Daily Archives: ಜುಲೈ 25, 2024

ಶಾಲಾ ಬಸ್ ಪಲ್ಟಿಯಾಗಿ ಹಲವು ವಿದ್ಯಾರ್ಥಿಗಳಿಗೆ ಗಾಯ

ಬೆಳಗಾವಿ: ಗೋಕಾಕ ಹಾಗೂ ಪಾಶ್ಚಾಪುರ ರಸ್ತೆಯಲ್ಲಿ ಶಾಲಾ ಬಸ್ ಪಲ್ಟಿಯಾಗಿ ಹಲವು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಜು.24ರ ಬುಧವಾರ ಬೆಳಗ್ಗೆ ಸಂಭವಿಸಿದೆ. ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಶಾಲಾ ಬಸ್ ಉರುಳಿ ಬಿದ್ದು ಐವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಇನ್ನೂ‌ ಕೆಲ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.     ಗೋಕಾಕ ತಾಲೂಕಿನ ಮರಡಿಮಠ ಗ್ರಾಮದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಬಸ್ ಇದಾಗಿದ್ದು, ಮಾವನೂರ, ಗೊಡಚಿನಮಲ್ಕಿ, ಮೇಲಮಟ್ಟಿ ಗ್ರಾಮದ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದಾಗ …

Read More »

ಎಡೆ ಬಿಡದೆ ಸುರಿದ ಮಳೆ; ಗಡಿ ಭಾಗದಲ್ಲಿ ಉಕ್ಕಿ ಹರಿಯುತ್ತಿವೆ ನದಿಗಳು

ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶ, ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕೃಷ್ಣಾ, ದೂಧಗಂಗಾ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗಿದೆ. ನೆರೆಯ ಮಹಾರಾಷ್ಟ್ರ ಮತ್ತು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಇದುವರೆಗೆ 25 ಸೇತುವೆಗಳು ನೀರಿನಲ್ಲಿ ಮುಳುಗಿ ರಸ್ತೆ ಸಂಚಾರ ಕಡಿತಗೊಂಡಿದೆ. ಕೃಷ್ಣಾ, ದೂಧಗಂಗಾ ಜಲಾನಯನ ಪ್ರದೇಶವಾದ ಕೊಯ್ನಾ, ಮಹಾಬಳೇಶ್ವರ, ಉಮದಿ, ಕಣೇರ್‌, ದೂಮ್‌, ನವಜಾ, ಕಾಳಮ್ಮವಾಡಿ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. …

Read More »

ಬೆಳಗಾವಿ ಜಿಲ್ಲೆಯ 6 ತಾಲೂಕಿನ ಶಾಲಾ ಕಾಲೇಜುಗಳಿಗೆ ಜುಲೈ 25, 26 ರಂದು ರಜೆ

ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಆರು ತಾಲೂಕುಗಳಿಗೆ ಜುಲೈ 25 ಹಾಗೂ ೨೬ ರಂದು ಎರಡು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಅದರಂತೆ ಬೆಳಗಾವಿ, ಬೈಲಹೊಂಗಲ, ಖಾನಾಪುರ, ಕಿತ್ತೂರು, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕಿನ ಶಾಲೆಗಳಿಗೆ ಜುಲೈ 25 ಹಾಗೂ 26 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.

Read More »

ಮೇಕೆ ಮರಿ ರಕ್ಷಿಸಲು ಹೋಗಿ ಕುರಿಗಾಹಿ ನೀರುಪಾಲು!

ವಿಜಯಪುರ : ಕಾಲುವೆಗೆ ಬಿದ್ದಂತಹ ಮೇಕೆ ಮರಿಯನ್ನು ರಕ್ಷಿಸಲು ಕಾಲುವೆಗೆ ಜಿಗಿದ ಕುರಿಗಾರಿ ಒಬ್ಬ ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ನಾಲತವಾಡ ಸಮೀಪದ ನಾಗಬೇನಾಳ ಬಳಿ ನಡೆದಿದೆ. ನೀರುಪಾಲಾದ ಕುರಿಗಾಹಿಯನ್ನು ನಾಗಬೇನಾಳ ಗ್ರಾಮದ ಮಂಜುನಾಥ್ ಮಾದರ(28) ಎಂದು ಗುರುತಿಸಲಾಗಿದೆ. ಕುರಿಕಾಯಲು ನಾಗಬೇನಾಳ ಸಮೀಪದ ಚಕ್ ಪೋಸ್ಟ್‌ ಹತ್ತಿರದ ನಾರಾಯಣಪೂರ ಎಡದಂಡೆ ಕಾಲುವೆ ಬಳಿ ಕುರಿಕಾಯುತ್ತಿದ್ದ. ಈ ಸಮಯದಲ್ಲಿ ಕುರಿ ಮರಿಯೊಂದು ಜಾರಿ ಕಾಲುವೆಗೆ ಬಿದ್ದಿದೆ. ಆ ಮರಿಯನ್ನು …

Read More »

ಪ್ರಯಾಣದರ ಹೆಚ್ಚಳ ಸುಳಿವು ನೀಡಿದ ಸಚಿವ

ಬೆಂಗಳೂರು: ಕಳೆದ ನಾಲ್ಕೈದು ವರ್ಷಗಳಿಂದ ಬಸ್ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಈ ನಿಟ್ಟಿನಲ್ಲಿ ಮುಂದೆ ಕ್ರಮ ಕೈಗೊಳ್ಳಬೇಕಾಗಿ ಬರಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಮುಂದೆ ಬಸ್ ಪ್ರಯಾಣದರ ಹೆಚ್ಚಳ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿ ಬರಬಹುದು ಎಂದು ಹೇಳುವ ಮೂಲಕ ಬಸ್ ಪ್ರಯಾಣದರ ಹೆಚ್ಚಳದ ಸುಳಿವು ನೀಡಿದ್ದಾರೆ.   ಶಕ್ತಿ ಯೋಜನೆಯಿಂದಾಗಿ ಸಾರಿಗೆ …

Read More »

ಬಿಸಿನೀರಿಗಾಗಿ ʻವಾಟರ್‌ ಹೀಟರ್‌ʼ ಬಳಸುವವರೇ ಎಚ್ಚರ

ಬೆಂಗಳೂರು : ಒಂದು ಕಾಲದಲ್ಲಿ, ಸ್ನಾನ ಮಾಡಲು ನೀರನ್ನು ಬಿಸಿ ಮಾಡಲು ಉರುವಲು ಒಲೆಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ನಂತರ, ಅವರು ಅದನ್ನು ಗ್ಯಾಸ್ ಸ್ಟವ್ ಮೇಲೆ ಇರಿಸುತ್ತಾರೆ ಮತ್ತು ಈಗ ಹೆಚ್ಚಾಗಿ ಎಲೆಕ್ಟ್ರಿಕ್ ಹೀಟರ್ ಗಳನ್ನು ಬಳಸಲಾಗುತ್ತದೆ. ಆದಾಗ್ಯೂ, ಎಲೆಕ್ಟ್ರಿಕ್ ಹೀಟರ್ ಗಳಿಂದಾಗಿ ನೀರನ್ನು ಬಿಸಿ ಮಾಡುವ ಮೂಲಕ ಸ್ನಾನ ಮಾಡಿದರೆ ಸಾಕಷ್ಟು ಅಪಾಯವಿದೆ ಎಂದು ತಜ್ಞರು ಹೇಳುತ್ತಾರೆ. ಹೀಟರ್ ನಲ್ಲಿರುವ ತಾಪನ ಅಂಶವು ವಿದ್ಯುತ್ ಪ್ರತಿರೋಧಕವಾಗಿದ್ದು, ಇದು ಜೂಲ್ …

Read More »