Breaking News

Daily Archives: ಜುಲೈ 17, 2024

ಮುಂಡಗೋಡ: ಭಾವೈಕ್ಯದ ಸಂಕೇತ ಮೊಹರಂ ಆಚರಣೆ

ಮುಂಡಗೋಡ: ತಾಲ್ಲೂಕಿನ ಇಂದೂರ, ಅಜ್ಜಳ್ಳಿ, ಬಸವನಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬುಧವಾರ ಮೊಹರಂ ಆಚರಿಸಲಾಯಿತು. ಮುಸ್ಲಿಮ ಜನಸಂಖ್ಯೆ ಇಲ್ಲದ ಕೆಲವು ಊರುಗಳಲ್ಲಿಯೂ ಹಿಂದೂಗಳು ಮುಂಚೂಣಿಯಲ್ಲಿದ್ದು ಮೊಹರಂ ಆಚರಿಸಿರುವುದು ವಿಶೇಷವಾಗಿತ್ತು. ಸುರಿಯುವ ಮಳೆಯ ನಡುವೆಯೂ, ದೇವರು ಹೊಳೆಗೆ ಹೋಗುವ ಕಾರ್ಯಕ್ರಮ ನೂರಾರು ಜನರ ಸಮ್ಮುಖದಲ್ಲಿ ನಡೆಯಿತು. ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದಂತೆ ಮೊಹರಂ ಆಚರಣೆ ಮಾಡಿದರು. ಕಳೆದ ಐದು ದಿನಗಳ ಹಿಂದೆ ತಾಲ್ಲೂಕಿನ ಬಹುತೇಕ ಕಡೆ ಪಂಜಾಗಳನ್ನು …

Read More »

KLE ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ನಡೆಸಿದ ರೊಬಾಟಿಕ್‌ ಚಿಕಿತ್ಸೆ ಯಶಸ್ವಿ

ಬೆಳಗಾವಿ: ‘ಇಲ್ಲಿನ ಕೆಎಲ್‌ಇ ಸಂಸ್ಥೆ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ರೊಬಾಟಿಕ್‌ ತಂತ್ರಜ್ಞಾನ ಬಳಸಿ ಇಬ್ಬರಿಗೆ ಯಶಸ್ವಿ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ಕೇಂದ್ರದ ವೈದ್ಯಕೀಯ ನಿರ್ದೆಶಕ ಕರ್ನಲ್‌ ಡಾ. ಎಂ. ದಯಾನಂದ ಹೇಳಿದರು. ‘ಅನ್ನನಾಳ ಕ್ಯಾನ್ಸರಿನಿಂದ ಬಳಲುತ್ತಿದ್ದ 62 ಮತ್ತು 70 ವರ್ಷದ ಇಬ್ಬರು ರೋಗಿಗಳಿಗೆ ಸುಮಾರು 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಇದು ಉತ್ತರ ಕರ್ನಾಟಕದಲ್ಲಿ ನಡೆದ ಮೊದಲ ಪ್ರಯೋಗ. ಕೆಎಲ್‌ಇ …

Read More »

ಅನಂತನಾರಾಯಣ ವಾದ್ಯಾರ್ ಅವರಿಗೆ ವ್ಯಾಸಜ್ಯೋತಿ ಪ್ರಶಸ್ತಿ

ಬೆಂಗಳೂರು: ಭಾರತೀಯ ವಿದ್ಯಾಭವನ ಮತ್ತು ಜ್ಯೋತಿ ಚಾರಿಟಬಲ್ ಟ್ರಸ್ಟ್, ಬೆಂಗಳೂರು ಸಹಯೋಗದಲ್ಲಿ ನೀಡುವ 2024ನೇ ಸಾಲಿನ ‘ವ್ಯಾಸಜ್ಯೋತಿ ಪ್ರಶಸ್ತಿ’ಗೆ ವೇದಬ್ರಹ್ಮ ಶ್ರೀ ಅನಂತನಾರಾಯಣ ವಾದ್ಯಾರ್ ಅವರು ಭಾಜನರಾಗಿದ್ದಾರೆ. ಪ್ರಶಸ್ತಿಯು ನಗದು ಮತ್ತು ಫಲಕವನ್ನು ಒಳಗೊಂಡಿದೆ. ಜು. 21ರಂದು ್ಗ ಭಾರತೀಯ ವಿದ್ಯಾ ಭವನದ ಕೆ.ಆರ್.ಜಿ. ಸಭಾಂಗಣದಲ್ಲಿ ಬೆಳಗ್ಗೆ 11.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಜ್ಯೋತಿ ಚಾರಿಟಬಲ್ ಟ್ರಸ್ಟ್‌ನ ವಿಶ್ವಸ್ಥರಾದ ಎಂ. ನರಸಿಂಹನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ …

Read More »

ಯಲ್ಲಾಪುರ: ಮರಹಳ್ಳಿ ರಸ್ತೆಯಲ್ಲಿ ಭೂಕುಸಿತ

ಯಲ್ಲಾಪುರ: ತಾಲ್ಲೂಕಿನ ಮಲವಳ್ಳಿಯಿಂದ ಮರಹಳ್ಳಿಗೆ ಸಾಗುವ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು ಭಾರಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮಲವಳ್ಳಿಯ ಜೋಗಾಳಕೇರಿ ಅಸ್ಲೆಕೊಪ್ಪದಲ್ಲಿ ಮನೆ ಪಕ್ಕದ ಗುಡ್ಡ ಕುಸಿಯುವ ಅಪಾಯ ಇರುವ ಹಿನ್ನೆಲೆಯಲ್ಲಿ ನಾಲ್ಕು ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಈ ನಾಲ್ಕು ಕುಟುಂದವರಿಗೆ ಮಲವಳ್ಳಿಯ ಪ್ರಾಥಮಿಕ ಕೇಂದ್ರದ ಪಕ್ಕದಲ್ಲಿರುವ ಕಟ್ಟಡದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು ರಾತ್ರಿಯ ಮೇಳೆ ಮನೆಯಲ್ಲಿ ವಸತಿ ಮಾಡದಂತೆ ಸೂಚಿಸಲಾಗಿದೆ ಎಂದು ಮಾವಿನಮನೆ ಗ್ರಾಮ ಪಂಚಾಯ್ತಿ ಪ್ರಕಟಣೆಯಲ್ಲಿ ತಿಳಿಸಿದೆ.

Read More »

ಮಹಾರಾಷ್ಟ್ರದಲ್ಲಿ ನಿರಂತರ ಮಳೆಗೆ ಕುಸಿದ ಆವಕ; ₹100ರ ಗಡಿ ತಲುಪಿದ ಟೊಮೆಟೊ ದರ

ಬೆಳಗಾವಿ: ನಗರದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೊ ದರ ಕನಿಷ್ಠ ₹80ರಿಂದ ₹100ರವರೆಗೆ ಮಾರಾಟವಾಗುತ್ತಿದೆ. ವಾರದ ಹಿಂದೆ ₹50ರಷ್ಟಿದ್ದ ದರ ಏಕಾಏಕಿ ಗಗನಮುಖಿ ಆಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಸಗಟು ವ್ಯಾಪಾರದಲ್ಲಿ ಎರಡು ವಾರಗಳ ಹಿಂದೆ 10 ಕೆ.ಜಿಯ ಒಂದು ಬುಟ್ಟಿಗೆ ₹600 ದರವಿತ್ತು. ವಾರದಿಂದಲೂ ದರ ಏರಿಸುತ್ತಲೇ ಇದ್ದಾರೆ. ಬುಧವಾರ ಬೆಳಿಗ್ಗೆ 10 ಕೆ.ಜಿಯ ಒಂದು ಟ್ರೇ ಟೊಮೆಟೊಗೆ ₹1000 ತೆಗೆದುಕೊಂಡಿದ್ದಾರೆ. ನಾವು ₹100ಕ್ಕೆ ಮಾರಿದರೂ ಹಾನಿ ಸಂಭವಿಸುತ್ತದೆ’ ಎಂದು …

Read More »

ದಾಂಡೇಲಿಯ ಗಣೇಶನಗರದ ಅವಿವಾಹಿತ ಯುವಕ ನಾಪತ್ತೆ

ದಾಂಡೇಲಿ : ಸ್ಥಳೀಯ ಗಣೇಶನಗರದ ಅವಿವಾಹಿತ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದು, ಈ ಬಗ್ಗೆ ನಗರ ಪೊಲೀಸ್ ಠಾಣೆಯಿಂದ ಮಾಹಿತಿ ಲಭ್ಯವಾಗಿದೆ. ಖಾಸಗಿ ಕೋರಿಯರ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಸ್ಥಳೀಯ ಗಣೇಶನಗರದ ನಿವಾಸಿ 27 ವರ್ಷ ವಯಸ್ಸಿನ ಪ್ರವೀಣ್ ತೆಗ್ಗಿ ಎಂಬಾತನೆ ನಾಪತ್ತೆಯಾದ ಯುವಕನಾಗಿದ್ದಾನೆ. ಈತ ಜುಲೈ 3 ರಂದು ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆ ಬಿಟ್ಟು ಹೋದವನು ಈವರೆಗೆ ಮನೆಗೆ ಬಂದಿಲ್ಲ. ಈತನ ಕುಟುಂಬಸ್ಥರು ಹಾಗೂ ಸ್ನೇಹಿತರು ಆತನನ್ನು …

Read More »

ಜಾರಿ ಬಿದ್ದ ಶಾಸಕ ರೇವಣ್ಣ

ಹೊಳೆನರಸೀಪುರ: ತಾಲ್ಲೂಕಿನ ಹರದನಹಳ್ಳಿಯ ಶಿವನ ದೇವಾಲಯದಲ್ಲಿ ಬುಧವಾರ ಬೆಳಗಿನ ಜಾವ ಪೂಜೆ ಸಲ್ಲಿಸಿ ಬರುವಾಗ ಮೆಟ್ಟಿಲಿನ ಮೇಲೆ ಕಾಲು ಜಾರಿಬಿದ್ದ ಶಾಸಕ ಎಚ್.ಡಿ. ರೇವಣ್ಣ ಅವರ ಬಲಪಕ್ಕೆಯ 6 ನೇ ಮೂಳೆಯಲ್ಲಿ ಸಣ್ಣ ಬಿರುಕು ಬಿಟ್ಟಿದೆ. 7ನೇ ಮೂಳೆಗೆ ಹೆಚ್ಚು ಹಾನಿಯಾಗಿದೆ.   ‌ಅವರಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಧನಶೇಖರ್, ಮೂಳೆ ತಜ್ಞರಾದ ಡಾ.ಜೆ.ಕೆ. ದಿನೇಶ್, ಡಾ. ದಿನೇಶ್ ಕುಮಾರ್ ಹಾಗೂ ಡಾ. ಸತ್ಯಪ್ರಕಾಶ್, ತೀವ್ರ ನಿಗಾ ಘಟಕದಲ್ಲಿ …

Read More »

ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಕ್ಯಾಮ್​; ಮಾಜಿ ಸಚಿವ ನಾಗೇಂದ್ರ ಪತ್ನಿ ED ವಶಕ್ಕೆ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಅವರ ಪತ್ನಿ ಮಂಜುಳಾರನ್ನು ವಶಕ್ಕೆ ಪಡೆದಿದ್ದಾರೆ. ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜುಲೈ 10ರಂದು ಮಾಜಿ ಸಚಿವ ನಾಗೇಂದ್ರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕಾಂಗ್ರೆಸ್​ ಶಾಸಕ ಬಸನ್​ಗೌಡ ದದ್ದಲ್​ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದರು .ಪ್ರಕರಣಕ್ಕೆ ಸಂಬಂಧಿಸಿದಂತೆ …

Read More »

SIT’ ಅಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಂ,ಮುಡಾ’ ಹಗರಣದಲ್ಲಿ ಸಿಎಂ ಇಡೀ ಕುಟುಂಬವೆ ಭಾಗಿ

SIT’ ಅಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಂ ಶಿವಮೊಗ್ಗ : ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, SIT ಅಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ ಎಂದು ವಾಗ್ದಾಳಿ ನಡೆಸಿದರು.   ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಿಷ್ಠ ನೋಟಿಸ್ ಕೊಟ್ಟು ನಾಗೇಂದ್ರಗೆ ಅಧಿಕಾರಿಗಳು ವಿಚಾರಣೆಗೆ ಕರೆದಿಲ್ಲ. ಎಸ್‌ಐಟಿ ಅಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ …

Read More »

KSRTC ಬಸ್​ ಚಾಲಕನ ರೀಲ್ಸ್​ ಶೋಕಿಗೆ ಎತ್ತುಗಳು ಬಲಿ, ರೈತನ ಸ್ಥಿತಿ ಗಂಭೀರ

ಹುಬ್ಬಳ್ಳಿ: ಇತ್ತೀಚಿನ ವರ್ಷಗಳಲ್ಲಿ ಜನರ ರೀಲ್ಸ್​ ಹುಚ್ಚಾಟಕ್ಕೆ ಅಮೂಲ್ಯ ಜೀವಗಳು ಬಲಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಭರದಲ್ಲಿ ಒಂದಿಲ್ಲೊಂದು ಕೆಲಸಕ್ಕೆ ಕೈ ಹಾಕಿ ಜನರು ಇನ್ನಿಲ್ಲದ ಪೇಚಿಗೆ ಸಿಲುಕುತ್ತಾರೆ. ಇದೀಗ ಹುಬ್ಬಳ್ಳಿಯಲ್ಲಿ KSRTC ಚಾಲಕನೋರ್ವ ಬಸ್​ ಚಾಲನೆ ವೇಳೆ ರೀಲ್ಸ್​ ಮಾಡಲು ಹೋಗಿ ಎರಡು ಎತ್ತು ಹಾಗೂ ರೈತನ ಜೀವಕ್ಕೆ ಕುತ್ತು ತಂದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ನಡೆದಿದೆ.   ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ …

Read More »