ವಿಜಯಪುರ: ಲಾರಿ ಹಾಗೂ ಥವೇರಾ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕ್ರೀಡಾಪಟುಗಳು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಗಾರ ಕ್ರಾಸ್ ಬಳಿ ಸಂಭವಿಸಿದೆ. ಮಹಾರಾಷ್ಟ್ರದ ಸೊಲ್ಲಾಪುರದಿಂದ ಹುಬ್ಬಳ್ಳಿಯ ಕಬ್ಬಡ್ಡಿ ಟೂರ್ನಿಯಲ್ಲಿ ಭಾಗವಹಿಸಲು ಬರುತ್ತಿದ್ದ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಸೋಹೈಲ್ ಮತ್ತು ಮಹಾದೇವ ಎಂಬ 20 ವರ್ಷದ ಕ್ರೀಡಾಪಟುಗಳು ಸಾವಿಗೀಡಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಬಗ್ಗೆ ಮಾಹಿತಿ …
Read More »Yearly Archives: 2021
ಗರಿಗೆದರಿದ ಉಪಚುನಾವಣೆ ಕಣ : ಕಾಂಗ್ರೆಸ್-ಬಿಜೆಪಿ ಭರ್ಜರಿ ಪ್ರಚಾರ
ರಾಯಚೂರು : ಮಸ್ಕಿ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾ ಆರಂಭಿಸಿದ್ದಾರೆ. ಕಾಂಗ್ರಸ್ ದ್ವಿಚಕ್ರ ವಾಹನ ಹಾಗೂ ಮನೆ ಮನೆ ಪ್ರಚಾರಕ್ಕಿಳಿದಿದೆ. ಕಾಂಗ್ರೆಸ್ ನಾಯಕ ಬಸನಗೌಡ ತುರುವಿಹಾಳ ಬೂತ್ ಮಟ್ಟದಿಂದ ಮತಬೇಟೆ ಆರಂಭಿಸಿದ್ದಾರೆ. ಇತ್ತ ಬಿಜೆಪಿ ಪಕ್ಷದಿಂದಲೂ ಭರ್ಜರಿ ತಯಾರಿ ನಡೆಯುತ್ತಿದ್ದು, ಸಿಎಂ ಯಡಿಯೂರಪ್ಪ ನೇತೃತ್ವದ ಸಮಾವೇಶಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಸ್ಕಿಯಲ್ಲಿ ಮಾರ್ಚ್ 20ರಂದು ಸಂಜೆ …
Read More »ಬೆಳಗಾವಿಯಲ್ಲಿ ನಿಗೂಢ ಸೋಂಕು : 10ಕ್ಕೂ ಹೆಚ್ಚು ಜಾನುವಾರುಗಳು ಸಾವು
ಬೆಳಗಾವಿ : ಜಿಲ್ಲೆಯ ಟಿಳಕವಾಡಿ ಭಾಗದಲ್ಲಿ ಹಲವು ದಿನಗಳಿಂದ ನಿಗೂಢ ಸೋಂಕು ಕಾಣಿಸಿಕೊಂಡ ಪರಿಣಾಮ 10ಕ್ಕೂ ಜಾರುವಾರು ಬಲಿಯಾಗಿವೆ. ಜಾನುವಾರುಗಳಿಗೆ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲಿ ಸಾವನ್ನಪ್ಪುತ್ತಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೊಸ ಸೋಂಕಿನ ಭೀತಿ ಆರಂಭವಾಗಿದೆ. ಪಶು ವೈದ್ಯರು ಮೃತ ಜಾನುವಾರುಗಳ ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ. ಜೀವನೋಪಾಯಕ್ಕೆ ಸಾಕಿದ್ದ ಜಾನುವಾರಗಳು ಸಾವನ್ನಪ್ಪಿರೋದು ಕಂಡು ಮಾಲೀಕರು ಕಣ್ಣೀರು ಹಾಕುತ್ತಿದ್ದರೆ, ಸಾರ್ವಜನಿಕರು ಭೀತಿಯಲ್ಲಿ ಇದ್ದಾರೆ.
Read More »ಏಪ್ರಿಲ್ 1 ರಿಂದ ಮತ್ತಷ್ಟು ದುಬಾರಿಯಾಗಲಿದೆ ರಾಷ್ಟ್ರೀಯ ಹೆದ್ದಾರಿ ಪ್ರಯಾಣ
ನವದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತೊಂದು ಬಿಗ್ ಶಾಕ್ ನೀಡಿದ್ದು, ಎನ್ ಎಚ್‌ಎಐ ಟೋಲ್ ತೆರಿಗೆಯನ್ನು ಶೇ. 5 ರಷ್ಟು ಹೆಚ್ಚಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏಪ್ರಿಲ್ 1 ರಿಂದ ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ವಾಹನಗಳಿಗೆ ಟೋಲ್ ಪ್ಲಾಜಾ ಮಾಜಿಸಕ ಪಾಸ್ 10 ರಿಂದ 20 ರೂ. ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ …
Read More »ಸರ್ಕಾರಿ ಕಚೇರಿಯ ಮುಂದೆಯೇ ವ್ಯಕ್ತಿಯ ಭೀಕರ ಕೊಲೆ…!
ಗದಗ: ಯುವಕನೋರ್ವ ಅಶ್ಲೀಲವಾಗಿ ಬೈದಾಡುತ್ತಿದ್ದ ಸಂಬಂಧಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನಗರದ ಬೆಟಗೇರಿಯ ಕುರಹಟ್ಟಿ ಪೇಟೆನಲ್ಲಿ ನಡೆದಿದೆ. ಕುರಹಟ್ಟಿ ಪೇಟೆ ನಿವಾಸಿ ಪ್ರವೀಣ್ ಗದುಗಿನ (23) ಕೊಲೆಗೈದ ಯುವಕ. ಪ್ರವೀಣ್ ತನ್ನ ಸಂಬಂಧಿಯಾದ ಮಂಜುನಾಥ್ ಗದುಗಿನ (44)ನನ್ನು ಕೊಲೆ ಮಾಡಿದ್ದಾನೆ. ಮಂಜುನಾಥ್ ಆಗಾಗ ಪ್ರವೀಣ್ ಮನೆ ಬಳಿ ಬಂದು ಅಶ್ಲೀಲವಾಗಿ ಬೈದಾಡುತ್ತಿದ್ದ. ಮಂಗಳವಾರ ರಾತ್ರಿ ಸಹ ಮಂಜುನಾಥ್ ಬೈದಾಡುತ್ತಿದ್ದ. ಇದರಿಂದ ಕೋಪಗೊಂಡ ಪ್ರವೀಣ್ ಆತನ ಕುತ್ತಿಗೆಗೆ ಚಾಕು ಹಾಕಿ ಕೊಲೆಗೈದು …
Read More »ಭಾರತೀಯ ರೈಲ್ವೆ ಎಂದಿಗೂ ಖಾಸಗೀಕರಣಗೊಳ್ಳುವುದಿಲ್ಲ:ಪಿಯೂಷ್ ಗೋಯಲ್
ನವದೆಹಲಿ: ಭಾರತೀಯ ರೈಲ್ವೆ ಖಾಸಗೀಕರಣದ ಬಗ್ಗೆ ಹಲವಾರು ಗಾಳಿಸುದ್ದಿಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ ನೀಡಿದ್ದು, ಭಾರತೀಯ ರೈಲ್ವೆ ಎಂದಿಗೂ ಖಾಸಗೀಕರಣಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ರೈಲ್ವೆಗಾಗಿ ಬಿಡುಗಡೆಯಾದ ಅನುದಾನ ಕುರಿತು ಸದಸ್ಯರು ಕೇಳಿದ ಪ್ರಶ್ನೆಗೆ ಚರ್ಚೆವೇಳೆ ಉತ್ತರಿಸಿದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್, ಪ್ರಧಾನಿ ಮೋದಿ ಸರ್ಕಾರ ರೈಲ್ವೆ ಹೂಡಿಕೆಯನ್ನು ಹೆಚ್ಚಿಸಿದೆ. 2019-20ರ ಆರ್ಥಿಕ ವರ್ಷದಲ್ಲಿ 1.5 ಲಕ್ಷ ಕೋಟಿ ಇದ್ದ ಹೂಡಿಕೆ 2021-22ರ …
Read More »ಮೋದಿ ಪ್ರಧಾನ ಸಲಹೆಗಾರ ಪಿ.ಕೆ ಸಿನ್ಹಾ ರಾಜೀನಾಮೆ PM Modi’s principal advisor P K Sinha resigns
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಸಲಹೆಗಾರರಾಗಿದ್ದ ಪ್ರದೀಪ್ ಕುಮಾರ್ ನಿನ್ಹಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಪಿಕೆ ಸಿನ್ಹಾ ಅವರು ಈ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. 1977ನೇ ಬ್ಯಾಚ್ ನ ನಿವೃತ್ತಿ ಐಎಎಸ್ ಅಧಿಕಾರಿಯಾಗಿರುವ ಸಿನ್ಹಾ ಅವರನ್ನ 2019ರ ಆಗಸ್ಟ್ ತಿಂಗಳಲ್ಲಿ ಮೋದಿಯವರ ಪ್ರಧಾನ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಇದಲ್ಲದೆ ಸಿನ್ಹಾ ಅವರು ನಾಲ್ಕು ವರ್ಷಗಳ ಕಾಲ ಕ್ಯಾಬಿನೆಟ್ …
Read More »ಬಾಲಸುಟ್ಟ ಶಿವಸೇನೆ ಹುಲಿ : ಬೆಳಗಾವಿ ಕೇಂದ್ರಾಡಳಿತವಾಗದು ಎಂದು ಕೇಂದ್ರ ಸ್ಪಷ್ಟನೆ
ಹೊಸದಿಲ್ಲಿ/ ಮುಂಬಯಿ : ಬೆಳಗಾವಿ ವಿಚಾರಕ್ಕೆ ಕೈಹಾಕಿದ ಶಿವಸೇನೆ ಬಾಲ ಸುಟ್ಟುಕೊಂಡಿದೆ. “ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ’ ಎನ್ನುವ ಮೂಲಕ ಉದ್ಧವ್ ಠಾಕ್ರೆಯ “ಮಹಾಉದ್ಧಟತನ’ದ ಕನಸಿಗೆ ಕೇಂದ್ರ ಸರಕಾರ ತಣ್ಣೀರು ಎರಚಿದೆ. ತನ್ನ ಮುಖವಾಣಿ “ಸಾಮ್ನಾ’ದಲ್ಲಿ ಶಿವಸೇನೆ “ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು’ ಎಂದಿತ್ತು. ಲೋಕಸಭೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್, “ಕಾಲ ಕಾಲಕ್ಕೆ ಕೆಲವರು ಮತ್ತು ಸಂಘಟನೆಗಳು ಬೆಳಗಾವಿಯನ್ನು …
Read More »‘ರಾಜ್ಯದಲ್ಲಿ ಉಚಿತ ಮರಳು ನೀತಿ ತರಲು ಚಿಂತನೆ ನಡೆಸಿದ್ದೇವೆ’: ಸಚಿವ ನಿರಾಣಿ
ಬೆಂಗಳೂರು: ಗಣಿಗಾರಿಕೆ ವಿಚಾರವಾಗಿ ಭ್ರಷ್ಟಾಚಾರ ನಡೆಯುತ್ತಿರುವುದು ಸತ್ಯ ಎಂದು ವಿಧಾನಪರಿಷತ್ನಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಒಪ್ಪಿಕೊಂಡಿದ್ದಾರೆ. ಗಣಿ ಮಾಲೀಕರ ಬಳಿ ಹಫ್ತಾ ವಸೂಲಿ ಮಾಡ್ತಿರುವುದೂ ಸತ್ಯ. ಗಣಿ & ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಹಫ್ತಾ ವಸೂಲಿ ನಡೆಯುತ್ತಿದೆ. ಆದರೆ, ಇಲಾಖೆಗೆ ನಾನು ಬಂದ ನಂತರ ಹಫ್ತಾ ನೀಡದಂತೆ ಸೂಚನೆ ಕೊಟ್ಟಿದ್ದೇನೆ. ಹಫ್ತಾ ನೀಡದಂತೆ ಗಣಿ ಮಾಲೀಕರಿಗೆ ಸೂಚನೆ ನೀಡಿದ್ದೇನೆ ಎಂದು ನಿರಾಣಿ ಹೇಳಿದರು. ಅಧಿಕಾರಿ ಎಷ್ಟೇ ಪ್ರಭಾವಿ …
Read More »ಸಿಡಿ’ಯಲ್ಲಿರುವಳು ನಾನಲ್ಲ ನನ್ನಂತೆ ಕಾಣುವ ಹುಡುಗಿಯ ದೃಶ್ಯ ಎಡಿಟ್ ಮಾಡಿದ್ದಾರೆ. ಅದು ನಕಲಿ ಸಿಡಿ,: ನನ್ನ ಮಗಳು ಹಾಗೆ ಹೇಳಿದ್ದಳು ಎಂದ ಸಂತ್ರಸ್ತೆಯ ತಾಯಿ
ಬೆಳಗಾವಿ: ‘ಸಿಡಿ’ಯಲ್ಲಿರುವಳು ನಾನಲ್ಲ ಎಂದು ಮಗಳು ಹೇಳಿದಳು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ನನ್ನಂತೆ ಕಾಣುವ ಹುಡುಗಿಯ ದೃಶ್ಯ ಎಡಿಟ್ ಮಾಡಿದ್ದಾರೆ. ಅದು ನಕಲಿ ಸಿಡಿ, ಆ ಸಿಡಿಯಲ್ಲಿ ನನ್ನ ಪಾತ್ರವೇ ಇಲ್ಲ ಎಂದು ಸಿಡಿ ವೈರಲ್ ಆದಾಗ ಕೇಳಿದ್ದಕ್ಕೆ ನನ್ನ ಮಗಳು ಹಾಗೆ ಹೇಳಿದ್ದಳು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಮನೆಗೆ ವಾಪಸ್ ಬಂದಾಗ ಹೇಳುವೆ ಎಂದಿದ್ದಳು. ಸದ್ಯಕ್ಕೆ ಏನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಳು. ನಾನೆಲ್ಲಿದ್ದೀನಿ ಎನ್ನುವುದೂ …
Read More »