Breaking News

Yearly Archives: 2021

ರಾಜಕೀಯದವರ ಸಂಗ ಮಾಡ್ಬೇಡ ಅಂದ್ರೂ ನಮ್ಮ ಮಾತು ಕೇಳ್ಳಿಲ್ಲ: ಸಿಡಿ ಸಂತ್ರಸ್ತೆ ತಾಯಿ

ಬೆಳಗಾವಿ: ರಾಜಕೀಯದವರ ಸಂಗ ಮಾಡಬೇಡ ಅಂತ ಅವಳಿಗೆ ಹೇಳಿದ್ದೆ ಆದ್ರೆ ಅವಳು ಕೇಳಲಿಲ್ಲ ಎಂದು ಸಿಡಿ ಸಂತ್ರಸ್ತೆಯ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ಸಂತ್ರಸ್ತೆಯ ತಾಯಿ, ಬಾರಮ್ಮ ಮನೆಗೆ ಮದುವೆ ಮಾಡ್ತೀವಿ, ರಾಜಕೀಯದವರ ಸಂಗ ಮಾಡಬೇಡ. ಯಾವತ್ತಿದ್ರೂ ಅಪಾಯ ಎಂದು ಅವಳಿಗೆ ಬುದ್ದಿ ಹೇಳಿದ್ದೆ ಆದ್ರ ನನ್ನ ಮಾತನ್ನು ಅವಳು ಕೇಳಲಿಲ್ಲ. ನಿನಗೆ 40 ಸಾವಿರ ರೂ. ಸಂಬಳ ಇದೆ ಸರ್ಕಾರಿ ಕೆಲಸ ಯಾಕೆ ಬೇಕು ಎಂದು …

Read More »

ಉಪ ಚುನಾವಣೆ ಹೊಸ್ತಿಲಲ್ಲಿ ಲಿಂಗಾಯತ ಮುಖಂಡನ ಸೆಳೆದ ಸತೀಶ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ಹಾಗೂ ಲಿಂಗಾಯತ ಸಮಾಜದ ಮುಖಂಡ ಅಶೋಕ ಪೂಜಾರಿ ಅವರನ್ನು ಪಕ್ಷದತ್ತ ಸೆಳೆಯುವಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಅವರು ನೀಡಿದ ಆಹ್ವಾನ ಮನ್ನಿಸಿರುವ ಪೂಜಾರಿ, ಕಾಂಗ್ರೆಸ್‌ ಸೇರ್ಪಡೆ ಆಗುವುದಾಗಿ ಪ್ರಕಟಿಸಿದ್ದಾರೆ. ಇಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಹಾಗೂ …

Read More »

ಉಪಚುನಾವಣೆಯಿಂದ ದೂರ ಉಳಿಯುವರೇ ಸಿಡಿ ಭಯದಲ್ಲಿರುವ 6 ಸಚಿವರು..?

ಬೆಂಗಳೂರು,ಮಾ.29- ನ್ಯಾಯಾಲಯದಿಂದ ತಡೆ ತಂದು ಸರ್ಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದ ಕಾರಣ ಉಪಚುನಾವಣೆಯಲ್ಲಿ ಆರು ಸಚಿವರು ಪ್ರಚಾರದಿಂದ ದೂರ ಉಳಿಯುವ ಸಾಧ್ಯತೆ ಇದೆ. ಈ ಸಚಿವರು ಪ್ರಚಾರಕ್ಕೆ ಬಂದರೆ ಪ್ರತಿಪಕ್ಷಗಳು ಇದನ್ನೇ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಬಹುದೆಂಬ ಭೀತಿಯಿಂದಾಗಿ ಸದ್ಯಕ್ಕೆ ದೂರ ಉಳಿಯುವಂತೆ ಪಕ್ಷ ಸೂಚಿಸಿದೆ ಎನ್ನಲಾಗುತ್ತಿದೆ. ಸಚಿವರಾದ ಬಿ.ಸಿ.ಪಾಟೀಲ್, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಭೈರತಿ ಬಸವರಾಜ್ ಸೇರಿದಂತೆ ಒಟ್ಟು 6 ಸಚಿವರು ಪ್ರಚಾರದಿಂದ ದೂರ ಉಳಿಯಲಿದ್ದಾರೆ …

Read More »

ಮಹಾನಾಯಕ ಆಗಲು ಹೊರಟವರು ಖಳನಾಯಕನಾಗಿದ್ದು ಕಾಂಗ್ರೆಸ್ ನ ನೈತಿಕ ದಿವಾಳಿತನ: ಬಿಜೆಪಿ

ಬೆಂಗಳೂರು: ಒಬ್ಬ ಅಮಾಯಕ ಹೆಣ್ಣು ಮಗಳನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಂಡು ರಾಜ್ಯದ “ಮಹಾ ನಾಯಕ” ಆಗಲು ಹೊರಟ “ಜೈಲು ಹಕ್ಕಿ” ಇಂದು “ಖಳನಾಯಕ” ಆಗಿರುವುದು ಕಾಂಗ್ರೆಸ್ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಬಿಜೆಪಿ ಟೀಕೆ ಮಾಡಿದೆ. ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿಯು ಟ್ವೀಟ್ ವಾರ್ ಮುಂದುವರಿಸಿದೆ. ಸೆಕ್ಷನ್ ಸಿದ್ದರಾಮಯ್ಯನವರೇ ನಿಮ್ಮ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚನೆಯಾದರೆ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಕೆಡವಲು ಸಾಧ್ಯವಿದೆ. ಒಂದು, …

Read More »

ಡಿಕೆಶಿಯಿಂದ ನಮ್ಮ ಮಗಳು ದುಡ್ಡು ಪಡೆದಿದ್ದಾಳೆ : ಸಿಡಿ ಯುವತಿ ಪೋಷಕರು

ಬೆಂಗಳೂರು : ಡಿಕೆಶಿಯಿಂದ ನಮ್ಮ ಮಗಳು ದುಡ್ಡು ಪಡೆದಿದ್ದಾಳೆ, ಕೆಲಸ ಕೊಡಿಸುವುದಾಗಿ ಡಿಕೆಶಿ ಹುಡುಗರು ಹೇಳಿದ್ದರು. ರಾಜಕೀಯ ದಾಳವಾಗಿ ನಮ್ಮ ಮಗಳನ್ನು ಬಳಕೆ ಮಾಡಿದ್ದಾರೆ, ಡಿಕೆಶಿ ಮತ್ತು ತಮ್ಮ ಮಗಳ ವಿರುದ್ಧವೇ ಸಿಡಿ ಯುವತಿಯ ಪೋಷಕರು ಹೇಳಿಕೆ ನೀಡಿದ್ದಾರೆ. ಇನ್ನು ವಿಚಾರಣೆ ಬಗ್ಗೆ ಮಾತನಾಡಿರುವ ಯುವತಿ ಪರ ವಕೀಲ ಜಗದೀಶ್, ಇಂದೇ ಹಾಜರು ಪಡಿಸಲು ಕೇಳಿದ್ರೆ ನಾವು ಸಿದ್ದರಿದ್ದೇವೆ. ಅಲ್ಲದೆ ನ್ಯಾಯಾಧೀಶರ ಮನೆಗೂ ಹಾಜರು ಪಡಿಸಲು ನಾವು ಸಿದ್ದರಾಗಿದ್ದೇವೆ ಎಂದಿದ್ದಾರೆ.

Read More »

ಬೆಳಗಾವಿ ಲೋಕಸಭೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ

ಬೆಳಗಾವಿ : ಬೆಳಗಾವಿ ಲೋಕಸಭೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ನಗರದ ಆರ್ ಟಿಒ ನಗರದಲ್ಲಿರುವ ಕಾಂಗ್ರೆಸ್ ಭವನದಿಂದ ಮೂರು ವಾಹನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಹಸಿರು ಶಾಲು ಧರಿಸಿ ನಾಮಪತ್ರ ಸಲ್ಲಿಸಿದ್ದಾರೆ. ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಥ್ ನೀಡಿದರು. ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ …

Read More »

ಇಂದೇ ತನ್ನ ಹೇಳಿಕೆ ದಾಖಲಿಸುತ್ತಾರೆಯೇ ಸಿಡಿ ಲೇಡಿ?

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸೇರಿದ್ದು ಎನ್ನಲಾದ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇಂದೇ ತನ್ನ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಯುವತಿ ಯಾವುದೇ ಕ್ಷಣದಲ್ಲಾದರೂ ಕೋರ್ಟ್ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಕೂಡ ಯುವತಿ ಭದ್ರತೆಗಾಗಿ ಓರ್ವ ಮಹಿಳಾ ಪಿಎಸ್ ಐ ಸೇರಿದಂತೆ 8 ಮಹಿಳಾ ಪೊಲೀಸ್ ಸಿಬ್ಬಂದಿಯ …

Read More »

ಸಿಡಿ ಲೇಡಿ ಪೋಷಕ’ರಿಂದ ‘ಡಿಕೆ ಶಿವಕುಮಾರ್’ ಮೇಲೆ ಗಂಭೀರ ಆರೋಪ :

ಬೆಳಗಾವಿ : ನಮ್ಮ ಮಗಳು ಯಾವುದೇ ತಪ್ಪು ಮಾಡಿಲ್ಲ. ಅವಳಿಂದ ಮಾಡಿಸಿದ್ದಾರೆ. ಇದರ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ. ನಮ್ಮ ಮಗಳನ್ನು ಒತ್ತಾಯ ಪೂರ್ವಕವಾಗಿ ಬಂಧನದಲ್ಲಿ ಇಟ್ಟುಕೊಂಡು ಹೇಳಿಕೆ ಕೊಡಿಸ್ತಾ ಇದ್ದಾರೆ. ದಿನಕ್ಕೊಂದು ವೀಡಿಯೋ ಹೇಳಿಕೆಯನ್ನು ಅವರಿಂದ ಕೊಡಿಸ್ತಾ ಇದ್ದಾರೆ. ಡಿಕೆ ಶಿವಕುಮಾರ್ ಅವರೇ ದುಡ್ಡು ಕೊಟ್ಟು, ಗೋವಾ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳೋದಕ್ಕೆ ಕಳುಹಿಸಿದ್ದಾರೆ ಎಂಬುದಾಗಿ ಸಿಡಿ ಲೇಡಿಯ ಪೋಷಕರು ಗಂಭೀರವಾಗಿ ಆರೋಪ ಮಾಡಿದ್ದಾರೆ.   ನಗದಲ್ಲಿ ಸಿಡಿ …

Read More »

ವಾಹನ ಸವಾರ’ರೆಲ್ಲರೂ ತಿಳಿದಿರಲೇ ಬೇಕಾದ ವಿಷಯಗಳು ಇವು.!

ನಾವು ವಾಹನಗಳ ಬಗ್ಗೆ ಗಮನ ಕೊಡುತ್ತೇವೆ ವಿನಹ, ಬಹುತೇಕ ಸಂದರ್ಭದಲ್ಲಿ ನಮ್ಮ ವಾಹನ ತಡೆಯುವಂತ, ತಡೆದು ವಿಚಾರಣೆ, ಮಾಹಿತಿ ಕೇಳುವಂತ ಸಂದರ್ಭದಲ್ಲಿ ನಾವು ಅವರನ್ನು ಪ್ರಶ್ನಿಸಬಹುದು. ಕೆಲ ದಾಖಲೆ, ಮಾಹಿತಿಯನ್ನು ಅವರಿಂದಲೂ ಪಡೆದ ನಂತ್ರ, ನಮ್ಮ ವಾಹನದ ಮಾಹಿತಿ ಅವರಿಗೆ ನೀಡಬಹುದು ಎನ್ನುವ ಬಗ್ಗೆ ತಿಳಿದೇ ಇರೋದಿಲ್ಲ. ಹಾಗಾದ್ರೇ.. ವಾಹನ ಸವಾರರೆಲ್ಲರೂ ತಿಳಿದಿರಲೇ ಬೇಕಾದ ವಿಷಯಗಳು ಏನ್ ಅಂತ ಮುಂದೆ ಓದಿ..   ಹೌದು.. ವಾಹನ ಸವಾರರಾದಂತ ನಾವು ಸಂಚಾರಿ …

Read More »

ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್:‌ ನ್ಯಾಯಾಧೀಶರೆದುರು ʼಸಿಡಿ ಲೇಡಿʼ ಹಾಜರಾಗಲು ಕೋರ್ಟ್‌ ಅನುಮತಿ..!

ಬೆಂಗಳೂರು: ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ನೇರವಾಗಿ ಹಾಜರಾಗಲು ಕೋರ್ಟ್‌ ಅನುಮತಿ ನೀಡಿದೆ. ಈ ಸಿಡಿ ಪ್ರಕರಣದಲ್ಲಿ ಯುವತಿಯ ಹೇಳಿಕೆ ತುಂಬಾನೇ ಮುಖ್ಯವಾಗಿದ್ದು, ಸಧ್ಯ ನ್ಯಾಯಾಧೀಶರ ಎದುರು ನೇರವಾಗಿ ಹಾಜರಾಗಲು ಕೋರ್ಟ್‌ ಅನುಮತಿ ನೀಡಿದೆ. ಆದ್ರೆ, ಯುವತಿ ಇವತ್ತೇ ನ್ಯಾಯಾಲಯದ ಮುಂದೆ ಇಂದೇ ಹಾಜರಾಗ್ತಾಳಾ? ಅಥ್ವಾ ಕೋರ್ಟ್‌ ಬೇರೆ ಸಮಯ ನೀಡಿದ್ಯಾ? ಅನ್ನೋ ಮಾಹಿತಿ ತಿಳಿಯಬೇಕಿದೆ.

Read More »