ಕಲಬುರಗಿ: ನೆರೆಯ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ರಾಜ್ಯಗಳಿಗೆ ಗಡಿ ಹಂಚಿಕೊಂಡಿರುವ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ‘ಕಲ್ಯಾಣ’ದ ನಾಡಿಗೆ ಅಪಕೀರ್ತಿ ತಟ್ಟುತ್ತಿದೆ. ಕಲ್ಯಾಣದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುತ್ತಿರುವ ಕಲಬುರಗಿ ಈಗ ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣೆ ಪ್ರಕರಣಗಳ ಹಣೆಪಟ್ಟಿಯನ್ನೂ ಕಟ್ಟಿಕೊಳ್ಳುತ್ತಿದೆ. ಇದಕ್ಕೆ ಬೀದರ್, ವಿಜಯನಗರ ಹಾಗೂ …
Read More »Daily Archives: ಜುಲೈ 31, 2024
ತಿಂಗಳಲ್ಲೇ ಕಿತ್ತು ಹೋದ ಡಾಂಬರು
ಚಿಂಚೋಳಿ: ಪಟ್ಟಣದ ಹೊರವಲಯದ ಸಿದ್ಧಸಿರಿ ಎಥೆನಾಲ್ ಕಂಪನಿಯಿಂದ ಚಿಮ್ಮಾಈದಲಾಯಿ ಗ್ರಾಮದವರೆಗೆ ಲೋಕೋಪಯೋಗಿ ಇಲಾಖೆ ನಡೆಸಿದ ರಸ್ತೆ ಕಾಮಗಾರಿ ಹಳ್ಳ ಹಿಡಿದಿದೆ. ಮಳೆಯನ್ನೂ ಲೆಕ್ಕಿಸದೇ ರಸ್ತೆಗೆ ಹಾಕಿದ್ದ ಡಾಂಬರು ಒಂದು ವಾರದೊಳಗೆ ಕಿತ್ತುಹೋಗಿದ್ದು,ರಸ್ತೆ ಹದಗೆಟ್ಟಿದೆ. ಹೆದ್ದಾರಿಯ ಅಗಲೀಕರಣ, ಡಾಂಬರೀಕರಣ ಸೇರಿದಂತೆ ಹಲವು ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. 2023ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಮಗಾರಿ ಆರಂಭಿಸಿ ರಸ್ತೆಯ ಎರಡು ಬದಿಯ ಭುಜವನ್ನು ಅಗೆದು ಮುರುಮ್ ಮತ್ತು ಕಾಂಕ್ರಿಟ್ ಭರ್ತಿ ಮಾಡುವುದರ …
Read More »ಬಾಲಕನ ಮೇಲೆ ಬೀದಿ ನಾಯಿ ದಾಳಿ
(ವಿಜಯನಗರ): ನಗರದ ಚಿತ್ತವಾಡ್ಗಿ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿನಾಯಿಯೊಂದು ದಾಳಿ ನಡೆಸಿದ್ದು, ಬಾಲಕನ ಕೆನ್ನೆ, ಬೆನ್ನು, ಕಾಲಿಗೆ ಗಂಭೀರ ಗಾಯವಾಗಿದೆ. ಒಂದನೇ ವಾರ್ಡ್ ಚಿತ್ತವಾಡ್ಗಿ ಕಾಕರ ಓಣಿಯ ಗಂಕಪ್ಪ ಅವರ ಪುತ್ರ ಪರಶುರಾಮ ಮನೆ ಸಮೀಪ ಆಟವಾಡುತ್ತಿದ್ದಾಗ ಒಂದು ನಾಯಿ ದಾಳಿ ನಡೆಸಿ ಆತನ ಕೆನ್ನೆಯ ಮಾಂಸ ಕಚ್ಚಿ ಎಳೆದಿದೆ. ಜತೆಗೆ ಬೆನ್ನು, ಕಾಲಿಗೂ ಗಾಯವಾಗಿದೆ. ತಕ್ಷಣ ಬಾಲಕನನ್ನು ಇಲ್ಲಿನ 100 ಹಾಸಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, …
Read More »ಜೀವ ವಿಮೆ ಮತ್ತು ವೈದ್ಯಕೀಯ ವಿಮೆ ಪ್ರೀಮಿಯಂ ಮೇಲಿನ ‘GST’ ತೆಗೆದುಹಾಕಿ : ಹಣಕಾಸು ಸಚಿವರಿಗೆ ನಿತಿನ್ ಗಡ್ಕರಿ ಪತ್ರ
ಜೀವ ವಿಮೆ ಮತ್ತು ವೈದ್ಯಕೀಯ ವಿಮೆ ಪ್ರೀಮಿಯಂ ಮೇಲಿನ ‘GST’ ತೆಗೆದುಹಾಕಿ : ಹಣಕಾಸು ಸಚಿವರಿಗೆ ನಿತಿನ್ ಗಡ್ಕರಿ ಪತ್ರ ನವದೆಹಲಿ : ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಜೀವ ಮತ್ತು ವೈದ್ಯಕೀಯ ವಿಮಾ ಪ್ರೀಮಿಯಂಗಳ ಮೇಲಿನ 18% ಸರಕು ಮತ್ತು ಸೇವಾ ತೆರಿಗೆಯನ್ನು (GST) ಹಿಂತೆಗೆದುಕೊಳ್ಳುವಂತೆ ಕೋರಿದ್ದಾರೆ. ಜಿಎಸ್ಟಿ ಜೀವನದ ಅನಿಶ್ಚಿತತೆಗಳಿಗೆ ತೆರಿಗೆ …
Read More »ಬೆಳಗಾವಿ ಹುಡುಗನ ಫ್ಯೂಸ್ ಕಿತ್ತ ಗೌಡ್ತಿ
ಬೆಳಗಾವಿ : ಬೆಂಗಳೂರಿನ ಕಸ್ತೂರಬಾ ನಗರದ ಯುವತಿ ಪ್ರಿಯಾಂಕಾ(24) ಬೆಳಗಾವಿಯ ಅಲಾರವಾಡ ಗ್ರಾಮದ ರಾಹುಲ್ ಎಂಬ ಯುವಕ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿ ಈಗ ಮದುವೆಯಾಗಿದ್ದ ಸುದ್ದಿ ನಿನ್ನೆ ವೈರಲ್ ಆಗಿತ್ತು. ಆದರೆ ಸಧ್ಯ ಈ ಪ್ರಕರಣ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಾರಂಭವಾದ ಪ್ರೀತಿ ಮದುವೆಗೆ ಬಂದು ನಿಂತಿತ್ತು. ನಿನ್ನೆಯಷ್ಟೇ ಯುವತಿ ಹಾಗೂ ಬೆಳಗಾವಿ ಯುವಕನ ಜೊತೆ ಮದುವೆಯಾಗಿತ್ತು.
Read More »ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ
ಬೆಳಗಾವಿ : ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಕೃಷ್ಣಾ ನದಿ ಪ್ರವಾಹ ಹೆಚ್ಚಳವಾಗಿದೆ. ಈಗಾಗಲೇ ಜಿಲ್ಲೆಯ 35 ಕ್ಕೂ ಅಧಿಕ ಸೇತುವೆಗಳು ಜಲಾವೃತಗೊಂಡಿದ್ದು ಕೃಷ್ಣಾ ನದಿ ಪಾತ್ರದ ಸುಮಾರು 60 ಕ್ಕೂ ಅಧಿಕ ಗ್ರಾಮಗಳಿಗೆ ನೀರು ಆವರಿಸಿದೆ. ನದಿ ಪಾತ್ರದ ಮನೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆ ಖಂಡಿದ್ದು ಜನರಲ್ಲಿ ಆತಂಕ ಮನೆಮಾಡಿದೆ. ಸಧ್ಯ ಮಳೆ ಆರ್ಭಟ ಕಡಿಮೆಯಾದರು ಪ್ರವಾಹದಲ್ಲಿ ಕಡಿಮೆಯಾಗುವ ಲಕ್ಷಣ …
Read More »ಕಣಕುಂಬಿ ಅರಣ್ಯ: 11.5 ಸೆಂ.ಮೀ ಮಳೆ
ಖಾನಾಪುರ: ತಾಲ್ಲೂಕಿನ ಕಣಕುಂಬಿ, ಲೋಂಡಾ, ನಾಗರಗಾಳಿ, ಗುಂಜಿ ಮತ್ತು ಭೀಮಗಡ ಅರಣ್ಯಪ್ರದೇಶದಲ್ಲಿ ಮಂಗಳವಾರ ಉತ್ತಮ ಮಳೆಯಾಗಿದ್ದು, ಪಟ್ಟಣ ಸೇರಿದಂತೆ ತಾಲ್ಲೂಕಿನ ಉಳಿದೆಡೆ ಸಾಧಾರಣ ಮಳೆಯಾಗಿದೆ. ಕಂದಾಯ ಇಲಾಖೆಯಂತೆ ಕಣಕುಂಬಿ ಅರಣ್ಯದಲ್ಲಿ 11.5 ಸೆಂ.ಮೀ, ಲೋಂಡಾ-9 ಸೆಂ.ಮೀ, ಜಾಂಬೋಟಿ ಸುತ್ತಮುತ್ತ 6.2 ಸೆಂ.ಮೀ ಮತ್ತು ಉಳಿದೆಡೆ ಸರಾಸರಿ 5 ಸೆಂ.ಮೀ ಮಳೆ ಸುರಿದಿದೆ. ಪಟ್ಟಣದಲ್ಲಿ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ತಾಲ್ಲೂಕಿನ ನಂದಗಡ, ಹಲಸಿ ಭಾಗದಲ್ಲಿ ಸಂಜೆ ತುಂತುರು ಮಳೆಯಾಗಿದೆ. …
Read More »ಪತಿ ಕೊಲೆ: ಪತ್ನಿ, ಪ್ರಿಯಕರಗೆ ಜೀವಾವಧಿ ಶಿಕ್ಷೆ
ಮೂಡಲಗಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ವಡೇರಹಟ್ಟಿ ಗ್ರಾಮದಲ್ಲಿ 2023ರಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಮೃತ ವ್ಯಕ್ತಿಯ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹3 ಲಕ್ಷ ದಂಡ ವಿಧಿಸಿ, 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ತೀರ್ಪು ನೀಡಿದೆ. ಘಟನೆ ಹಿನ್ನೆಲೆ: ಗ್ರಾಮದ ಶಂಕರ ಜಗಮುತ್ತಿ ಅವರ ಪತ್ನಿ ಸಿದ್ದವ್ವ, ಭೈರನಟ್ಟಿಯ ಶ್ರೀಧರ ತಳವಾರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಸಂಚು ರೂಪಿಸಿ …
Read More »ಬಿಡುವು ನೀಡಿದ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ
ಶಿರಾಳಕೊಪ್ಪ: ಎರಡು ವಾರಗಳಿಂದ ಸತತವಾಗಿ ಸುರಿಸುತ್ತಿದ್ದ ಮಳೆ ಸ್ವಲ್ಪ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಭತ್ತದ ಸಸಿ ನೆಡುವುದು, ಅಡಿಕೆ ಅಡಿಕೆ ಆರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಲಗಳಲ್ಲಿ ರೈತ ಮಹಿಳೆಯರು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಜೋಳದ ಬೆಳೆಗಳು ಜೌಗಿನಿಂದ ಕೆಂಪಾಗುತ್ತಿದ್ದು, ಇಳುವರಿ ಕುಂಠಿತವಾಗುವ ಭೀತಿ ಎದುರಾಗಿದೆ. ಕಳೆದ ವರ್ಷ ಭೀಕರ ಬರಗಾಲದಿಂದ ರೈತರು ತೋಟ ಉಳಿಸಿಕೊಳ್ಳಲು ಕಷ್ಟಪಟ್ಟಿದ್ದರು. ಈ ಬಾರಿ ತಾಳಗುಂದದ ಪ್ರಣವೇಶ್ವರ ಕೆರೆ, ಬಳ್ಳಿಗಾವಿಯ …
Read More »ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ
ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಮಂಗಳವಾರದಂದು ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಅರಭಾವಿ ಕ್ಷೇತ್ರದ ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ, ಬಳೋಬಾಳ, ಹುಣಶ್ಯಾಳ ಪಿಜಿ, ವಡೇರಹಟ್ಟಿ ಮತ್ತು ಮುಸಗುಪ್ಪಿ ಗ್ರಾಮಗಳಿಗೆ ಭೇಟಿ ನೀಡಿದರು. ಅಲ್ಲಿರುವ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಮಳೆಯ ಪ್ರಮಾಣ ಸದ್ಯಕ್ಕೆ ಇಳಿಕೆಯಾಗುತ್ತಿದೆ. ಪ್ರವಾಹದಿಂದ ನದಿ ತೀರದ ಪ್ರದೇಶಗಳಲ್ಲಿ …
Read More »