಲ್ಲಿ ಹೈಡ್ರಾಮ ನಡೆದಿದೆ. ಕಾಶೀನಾಥ್ ಅವರು ಬರೋಬ್ಬರಿ 9 ಲಕ್ಷ ರೂಪಾಯಿ ಹಣವನ್ನು ಗಂಟು ಕಟ್ಟಿ, ಮನೆಯ …
Read More »ಕುಮಾರಸ್ವಾಮಿಯವರ ನಾನು ಪ್ರೀತಿಯಿಂದ ಕರಿಯಣ್ಣಾಂತನೇ ಕರೆಯೋದುʼ: ಸಚಿವ ಜಮೀರ್
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರದ ವೇಳೆ ವಸತಿ ಹಾಗೂ ವಕ್ಫ್ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಭಾಷಣದ ಮಧ್ಯೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಹಲವೆಡೆಯಿಂದ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸಮರ್ಥನೆ ನೀಡಿದ್ದಾರೆ. ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿ “ಕುಮಾರಸ್ವಾಮಿಯವರನ್ನು ನಾನು ಪ್ರೀತಿಯಿಂದ ಕರಿಯಣ್ಣ ಅಂತಾನೇ ಕರೆಯೋದು. ಅವರು ನನ್ನನ್ನು ಕುಳ್ಳ ಅಂತಿದ್ರು” ಎಂದು ಜಮೀರ್ ಅಹ್ಮದ್ …
Read More »ಕಣ್ಣೀರು ಯಾರೂ ಹಾಕಬಹುದು.. ಬೆವರನ್ನಲ್ಲ:ಸಿ.ಪಿ.ಯೋಗೇಶ್ವರ್
ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಐದು ಬಾರಿ ಶಾಸಕನಾದರೂ ರಾಜಕೀಯವಾಗಿ ಸ್ಥಿರವಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ಜನರ ಒಳಿತಿಗಾಗಿ ಈ ಸ್ಥಿತ್ಯಂತರ ಎಂಬ ಕಾರಣಕ್ಕೆ ನನಗೆ ಬೇಸರವಿಲ್ಲ. ಎರಡು ಬಾರಿಯ ಸೋಲಿಗೆ ಕಾರಣ ತಿಳಿಯದಿರುವುದು ಬೇಸರ ತರಿಸಿದೆ ಎಂದು ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿದರು. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕುಮಾರಸ್ವಾಮಿ ಚನ್ನಪಟ್ಟಣವನ್ನು ಸ್ಪಿನ್‌ಬೋರ್ಡ್ ಮಾಡಿಕೊಂಡರು. ಆದರೆ ಅಭಿವೃದ್ಧಿಯನ್ನೇ ಮಾಡಲಿಲ್ಲ. ರಾಮನಗರ ಜಿಲ್ಲೆ ನೀರಾವರಿಗೆ ಯಾಕೆ ನೀವು …
Read More »BJP;10 ನಾಯಕರಿಂದ ಪ್ರತ್ಯೇಕ ಸಂಘಟನೆ: ರಮೇಶ್ ಜಾರಕಿಹೊಳಿ
BJP;10 ನಾಯಕರಿಂದ ಪ್ರತ್ಯೇಕ ಸಂಘಟನೆ: ರಮೇಶ್ ಜಾರಕಿಹೊಳಿ ರಾಯಚೂರು: ವಿಜಯೇಂದ್ರ ನಾಯಕತ್ವವನ್ನು ಒಪ್ಪುವುದಿಲ್ಲ. ಬಿಜೆಪಿಯನ್ನು ಬಹುಮತದಿಂದ ಅಧಿಕಾರಕ್ಕೆ ತರಲು ಪ್ರತ್ಯೇಕವಾಗಿ ನಾವು 10 ನಾಯಕರು ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ. ನಾನು 6 ಜಿಲ್ಲೆಗಳ ಉಸ್ತುವಾರಿ ತೆಗೆದುಕೊಂಡಿ ದ್ದೇನೆ. ಯತ್ನಾಳ್, ಪ್ರತಾಪ ಸಿಂಹ, ಅರವಿಂದ ಲಿಂಬಾವಳಿ ಸೇರಿ ಕೆಲವು ನಾಯಕರು ಉಳಿದ ಜಿಲ್ಲೆಗಳ ಹೊಣೆ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ಬಗ್ಗೆ …
Read More »