Breaking News

Daily Archives: ಜನವರಿ 27, 2022

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್​ನ ಕಟ್ಟಿಹಾಕಿದ ಯು ಮುಂಬಾ..!

ಬೆಂಗಳೂರು ಬುಲ್ಸ್ ವಿರುದ್ಧ ಯು-ಮುಂಬಾ 45-34 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಭಾರೀ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಅಂತಿಮ ಹಂತದಲ್ಲಿ ಸೋಲೊಪ್ಪಿಕೊಂಡಿತು. ಉಭಯ ತಂಡಗಳು ಮೊದಲಾರ್ಧದಲ್ಲಿ ಸಮಬಲದ ಹೋರಾಟ ನಡೆಸಿತ್ತು. ಬೆಂಗಳೂರು ಬುಲ್ಸ್ ಪರ ನಾಯಕ ಪವನ್ ಕುಮಾರ್ ಶೆಹ್ರಾವತ್ ಅತ್ಯುತ್ತಮ ಪ್ರದರ್ಶನ ನೀಡಿದರೆ, ಯು-ಮುಂಬಾದಲ್ಲಿ ಅಭಿಷೇಕ್ ಸಿಂಗ್ ಮಿಂಚಿದರು. ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ 10 ರೈಡಿಂಗ್ ಪಾಯಿಂಟ್ ಕಲೆ …

Read More »

ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿಲ್ಲ; ವಸ್ತ್ರಸಂಹಿತೆ ನಿಗದಿ ಬಗ್ಗೆ ಚಿಂಥನ- ಮಂಥನಕ್ಕೆ ಮುಂದಾದ ಪದವಿ ಪೂರ್ವ ಶಿಕ್ಷಣ ಇಲಾಖೆ

ಬೆಂಗಳೂರು: ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಕೆಲ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಭಾರಿ ಸದ್ದು ಮಾಡ್ತಿದೆ. ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆ ಗ್ರಾಸವಾಗಿದೆ. ತರಗತಿಗಳಲ್ಲಿ ಹಿಜಾಬ್ ಹಾಕ್ಕೊಂಡು ಮುಸ್ಲಿಂ ವಿದ್ಯಾರ್ಥಿನಿಯರು ಕುಳಿತುಕೊಳ್ಳೋದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕಾಲೇಜು ಆಡಳಿತ ಮಂಡಳಿ ಹಿಜಾಬ್ ಹಾಕಲು ವಿರೋಧಿಸ್ತಿದ್ದು, ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಸದ್ಯ ವಸ್ತ್ರ ಸಂಹಿತೆ ವಿಚಾರದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಲು ಪದವಿ ಪೂರ್ವ …

Read More »

ಶಿವಮೊಗ್ಗ: ವೇಗವಾಗಿ ಬಂದ ಟಿಪ್ಪರ್ ಕಾರಿಗೆ ಡಿಕ್ಕಿ! ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಬಳಿ ಭೀಕರ ಅಪಘಾತ (Accident) ನಡೆದಿದೆ. ವೇಗವಾಗಿ ಬಂದ ಟಿಪ್ಪರ್ ಡಿವೈಡರ್​ಗೆ ಗುದ್ದಿ ಕಾರಿಗೆ (Car) ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಷಣ್ಣುಗ್ (39) ಮತ್ತು ರಾಮಚಂದ್ರ (40) ಎಂಬುವವರು ಭೀಕರ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ವೇಗವಾಗಿ ಬಂದ ಚಾಲಕನ ಎಡವಟ್ಟಿನಿಂದ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಘಟನೆ ಬಳಿಕ ಟಿಪ್ಪರ್ ಗಾಡಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ …

Read More »

ಡ್ರೋಣ್​ಗಳಲ್ಲಿ ಮೂಡಿದ ಭಾರತ.. ರೋಮಾಂಚನಕಾರಿ ವಿಡಿಯೋ..!

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ನಿನ್ನೆ 73ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿತ್ತು. ಗಣತಂತ್ರದ ಸಂಭ್ರಮದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದ ಬಾನಂಗಳದಲ್ಲಿ ನೂರಾರು ಡ್ರೋಣ್​ಗಳು ಭಾರತ ಧ್ವಜ ಸೇರಿ ವಿವಿಧ ರಚನೆಗಳನ್ನು ಮೂಡಿಸಿದವು. ಆಕರ್ಷಕ ಬಣ್ಣಗಳಲ್ಲಿ ಮೂಡಿಸಿದ ಚಿತ್ತಾರಗಳು ಗಣತಂತ್ರದ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದವು. ಇನ್ನು ಈ ಎಲ್ಲ ಡ್ರೋಣ್​ಗಳು ಭಾರತದಲ್ಲೇ ನಿರ್ಮಿತವಾದವು ಅನ್ನೋದು ವಿಶೇಷವಾಗಿತ್ತು. ಸದ್ಯ ಡ್ರೋಣ್​​ಗಳ ಮನಮೋಹಕ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ …

Read More »

ಕಾಂಗ್ರೆಸ್​ ಹೈಕಮಾಂಡ್​​ನಿಂದ ಬಿಗ್​ ಶಾಕ್; ಸಿಎಂ ಇಬ್ರಾಹಿಂ ನಿರೀಕ್ಷೆ ನೀರುಪಾಲು..!

ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕ ಎಸ್‌.ಆರ್ ಪಾಟೀಲ್‌ ಅವರ ನಿವೃತ್ತಿಯಿಂದ ತೆರವಾದ ಪರಿಷತ್‌ ವಿಪಕ್ಷ ನಾಯಕ ಸ್ಥಾನಕ್ಕೆ, ಬಿ.ಕೆ ಹರಿಪ್ರಸಾದ್‌ ನೇಮಕವಾಗಿದೆ. ಇದರ ಜತೆಗೆ, ಎಂ ನಾರಾಯಣಸ್ವಾಮಿ ಅವರ ನಿವೃತ್ತಿಯಿಂದ ತೆರವಾದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸ್ಥಾನಕ್ಕೆ ಪ್ರಕಾಶ್‌ ಸಿಂಗ್‌ ರಾಠೋಡ್‌ ಅವರನ್ನು ಆಯ್ಕೆ ಮಾಡಲಾಗಿದೆ. ಕೆ. ಗೋವಿಂದ ರಾಜ್‌ ಅವರನ್ನು ವಿಧಾನ ಪರಿಷತ್‌ನ ಉಪ ನಾಯಕನಾಗಿ ಆಯ್ಕೆ ಮಾಡಿ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ. ಅಚ್ಚರಿ ಎಂದ್ರೆ, …

Read More »

‘ಕೇಸರಿ’ ಮನೆಯಲ್ಲಿ ಮುಂದುವರಿದ ಉಸ್ತುವಾರಿ ಫೈಟ್ -ಕೊನೆಗೂ ಮೌನ ಮುರಿದ ಆರ್​​.ಅಶೋಕ್

ಬೆಂಗಳೂರು: ಜಿಲ್ಲಾ ಉಸ್ತುವಾರಿ ಪಟ್ಟಿ ಕೇಸರಿ ಮನೆಯಲ್ಲಿ ಅಸಮಾಧಾನದ ಹೊಗೆಯಾಡುವಂತೆ ಮಾಡಿದೆ. ಲಿಸ್ಟ್ ರಿಲೀಸ್‌ ಆಗಿ ಮೂರು ದಿನ ಕಳೆದ್ರೂ ಸಂಪುಟ ಸಹೋದ್ಯೋಗಿಗಳ ಬೇಸರ ಮಾತ್ರ ಕಡಿಮೆಯಾಗಿಲ್ಲ. ಕೆಲವರು ಪರೋಕ್ಷವಾಗೇ ತಮ್ಮ ಇಂಗಿತ ಹೊರಹಾಕ್ತಿದ್ರೆ, ಇನ್ನೂ ಕೆಲವರು ಬೇಸರವನ್ನ ನುಂಗಿಕೊಂಡು ಕೊಟ್ಟಿರೋ ಜಿಲ್ಲೆಯಲ್ಲಿ ಕೆಲಸವನ್ನ ಆರಂಭಿಸಿದ್ದಾರೆ. ಉಸ್ತುವಾರಿ ಬಗ್ಗೆ ಕೊನೆಗೂ ಮಾತನಾಡಿದ ‘ಸಾಮ್ರಾಟ್’ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನ ನೇಮಿಸಲಾಗಿದ್ದು, ಕೆಲ ಜಿಲ್ಲೆಗಳಲ್ಲಿ ಕೇಸರಿ ಹೈ ಕಮಾಂಡ್ ಅದಲು-ಬದಲು …

Read More »