Breaking News

Monthly Archives: ಆಗಷ್ಟ್ 2022

ಎಸ್​ಟಿ ಮೀಸಲಾತಿ ಹೆಚ್ಚಳಕ್ಕಾಗಿ ಕಳೆದ 6 ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಭೇಟಿ ಮಾಡಿ, ಕಾನೂನಾತ್ಮಕ ನೆರವು ನೀಡುವುದಾಗಿ ಭರವಸೆ

ಬೆಂಗಳೂರು: ಪರಿಶಿಷ್ಟ ಪಂಗಡ(ಎಸ್​ಟಿ) ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ಸಹಕಾರ ನೀಡುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಕಳೆದ ಆರು ತಿಂಗಳಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿದ ಸ್ವಾಮೀಜಿ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ಶೇ.3 ರಿಂದ ಶೇ.7.5 ರಷ್ಟು ಎಸ್.ಟಿ ಸಮುದಾಯದ ಮೀಸಲಾತಿ …

Read More »

ಹಿಂದುಳಿದ ವರ್ಗಗಳ ಆಯೋಗದ ವರದಿ ಆಧರಿಸಿ `ಪಂಚಮಸಾಲಿ ಮೀಸಲಿಗೆ’ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ

ಹಾವೇರಿ : ಹಿಂದುಳಿದ ವರ್ಗಗಳ ಆಯೋಗ ನೀಡಿದ ವರದಿ ಆಧಾರದ ಮೇಲೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಮುಂದಿನ ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಸ್ವಾಮೀಜಿಯವರು ಈಗಾಗಲೇ ಗಡುಉವ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ವರದಿ ಪ್ರಗತಿಯಲ್ಲಿದೆ. ಸಂಪೂರ್ಣ ವರದಿ ಬಂದ ಮೇಲೆ ಅದರ ಶಿಫಾರಸುಗಳು ಏನು ಎಂಬುದನ್ನು ತಿಳಿದು …

Read More »

ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಶಶಿಧರಕುರೇರ ನೇಮಕ

ಬೆಳಗಾವಿ – ಐಎಎಸ್ ಅಧಿಕಾರಿಯಾಗಿ ಈಚೆಗಷ್ಟೆ ಭಡ್ತಿ ಪಡೆದಿರುವ ಬೆಳಗಾವಿಯ ಮಲಪ್ರಭಾ, ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ(ಕಾಡಾ) ಆಡಳಿತಾಧಿಕಾರಿ ಶಶಿಧರ ಕುರೇರ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಕುರೇರ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ರಾಯಚೂರು ಜಿಲ್ಲಾ ಪಂಚಾಯಿತಿ ಹಾಲಿ ಸಿಇಒ ಚಂದ್ರಶೇಖರ ನಾಯಕ ಅವರ ಸ್ಥಾನದಲ್ಲಿ ಕುರೇರ ಅವರು ನೇಮಕವಾಗಿದ್ದು, ಇದು ಐಎಎಸ್ ಅಧಿಕಾರಿಯಾಗಿ ಅವರ ಮೊದಲ ಹುದ್ದೆಯಾಗಿದೆ. ಕುರೇರ ಅವರು …

Read More »

ಜಿಲ್ಲೆಯ ಎರಡು ಕಡೆಗಳಲ್ಲಿ ಪೊಲೀಸರು ಹಾಗೂ ಆಹಾರ ಇಲಾಖೆಯವರು ಜಂಟಿ ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ಕಿ ಅಕ್ರಮ ಬಯಲು

ಬೆಳಗಾವಿ: ಜಿಲ್ಲೆಯ ಎರಡು ಕಡೆಗಳಲ್ಲಿ ಪೊಲೀಸರು ಹಾಗೂ ಆಹಾರ ಇಲಾಖೆಯವರು ಜಂಟಿ ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ಕಿ ಅಕ್ರಮ ಬಯಲು ಮಾಡಿದ್ದಾರೆ. ಹಾರೂಗೇರಿ ಪೊಲೀಸರು ಹಿಡಕಲ್ ಬಳಿ ದಾಳಿ ನಡೆಸಿ ಕ್ಯಾಂಟರ್ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ 11.520 ಟನ್ ಅಕ್ರಮ ಅಕ್ಕಿ ವಶಪಡಿಸಿಕೊಂಡಿದ್ದಾರೆ. 384 ಚೀಲಗಳಲ್ಲಿ ಸಾಗಿಸಲಾಗುತ್ತಿದ್ದ ಈ ಅಕ್ಕಿ ಮೌಲ್ಯ 2,53, 440 ರೂ. ಆಗಿದೆ. ಈ ಸಂಬಂಧ ಲಾರಿ ಮಾಲೀಕ ಹಾಗೂ ಚಾಲಕ, ಮೂಡಲಗಿಯ ಸಂಗನಕೇರಿ …

Read More »

ಮಾಂಸಾಹಾರ ತಿಂದು ದೇವಾಲಯಕ್ಕೆ ಹೋದ್ರೆ ತಪ್ಪೇನು..? ಸಿದ್ದರಾಮಯ್ಯ ಆಕ್ರೋಶ

ಚಿಕ್ಕಬಳ್ಳಾಪುರ: ಮಡಿಕೇರಿ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ, ಮಾಂಸ ಆಹಾರ ಸೇವಿಸಿ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಸಿದ್ದರಾಮಯ್ಯ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಊಟದ ಬಗ್ಗೆ ಪ್ರಶ್ನಿಸಲು‌ ನೀವ್ಯಾರು?  ನಾನು ‌ಊಟ ಮಾಡಿದ್ದು, ಸುದರ್ಶನ್ ಗೆಸ್ಟ್ ಹೌಸ್​ನಲ್ಲಿ. ಸಂಜೆ‌ ನಾನು ಬಸವೇಶ್ವರ ‌ದೇವಾಲಯಕ್ಕೆ ಹೋಗಿರೋದು. ನಾನ್​ವೆಜ್ ತಿಂದು ದೇವಸ್ಥಾನಕ್ಕೆ ಹೋದ್ರೆ ತಪ್ಪೇನು? ಮಧ್ಯಾಹ್ನ ತಿಂದು ಸಂಜೆ ದೇವಾಲಯಕ್ಕೆ ಹೋದ್ರೆ ತಪ್ಪೇನು? ನನ್ನ ಊಟದ ಬಗ್ಗೆ …

Read More »

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಮತ್ತೆ ಭೂಕಂಪನವಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಜಿಲ್ಲೆ ವಿಜಯಪುರದಲ್ಲಿ ಶನಿವಾರ ರಾತ್ರಿ 8.16 ರ ಸುಮಾರಿಗೆ ಭೂಮಿ ಕಂಪಿಸಿದೆ. ಆಲಮಟ್ಟಿಯ ರಿಕ್ಟರ್ ಮಾಪಕದಲ್ಲಿ 3.5 ರಷ್ಟು ತೀವ್ರತೆ ದಾಖಲಾಗಿದೆ.   ವಿಜಯಪುರ ನಗರದ ಬಹುತೇಕ ಬಡಾವಣೆಗಳಲ್ಲಿ ಭೂಕಂಪನದ ಅನುಭವವಾಗಿದೆ. ಭೂಕಂಪನದ ಕೇಂದ್ರ ಬಿಂದು ಮಹಾರಾಷ್ಟ್ರದ ಲ್ಲಿ ಕಂಡು ಬಂದಿದ್ದು, ಅಂದಾಜು 5 ಕಿಮೀ ಆಳದಲ್ಲಿ ತರಂಗಗಳು ಸೃಷ್ಟಿಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ …

Read More »

ಗಾಯಗೊಂಡ ಮಹಿಳೆಯ ತಲೆಗೆ ಕಾಂಡೋಮ್‌ ಕವರ್‌ ಇಟ್ಟು ಬ್ಯಾಂಡೇಜ್‌ ಮಾಡಿದ ವೈದ್ಯಕೀಯ ಸಿಬ್ಬಂದಿ!

ತಲೆಗೆ ಬಿದ್ದ ಪೆಟ್ಟಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳಿಗೆ ವೈದ್ಯಕೀಯ ಸಿಬ್ಬಂದಿ ಕಾಂಡೋಮ್‌ ಕವರ್‌ ಬಳಸಿ ಬ್ಯಾಂಡೇಜ್‌ ಹಾಕಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಧರ್ಮಗಢ ಮೂಲದ ಮಹಿಳೆ ರೇಶ್ಮಾ ಭಾಯಿ ಪೊರ್ಸಾ ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದಿದ್ದಾರೆ. ಅಲ್ಲಿ ಡಾ.ಧಮೇಂದ್ರ ರಜಪೂತ್‌ ಮಹಿಳೆಯನ್ನು ಪರೀಕ್ಷೆ ಮಾಡಿದ್ದು, ವಾರ್ಡ್‌ ಬಾಯ್‌ ಅನಂತ್‌ ರಾಮ್‌ಗೆ ಬ್ಯಾಂಡೇಜ್‌ ಹಾಕುವಂತೆ ಸೂಚಿಸಿದ್ದಾರೆ. ಆತ ರಕ್ತವನ್ನು ನಿಲ್ಲಿಸುವ ಸಲುವಾಗಿ ಕಾಂಡೋಮ್‌ ಕವರ್‌ ಇಟ್ಟು ಅದರ ಮೇಲೆ …

Read More »

ಸಿದ್ದರಾಮೋತ್ಸವ ಬಳಿಕ ಸಿಎಂ ಪಟ್ಟಕ್ಕೆ ಕಿತ್ತಾಟ: ಸಚಿವ ಗೋವಿಂದ ಕಾರಜೋಳ

ಚೇಳೂರು(ಗುಬ್ಬಿ): ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನಡೆದ ನಂತರ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಹಾಗೂ ಮುಖ್ಯಮಂತ್ರಿ ಪದವಿಗಾಗಿ ಕಿತ್ತಾಟ ನಡೆಯುತ್ತಿದೆ. ಕಾಂಗ್ರೆಸ್‌ ದೇಶದಲ್ಲಿ ಅವನತಿಯತ್ತ ಸಾಗುತ್ತಿದೆ. 20 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಅಭಿವೃದ್ಧಿಗಿಂತ ಅಧಿಕಾರ ದಾಹವೇ ಮುಖ್ಯವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ದೂರಿದರು.   ಅಡಗೂರು ಗ್ರಾಮದ ಕೆರೆ ಕೋಡಿ ಹಾಗೂ ಇಡಕನಹಳ್ಳಿ 97 ರ ಹೇಮಾವತಿ ನಾಲೆ ಕುಸಿತದ ವೀಕ್ಷಣೆ ಮಾಡಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರಕ್ಕೋಸ್ಕರ ದೇವಸ್ಥಾನ, ಮಂದಿರಗಳನ್ನು …

Read More »

ಜನ ಆಕ್ರೋಶದಲ್ಲಿ ಕಲ್ಲು ಬೀಸೋದು, ಮೊಟ್ಟೆ ಎಸೆಯೋದು ಸಾಮಾನ್ಯ: ವಿಶ್ವನಾಥ್‌

ಮೈಸೂರು: ಜನರು ಆಕ್ರೋಶದಲ್ಲಿ ಕಲ್ಲು ಬೀಸೋದು, ಮೊಟ್ಟೆ ಎಸೆಯೋದು ಸಾಮಾನ್ಯವಾದ ಸಂಗತಿ ಎಂದು ವಿಧಾನಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಹೇಳಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿದ್ದನ್ನು ನಾನು ಸಮರ್ಥಿಸುತ್ತಿಲ್ಲ. ಆದರೆ, ಜನ ತಮ್ಮ ಆಕ್ರೋಶವನ್ನು ಹೀಗೆ ವ್ಯಕ್ತಪಡಿಸುವುದು ಸಹಜ. ಇದಕ್ಕೆ ಹತ್ಯೆ ಯತ್ನದ ಸ್ವರೂಪ ನೀಡುವುದು ಸರಿಯಲ್ಲ. ಗಾಂಧಿಗೂ ಸಿದ್ದರಾಮಯ್ಯ ಅವರಿಗೂ ಎಲ್ಲಿಂದ ಎಲ್ಲಿಗೆ ಸಂಬಂಧ ಹೇಳಿ ಎಂದು ಶನಿವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಪ್ರಶ್ನಿಸಿದರು. …

Read More »

ಜಿಲ್ಲಾ ಮಟ್ಟದಲ್ಲೂ ಅರಸು ಪ್ರಶಸ್ತಿ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮದಿನಾಚರಣೆಯನ್ನು ಈ ವರ್ಷದಿಂದ ಜಿಲ್ಲಾ ಮಟ್ಟದಲ್ಲೂ ಆಚರಿಸಲು ಸರಕಾರ ನಿರ್ಧರಿಸಿದೆ. ಪ್ರಸ್ತುತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯಮಟ್ಟದ ಡಿ. ದೇವರಾಜ ಅರಸು ಪ್ರಶಸ್ತಿ ನೀಡುವಂತೆ, ಈ ವರ್ಷದಿಂದ ಜಿಲ್ಲಾ ಮಟ್ಟದಲ್ಲೂ ಸಾಧಕರಿಗೆ ಅರಸು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.   ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶನಿವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ …

Read More »