ಬೆಂಗಳೂರು: 2023ರ ಚುನಾವಣೆ ರಾಜ್ಯದಲ್ಲಿ ಹೊಸ ಪಕ್ಷಗಳ ಉದಯಕ್ಕೆ ನಾಂದಿ ಆಗುತ್ತಾ? 2013ರ ಘಟನೆಗಳು ಮರುಕಳಿಸುವ ಸೂಚನೆಗಳು ಸಿಗ್ತಿವೆ. ಸಾಹುಕಾರ್ ಮನೆಯಲ್ಲಿ ಹೊಸ ಪಕ್ಷ ರಚನೆ ಬಗ್ಗೆ ಚರ್ಚೆ ಆಗಿದೆ ಅನ್ನೋ ಸುದ್ದಿ ಹಬ್ಬಿದೆ. 2023ರ ಚುನಾವಣೆಗೆ ಹೊಸ ರಂಗು ಪಡೆಯಲಿದೆ. ರಾಜ್ಯದಲ್ಲಿ ಹೊಸ ಪಕ್ಷ ಉದಯವಾಗುವ ಬಗ್ಗೆ ರಾಜಕೀಯ ವಲಯದಲ್ಲಿ ರಿಂಗಣಿಸುತ್ತಿದೆ. ಸಾಹುಕಾರ್ ಮನೆಯಲ್ಲಿ ಹೊಸ ಪಕ್ಷ ಕಟ್ಟುವ ಚರ್ಚೆ ನಡೆದಿದೆ. ಯತ್ನಾಳ್ ಜೊತೆ ಸೇರಿ ಜಾರಕಿಹೊಳಿ ಹೊಸ …
Read More »Daily Archives: ಜನವರಿ 27, 2022
ಜೇಮ್ಸ್’ ಪವರ್ಫುಲ್ ಪೋಸ್ಟರ್ ರಿಲೀಸ್;
ದಿವಂಗತ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಇಂದು ಕಾತುರದಿಂದ ಕಾಯುತ್ತಿದ್ದ ಕ್ಯೂರಿಯಾಸಿಟಿಗೆ ತೆರೆ ಬಿದ್ದಿದೆ. ಅಪ್ಪು ಅವರು ನಟಿಸಿದ್ದ ಜೇಮ್ಸ್ ಚಿತ್ರದ ಪೋಸ್ಟರ್ ಒಂದನ್ನ ಚಿತ್ರತಂಡ ರಿಲೀಸ್ ಮಾಡಿದೆ. ಇಂದು ಗಣರಾಜ್ಯೋತ್ಸವದ ಪ್ರಯುಕ್ತ ,ನಿರ್ದೇಶಕ ಚೇತನ್ ಪೋಸ್ಟರ್ ರಿಲೀಸ್ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದರು. ಅದರಂತೇ ಇಂದು ಜೇಮ್ಸ್ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ.ಇದರಲ್ಲಿ ಪ್ಯಾರಾ ಮಿಲ್ಟ್ರಿ ಆಫೀಸರ್ ಆಗಿ ಕಾಣಿಸಿಕೊಂಡಿರುವ ಅಪ್ಪು ನಯಾ ಸ್ಟೈಲ್ಗೆ ಇಡೀ ಸ್ಯಾಂಡಲ್ವುಡ್ ತಲೆಬಾಗಿದೆ. …
Read More »ಡಿಕೆಎಸ್ ಜೊತೆ ಸಂಪರ್ಕ.. ಅವರು ಕಾಂಗ್ರೆಸ್ಗೆ ಹೋಗಬಹುದು’ ಸವದಿ ಬಗ್ಗೆ ಲಖನ್ ಬಾಂಬ್
ಬೆಳಗಾವಿ: ಮುಂದೊಂದು ದಿನ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾಂಗ್ರೆಸ್ಗೆ ಹೋದರೂ ಹೋಗಬಹುದು ಎಂದು ಪರಿಷತ್ ಸದಸ್ಯ ಲಖನ್ ಜಾರಕಿಹೊಳಿಗೆ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಈ ಬಗ್ಗೆ ಮಾತನಾಡಿ.. ಬೆಳಗಾವಿ ಜಿಲ್ಲೆಯಲ್ಲಿ ಸೋತ ನಾಯಕರು ಅಧಿಕಾರ ಅನುಭವಿಸಿದ್ರು. ಅಥಣಿಯಲ್ಲಿ ಸೋತ ನಾಯಕರು ಉನ್ನತ ಹುದ್ದೆ ಪಡೆದರು. ಪರಿಷತ್ ಚುನಾವಣೆಯಲ್ಲಿ ಡಿಕೆಎಸ್ ಜೊತೆಗೆ ಸೇರಿ ಕುತಂತ್ರ ರೂಪಿಸಿದರು ಎಂದು ಆರೋಪಿಸಿದರು. ಡಿಕೆಎಸ್ ಜೊತೆ ಸೇರಿ ಕುತಂತ್ರ …
Read More »ಪೊಲೀಸರಿಂದಲೇ ಗಾಂಜಾ ಮಾರಾಟ ಕೇಸ್: ಮತ್ತೆ ಮೂವರು ಪೆಡ್ಲರ್ಸ್ ಲಾಕ್
ಬೆಂಗಳೂರು: ಸಿಎಂ ಬೊಮ್ಮಾಯಿ ಮನೆಯ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿಯಿಂದ, ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೇ ಮೂವರು ಪೆಡ್ಲರ್ಸ್ನ್ನು ಅರೆಸ್ಟ್ ಮಾಡಲಾಗಿದೆ. ಶಿವ ಪಾಟೀಲ್, ಸೋಮ ಸುಂದರಂ ಹಾಗೂ ಪೂಜಾ ಸಿಸಿಬಿ ಬಲೆಗೆ ಬಿದ್ದ ಪೆಡ್ಲರ್ಸ್. ಆರೋಪಿತ ಕಾನ್ಸ್ಟೇಬಲ್ಗಳಿಗೆ ಇವರ ಸಂಪರ್ಕ ಇತ್ತು ಎನ್ನಲಾಗ್ತಿದ್ದು, ಕೇಸ್ ಸಿಸಿಬಿಗೆ ವರ್ಗಾವಣೆ ಆಗುತ್ತಿದ್ದಂತೆ ಸಾಕಷ್ಟು ವೇಗ ಪಡೆದುಕೊಂಡಿದೆ. ಆರೋಪಿಗಳು ಓರಿಸ್ಸಾದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
Read More »ಕಾಂಗ್ರೆಸ್ ಬಿಟ್ಟು ಹೋದವರು ಮತ್ತೇ ವಾಪಸ್ ಆದರೆ ಆಶ್ಚರ್ಯವೆನಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬೆಳಗಾವಿ: ಈಗಾಗಲೇ ಕಾಂಗ್ರೆಸ್ ಬಿಟ್ಟು ಹೋದವರು ಮತ್ತೇ ವಾಪಸ್ ಆದರೆ ಆಶ್ಚರ್ಯವೆನಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಜಿಲ್ಲೆಯ ಗೋಕಾಕ್ನಲ್ಲಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ನ ಕೆಲ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವುದು ಸತ್ಯ. ಹೀಗಾಗಿ ಮುಂದಿನ ದಿನದಲ್ಲಿ ಕಾಂಗ್ರೆಸ್ ತೊರೆದು ಹೋದವರು ಮತ್ತೆ ಬಂದರೆ ಅಚ್ಚರಿ ಪಡುವಂತದ್ದು ಏನಿಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಸಿದ್ಧರಾಮಯ್ಯ ನನ್ನ ಗುರುಗಳು ಎಂಬ ಲಖನ್ ಜಾರಕಿಹೊಳಿ …
Read More »ರವಿ ಚೆನ್ನಣ್ಣನವರ್ ವರ್ಗಾವಣೆ; ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನೇಮಕ
ಬೆಂಗಳೂರು: ಇತ್ತೀಚೆಗೆ ಸಾಕಷ್ಟು ಆರೋಪ ಹಾಗೂ ವಿವಾದಗಳಿಗೆ ಈಡಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಎಕ್ಸಿಕ್ಯೂಟಿವ್ ಸ್ಥಾನದಿಂದ ನಾನ್-ಎಕ್ಸಿಕ್ಯೂಟಿವ್ ಸ್ಥಾನಕ್ಕೆ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ. ಸಿಐಡಿಯಲ್ಲಿ ಅಧಿಕಾರಿಯಾಗಿದ್ದ ರವಿ ಚನ್ನಣ್ಣನವರ್ ಅವರನ್ನ ಸರ್ಕಾರ ನಿಗಮ ಮಂಡಳಿಗೆ ವರ್ಗಾವಣೆ ಮಾಡಿರೋದು ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೇವಲ ರವಿ ಚನ್ನಣ್ಣನವರ್ ಮಾತ್ರವಲ್ಲ, ಒಟ್ಟು ಒಂಬತ್ತು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ …
Read More »ಫೆಬ್ರವರಿ 14ರಿಂದ ವಿಧಾನಮಂಡಲ ಜಂಟಿ ಅಧಿವೇಶನ, ಮಾರ್ಚ್ ಮೊದಲ ವಾರದಲ್ಲಿ ಬಜೆಟ್
ಬೆಂಗಳೂರು: ಫೆಬ್ರವರಿ 14ರಿಂದ ವಿಧಾನಮಂಡಲ ಜಂಟಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಬಿಬಿಎಂಪಿ ಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಫೆಬ್ರವರಿ 14ರಿಂದ ಜಂಟಿ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸುತ್ತೇವೆ. ಸಂಪುಟ ಸಭೆಯಲ್ಲಿ ಆದ ತೀರ್ಮಾನಗಳ ಬಗ್ಗೆ ಸಚಿವ ಮಾಧುಸ್ವಾಮಿ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
Read More »ವಾರದಲ್ಲಿ 5 ದಿನ ಆದೇಶ ವಾಪಾಸ್ ಪಡೆದ ರಾಜ್ಯ ಸರ್ಕಾರ: ಇನ್ಮುಂದೆ ಶನಿವಾರವೂ ಸರ್ಕಾರಿ ನೌಕರಿಗೆ ಕೆಲಸ
ಬೆಂಗಳೂರು: ಕೊರೋನಾ ಸೋಂಕಿನ ( Coronavirus ) ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ ವೀಕೆಂಡ್ ಕರ್ಪ್ಯೂ ( Weekend Curfew ) ಜಾರಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ( Government Employees ) ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಿ, ಶನಿವಾರದಂದು ರಜೆ ಘೋಷಣೆ ( Holiday ) ಮಾಡಲಾಗಿತ್ತು. ವೀಕೆಂಡ್ ಕರ್ಪ್ಯೂ ರದ್ದುಗೊಂಡ ಕಾರಣ, ಈಗ ಆ ಆದೇಶವನ್ನು ವಾಪಾಸ್ ಪಡೆಯಲಾಗಿದೆ. ಹೀಗಾಗಿ ಇನ್ಮುಂದೆ ವಾರದ 6 …
Read More »ಸಂಪುಟ ರಚನೆಯ ಬಿಸಿಬಿಸಿ ಸುದ್ದಿ: ಬೊಮ್ಮಾಯಿ ಸೇಫ್, 6 ಸಚಿವರು ಔಟ್, 9 ಇನ್?
ಜನವರಿ 28ರ ದಿನಾಂಕ ಬಸವರಾಜ ಬೊಮ್ಮಾಯಿಯವರಿಗೆ ಮಹತ್ವದ ದಿನ. ಅಂದು ಅವರು 62ನೇ ವಸಂತಕ್ಕೆ ಕಾಲಿಡುತ್ತಿರುವುದು ಒಂದು ಕಡೆಯಾದರೆ, ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರ್ಣಗೊಳಿಸುತ್ತಿರುವುದು ಇನ್ನೊಂದು ಕಡೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ. ಜೊತೆಗೆ, ಆಡಳಿತದ ಪಕ್ಷಿನೋಟ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ರಾಜ್ಯದ ಬದಲಾದ ರಾಜಕೀಯದಲ್ಲಿ ಯಡಿಯೂರಪ್ಪನವರ ನಿರ್ಗಮನದ ನಂತರ, ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವನ್ನೂ ಮೀರಿ ಬೊಮ್ಮಾಯಿಯವರಿಗೆ ಸಿಎಂ ಪಟ್ಟ ಒಲಿದಿತ್ತು. ಆದರೆ, ಬಿಟ್ ಕಾಯಿನ್ ಸದ್ದು …
Read More »ನಾಳೆ ಸಿಎಂ ಜನ್ಮದಿನ. ಹೀಗಾಗಿ ನಾಡಿನ ಜನತೆಗೆ ಬರ್ತ್ಡೇ ಗಿಫ್ಟ್ ಕೊಡುವ ಬಗ್ಗೆ ಸಿಎಂ ಏನ್ ಹೇಳಿದ್ರು..? ಈ ವರದಿ ಓದಿ.
ಬೆಂಗಳೂರು: ನಮ್ಮದು ಸ್ಪಂದನಾಶೀಲ ಸರ್ಕಾರ. ಹಾಗಾಗಿ ನಾವು ಯಾವುದೇ ಸರ್ಪೈಸ್ ಘೋಷಣೆ ಮಾಡುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುತ್ತಾ ಹೋಗುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಿಎಂ ಬೊಮ್ಮಾಯಿ ಹೇಳಿಕೆಆರ್.ಟಿ. ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅಜೆಂಡಾ ಪ್ರಕಾರ ಚರ್ಚೆ ನಡೆಯಲಿದೆ. ನಂತರ ಇತರ ವಿಷಯಗಳ ಚರ್ಚೆ ವೇಳೆ ಹಲವಾರು ವಿಚಾರಗಳ ಕುರಿತು ಚರ್ಚೆ ಮಾಡುತ್ತೇವೆ.
Read More »