Breaking News

Daily Archives: ಜುಲೈ 10, 2024

132 ಕೋಟಿ ರೂ. GST ವಂಚನೆ

ಬೆಳಗಾವಿ : ನಕಲಿ ಫೆಡರಲ್ ಲಾಜಿಸ್ಟಿಕ್ಸ್ ಕಂಪನಿ ಸ್ಥಾಪಿಸಿ ತೆರಿಗೆ ವಂಚನೆಯಲ್ಲಿ ತೊಡಗಿದ್ದ ತೆರಿಗೆ ಸಲಹೆಗಾರ ನಕೀಬ್ ನಜೀಬ್ ಮುಲ್ಲಾ ಎಂಬಾತನನ್ನು ಜಿಎಸ್‌ಟಿ‌ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೃತ್ತಿಯಲ್ಲಿ ತೆರಿಗೆ ಸಲಹೆಗಾರನಾಗಿದ್ದ ಆರೋಪಿ ನಕೀಬ್ ಮುಲ್ಲಾ ಎಂಬಾತ ನಕಲಿ ಫೆಡರಲ್ ಲಾಜಿಸ್ಟಿಕ್ಸ್ ಕಂಪನಿ ನಡೆಸುತ್ತಿದ್ದ. ಜೊತೆಗೆ ಅನೇಕ ಸಂಸ್ಥೆಗಳ ಐಟಿ ರಿಟರ್ನ್ಸ್ ಮತ್ತು ಇತರ ಜಿಎಸ್ಟಿ ಸಂಬಂಧಿತ ಸಮಸ್ಯೆಗಳ ಫೈಲಿಂಗ್ ನಿರ್ವಹಿಸುತ್ತಿದ್ದ. ನಕಲಿ ಇನ್ ವಾಯಿಸ್ ಸೃಷ್ಟಿಸಿ ತೆರಿಗೆ ವಂಚನೆ …

Read More »

ವರ್ಗಾವಣೆ ಎಲ್ಲ ಸರ್ಕಾರದಲ್ಲೂ ದಂಧೆ: ರಾಯರಡ್ಡಿ

ಕೊಪ್ಪಳ: ‘ಅಧಿಕಾರಿಗಳ ವರ್ಗಾವಣೆ ಎಂಬುದು ಎಲ್ಲ ಸರ್ಕಾರಗಳಲ್ಲಿಯೂ ದಂಧೆಯೇ ಆಗಿದೆ’ ಎಂದು ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು. ಜಿಲ್ಲೆಯ ಕುಕನೂರು ತಾಲ್ಲೂಕಿನ ಕೋಮಲಾಪುರ ಗ್ರಾಮದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಧಿಕಾರಿಗಳು ತಮ್ಮ ವರ್ಗಾವಣೆಗೆ ಶಾಸಕರು, ಸಚಿವರ‌ ಮೊರೆ ಹೋಗುತ್ತಿದ್ದು, ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಈ ದಂಧೆ ನಡೆಯುತ್ತಿದೆ’ ಎಂದರು. ‘ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲೆಯಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ …

Read More »

ಗುರುಸಿದ್ಧದೇವ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ 17ರಂದು

ಬಾದಾಮಿ: ಶಿವಯೋಗಮಂದಿರ ಸಮೀಪದ ಮಲಪ್ರಭಾ ನದಿ ದಂಡೆಯ ಬಸವೇಶ್ವರ ಪುಣ್ಯಕ್ಷೇತ್ರದಲ್ಲಿ ಜುಲೈ 17ರಂದು ಬಂದಗದ್ದೆ, ಕೆಳದಿ ಸಂಸ್ಥಾನ ರಾಜಗುರು ಹಿರೇಮಠ ಮತ್ತು ಮಂಗಳೂರ ಮಠದ ಗುರುಸಿದ್ಧದೇವ ಶಿವಾಚಾರ್ಯರ 15ನೇ ಪುಣ್ಯಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕೆಳದಿ ಸಂಸ್ಥಾನ ಹಿರೇಮಠ ಬಂದಗದ್ದೆ, ಕೆಳದಿ ಮಂಗಳೂರು ಮಠದ ಮೃತ್ಯುಂಜಯ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 6 ಗಂಟೆಗೆ ಗುಳೇದಗುಡ್ಡ ಮುರುಘಾಮಠದ ಕಾಶಿನಾಥ ಸ್ವಾಮೀಜಿ ಷಟ್ ಸ್ಥಲ ಧ್ವಜಾರೋಹಣ ನೆರವೇರಿಸುವರು. ಲಿಂ. ಗುರುಸಿದ್ಧದೇವ …

Read More »

ಕೋತಿ ಕಚ್ಚಿ 8 ಮಂದಿಗೆ ಗಾಯ

ಬಾದಾಮಿ: ಬನಶಂಕರಿ ರಸ್ತೆಯ ಕಾಳಿದಾಸ ಶಿಕ್ಷಣ ಸಂಸ್ಥೆಯ ಸಮೀಪ ಮಂಗಳವಾರ ಸಂಜೆ ಕಪ್ಪು ಕೋತಿಯೊಂದು ಮಹಿಳೆಯರು ಸೇರಿದಂತೆ ಎಂಟಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದೆ ಎಂದು ಗಾಯಗೊಂಡ ಮಹಾದೇವ ಪತ್ರಿಕೆಗೆ ಹೇಳಿದರು. ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ಹಿಡಿದು ಬೇರೆಡೆ ಸಾಗಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.   ಕೋತಿ ನೆಗೆದಾಡುತ್ತ ಜನರ ತಲೆ, ಕಾಲು, ಬೆನ್ನು ಮತ್ತು ಕೈಗೆ ಕಚ್ಚಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಗಾಯಗೊಂಡವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ …

Read More »

ಇಂದಿರಾ ಕ್ಯಾಂಟೀನ್‌ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

ಇಳಕಲ್‌: ‘ಬಡವರಿಗೆ, ಕೂಲಿಕಾರರಿಗೆ ರಿಯಾಯ್ತಿ ದರದಲ್ಲಿ ಊಟ, ಉಪಹಾರ ನೀಡುವ ಇಂದಿರಾ ಕ್ಯಾಂಟಿನ್‌ ಹುನಗುಂದದಲ್ಲಿ ಮಂಜೂರಾಗಿದ್ದರೂ, ಹಿಂದಿನ ಸರ್ಕಾರ ಹಾಗೂ ಆಗಿನ ಶಾಸಕರು ದುರುದ್ದೇಶದಿಂದ ಆರಂಭಿಸಿರಲಿಲ್ಲ’ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.   ಅವರು ಮಂಗಳವಾರ ಇಲ್ಲಿಯ ಪೊಲೀಸ್‌ ಠಾಣೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್‌ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ‘ಕೆಲವೇ ತಿಂಗಳುಗಳಲ್ಲಿ ಕ್ಯಾಂಟಿನ್‌ ಅರಂಭವಾಗಲಿದೆ. ಕೇವಲ ₹ 5 ಮತ್ತು …

Read More »

ರಾಜ್ಯದಲ್ಲಿ ಮತ್ತೊಂದು ‘ಕೀಚಕ ಕೃತ್ಯ’: ಡ್ರಾಫ್ ಕೊಡುವ ನೆಪದಲ್ಲಿ ಬಾಲಕಿ ಮೇಲೆ ‘ದುರುಳ’ರಿಂದ ಅತ್ಯಾಚಾರ

ಕೊಡಗು: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸುವಂತ ಘಟನೆಯೊಂದು ನಡೆದಿದೆ. ಡ್ರಾಫ್ ನೀಡುವ ನೆಪದಲ್ಲಿ ಬಾಲಕಿಯೊಬ್ಬಳ ಮೇಲೆ ಕೀಚಕರ ಕೃತ್ಯವನ್ನು ದುರುಳರು ಮೆರೆದಿದ್ದಾರೆ. ಓರ್ವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರೇ, ಮತ್ತೋರ್ವ ಬಾಲಕಿಯ ಮೇಲೆ ಅತ್ಯಾಚಾರ ಯತ್ನ ನಡೆಸಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂ ಪೇಟೆ ತಾಲೂಕಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತ ಐವರು ಬಾಲಕಿಯರನ್ನು, ಮಾರುತಿ 800 ಅಪರಿಚಿತ ಕಾರಿನಲ್ಲಿ ಡ್ರಾಫ್ ಕೊಡುವುದಾಗಿ ಕರೆದೊಯ್ದಿದ್ದಾರೆ. ನಾಗರಹೊಳೆಗೆ ಡ್ರಾಫ್ ಕೊಡ್ತಾರೆ ಅಂತ ಕಾರು ಹತ್ತಿದಂತ …

Read More »

ಪಹಣಿಗೆ ಆಧಾರ್ ಜೋಡಣೆ|ಕೆ.ಹೊಸಳ್ಳಿ ರಾಜ್ಯಕ್ಕೆ ಪ್ರಥಮ: ಉಪತಹಶೀಲ್ದಾರ್

ಸಿಂಧನೂರು: ತಾಲ್ಲೂಕಿನ ಕೆ.ಹೊಸಳ್ಳಿ ಗ್ರಾಮದಲ್ಲಿ ಪಹಣಿಗೆ ಆಧಾರ್ ಜೋಡಣೆ ಕಾರ್ಯ ಶೇ 98ರಷ್ಟು ಮುಗಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಜಾಲಿಹಾಳ ಹೋಬಳಿಯ ಉಪತಹಶೀಲ್ದಾರ್ ಶ್ರೀನಿವಾಸ ಹೇಳಿದರು. ಪಹಣಿಗೆ ಆಧಾರ್‌ ಜೋಡಣೆ ಯಶಸ್ಸಿಗಾಗಿ ತಾಲ್ಲೂಕಿನ ಜಾಲಿಹಾಳ ಹೋಬಳಿ ಕೇಂದ್ರದಲ್ಲಿ ಕೆ.ಹೊಸಳ್ಳಿ ಗ್ರಾಮದ ಆಡಳಿತ ಅಧಿಕಾರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪಹಣಿಗಳಿಗೆ ಆಧಾರ್ ಜೋಡಣೆಯಿಂದ ಪಹಣಿಯಲ್ಲಿ ರೈತರ ಭಾವಚಿತ್ರ ಬರುತ್ತದೆ. ಯಾವುದೇ ರೀತಿಯ ಸಮಸ್ಯೆಗಳ ಉದ್ಭವಿಸಿದರೂ, …

Read More »

ಕುಮಟಾ | ಹೊಳೆಗೆ ಉರುಳಿದ ಖಾಲಿ ಗ್ಯಾಸ್ ಟ್ಯಾಂಕರ್

ಕುಮಟಾ: ಹೆದ್ದಾರಿ ಬದಿಯ ಹೊಳೆಗೆ ಖಾಲಿ ಗ್ಯಾಸ್ ಟ್ಯಾಂಕರ್ ಹೊತ್ತ ಲಾರಿ ಉರುಳಿ ಬಿದ್ದು ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ಪಟ್ಟಣದ ಹೊನಮಾಂವ್ ಬಳಿ ನಡೆದಿದೆ. ಖಾಲಿ ಟ್ಯಾಂಕರ್ ಹೊತ್ತ ಲಾರಿ ಗೋವಾದಿಂದ ಮಂಗಳೂರಿಗೆ ಹೋಗುತ್ತಿತ್ತು. ವಾಹನದ ಎದುರು ಬೈಕ್ ಬಂದಾಗ ಅಪಾಯ ಸಂಭವಿಸುವುದನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿದ ಲಾರಿ ಪಕ್ಕದ ಹೊಳೆಗೆ ಉರುಳಿದೆ. ಲಾರಿ ಚಾಲಕ ಜಾರ್ಖಂಡ್ ಮೂಲದ ಬಿರೇಂದರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ …

Read More »

ನಕಲಿ ವೈದ್ಯರ 12 ಚಿಕಿತ್ಸಾ ಕೇಂದ್ರಗಳಿಗೆ ಬೀಗ

ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಬುಧವಾರ ಕಾರ್ಯಾಚರಣೆ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು 12 ನಕಲಿ ವೈದ್ಯರ ಚಿಕಿತ್ಸಾ ಕೇಂದ್ರಗಳಿಗೆ ಬೀಗ ಜಡಿದಿದ್ದಾರೆ. ‘ಮುಧೋಳ ತಾಲ್ಲೂಕಿನ ಬೆಳಗಲಿ, ಮಹಾಲಿಂಗಪುರ, ತೇರದಾಳದ ಎರಡು ಚಿಕಿತ್ಸಾ ಕೇಂದ್ರ, ಬೀಳಗಿ ತಾಲ್ಲೂಕಿನ ಮೂರು, ಬಾದಾಮಿ ತಾಲ್ಲೂಕಿನ ಒಂದು, ಬಾಗಲಕೋಟೆಯಲ್ಲಿ ಎರಡು, ಹುನಗುಂದ ಎರಡು ಚಿಕಿತ್ಸಾ ಕೇಂದ್ರ ಬಂದ್ ಮಾಡಲಾಗಿದೆ. ಒಟ್ಟು 32 ಕಡೆ ಕಾರ್ಯಾಚರಣೆ ನಡೆಸಲಾಯಿತು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ …

Read More »

ಹುಬ್ಬಳ್ಳಿ | ನಗರಲ್ಲೊಂದು ಹಳ್ಳಿ ಸೊಗಡು

ಹುಬ್ಬಳ್ಳಿ: ನೋಡಲಷ್ಟೇ ಪುಟ್ಟ ಪುಟ್ಟ ಮನೆಗಳು. ಒಳ ಪ್ರವೇಶಿಸಿದರೆ ವಿಶಾಲ ಪಡಶಾಲೆ, ಅದಕ್ಕೆ ಹೊಂದಿಕೊಂಡು ಅಷ್ಟೇ ದೊಡ್ಡ ಕೊಟ್ಟಿಗೆಗಳು. ನೂರಾರು ದನ-ಕರುಗಳ ಜೊತೆಗೆ, ಆಡು-ಮೇಕೆಗಳ ಸಹ ಜೀವನ… ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಗೋಪನಕೊಪ್ಪ ಗ್ರಾಮದ ಸಿದ್ದರಾಮೇಶ್ವರ ಬಡಾವಣೆಯ ಹಳ್ಳಿ ಸೊಗಡು. ಹೇಳಿಕೊಳ್ಳಲಷ್ಟೇ ಕಂದಾಯ ಗ್ರಾಮವಾಗಿ, ನಗರ ಪ್ರದೇಶ ಎಂದು ಗುರುತಿಸಿಕೊಂಡಿದೆ. ಆದರೆ, ಜನರ ಜೀವನಶೈಲಿ, ಆಚಾರ-ವಿಚಾರಗಳೆಲ್ಲ ಈಗಲೂ ಪುಟ್ಟ ಗ್ರಾಮೀಣ ಪ್ರದೇಶದಂತಿದೆ. ಮನೆ ಎದುರಿಗೆ ಇರುವ …

Read More »