Breaking News

Yearly Archives: 2024

ಬೈಲಹೊಂಗಲ: ರಾಯಣ್ಣನ ನೆಲದಲ್ಲಿ ಕುಸ್ತಿಪಟುಗಳ ಕಾದಾಟ!

ಬೈಲಹೊಂಗಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಅಂಗವಾಗಿ ಗ್ರಾಮದ ಗ್ರಾ.ಪಂ. ಆವರಣದಲ್ಲಿ ಗುರುವಾರ ನಡೆದ ಪುರುಷರ ಮತ್ತು ಮಹಿಳೆಯರ ಹೊನಲುಬೆಳಕಿನ ರಾಷ್ಟ್ರ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳು ಸಹಸ್ರಾರು ಕುಸ್ತಿಪ್ರೇಮಿಗಳನ್ನು ರೋಮಾಂಚನಗೊಳಿಸಿತು.   ಕುಸ್ತಿ ಕಣವನ್ನು ಹೂವುಗಳಿಂದ ಶೃಂಗರಿಸಲಾಗಿತ್ತು. ಪೈಲ್ವಾನರನ್ನು ಪ್ರೇಕ್ಷಕರು ಹುರುದುಂಬಿಸಿದರು. ವಿಜಯಪುರ ಭೂತನಾಳ ತಾಂಡದ ಅಶೋಕ ವಾಲಿಕರ ತಂಡದ ಹಲಿಗೆ ವಾದನ ಕುಸ್ತಿ ಪಟುಗಳಿಗೆ, ಪ್ರೇಕ್ಷಕರಿಗೆ ಹುಮ್ಮಸ್ಸು ನೀಡಿತು. ಒಟ್ಟು 30ಕ್ಕೂ ಹೆಚ್ಚು ಜೋಡಿ ಕುಸ್ತಿ ಪಟುಗಳು ಭಾಗವಹಿಸಿದ್ದರು. …

Read More »

ಸೋತರೆ ಸಚಿವರ ತಲೆ ದಂಡ ಎನ್ನುವುದು ಸುಳ್ಳು: ಸತೀಶ್ ಜಾರಕಿಹೊಳಿ

ಬೆಳಗಾವಿ: ”ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಸಚಿವರ ತಲೆ ದಂಡವಾಗುತ್ತದೆ ಎನ್ನುವುದು ಸುಳ್ಳು” ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.   ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳ ಅರ್ಜಿ ಹೈಕಮಾಂಡ್ ಗೆ ಸಲ್ಲಿಸಲಾಗಿದೆ.   ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 10 ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ 6 ಆಕಾಂಕ್ಷಿಗಳ ಅರ್ಜಿ ಸಲ್ಲಿಕೆಯಾಗಿವೆ ಎಂದರು.   ಲೋಕಸಭಾ ಚುನಾವಣೆಯಲ್ಲಿ ಸಚಿವರಿಗೆ …

Read More »

ಕಿಚ್ಚನ ಕೊನೆಯ ಪಂಚಾಯಿತಿಯಲ್ಲಿ ಯಾರಿಗೆ ಗೇಟ್ ಪಾಸ್?

ಬಿಗ್ ಬಾಸ್ ಸೀಸನ್ 10 ಹಲವು ವಿಷಯಗಳಿಂದ ನೋಡುಗರ ಮನ ಸೆಳೆದಿತ್ತು. ಹುಲಿ ಉಗುರು ಪ್ರಕರಣದಲ್ಲಿ ಮೊದಲಿಗೆ ವರ್ತೂರು ಸಂತೋಷ್ ಜೈಲಿಗೆ ಹೋಗಿ ಬಂದರು. ನಂತರ ಸ್ಪರ್ಧಿಗಳು ವರ್ತೂರು ವಿರುದ್ಧ ನಿಂತುಕೊಂಡು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬೇಕು ಎಂದರು. ಆದರೆ ಅವರ ಅಭಿಮಾನಿಗಳು, ಅವರ ತಾಯಿ ಸೇರಿಕೊಂಡು ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಂಡಿದ್ದಾರೆ..   ಇನ್ನು ವಿನಯ್ ತಮ್ಮ ಅಗ್ರೆಸ್ಸಿವ್ ಆಟವಾಡಿಕೊಂಡು …

Read More »

ಅಂತೂ ಸರಕಾರದಿಂದ ಹೊರ ಬಿದ್ದ ಬಡ್ಡಿ ಮನ್ನಾ ಆದೇಶ

ಕಲಬುರಗಿ: ಸಹಕಾರಿ ಬ್ಯಾಂಕುಗಳಲ್ಲಿನ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲನ್ನು ಸಂಪೂರ್ಣವಾಗಿ 2024ರ ಫೆಬ್ರವರಿ 29 ರೊಳಗೆ ತುಂಬಿದರೆ ಬಡ್ಡಿ ಮನ್ನಾ ಕುರಿತಾಗಿ ಶನಿವಾರ (ಜ.20) ಸಹಕಾರಿ ಇಲಾಖೆ ಅಧಿಸೂಚನೆ. ಬೆಳಗಾವಿಯಲ್ಲಿ ನಡೆದ ಚಳಗಾಲ ಅಧಿವೇಶನದಲ್ಲಿ ಬರಗಾಲ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾದ ವಿಷಯದ ಮೇಲೆ ಚರ್ಚೆ ನಡೆಯುತ್ತಿರುವಾಗ ಮುಂಗಾರು ಹಾಗೂ ಹಿಂಗಾರು ಎರಡೂ ಮಳೆಯನ್ನೇ ಕೈ ಕೊಟ್ಟ ಪರಿಣಾಮ ರೈತ ಸಂಕಷ್ಟದಲ್ಲಿದ್ದಾನೆ. ಹೀಗಾಗಿ ಸಹಕಾರಿ ಬ್ಯಾಂಕುಗಳಲ್ಲಿನ ಮಧ್ಯಮಾವಧಿ ಹಾಗೂ ದೀರ್ಘಾವಧಿ …

Read More »

ಒಂದು ದೇಶ, ಒಂದು ಚುನಾವಣೆಗೆ 15 ವರ್ಷಕ್ಕೊಮ್ಮೆ 10,000 ಕೋಟಿ ರೂ. ವೆಚ್ಚ!

ಒಂದು ದೇಶ, ಒಂದು ಚುನಾವಣೆ ನಡೆಸಿದರೆ ಕೇಂದ್ರ ಚುನಾವಣಾ ಆಯೋಗ ಪ್ರತೀ 15 ವರ್ಷಕ್ಕೊಮ್ಮೆ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ (ಇವಿಎಂ) ಖರೀದಿಸಲು 10 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ! ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಒಂದು ದೇಶ, ಒಂದು ಚುನಾವಣೆ ನಡೆದರೆ ಇವಿಎಂ ವೆಚ್ಚದ ಕುರಿತು ಮಾಹಿತಿ ನೀಡಿದೆ.   ಇವಿಎಂ ಕಾಲಾವಧಿ 15 ವರ್ಷಗಳದ್ದಾಗಿದೆ. 15 ವರ್ಷಗಳಲ್ಲಿ ಗರಿಷ್ಠ ಮೂರು ಬಾರಿ ಮಾತ್ರ ಬಳಸಬಹುದಾಗಿದೆ. ಒಂದು …

Read More »

ಸವದತ್ತಿ, ಬಾದಾಮಿಗೆ ಜಾತ್ರಾ ವಿಶೇಷ ಬಸ್‌ ವ್ಯವಸ್ಥೆ

ಹುಬ್ಬಳ್ಳಿ: ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ಹಾಗೂ ಬಾದಾಮಿಯ ಬನಶಂಕರಿ ದೇವಿ ಜಾತ್ರೆ ಅಂಗವಾಗಿ ಭಕ್ತರ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಜ.23ರಿಂದ ಜ.30ರ ತನಕ ಹುಬ್ಬಳ್ಳಿ ಹಾಗೂ ನವಲಗುಂದದಿಂದ ಜಾತ್ರಾ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.   ‘ದೇವಿ ಜಾತ್ರೆ ಪ್ರಯುಕ್ತ ಹುಬ್ಬಳ್ಳಿಯಿಂದ 25, ನವಲಗುಂದದಿಂದ 10 ಬಸ್‌ಗಳನ್ನು ನಿಯೋಜಿಸಲಾಗಿದೆ. 100ಕ್ಕೂ ಹೆಚ್ಚು ಚಾಲಕರು, ನಿರ್ವಾಹಕರು, ಮೇಲ್ವಿಚಾರಣೆಗಾಗಿ 10 ಅಧಿಕಾರಿಗಳು ಹಾಗೂ 20 …

Read More »

ಗೋಕಾಕ: 3 ಸಾವಿರ ಮಹಿಳೆಯರಿಂದ ರಾಮನಾಮ ಜಪ

ಗೋಕಾಕ (ಬೆಳಗಾವಿ): ವಿಶ್ವ ಹಿಂದೂ ಪರಿಷತ್‌, ರಾಷ್ಟ್ರೀಯ ಸೇವಿಕಾ ಸಮಿತಿ ವತಿಯಿಂದ ನಗರದ ಲಕ್ಷ್ಮೀ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಮನಾಮ ಜಪ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಮಹಿಳೆಯರಿಗಾಗಿ ಮಾತ್ರ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 3,000 ಹೆಣ್ಣು ಮಕ್ಕಳು ಒಂದೇ ರೀತಿಯ ವೇಷಭೂಷಣದಲ್ಲಿ ಸೇರಿದರು. ‘ಶ್ರೀರಾಮ ಜಯರಾಮ ಜಯಜಯ ರಾಮ’ ಎಂಬ ನಾಮವನ್ನು 108 ಬಾರಿ ಜ‍ಪಿಸಿದರು. 108 ಸೆಟ್‌ಗಳನ್ನು ಒಟ್ಟು 11 ಬಾರಿ ಜಪ ಮಾಡಿದರು. ಏಕಕಾಲಕ್ಕೆ ಮಹಿಳೆಯರಿಂದ ಹೊರಬಂದ …

Read More »

ಬೆಂಗಳೂರು: ಜ.22ರಂದು ನಗರದ ಹಲವೆಡೆ ರಾಮಜಪ

ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ಇದೇ 22ರಂದು (ಸೋಮವಾರ) ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಡೆಯುವ ಅಂಗವಾಗಿ ನಗರದ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಶ್ರೀರಾಮ ಉತ್ಸವ, ಲಕ್ಷ ದೀಪೋತ್ಸವ, ಭಜನೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.   ‘ಪದ್ಮನಾಭನಗರದ ಕಾರ್ಮೆಲ್‌ ಸ್ಕೂಲ್‌ ಮೈದಾನದಲ್ಲಿ …

Read More »

ಕೋಟಕ್ ಮಹೀಂದ್ರ ಬ್ಯಾಂಕ್‌, ಐಸಿಐಸಿಐ, ಯುಬಿಐ ಲಾಭ ಹೆಚ್ಚಳ

ಮುಂಬೈ: 2023-24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಸರ್ಕಾರಿ ಸ್ವಾಮ್ಯದ ಯೂನಿಯನ್‌ ಬ್ಯಾಂಕ್‌ ಇಂಡಿಯಾದ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ. ಕೋಟಕ್ ಮಹೀಂದ್ರ ಬ್ಯಾಂಕ್‌ನ ಲಾಭದಲ್ಲಿ ಶೇ 6.75ರಷ್ಟು ಏರಿಕೆಯಾಗಿದೆ. 2022-23ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ ₹3,995 ಕೋಟಿ ಲಾಭಗಳಿಸಿತ್ತು. 2023-24ರ ಅವಧಿಯಲ್ಲಿ ₹4,264 ಕೋಟಿಗೆ ಏರಿಕೆಯಾಗಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು ವರಮಾನವು ₹10,947 ಕೋಟಿಯಿಂದ ₹14,096 ಕೋಟಿಗೆ ಏರಿಕೆ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..

! ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲೂಕಿನ ಈರನಹಟ್ಟಿ ಗ್ರಾಮದ ಶ್ರೀ ಏಳುಮುಖ ದೇವಿ ದೇವಸ್ಥಾನ ಹಾಗೂ ಶ್ರೀ ಬಸವೇಶ್ವರ ಹಾಗೂ ಶ್ರೀ ಹಣಮಂತ ದೇವಸ್ಥಾನದ ಆವರಣದಲ್ಲಿ ಅನ್ನ …

Read More »