ಮೂಡಲಗಿ: ‘ರಡ್ಡಿ ಸಮುದಾಯದ ಜನರು ದೇವಸ್ಥಾನದ ಜೊತೆಗೆ ಶಾಲೆ, ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಸಮುದಾಯ ಭವನಗಳನ್ನು ನಿರ್ಮಿಸುವ ಮೂಲಕ ಸಮಗ್ರ ಸಮಾಜದ ಹಿತಕಾಯಬೇಕು’ ಎಂದು ಶಾಸಕ ರಾಮಲಿಂಗಾರಡ್ಡಿ ಅವರು ಹೇಳಿದರು. ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನೆ, ಕಳಸಾರೋಹ ಸಮಾರಂಭದಲ್ಲಿ ಮಾತನಾಡಿದ ಅವರು, ರಡ್ಡಿ ಸಮಾಜಕ್ಕೆ ದೊರಕಬೇಕಾದ ಸೌಲಭ್ಯ, ಅವಕಾಶಗಳ ಪಡೆಯುವ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಒಗ್ಗಟ್ಟಿನ ಮೂಲಕ ಮಾಡಬೇಕು ಎಂದರು. …
Read More »Daily Archives: ಮೇ 30, 2022
ಹುಕ್ಕೇರಿ: ವಿಜೃಂಭಣೆಯ ಲಕ್ಷ್ಮೀದೇವಿ ಜಾತ್ರೆ
ಹುಕ್ಕೇರಿ: ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶುಕ್ರವಾರ ಮಹಾಲಕ್ಷ್ಮೀ (ಮಲೆವ್ವ)ದೇವಿ ಮತ್ತು ದುರ್ಗಾದೇವಿ ಜಾತ್ರೆ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಜಡಿಸಿದ್ಧೇಶ್ವರ ಆನಂದಾಶ್ರಮದಿಂದ ಪ್ರಮುಖ ಬೀದಿಗಳ ಮೂಲಕ ಮಹಾಲಕ್ಷ್ಮೀದೇವಿ ಮಂದಿರದವರೆಗೆ ಮೆರವಣಿಗೆಯಲ್ಲಿ ಬಂದರು. ನಂತರ ದೇವಿಗೆ ಉಡಿ ತುಂಬುವುದು ಮತ್ತು ಮಹಿಳೆಯರಿಗೆ ಉಡಿ ತುಂಬುವ (ಬೊಟ್ಟು ಕೊಡುವ) ಕಾರ್ಯಕ್ರಮ ಜರುಗಿತು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ದೇವಿಯ ದರ್ಶನ ಪಡೆದರು. ಸಚಿವರ ಭೇಟಿ: ಶುಕ್ರವಾರ ಮುಂಜಾನೆ ಅರಣ್ಯ, ಆಹಾರ ಖಾತೆ ಸಚಿವ ಉಮೇಶ್ …
Read More »ಬೆಳಗಾವಿ: ಹಿಂದೂ-ಮುಸ್ಲಿಮರಿಂದ ಉರುಸ್ ಆಚರಣೆ
ಬೆಳಗಾವಿ: ಇಲ್ಲಿನ ಪೊಲೀಸ್ ಕೇಂದ್ರಸ್ಥಾನದಲ್ಲಿರುವ ಹಜರತ್ ಸೈಯದ್ ಕೈಸರಶಾಹ್‌ವಲಿ ದರ್ಗಾದಲ್ಲಿ ಮೂರು ದಿನಗಳವರೆಗೆ ನಡೆಯಲಿರುವ ಉರುಸ್‌ಗೆ ಚಾಲನೆ ದೊರೆತಿದೆ. ಈ ಪರಿಸರದಲ್ಲಿ ದರ್ಗಾ ಭಾವೈಕ್ಯತೆ ಕೇಂದ್ರವಾಗಿ ಗುರುತಿಸಿಕೊಂಡಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಸಾಂಕೇತಿಕವಾಗಿ ಉರುಸ್ ಆಚರಿಸಲಾಗಿತ್ತು. ಕೊರೊನಾ ಪರಿಣಾಮ ತಗ್ಗಿದ್ದರಿಂದ ಈ ಬಾರಿ ಹಿಂದೂ-ಮುಸ್ಲಿಮರು ಒಟ್ಟಾಗಿ ಸೇರಿ ಸಡಗರದಿಂದ ಉರುಸ್ ಆಚರಿಸಿದರು. ಭಾವೈಕ್ಯದ ಸಂದೇಶ ರವಾನಿಸಿದರು. ಶುಕ್ರವಾರ ರಾತ್ರಿಯಿಂದಲೇ ವಿದ್ಯುತ್ ದೀಪಗಳ ಅಲಂಕಾರದಿಂದ ದರ್ಗಾ ಝಗಮಗಿಸುತ್ತಿದ್ದು, ಹಿಂದೂ-ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ …
Read More »ಜಾತಿ ಲೆಕ್ಕಾಚಾರ, ಬಿಜೆಪಿ ಚುನಾವಣಾ ತಂತ್ರ: ಜಗ್ಗೇಶ್ಗೆ ಬಂಪರ್, ರಾಮಮೂರ್ತಿಗೆ ಅರ್ಧಚಂದ್ರ | ಪ್ರಬಲ ಒಕ್ಕಲಿಗ ಸಮುದಾಯಕ್ಕೂ ಸಮಾಧಾನ
ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ವಿಷಯದಲ್ಲಿ ಬಿಜೆಪಿ ಎರಡು ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪಕ್ಷದ ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಪಟ್ಟಿಯಲ್ಲಿ ಇಲ್ಲದ ಹೆಸರು ಸೇರಿಸಿ, ಮತ್ತೊಂದು ಹೆಸರು ಕೈಬಿಡುವ ಮೂಲಕ ರಾಜ್ಯದ ಶಿಫಾರಸಿಗೆ ಮನ್ನಣೆಯಿಲ್ಲ ಎನ್ನುವುದನ್ನು ದೃಢಪಡಿಸಿದ್ದಾರೆ. ಪಕ್ಷದ ವರಿಷ್ಠರ ಈ ನಡೆಯಲ್ಲಿ ಎಲ್ಲ ಜಾತಿಗಳಿಗೆ ಆದ್ಯತೆ ನೀಡಲಾಗುವುದು ಎಂಬ ಸಂದೇಶ ರವಾನೆ, ಮುಂಬರುವ ಚುನಾವಣೆಗಳ ತಂತ್ರಗಾರಿಕೆಯಿದೆ ಎಂದು ಮೂಲಗಳು ವಿಶ್ಲೇಷಿಸಿವೆ. ಹಣಕಾಸು ಸಚಿವೆ …
Read More »
Laxmi News 24×7