ಬೆಳಗಾವಿ: ಗೋಕಾಕ ಹಾಗೂ ಪಾಶ್ಚಾಪುರ ರಸ್ತೆಯಲ್ಲಿ ಶಾಲಾ ಬಸ್ ಪಲ್ಟಿಯಾಗಿ ಹಲವು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಜು.24ರ ಬುಧವಾರ ಬೆಳಗ್ಗೆ ಸಂಭವಿಸಿದೆ. ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಶಾಲಾ ಬಸ್ ಉರುಳಿ ಬಿದ್ದು ಐವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಇನ್ನೂ ಕೆಲ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗೋಕಾಕ ತಾಲೂಕಿನ ಮರಡಿಮಠ ಗ್ರಾಮದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಬಸ್ ಇದಾಗಿದ್ದು, ಮಾವನೂರ, ಗೊಡಚಿನಮಲ್ಕಿ, ಮೇಲಮಟ್ಟಿ ಗ್ರಾಮದ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದಾಗ …
Read More »Monthly Archives: ಜುಲೈ 2024
ಎಡೆ ಬಿಡದೆ ಸುರಿದ ಮಳೆ; ಗಡಿ ಭಾಗದಲ್ಲಿ ಉಕ್ಕಿ ಹರಿಯುತ್ತಿವೆ ನದಿಗಳು
ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶ, ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕೃಷ್ಣಾ, ದೂಧಗಂಗಾ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗಿದೆ. ನೆರೆಯ ಮಹಾರಾಷ್ಟ್ರ ಮತ್ತು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಇದುವರೆಗೆ 25 ಸೇತುವೆಗಳು ನೀರಿನಲ್ಲಿ ಮುಳುಗಿ ರಸ್ತೆ ಸಂಚಾರ ಕಡಿತಗೊಂಡಿದೆ. ಕೃಷ್ಣಾ, ದೂಧಗಂಗಾ ಜಲಾನಯನ ಪ್ರದೇಶವಾದ ಕೊಯ್ನಾ, ಮಹಾಬಳೇಶ್ವರ, ಉಮದಿ, ಕಣೇರ್, ದೂಮ್, ನವಜಾ, ಕಾಳಮ್ಮವಾಡಿ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. …
Read More »ಬೆಳಗಾವಿ ಜಿಲ್ಲೆಯ 6 ತಾಲೂಕಿನ ಶಾಲಾ ಕಾಲೇಜುಗಳಿಗೆ ಜುಲೈ 25, 26 ರಂದು ರಜೆ
ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಆರು ತಾಲೂಕುಗಳಿಗೆ ಜುಲೈ 25 ಹಾಗೂ ೨೬ ರಂದು ಎರಡು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಅದರಂತೆ ಬೆಳಗಾವಿ, ಬೈಲಹೊಂಗಲ, ಖಾನಾಪುರ, ಕಿತ್ತೂರು, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕಿನ ಶಾಲೆಗಳಿಗೆ ಜುಲೈ 25 ಹಾಗೂ 26 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
Read More »ಮೇಕೆ ಮರಿ ರಕ್ಷಿಸಲು ಹೋಗಿ ಕುರಿಗಾಹಿ ನೀರುಪಾಲು!
ವಿಜಯಪುರ : ಕಾಲುವೆಗೆ ಬಿದ್ದಂತಹ ಮೇಕೆ ಮರಿಯನ್ನು ರಕ್ಷಿಸಲು ಕಾಲುವೆಗೆ ಜಿಗಿದ ಕುರಿಗಾರಿ ಒಬ್ಬ ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ನಾಲತವಾಡ ಸಮೀಪದ ನಾಗಬೇನಾಳ ಬಳಿ ನಡೆದಿದೆ. ನೀರುಪಾಲಾದ ಕುರಿಗಾಹಿಯನ್ನು ನಾಗಬೇನಾಳ ಗ್ರಾಮದ ಮಂಜುನಾಥ್ ಮಾದರ(28) ಎಂದು ಗುರುತಿಸಲಾಗಿದೆ. ಕುರಿಕಾಯಲು ನಾಗಬೇನಾಳ ಸಮೀಪದ ಚಕ್ ಪೋಸ್ಟ್ ಹತ್ತಿರದ ನಾರಾಯಣಪೂರ ಎಡದಂಡೆ ಕಾಲುವೆ ಬಳಿ ಕುರಿಕಾಯುತ್ತಿದ್ದ. ಈ ಸಮಯದಲ್ಲಿ ಕುರಿ ಮರಿಯೊಂದು ಜಾರಿ ಕಾಲುವೆಗೆ ಬಿದ್ದಿದೆ. ಆ ಮರಿಯನ್ನು …
Read More »ಪ್ರಯಾಣದರ ಹೆಚ್ಚಳ ಸುಳಿವು ನೀಡಿದ ಸಚಿವ
ಬೆಂಗಳೂರು: ಕಳೆದ ನಾಲ್ಕೈದು ವರ್ಷಗಳಿಂದ ಬಸ್ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಈ ನಿಟ್ಟಿನಲ್ಲಿ ಮುಂದೆ ಕ್ರಮ ಕೈಗೊಳ್ಳಬೇಕಾಗಿ ಬರಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಮುಂದೆ ಬಸ್ ಪ್ರಯಾಣದರ ಹೆಚ್ಚಳ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿ ಬರಬಹುದು ಎಂದು ಹೇಳುವ ಮೂಲಕ ಬಸ್ ಪ್ರಯಾಣದರ ಹೆಚ್ಚಳದ ಸುಳಿವು ನೀಡಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಸಾರಿಗೆ …
Read More »ಬಿಸಿನೀರಿಗಾಗಿ ʻವಾಟರ್ ಹೀಟರ್ʼ ಬಳಸುವವರೇ ಎಚ್ಚರ
ಬೆಂಗಳೂರು : ಒಂದು ಕಾಲದಲ್ಲಿ, ಸ್ನಾನ ಮಾಡಲು ನೀರನ್ನು ಬಿಸಿ ಮಾಡಲು ಉರುವಲು ಒಲೆಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ನಂತರ, ಅವರು ಅದನ್ನು ಗ್ಯಾಸ್ ಸ್ಟವ್ ಮೇಲೆ ಇರಿಸುತ್ತಾರೆ ಮತ್ತು ಈಗ ಹೆಚ್ಚಾಗಿ ಎಲೆಕ್ಟ್ರಿಕ್ ಹೀಟರ್ ಗಳನ್ನು ಬಳಸಲಾಗುತ್ತದೆ. ಆದಾಗ್ಯೂ, ಎಲೆಕ್ಟ್ರಿಕ್ ಹೀಟರ್ ಗಳಿಂದಾಗಿ ನೀರನ್ನು ಬಿಸಿ ಮಾಡುವ ಮೂಲಕ ಸ್ನಾನ ಮಾಡಿದರೆ ಸಾಕಷ್ಟು ಅಪಾಯವಿದೆ ಎಂದು ತಜ್ಞರು ಹೇಳುತ್ತಾರೆ. ಹೀಟರ್ ನಲ್ಲಿರುವ ತಾಪನ ಅಂಶವು ವಿದ್ಯುತ್ ಪ್ರತಿರೋಧಕವಾಗಿದ್ದು, ಇದು ಜೂಲ್ …
Read More »ವಧು-ವರರ ಸಮಾವೇಶ 28ರಂದು
ಹುಬ್ಬಳ್ಳಿ: ‘ಆನಂದ ಅಸೋಸಿಯೇಟ್ಸ್ ವತಿಯಿಂದ ಧಾರವಾಡದ ಹುರಕಡ್ಲಿ ಅಜ್ಜ ಕಾನೂನು ಕಾಲೇಜು ಎದುರಿನ ಸರಸ್ವತಿ ನಿಕೇತನದಲ್ಲಿ ಜುಲೈ 28ರಂದು ಬೆಳಿಗ್ಗೆ 10 ಗಂಟೆಗೆ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆಯ ಸಂಸ್ಥಾಪಕ ಸುರೇಶ ಕುಪ್ಪಸಗೌಡರ ಹೇಳಿದರು. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲ ಜಾತಿ ಹಾಗೂ ಒಳಪಂಗಡ ವರ್ಗದವರು ವಧು-ವರರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಅಂತರ್ಜಾತಿ ವಿವಾಹ, ಮರುವಿವಾಹ ಬಯಸುವವರು, ವಿಚ್ಛೇದಿತರು, ವಿಧುರ-ವಿಧವೆಯರು ಸಹ ಪಾಲ್ಗೊಳ್ಳಬಹುದು. ₹500 ಪ್ರವೇಶ …
Read More »ಬೆಂಗಳೂರು- ಕಾರವಾರ: 26, 28ರಂದು ವಿಶೇಷ ರೈಲು
ಹುಬ್ಬಳ್ಳಿ: ಪ್ರಯಾಣಿಕರ ಬೇಡಿಕೆ ಮೇರೆಗೆ ಬೆಂಗಳೂರು ಮತ್ತು ಕಾರವಾರ ನಡುವೆ ಜುಲೈ 26 ಮತ್ತು 28ರಂದು ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣದಿಂದ ಎರಡೂ ದಿನ ಮಧ್ಯರಾತ್ರಿ 12.30ಕ್ಕೆ ಹೊರಡುವ ವಿಶೇಷ ರೈಲು (06567) ಸಂಜೆ 4ಕ್ಕೆ ಕಾರವಾರ ನಿಲ್ದಾಣ ತಲುಪಲಿದೆ. ಪುನಃ ಇದೇ ರೈಲು ಅವತ್ತೇ ರಾತ್ರಿ 11.30ಕ್ಕೆ ಕಾರವಾರ ನಿಲ್ದಾಣದಿಂದ ಹೊರಟು, ಮರುದಿನ ಸಂಜೆ 3.30ಕ್ಕೆ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ …
Read More »ಅಂಗನವಾಡಿಗೆ ನೇಮಕ: ಅರ್ಜಿ ಆಹ್ವಾನ
ಖಾನಾಪುರ: ತಾಲ್ಲೂಕಿನ ವಿವಿಧ ಅಂಗನವಾಡಿಗಳಲ್ಲಿ ಖಾಲಿ ಇರುವ ನಾಲ್ವರು ಅಂಗನವಾಡಿ ಕಾರ್ಯಕರ್ತೆಯರು ಮತ್ತು 21 ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಆನ್-ಲೈನ್ ಮೂಲಕವೇ ಸಲ್ಲಿಸಬೇಕು. ಆ.11 ಕೊನೆಯ ದಿನ. ಖಾಲಿ ಇರುವ ಹುದ್ದೆಗಳ ವಿವರ, ಮೀಸಲಾತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿಗೆ ಪಟ್ಟಣದ ಜಾಂಬೋಟಿ ರಸ್ತೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.
Read More »ಮೂಡಲಗಿ | ಚಿರತೆ ಸುದ್ದಿ: ಆತಂಕ ಸೃಷ್ಟಿ
ಮೂಡಲಗಿ : ‘ತಾಲ್ಲೂಕಿನ ನಾಗನೂರ ಗ್ರಾಮದ ಅರಣ್ಯಸಿದ್ದೇಶ್ವರ ತೋಟದ ಸಿದ್ದಪ್ಪ ಜಾವಲಿ ಎಂಬುವವರ ಗದ್ದೆಯಲ್ಲಿ ಮಂಗಳವಾರ ಮಧ್ಯಾಹ್ನ ಚಿರತೆ ಪ್ರತ್ಯಕ್ಷವಾಗಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆದ ಹಿನ್ನೆಲೆ ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿ ಸಂಜು ಸವಸುದ್ದಿ ಪರಿಶೀಲನೆ ನಡೆಸಿ ಅದು ಚಿರತೆ ಅಲ್ಲ ಕಾಡು ಬೆಕ್ಕು ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮಹಾದೇವ ಸನ್ನಮುರಿ, ಸಾರ್ವಜನಿಕರ ಹಿತ ದೃಷ್ಟಿಯಿಂದ ರಾತ್ರಿ ವೇಳೆ ಒಬ್ಬೊಬ್ಬರಾಗಿ ತಿರುಗಾಡದಂತೆ ಹಾಗೂ …
Read More »