Breaking News

Daily Archives: ಆಗಷ್ಟ್ 9, 2022

ದರೋಡೆ ಮಾಡ್ತಿದ್ದ ಮಂಕಿ ಕ್ಯಾಪ್ ಕಳ್ಳರನ್ನು ಬಂಧಿಸಿದ ಪೊಲೀಸರು

ವಿಜಯಪುರ :ಜಿಲ್ಲೆಯ ಹೆದ್ದಾರಿಗಳಲ್ಲಿ ಮಂಕಿ ಕ್ಯಾಪ್​​ ಧರಿಸಿ ದರೋಡೆ ಮಾಡ್ತಿದ್ದ ಕುಖ್ಯಾತರನ್ನು ಗಾಂಧಿಚೌಕ್​ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ನಗರ ಬಸ್ ನಿಲ್ದಾಣ ಬಳಿಯ ನಯೇರಾ ಪೆಟ್ರೋಲ್ ಪಂಪ್ ಬಳಿ ದರೋಡೆ ಯತ್ನ ನಡೆಯುತ್ತಿರೋ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಬಿರಸೂಲ ಜಿಲಾನಿ ಕೋರವಾರ, ಅವಿನಾಶ ರಮೇಶ ಬಾಗಡೆ, ಅಲ್ತಾಫ್ ಕುತುಬುದ್ದೀನ್ ಐನಾಪುರ, ಮತೀನ ಖಲೀಲ‌ಅಹ್ಮದ್ ಖಾಜಿ, ಸಮೀರ ಅಬ್ದುಲ್ ರಜಾಕ್ ಯರಗಲ್ ಎಂಬುವರನ್ನು ಬಂಧಿಸಲಾಗಿದೆ. ಸರ್ಫರಾಜ್ ಎಂಬಾತ ಪರಾರಿಯಾಗಿದ್ದಾನೆ. …

Read More »

ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ.

ಬೆಳಗಾವಿ, : ಮುಸ್ಲಿಮರಿಲ್ಲದ ಮೊಹರಂ ಆಚರಣೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?. ಮುಸಲ್ಮಾನರ ಸಂಖ್ಯೆಯೇ ಇಲ್ಲದ ಬೆಳಗಾವಿಯ ಹಳ್ಳಿಯೊಂದು ಈ ಹಬ್ಬವನ್ನು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.   ಬೆಳಗಾವಿಯ ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ. ಮೊಹರಂ, ರಂಜಾನ್ ನಂತರ ಎರಡನೇ ಪವಿತ್ರ ಹಬ್ಬವಾಗಿದೆ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು ಬರುತ್ತದೆ. ಈ ವರ್ಷ ಜುಲೈ 31 ರಂದು ಪ್ರಾರಂಭವಾಗಿ ಆಗಸ್ಟ್ …

Read More »

ಮಳೆಗೆ ಮನೆ ಗೋಡೆ‌ ಕುಸಿತ: ತಾಯಿ ಸಾವು, ಮಗ ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿತ ಉಂಟಾಗಿ ಮನೆಯಲ್ಲಿದ್ದ ತಾಯಿ ಸಾವನ್ನಪ್ಪಿ, ಮಗ ಗಾಯಗೊಂಡಿರುವ ಘಟನೆ ಭದ್ರಾವತಿ ತಾಲೂಕಿನ‌ ಕಾವಗೊಂಡನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸುಜಾತ(60) ಮೃತಪಟ್ಟಿದ್ದು, ಇವರ ಮಗ ಕೃಷ್ಣಮೂರ್ತಿ(40) ಅವರ ಕಾಲಿಗೆ ಗಾಯವಾಗಿದ್ದು,ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ 9:30 ರ ಹೊತ್ತಿಗೆ ಟಿವಿ ನೋಡುತ್ತಿರುವಾಗ ಏಕಾಏಕಿ ಮನೆಯ ಗೋಡೆ ಕುಸಿತವಾಗಿ ಇವರ ಮೇಲೆ ಬಿದ್ದಿದೆ. ಸ್ಥಳಕ್ಕೆ ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ …

Read More »

ಬೆಳಗಾವಿ: ಭಾರಿ ಮಳೆಗೆ ನಾಲ್ಕು ಸೇತುವೆಗಳು ಮುಳುಗಡೆ, ಸಂಚಾರ್ ಬಂದ್

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೆಳಹಂತದ ನಾಲ್ಕು ಸೇತುವೆಗಳು ಜಲಾವೃತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೇತುವೆ ಎರಡು ಬದಿಗೆ ಪೊಲೀಸರು ಬ್ಯಾರಿಕೇಡ್ ಹಾಕಿ ಜನರ ಓಡಾಟವನ್ನು ಬಂದ್ ಮಾಡಿದ್ದಾರೆ. ನಿಪ್ಪಾಣಿ ತಾಲೂಕಿನ ದೂಧಗಂಗಾ ನದಿಗೆ ಕಟ್ಟಲಾದ ಕಾರದಗಾ-ಭೋಜ್, ವೇದಗಂಗಾ ನದಿಯಿಂದ ಭೋಜವಾಡಿ ಕುನ್ನೂರ-ಸಿದ್ನಾಳ ಅಕ್ಕೋಳ ಸೇತುವೆ ಹಾಗೂ ಜತ್ರಾಟ-ಭೀಮಶಿ‌ ಸೇತುವೆಗಳು ಜಲಾವೃತವಾಗಿವೆ. ಸದ್ಯ ಮಹಾರಾಷ್ಟ್ರ ಘಟ್ಟ ಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಕೃಷ್ಣಾ …

Read More »