ಬೆಳಗಾವಿಯ ಕಸಬೇಕರ್– ಮೆಟಗುಡ್ಡ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಬೆಳಗಾವಿಯ ಕೋಟೆಕೆರೆ ಹತ್ತಿರದ ಛತ್ರಪತಿ ಶಿವಾಜೀ ನಗರದಲ್ಲಿರುವ ಕಸಬೇಕರ್– ಮೆಟಗುಡ್ಡ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನುಆಚರಿಸಲಾಯಿತು.ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ವೇಳೆ ವೈದ್ಯರಾದ ಬಿಎಚ್ ಮೆಟಗುಡ್ಡ, ಪಿಎನ್ ಶಾಂತಗಿರಿ, ಹೇಮಂತ್‍ಕೌಜಲಗಿ, ವನೀತಾ ಮೆಟಗುಡ್, ಬಿಎಸ್ ಬಾಳಿಗಾ, ಎಸ್.ಜಿ. ವಾಗಲೆ, ಪ್ರತಾಪ ಬುದ್ಧ್ಯಾ ಮತ್ತು ಪುಷ್ಪಾ ಬಿರಾದಾರಅವರನ್ನು ಸತ್ಕರಿಸಲಾಯಿತು. ಈ ವೇಳೆ ಮಾತನಾಡಿದಗಣ್ಯರು ಹಗಲುರಾತ್ರಿ ಶ್ರಮವಹಿಸಿ ರೋಗಿಗಳ ಸೇವೆ …
Read More »Daily Archives: ಜುಲೈ 1, 2022
ಪ್ರತಿಯೊಬ್ಬರೂ ಐದು ಗಿಡಗಳನ್ನು ಬೆಳೆಸಬೇಕು ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪ್ರತಿಯೊಬ್ಬರೂ ಐದು ಗಿಡಗಳನ್ನು ಬೆಳೆಸಬೇಕು ಎಂದು ರಾಜ್ಯದ ಜನತೆಗೆ ಕರೆ ನೀಡಿ, ಜನರ ಸಾಹಭಾಗಿತ್ವದಿಂದ ಮಾತ್ರ ಅರಣ್ಯೀಕರಣದ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ದಾಸನಪುರ ಹೋಬಳಿಯ ಮಾಚೋಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಆಯೋಜಿಸಿದ್ದ ಮಾಚೋಹಳ್ಳಿ ವೃಕ್ಷೋಧ್ಯಾನ ಕಾರ್ಯಕ್ರಮ ಮತ್ತು ವನಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಸುತ್ತಲೂ ಅರಣ್ಯ ಉದ್ಯಾನವನ ಬೆಳೆಸಲು ವಿಶೇಷ ಕಾರ್ಯಕ್ರಮ : ಬೆಂಗಳೂರು ನಗರ ನಿರೀಕ್ಷೆಗೂ ಮೀರಿ …
Read More »40 ದಿನ ಬೆಳಗಾವಿ, ಬಳ್ಳಾರಿ ಜೈಲಿನಲ್ಲಿದ್ದ ಏಕನಾಥ ಶಿಂಧೆ!
ಬೆಳಗಾವಿ: ಅತ್ಯಂತ ತಳಮಟ್ಟದಿಂದ ಬದುಕು ಆರಂಭಿಸಿ ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದವರೆಗೂ ಪಯಣ ಬೆಳೆಸಿರುವ ಏಕನಾಥ ಶಿಂದೆ ತಮ್ಮ ಹೋರಾಟದ ಬದುಕಿನಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 40 ದಿನಗಳ ಕಾಲ ಬೆಳಗಾವಿಯ ಹಿಂಡಲಗಾ ಹಾಗೂ ಬಳ್ಳಾರಿ ಜೈಲಿನಲ್ಲಿ ಕಳೆದಿದ್ದರು. 1985 ರಲ್ಲಿ ಭುಗಿಲೆದ್ದಿದ್ದ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ದಳ್ಳುರಿ ಬೆಳಗಾವಿಯನ್ನು ಅಕ್ಷರಶಃ ಬೆಂಕಿಯುಂಡೆಯಾಗಿಸಿತ್ತು. ಈ ವೇಳೆ ಬೆಳಗಾವಿಯಲ್ಲಿ ಶರದ್ ಪವಾರ್ ನೀಡಿದ ಕರೆಯಂತೆ ನಡೆದ ಗಡಿ …
Read More »ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಾವನ್ನೇ ಬಯಸಿದರಾ ಮಾಜಿ ಶಾಸಕ?
ಹಾಸನ: ರಾಜಕಾರಣಿಗಳು ವಾಗ್ದಾಳಿ ನಡೆಸುವ ಬರದಲ್ಲಿ ಮಾತಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ ಎಂಬುದು ಪದೇ ಪದೇ ಗೋಚರಿಸುತ್ತಿರುತ್ತದೆ. ಆದರೆ ಅದು ಮಾಜಿ ಪ್ರಧಾನಿಯೊಬ್ಬರ ಸಾವನ್ನು ಬಯಸುವ ಮಟ್ಟಕ್ಕೆ ಹೋಗುತ್ತದೆ ಎಂಬುದು ವಿಪರ್ಯಾಸ. ಇಂಥದ್ದೊಂದು ವಿವಾದವನ್ನು ಸೃಷ್ಟಿಸಿದ್ದಾರೆ ಮಾಜಿ ಶಾಸಕ ಕೆ.ಎನ್.ರಾಜಣ್ಣ. ಸಮಾರಂಭವೊಂದರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಕೆ.ಎನ್ ರಾಜಣ್ಣ, ಪರೋಕ್ಷವಾಗಿ ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ್ದು, ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ. ಹೆಚ್.ಡಿ.ದೇವೇಗೌಡರು ಈಗಾಗಲೇ …
Read More »ಬೆಳಗಾವಿ-ನಿಪ್ಪಾಣಿ ರಸ್ತೆ ಅಗಲೀಕರಣಕ್ಕೆ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್
ಬೆಂಗಳೂರು: ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿ-ನಿಪ್ಪಾಣಿ ನಡುವಿನ ರಸ್ತೆ ಅಗಲೀಕರಣಕ್ಕೆ ಅನುಮೋದನೆ ನೀಡಲಾಗಿದೆ. ಅಲ್ಲದೇ ಚಿಕ್ಕೋಡಿಯಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೂ ಅನುದಾನ ಬಿಡುಗಡೆ ಮಾಡಲಾಗಿದೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಬೆಳಗಾವಿ ಜಿಲ್ಲೆಯ ಅಥಣಿ-ನಿಪ್ಪಾಣಿ ರಸ್ತೆ ಅಗಲೀಕರಣಕ್ಕೆ ಸಂಪುಟ ಸಭೆ ಸಮ್ಮತಿ ಸೂಚಿಸಿದೆ. 32 ಕೋಟಿ ರೂ ವೆಚ್ಚದಲ್ಲಿ ಅಥಣಿ-ನಿಪ್ಪಾಣಿ ರಸ್ತೆ ಅಗಲೀಕರಣಕ್ಕೆ ಅನುಮೋದನೆ ನೀಡಲಾಗಿದೆ ಎಂದರು. ಹಲವು …
Read More »ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯ : ಅಶೋಕ ಪಾಟೀಲ…
ಘಟಪ್ರಭಾ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನಾಯಕತ್ವದಲ್ಲಿ ಅರಭಾವಿ ಮತಕ್ಷೇತ್ರ ಸರ್ವಾಂಗೀಣ ಪ್ರಗತಿಯತ್ತ ಮುನ್ನಡೆಯುತ್ತಿದ್ದು, ಅದರಂತೆ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಸಹಕಾರದೊಂದಿಗೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಶೋಕ ಪಾಟೀಲ ಹೇಳಿದರು. ಇಲ್ಲಿಗೆ ಸಮೀಪದ ಅರಭಾವಿ-ಚಳ್ಳಿಕೇರಿ ರಾಹೆ-45 ಯಿಂದ ಪ್ರಭಾಶುಗರವರೆಗಿನ ಲೋಕೋಪಯೋಗಿ ಇಲಾಖೆಯ ಅನುದಾನದಡಿ 2 ಕೋಟಿ ರೂ. ವೆಚ್ಚದ ರಸ್ತೆ …
Read More »ಇಂದಿನಿಂದ ರಾಜ್ಯಾದ್ಯಂತ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ
ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ನೇರ ನೇಮಕಾತಿ ಸೇರಿದಂತೆ ಸುರಕ್ಷತಾ ಕವಚಗಳು, ನಿವೃತ್ತಿ ಸೇವಾ ಸೌಲಭ್ಯಗಳು ಮತ್ತು ಇತರ ಕಲ್ಯಾಣ ಸೌಲಭ್ಯಗಳನ್ನ ನೀಡುವಂತೆ ಆಗ್ರಹಿಸಿ ಪೌರ ಕಾರ್ಮಿಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಸ್ವಚ್ಛತಾ ಕಾರ್ಮಿಕರ ಮುಷ್ಕರದಿಂದಾಗಿ ತ್ಯಾಜ್ಯ ಸಮಸ್ಯೆ ಉಲ್ಬಣಿಸಲಿದೆ. ಪೌರ ಕಾರ್ಮಿಕರ ಬೇಡಿಕೆ ಏನು?: ಕೆಲಸದ ಖಾಯಮಾತಿ ಪೌರಕಾರ್ಮಿಕರ ಪ್ರಮುಖ ಬೇಡಿಕೆಯಾಗಿದೆ. ಸಫಾಯಿ ಕರ್ಮಾಚಾರಿ, ಸ್ವೀಪರ್ ಸೇರಿದಂತೆ ಪೌರಕಾರ್ಮಿಕರಿಗೆ ಮಾಸಿಕ ಸುಮಾರು 14,000 …
Read More »₹10,172 ಕೋಟಿ ಜಿಎಸ್‌ಟಿ ಬೆಳಗಾವಿ ವಲಯದಿಂದ ಸಂಗ್ರಹವಾಗಿದೆ.
ಬೆಳಗಾವಿ: ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಬೆಳಗಾವಿ ಆಯುಕ್ತಾಲಯದಿಂದ ಪ್ರಸಕ್ತ ವರ್ಷ ₹ 10,172 ಕೋಟಿ ಆದಾಯ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 43ರಷ್ಟು ಹೆಚ್ಚು ಸಂಗ್ರಹವಾಗಿದೆ. ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡ ಈ ವಲಯದಲ್ಲಿ ಕಳೆದ ವರ್ಷ (2021-22) ₹ 7,124 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ಬಾರಿ …
Read More »ಹಿರಿಯ ಜೀವಕ್ಕೆ ಸಿಕ್ಕಿತು ಸಿಲಿಂಡರ್, ಒಲೆ
ಬೆಳಗಾವಿ: ತಾಲ್ಲೂಕಿನ ಹಿಂಡಲಗಾ ಗ್ರಾಮದ ಬಾಯವ್ವ ವಸಂತ ಮಾಸ್ತೆ ಅವರಿಗೆ ಕೊನೆಗೂ ಅಡುಗೆ ಅನಿಲ ಸಿಲಿಂಡರ್ ಹಾಗೂ ಒಲೆ ದೊರೆಯಿತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬುಧವಾರ ಅಜ್ಜಿ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕನವಾಡಿ, ಆಹಾರ ನಿರೀಕ್ಷಕ ಜೆ.ಬಿ.ಬಾಗೋಜಿಕೊಪ್ಪ, ತಹಶೀಲ್ದಾರ್ ಆರ್.ಕೆ.ಕುಲಕರ್ಣಿ ಗುರುವಾರ ಅವರ ಮನೆಗೆ ಹೋಗಿ, ಅಡುಗೆ ಅನಿಲ ಸಿಲಿಂಡರ್, ಒಲೆಯ ಸೌಕರ್ಯ ಕಲ್ಪಿಸಿದರು. …
Read More »ಕಾಗವಾಡ ತಾಲ್ಲೂಕಿನ ನೆರೆ ಗ್ರಾಮದಲ್ಲಿ ರೈತರಿಗೆ ಚಿರತೆ ಕಂಡುಬoದಿದೆ.
ಕಾಗವಾಡ ತಾಲ್ಲೂಕಿನ ನೆರೆ ಗ್ರಾಮವಾಗಿರುವ ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಶೇಡಶ್ಯಾಳ್, ಅಲಾಸ ಗ್ರಾಮದ ರೈತರಿಗೆ ಚಿರತೆ ಕಂಡುಬoದಿದೆ. ಶಿರೋಳ ತಾಲ್ಲೂಕಿನ ಅಧಿಕಾರಿ ಮತ್ತು ರೈತರು ಚಿರತೆ ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಚಿರತೆ ಕಂಡುಬAದಿದ್ದ ಚರ್ಚೆಯಿಂದ ಅಲ್ಲಿಯ ಜನರು ಭಯಭೀತಗೊಂಡಿದ್ದಾರೆ.ಮಹಾರಾಷ್ಟ್ರದ ನೆರೆ ಗ್ರಾಮಗಳಲ್ಲಿ ಚಿರತೆ ಕಂಡುಬAದಿದ ಚರ್ಚೆಯಿಂದ ಕಾಗವಾಡ ತಾಲ್ಲೂಕಿನ ಮಂಗಾವತಿ ಗ್ರಾಮದಲ್ಲಿಯ ಜನರು ಭಯಭೀತಗೊಂಡಿದ್ದಾರೆ.ಮoಗಾವತಿ ಗ್ರಾಮ ಪಂಚಾಯತಿಯ ಸದಸ್ಯರ ಮುಂದಾಳತ್ವದಲ್ಲಿ ಪಂಚಾಯತಿ ವತಿಯಿಂದ ಡಂಗುರ ಸಾರಿ ಜನರಿಗೆ ಎಚ್ಚರಿಕೆ ವಹಿಸುವಂತೆ …
Read More »
Laxmi News 24×7