ಬೆಳಗಾವಿ: ಹಾಸನ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಮುಖ್ಯವಾಗಿ ಭವಾನಿ ರೇವಣ್ಣ ಅವರು ಈ ಚುನಾವಣೆಯಲ್ಲಿ ಅನಿವಾರ್ಯ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಹಾಸನ ಟಿಕೆಟ್ ವಿಚಾರ ಇನ್ನೊಂದು ವಾರದಲ್ಲಿ ಬಗೆಹರಿಯಲಿದೆ. ಚುನಾವಣೆ ಗೆಲ್ಲಬೇಕಾದ ಹಿನ್ನಲೆಯಲ್ಲಿ ನಾವು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ನಮಗೆ 30 ರಿಂದ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಇದೆ. ಈ ಕೊರತೆ ತುಂಬಿಕೊಳ್ಳಲು ಜನರ ವಿಶ್ವಾಸ ಪಡೆದುಕೊಳ್ಳುವ ಹೊಸ …
Read More »Monthly Archives: ಫೆಬ್ರವರಿ 2023
ಕೃಷ್ಣಾ ನದಿ ತಟದಲ್ಲಿ ಕದನ ಕುತೂಹಲ
ಬೆಳಗಾವಿ: ಕೃಷ್ಣಾ ಮತ್ತು ಘಟಪ್ರಭಾ ನದಿ ತಟದಲ್ಲಿರುವ ಚಿಕ್ಕೋಡಿ ಭಾಗದ ಎಂಟು ವಿಧಾನಸಭಾ ಕ್ಷೇತ್ರಗಳು ರಾಜ್ಯ ರಾಜಕಾರಣದಲ್ಲಿ ಬಹಳ ಪ್ರಭಾವ ಹೊಂದಿರುವ ಕ್ಷೇತ್ರಗಳು. ಈ ಎಂಟು ಕ್ಷೇತ್ರಗಳಲ್ಲಿ ಪಕ್ಷ ಪಕ್ಷಗಳ ನಡುವೆ ಕಾದಾಟ ಎನ್ನುವುದಕ್ಕಿಂತ ವೈಯಕ್ತಿಕ ಪ್ರತಿಷ್ಠೆಯ ನಡುವಿನ ಕದನ ಎಂದರೆ ತಪ್ಪಿಲ್ಲ. ವಿಶೇಷ ಎಂದರೆ ಚಿಕ್ಕೋಡಿ ವಿಭಾಗ ಕಾಂಗ್ರೆಸ್, ಬಿಜೆಪಿ, ಜನತಾ ಪಕ್ಷ ಸಹಿತ ಎಲ್ಲ ಪಕ್ಷಗಳಿಗೂ ನೆಲೆ ಒದಗಿಸಿದೆ. ಆರಂಭದ ಚುನಾವಣೆಗಳಲ್ಲಿ ಕಾಂಗ್ರೆಸ್ ಭದ್ರಕೋಟೆ ಸ್ಥಾಪಿಸಿದ್ದರೂ ಈಗ ಅದು …
Read More »ಪ್ರೇಮಿಗಳ ದಿನದ ಬದಲು ಮಾತೃ-ಪಿತೃ ಪೂಜನೀಯ ದಿನ ಆಚರಿಸಿ: ಹಿಂದೂ ಜನಜಾಗೃತಿ ಸಮಿತಿ
ಮಂಗಳೂರು: ನಗರದಲ್ಲಿ ಪ್ರೇಮಿಗಳ ದಿನಾಚರಣೆಗೆ ಅವಕಾಶ ಮಾಡಿಕೊಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿಯು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ. ವ್ಯಾಲೆಂಟೈನ್ ಡೇ ನಿಮಿತ್ತ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಬೇಕು ಎಂದು ಮನವಿ ಮಾಡಲಾಗದು. ಕಳೆದ ಅನೇಕ ವರ್ಷಗಳಿಂದ ಭಾರತದಂತಹ ಸಾಂಸ್ಕೃತಿಕ ದೇಶದಲ್ಲಿ ಫೆಬ್ರವರಿ 14 ಯಂದು ‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವ ಪದ್ಧತಿಯು ಹೆಚ್ಚಳವಾಗಿದೆ. ದೇಶದಲ್ಲಿ ಈ ಮೂಲಕ ವ್ಯವಹಾರಿಕ ಲಾಭಗಳಿಸುವ ಉದ್ದೇಶದಿಂದ ಪಾಶ್ಚಾತ್ಯರ ಈ …
Read More »ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಲು ಹೋಗಿ ದೇವೇಗೌಡರು ಜುಬ್ಬ ಹರಿಸಿಕೊಂಡು ಬಂದರು’
ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು, ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಲು ಹೋಗಿ ಬಂಗಾರಪ್ಪನವರ ಮನೆಯಲ್ಲಿ ದೇವೇಗೌಡರು ಜುಬ್ಬ ಹರಿಸಿಕೊಂಡು ಬಂದಿದ್ದಾರೆ. ಗೋಕರ್ಣ/ ಹಾಸನ: ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು, ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಲು ಹೋಗಿ ಬಂಗಾರಪ್ಪನವರ ಮನೆಯಲ್ಲಿ ದೇವೇಗೌಡರು ಜುಬ್ಬ ಹರಿಸಿಕೊಂಡು ಬಂದಿದ್ದಾರೆ. ರಾಜಕೀಯ ಗೊತ್ತಿಲ್ಲದ ನಳಿನ್ ಕುಮಾರ್ ಕಟೀಲ್ಗೆ ತಿಳುವಳಿಕೆ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ …
Read More »ವೋಟರ್ ಐಡಿಗಾಗಿ ಸುಲಭ ಆನ್ಲೈನ್ ಅಪ್ಲಿಕೇಶನ್
ವೋಟರ್ ಐಡಿ ಯನ್ನು ಮತದಾರರ ಫೋಟೋ ಗುರುತಿನ ಚೀಟಿ ಎಂದು ಕರೆಯಲಾಗುತ್ತದೆ. ಮತದಾರರ ಗುರುತಿನ ಚೀಟಿಗಳು ಆಧಾರ್ ಕಾರ್ಡ್ಗಳಂತೆ ಭಾರತೀಯರಿಗೆ ಗುರುತಿನ ಕಾರ್ಡ್ಗಳಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಪ್ರತಿಯೊಬ್ಬರೂ ಬಳಿಯೂ ಈ ಗುರುತಿನ ಚೀಟಿ ಇರುವುದಿಲ್ಲ. ಕನಿಷ್ಠ 18 ವರ್ಷ ವಯಸ್ಸಿನ ನಾಗರಿಕರಿಗೆ ಮಾತ್ರ ಮತದಾನದ ಹಕ್ಕನ್ನು ನೀಡಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ನೀವು ಮತದಾರರ ಗುರುತಿನ ಚೀಟಿಯನ್ನು ರಚಿಸಲು ಬಯಸಿದರೆ ಇದರ ಆಯ್ಕೆಯು ಆನ್ಲೈನ್ನಲ್ಲಿ ಲಭ್ಯವಿದೆ. ಅರ್ಹತಾ ದಿನಾಂಕದಂದು 18 ವರ್ಷ …
Read More »ಸುದೀಪ್ ಅಭಿಮಾನಿಗಳ ಮೇಲೆ ಗರಂ ,ಕಿರಿಕಿರಿ ಮಾಡಿದರೆ ಕಾರ್ಯಕ್ರಮ ಕ್ಯಾನ್ಸಲ್ ಎಂದ ವಾಲ್ಮೀಕಿ ಶ್ರೀ!
ನಟರ ಅಬ್ಬರ ಇತ್ತೀಚೆಗೆ ಹೆಚ್ಚಾಗಿದೆ. ಸಿನಿಮಾಕ್ಕೆ ಸಂಬಂಧಿಸದ ಕಾರ್ಯಕ್ರಮಗಳಲ್ಲಿಯೂ ಕೆಲವು ನಟರ ಅಭಿಮಾನಿಗಳು ಕೂಗಾಟ-ಕಿರುಚಾಟ ಮಾಡುವ ಕೆಟ್ಟ ಸಂಪ್ರದಾಯ ಇತ್ತೀಚೆಗೆ ಶುರುವಾಗಿದೆ. ಇದರಿಂದ ಕಾರ್ಯಕ್ರಮ ಆಯೋಜಿಸಿದವರು, ವೇದಿಕೆ ಮೇಲಿದ್ದವರು ಮುಜುಗರಕ್ಕೆ ಒಳಗಾಗುವಂತಾಗಿದೆ. ದರ್ಶನ್ ಅಭಿಮಾನಿಗಳು ಕೆಲವು ಸಿನಿಮೇತರ ಕಾರ್ಯಕ್ರಮಗಳಲ್ಲಿ ದರ್ಶನ್ ಭಾಗವಹಿಸಿದ್ದಾಗ ಹೀಗೆ ವರ್ತಿಸಿದ್ದರು, ಒಮ್ಮೆಯಂತೂ ದರ್ಶನ್ ಅಭಿಮಾನಿಗಳ ಕೂಗಾಟದ ಹೆಚ್ಚಾದ ಕಾರಣ ಸ್ವತಃ ಸಿಎಂ ಅವರು ಮೈಕ್ ಬಿಟ್ಟು ಹಿಂದೆ ಬಂದುಬಿಟ್ಟಿದ್ದರು. ಈಗ ಸುದೀಪ್ ಅಭಿಮಾನಿಗಳ ಸರದಿ. …
Read More »SC/STಮೀಸಲಾತಿ ಹೆಚ್ಚಳ,9ನೇ ಶೆಡ್ಯೂಲ್ ಗೆ ಸೇರಿಸುವ ಪ್ರಕ್ರಿಯೆ ಪ್ರಾರಂಭ: ಬೊಮ್ಮಾಯಿ
ಎಸ್ ಸಿ ಎಸ್ ಟಿ ಸಮಾಜಕ್ಕೆ ನ್ಯಾಯ ದೊರಕಿಸುಕೊಡುವುದೇ ನಮ್ಮ ಸರ್ಕಾರದ ಏಕೈಕ ಗುರಿಯಾಗಿದ್ದು, ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳವನ್ನು9ನೇ ಶೆಡ್ಯೂಲ್ ಗೆ ಸೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ನಿನ್ನೆ ‘ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ’ ಅಂಗವಾಗಿ ‘ಜನಜಾಗೃತಿ ಜಾತ್ರಾ ಮಹೋತ್ಸವದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಪಾಲ್ಗೊಂಡು ಮಾತನಾಡಿ, ನಾಗಮೋಹನ್ ದಾಸ್ ವರದಿಯಂತೆ ತುಳಿತಕ್ಕೊಳಗಾಗಿರುವ …
Read More »ಕೇಂದ್ರಕ್ಕೆ ರಾಜ್ಯತೆರಿಗೆ ದುಡ್ಡು , ಜನರ ಓಟು ಬೇಕು. ಆದರೆ, ಅನುದಾನ ಕೊಡಲು ಆಗುವುದಿಲ್ಲ: ದಿನೇಶ್
ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದೇ ಒಂದು ರೂಪಾಯಿ ವಿಶೇಷ ಅನುದಾನ ಕೊಟ್ಟಿಲ್ಲ. ಇದೇ ವೇಳೆ ಉತ್ತರದ ರಾಜ್ಯಗಳಿಗೆ ಅನುದಾನದ ಹೊಳೆಯನ್ನೇ ಹರಿಸಿದೆ. ಕೇಂದ್ರಕ್ಕೆ ರಾಜ್ಯದಿಂದ ತೆರಿಗೆ ದುಡ್ಡು ಬೇಕು, ಜನರ ಓಟು ಬೇಕು. ಆದರೆ, ಅನುದಾನ ಕೊಡಲು ಆಗುವುದಿಲ್ಲವೇ. ಉತ್ತರದ ರಾಜ್ಯಗಳ ಉದ್ಧಾರ ಮಾಡಲು ನಮ್ಮ ರಾಜ್ಯದ ತೆರಿಗೆ ಹಣವೇ’ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ‘ಪ್ರಜಾವಾಣಿ’ ವರದಿ ಸಹಿತ ಟ್ವೀಟ್ ಮಾಡಿರುವ ಅವರು, …
Read More »ಮುರುಘಾ ಶರಣರ ಅಧಿಕಾರ ನಿರ್ಬಂಧಿಸಿದ ಅರ್ಜಿ ವಿಚಾರಣೆ 13ಕ್ಕೆ
ಬೆಂಗಳೂರು:’ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ), ಅತ್ಯಾಚಾರ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಮುರುಘಾ ಶರಣರ ಅಧಿಕಾರ ಚಲಾವಣೆಗೆ ವಿಧಿಸಲಾಗಿರುವ ನಿರ್ಬಂಧ ಪ್ರಶ್ನಿಸಿದ ಅರ್ಜಿಯನ್ನು ಹೈಕೋರ್ಟ್ ಇದೇ 13ರಂದು ವಿಚಾರಣೆ ನಡೆಸಲಿದೆ. ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ನ ಎರಡನೇ ಹೆಚ್ಚುವರಿ ನ್ಯಾಯಾಲಯ 2022ರ ಡಿಸೆಂಬರ್ 15ರಂದು …
Read More »ಅಧಿವೇಶನ: ಪೂರ್ಣ ಕಲಾಪ ಅನುಮಾನ
ಬೆಂಗಳೂರು: ಪಕ್ಷದ ಪರ ಅಲೆ ಎಬ್ಬಿಸಲು ವಿವಿಧ ಕಡೆಗಳಲ್ಲಿ ಯಾತ್ರೆ ನಡೆಸುತ್ತಿರುವ ನಾಯಕರು, ಮತ್ತೊಮ್ಮೆ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದಿರುವ ಎಲ್ಲ ಪಕ್ಷದ ಶಾಸಕರು ಕ್ಷೇತ್ರದಲ್ಲೇ ಬೆವರು ಹರಿಸುತ್ತಿರುವುದರಿಂ ದಾಗಿ 15 ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕಲಾಪ ನಿಗದಿಯಾದಷ್ಟು ದಿನ ನಡೆಯುವುದೇ ಅನುಮಾನ. ಈ ಅಧಿವೇಶನ ಮುಗಿದ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದೆ. ಮುಂದೆಯೂ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವ ಸಲುವಾಗಿ ಶಾಸಕರು ಹರಸಾಹಸ ಪಡುತ್ತಿದ್ದು, ಕ್ಷೇತ್ರದಲ್ಲೇ ಮೊಕ್ಕಾಂ …
Read More »