Breaking News

Daily Archives: ಜುಲೈ 16, 2024

ರಾಯಬಾಗ | ಬೈಕುಗಳ ಕರ್ಕಶ ಶಬ್ದ: ಜನರಿಗೆ ಕಿರಿಕಿರಿ

ರಾಯಬಾಗ: ಕರ್ಕಶವಾಗಿ ಶಬ್ದ ಮಾಡುವ ಬೈಕುಗಳನ್ನು ಓಡಾಡಿಸಿ ಜನರಿಗೆ ತೊಂದರೆ ಕೊಡುವ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಯಬಾಗ ಪಟ್ಟಣ ಮಾತ್ರವಲ್ಲ; ಚಿಂಚಲಿ ರಸ್ತೆ, ಚಿಕ್ಕೋಡಿ ರಸ್ತೆ, ಸ್ಟೇಷನ್‌ ರಸ್ತೆಯಲ್ಲೂ ಯುವಕರು ದಿನವೂ ಈ ಸರ್ಕಸ್‌ ಮಾಡುವುದು ಸಾಮಾನ್ಯವಾಗಿದೆ. ತಮ್ಮ ದ್ವಿಚಕ್ರ ವಾಹನಗಳ ಸೈಲೆನ್ಸರ್‌ ಬದಲಾವಣೆ ಅಥವಾ ಮಾರ್ಪಾಡು ಮಾಡಿಕೊಳ್ಳುವ ಯುವಕರು ಕರ್ಕಶ ಶಬ್ದ ಮಾಡುತ್ತ ಬೈಕ್‌ ಓಡಿಸುತ್ತಿದ್ದಾರೆ. ಇದು ಇತರ ವಾಹನ ಚಾಲಕರಿಗೆ ಮಾತ್ರವಲ್ಲ; ರಸ್ತೆ ಇಕ್ಕೆಲಗಳ …

Read More »

ನಾಗ ಪಂಚಮಿ ದಿನಾಂಕ, ಮಹತ್ವ, ಮಂಗಳಕರ ಸಮಯ, ಪೂಜಾ ವಿಧಾನ ತಿಳಿಯಿರಿ

ಹಿಂದೂ ಧರ್ಮದಲ್ಲಿ ನಾಗ ಪಂಚಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ನಾಗದೇವತೆಗಳಿಗೆ ಮೀಸಲಾಗಿರುವ ಈ ಹಬ್ಬವನ್ನು ದೇಶದ ಕೆಲವು ರಾಜ್ಯಗಳಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಐದನೇ ದಿನ ಅಂದರೆ ಜುಲೈ 25ರಂದು ಆಚರಿಸಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಇದನ್ನು ಶ್ರಾವಣ ತಿಂಗಳ ಶುಕ್ಲ ಪಕ್ಷದ ಐದನೇ ದಿನ ಅಂದರೆ ಆಗಸ್ಟ್ 9ರಂದು ಆಚರಿಸಲಾಗುತ್ತದೆ. ಬಹುತೇಕ ಕಡೆ ಈ ಹದಿನೈದು ದಿನಗಳ ಕಾಲ ನಾಗದೇವತೆಯನ್ನು ಪೂಜಿಸಲಾಗುತ್ತದೆ. ಶ್ರಾವಣ ಮಾಸ ಶಿವನ ಅಚ್ಚುಮೆಚ್ಚಿನ ತಿಂಗಳು …

Read More »

ಪೊಲೀಸರ ವರ್ಗಾವಣೆಗೆ ಒಪ್ಪಿಗೆ, ನಿಯಮಗಳೇನು?

ಬೆಂಗಳೂರು, ಜುಲೈ 16: ಕರ್ನಾಟಕ ಸರ್ಕಾರ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದೆ. ಪೊಲೀಸರ ವರ್ಗಾವಣೆಗೆ ಅನುಮತಿ ನೀಡಿದೆ. ವರ್ಗಾವಣೆಗೆ ನಿಯಮಗಳೇನು? ಎಂದು ಸಹ ವಿವರಣೆ ನೀಡಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹಸರಿನಲ್ಲಿ, ಜಿ. ಶ್ಯಾಮ ಹೊಳ್ಳ ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಪೊಲೀಸ್ ಸೇವಗಳು-ಬಿ) ಆದೇಶ ಹೊರಡಿಸಿದ್ದಾರೆ. ಆದೇಶ ಪೊಲೀಸ್ ಇಲಾಖೆಯಲ್ಲಿ ಪೊಲೀಸ್‌ ಅಧಿಕಾರಿ/ ನೌಕರರ ವರ್ಗಾವಣೆ ಕುರಿತು ಆದೇಶ ಎಂಬ …

Read More »

ಸಿಎಂ ಎರಡು ದೂರು ದಾಖಲು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಎರಡು ಪ್ರತ್ಯೇಕ ದೂರು ನೀಡಲಾಗಿದೆ. ಚುನಾವಣೆ ಅಫಿಡವಿಟ್ ನಲ್ಲಿ ಸುಳ್ಳು ಮಾಹಿತಿ ಹಾಗೂ ಮುಡಾ ಅಕ್ರಮ ವಿಚಾರವಾಗಿ ಎರಡು ಪ್ರತ್ಯೇಕ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಚುನಾವಣಾ ಆಯೋಗಕ್ಕೆ ಈ ದೂರು ನೀಡಿದ್ದಾರೆ.   2018ರ ವಿಧಾನಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ನೀಡಿದ್ದ ಅಫಿಡವಿಟ್ ನಲ್ಲಿ ಪತ್ನಿ ಪಾರ್ವತಿ ಹೆಸರಲ್ಲಿ 3 ಎಕರೆ 16 ಗುಂಟೆ ಕೃಷಿ ಜಮೀನು ಇದ್ದು, ಇದರ …

Read More »

ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ BMTC ಸಿಬ್ಬಂದಿ

ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಯೊಬ್ಬರು ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದ ಕಚೇರಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಮಹೇಶ್ (45) ಆತ್ಮಹತ್ಯೆಗೆ ಶರಣಾದ ಬಿಎಂಟಿಸಿ ಸಿಬ್ಬಂದಿ. ನಿನ್ನೆ ಬೆಳಿಗ್ಗೆ ಸೆಕ್ಯೂರಿಟಿ ಗಾರ್ಡ್ ಬಳಿ ರೆಕಾರ್ಡ್ ರೂಮ್ ಬೀಗ ಕೇಳಿ ಪಡೆದಿದ್ದ ಮಹೇಶ್, ನಿನ್ನೆ ಬೆಳಿಗ್ಗೆಯಿಂದಲೂ ರೆಕಾರ್ಡ್ ರೂಮ್ ನಲ್ಲಿಯೇ ಓಡಾಡುತ್ತಿದ್ದರು. ನಿನ್ನೆ ಸಂಜೆ ಯಾರೂ ಇಲ್ಲದ ವೇಳೆ ಕಚೇರಿಯಲ್ಲಿ ನೇಣಿಗೆ ಕೊರಳೊಡ್ಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ …

Read More »

ಕಾರವಾರ ಗುಡ್ಡ ಕುಸಿತ ಪ್ರಕರಣ : ಮಣ್ಣಿನ ಅಡಿ ಸಿಲುಕಿದ್ದು 9 ಜನ ಅಲ್ಲ 20 ಜನರು?

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಈ ಒಂದು ಗುಡ್ಡ ಕುಸಿತದಲ್ಲಿ ಕೇವಲ 9 ಅಲ್ಲ ಎರಡು ಕುಟುಂಬಗಳು ಸೇರಿದಂತೆ 20 ಜನರು ಸಿಲುಕಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಹೌದು ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಭಾರೀ ಮಳೆಗೆ ಗುಡ್ಡ ಕುಸಿದು 7 ಮಂದಿ ಸಾವನ್ನಪಿದ್ದು ಇಬ್ಬರು ನಾಪತ್ತೆಯಾಗಿದ್ದರು ಎಂದು ಹೇಳಲಾಗಿತ್ತು. ಆದರೆ ಇದೀಗ …

Read More »

ರಾಜ್ಯದ 435 ಮಂದಿಯಲ್ಲಿ ಡೆಂಗ್ಯೂ ದೃಢ,

ಬೆಂಗಳೂರು: ಬಿಬಿಎಂಪಿ ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ 435 ಡೆಂಗ್ಯೂ ಪ್ರಕರಣ ವರದಿಯಾಗಿದೆ. ಶಿವಮೊಗ್ಗದ ಓರ್ವ ವ್ಯಕ್ತಿ ಡೆಂಗ್ಯೂವಿನಿಂದ ಮೃತಪಟ್ಟಿದ್ದು, ಆ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ 363, ಮಂಡ್ಯ 36, ಧಾರವಾಡ 14,ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಲಾ 5, ಕೊಪ್ಪಳ 4, ಬಳ್ಳಾರಿ 3, ಬಾಗಲಕೋಟೆ 2, ಬೆಂಗಳೂರು ನಗರ, ಶಿವಮೊಗ್ಗ, ಯಾದಗಿರಿ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ. 65 ಮಂದಿ ಡೆಂಗ್ಯೂ ಸೋಂಕಿತರು …

Read More »

ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌ : ರಾಜ್ಯದಿಂದಲೂ ʻಉಚಿತ ಸಾರವರ್ಧಿತ ಅಕ್ಕಿʼ ವಿತರಣೆ

ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌ : ರಾಜ್ಯದಿಂದಲೂ ʻಉಚಿತ ಸಾರವರ್ಧಿತ ಅಕ್ಕಿʼ ವಿತರಣೆ   ಬೆಂಗಳೂರು : ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರ ನೀಡುತ್ತಿರುವಂತೆ ಸಾರವರ್ಧಿತ ಅಕ್ಕಿಯನ್ನು ರಾಜ್ಯದಿಂದಲೂ ವಿತರಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಪ್ರಶ್ನೆಗೆ ಉತ್ತರಿಸಿದ …

Read More »

1000 ಗ್ರಾಮ ಆಡಳಿತಾಧಿಕಾರಿಗಳು, 750 ಸರ್ಕಾರಿ ಸರ್ವೆಯರ್, 35 ಎಡಿಎಲ್‌ಆರ್ ಗಳ ನೇಮಕಾತಿ

ಬೆಂಗಳೂರು: ಸರ್ವೆ ಇಲಾಖೆಯಲ್ಲಿನ ಅನೇಕ ಸಮಸ್ಯೆಗಳಿಂದ ರೈತರು ಸಂಕಷ್ಟಕ್ಕೀಡಾಗಿರುವುದು ಸರ್ಕಾರ ಗಮನದಲ್ಲಿದೆ. ಒಂದು ಸಾವಿರ ಗ್ರಾಮ ಲೆಕ್ಕಗರು, 750 ಸರ್ವೆಯರ್ ಗಳನ್ನು ನೇಮಕ ಮಾಡುವ ಮೂಲಕ ಸಮಸ್ಯೆ ಬಗೆಹರಿಸಲು ಸರ್ಕಾರ ಪ್ರಯತ್ನಿಸಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ದುರ್ಯೋಧನ ಐಹೊಳೆ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಜನತಾ ದರ್ಶನದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ದೂರು ಬರುತ್ತಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮ …

Read More »