ಇಂದು ಬೆಳಿಗ್ಗೆ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ನಟಿಸಿರುವ ವಿಷ್ಣು ಪ್ರಿಯ ಚಿತ್ರದ ಟ್ರೈಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದರು. ಔಟ್ ಅಂಡ್ ಔಟ್ ಪ್ರೇಮ ಕಥಾ ಹಂದರ ಹೊಂದಿರುವ ಟ್ರೈಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಕೇವಲ ಎರಡು ಗಂಟೆಯೊಳಗೆ 80000 ವೀಕ್ಷಣೆ ಕಂಡಿದೆ. ಚಿತ್ರಕ್ಕೆ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವಿಕೆ ಪ್ರಕಾಶ್ …
Read More »Yearly Archives: 2021
ರಾಬರ್ಟ್ ಸಕ್ಸಸ್: ಚಂದು ಗೌಡ ಮನೆಗೆ ಬಂತು ದುಬಾರಿ ಕಾರು
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟ ಚಂದು ಗೌಡ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಆಡಿ ಕ್ಯೂ 7 ಕಾರನ್ನು ಖರೀದಿಸಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ”ಬೋರಿಂಗ್ ಕಾರುಗಳನ್ನು ಓಡಿಸಲು ಜೀವನ ಬಹಳ ಚಿಕ್ಕದು” ಎಂದು ಪೋಸ್ಟ್ ಹಾಕಿಕೊಂಡಿರುವ ಚಂದು ಗೌಡ, ”ಮನೆಗೆ ದೊಡ್ಡ ಕ್ವಾಟ್ರೊಗೆ ಸ್ವಾಗತ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಚಂದು ಗೌಡ ಅವರು ಹೊಸ ಕಾರು ಖರೀದಿಸಿರುವುದಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಅಂದ್ಹಾಗೆ, …
Read More »ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: ಬರೋಬ್ಬರಿ ʼ100 ಇನ್ಸ್ ಪೆಕ್ಟರ್ʼಗಳ ವರ್ಗಾವಣೆ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಬರೋಬ್ಬರಿ 100 ಪೊಲೀಸ್ ಇನ್ಸ್ ಪೆಕ್ಟರ್ʼಗಳನ್ನ ವರ್ಗಾವಣೆ ಮಾಡಲಾಗಿದ್ದು, ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರುವಂತೆ ಸೂಚಿಸಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಪೊಲೀಸ್ ಸಿಬ್ಬಂದಿ ಮಂಡಳಿಯ ಆದೇಶದನ್ವಯ 100 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ʼಗಳನ್ನ ವರ್ಗಾವಣೆ ಮಾಡಿ ಕ್ರಮಕೈಗೊಂಡಿದ್ದಾರೆ. ಅಂದ್ಹಾಗೆ, ವರ್ಗಾವಣೆ ಆದೇಶವನ್ನ ಡಿಜಿ ಐಜಿಪಿ ಕಚೇರಿಯಿಂದ ಹೊರಡಿಸಲಾಗಿದೆ.
Read More »ಲಾಕ್‌ಡೌನ್, ನೈಟ್ ಕರ್ಪ್ಯೂ ಬಗ್ಗೆ ಬೇಕಾಬಿಟ್ಟಿ ಯಾರೂ ಹೇಳಿಕೆ ಕೊಡುವಂತಿಲ್ಲ; B.S.Y.
ಬೆಂಗಳೂರು(ಮಾ.29): ಲಾಕ್ ಡೌನ್ , ನೈಟ್ ಕರ್ಪ್ಯೂ ಬಗ್ಗೆ ಬೇಕಾಬಿಟ್ಟಿ ಯಾರೂ ಹೇಳಿಕೆ ಕೊಡುವಂತಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸಚಿವರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಲಾಕ್‌ಡೌನ್, ಕರ್ಫ್ಯೂ , ಕಂಟೋನ್ಮೆಂಟ್ ವಲಯಗಳ ಬಗ್ಗೆ ಆಯಾ ಕಾಲಕ್ಕೆ ತಕ್ಕಂತೆ ಕೇಂದ್ರ ಗೃಹ ಸಚಿವಾಲಯ ಮಾತ್ರ ಆದೇಶ ಹೊರಡಿಸಲಿದೆ. ಕೇಂದ್ರದ ಮಾದರಿಯಲ್ಲೇ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಆದೇಶಗಳನ್ನು ಹೊರಡಿಸಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಕೋವಿಡ್ ಸಂಬಂಧಿತ ಸೂಚನೆ ಮತ್ತು …
Read More »ಸಿಡಿ ಯುವತಿ ಪೋಷಕರ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?
ರಾಯಚೂರು : ಸಾಕ್ಷ್ಯಗಳಿದ್ರೆ ಪೊಲೀಸರಿಗೆ ನೀಡಲಿ ಯುವತಿ ಪೋಷಕರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಇಂದು ದಿಢೀರ್ ಮಾಧ್ಯಮಗಳ ಮುಂದೆ ಬಂದ ಯುವತಿ ಪೋಷಕರು, ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದರು. ರಾಯಚೂರಿನ ಮುದಗಲ್ ನಲ್ಲಿ ಪೋಷಕರ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನನಗೂ ಸಿಡಿ ಲೇಡಿಗೂ ಸಂಬಂಧವಿಲ್ಲ. ಯಾರಬೇಕಾದರೂ ಏನು ಮಾಡಲಿ. ಒತ್ತಡದಲ್ಲಿರೋರು ಹೇಳಿಕೆಗೆ ಮತ್ತು ನನಗೂ ಸಂಬಂಧವಿಲ್ಲ. ಅವರ ಬಳಿ ದಾಖಲೆಗಳಿದ್ರೆ ಪೊಲೀಸರಿಗೆ …
Read More »ಜಾರಕಿಹೊಳಿ ಟೀಂ ಹತ್ತಿಕ್ಕುವ ಯೋಜನೆ ಬಿಜೆಪಿಯದ್ದು, ಸಿಎಂ ಮೌನ ಮುರಿಯಲಿ: ಮೋಟಮ್ಮ, ಜಯಮಾಲ, ಉಮಾಶ್ರೀ ಆಗ್ರಹ
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವರಾದ ಮೊಟಮ್ಮ, ಜಯಮಾಲ ಮತ್ತು ಉಮಾಶ್ರೀ, ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಸಂಬಂಧ ಸಿಎಂ ವಿರುದ್ಧ ಕಿಡಿಕಾರಿದ್ದಾರೆ. 27 ದಿನದ ಹಿಂದೆ ಸಿಡಿ ಕೇಸ್ ಬೆಳಕಿಗೆ ಬಂತು. ಅಂದಿನಿಂದಲೂ ಸುದ್ದಿ ಆಗುತ್ತಿದೆ. ಆದ್ರೆ ಆ ಹೆಣ್ಣು ಮಗಳನ್ನು ರಕ್ಷಣೆ ಮಾಡಬೇಕಾದ ಸರ್ಕಾರ ಒಂದೇಒಂದು ಹೇಳಿಕೆಯನ್ನೂ ಕೊಡ್ತಿಲ್ಲ. ಸಿಎಂ ಯಡಿಯೂರಪ್ಪ ಮೌನ ವಹಿಸಿದ್ದಾರೆ. ಮಾತ್ತೆತ್ತಿದ್ರೆ ರಾಮರಾಜ್ಯ ಎಂದು ಹೇಳ್ತಾರೆ. ಆದ್ರೆ ಹೆಣ್ಣು …
Read More »“ಉಪ ಚುನಾವಣೆಯಲ್ಲಿ ಸಿಡಿ ಪ್ರಕರಣ ಬಿಜೆಪಿಗೆ ವಿರುದ್ಧವಾಗಲಿದೆ’
ಬೆಳಗಾವಿ, ಮಾರ್ಚ್ 29: ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಿಜೆಪಿಗೆ ವಿರುದ್ಧವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣವು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ತಿರುಗು ಬಾಣವಾಗಲಿದೆ ಎಂದರು. ಸಿಡಿ ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಅದನ್ನು …
Read More »ಸಾರಿಗೆ ನೌಕರರು ಪ್ರತಿಭಟನೆ ಮಾಡಿದ್ರೆ ಖಾಸಗಿ ಬಸ್ ಬಳಕೆ ಮಾಡುತ್ತೇವೆ : ಡಿಸಿಎಂ
ಬೆಂಗಳೂರು: ಸಾರಿಗೆ ಇಲಾಖೆಗೆ ಬರುವ ಆದಾಯ ಇಂಧನ, ವೇತನಕ್ಕೆ ಸಾಲುತ್ತಿಲ್ಲ. ಇಂತಹ ಕಷ್ಟಕಾಲದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸದೇ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಇಲಾಖೆಯ ಹಣಕಾಸು ವೃದ್ಧಿಯಾಗುತ್ತಿದ್ದಂತೆಯೇ ಸಾರಿಗೆ ನೌಕರರ ಬೇಡಿಕೆ ಈಡೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದ್ದಾರೆ. ಏಪ್ರಿಲ್ 7 ರಿಂದ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದು, ಈ ಹಿನ್ನಲೆಯಲ್ಲಿಂದು ಸಚಿವ ಲಕ್ಷ್ಮಣ್ ಸವದಿ ಮುಖ್ಯಮಂತ್ರಿ …
Read More »ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ವಕೀಲ ಶ್ಯಾಮ್‌ಸುಂದರ್ ಮಹತ್ವದ ಹೇಳಿಕೆ
ಬೆಂಗಳೂರು, ಮಾರ್ಚ್ 29: ಸಂತ್ರಸ್ತೆಯು ನೇರವಾಗಿ ನ್ಯಾಯಾಧೀಶರ ಮುಂದೆ ಬಂದು ಹೇಳಿಕೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಪ್ರತಿಪಾದಿಸಿದ್ದಾರೆ. ಪೊಲೀಸರ ವಿಚಾರಣೆ ಬಳಿಕ ಮುಂದೆ ಸಂತ್ರಸ್ತೆ ಎಂದು ಹೇಳಿಕೊಂಡಿರುವ ಯುವತಿ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164ರ ಪ್ರಕಾರ ಹೇಳಿಕೆ ದಾಖಲಿಸಬಹುದು ಆದರೆ, ಪೊಲೀಸರ ಮುಂದೆ ಹಾಜರಾಗದೆಯೇ ಈ ರೀತಿ ನೇರವಾಗಿ ಕೋರ್ಟ್ ಮುಂದೆ ಹೇಳಿಕೆ ನೀಡಲು ಸಾಧ್ಯವಿಲ್ಲ. ಹೀಗೆ ಮುಂದೆ …
Read More »ಕುಡಿದ ಮತ್ತಿನಲ್ಲಿ ಜಗಳ ಮಾಡಿ ಹೊಡೆತ ತಿಂದ್ರಾ ಅಜಯ್ ದೇವಗನ್? ವಿಡಿಯೋ ವೈರಲ್!
ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ಸ್ವಲ್ಪ ಕೋಪ ಜಾಸ್ತಿ ಎಂಬುದು ಗೊತ್ತಿರುವ ವಿಚಾರ. ಹಾಗಂತ ಅವರು ಸಾರ್ವಜನಿಕವಾಗಿ ಜಗಳ ಮಾಡಿಕೊಳ್ಳುವ ಮಟ್ಟಕ್ಕೆ ಇಳಿಯುತ್ತಾರಾ? ಸದ್ಯಕ್ಕಂತೂ ಅಂಥ ಘಟನೆ ನಡೆದಿಲ್ಲ. ಆದರೆ ಈಗ ಸೋಶಿಯಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಅದರಲ್ಲಿ ಒಬ್ಬ ವ್ಯಕ್ತಿಯನ್ನು ಒಂದಷ್ಟು ಜನರು ಮನಬಂದಂತೆ ಥಳಿಸುತ್ತಿದ್ದಾರೆ. ಹೊಡೆತ ತಿನ್ನುತ್ತಿರುವ ವ್ಯಕ್ತಿ ಅಜಯ್ ದೇವಗನ್ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಚಾರಕ್ಕೆ …
Read More »