Breaking News

Yearly Archives: 2021

ದೆಹಲಿಯಲ್ಲಿ ಲಾಕ್ ಡೌನ್ :ರಾಜ್ಯಸಭಾ ನೌಕರರಿಗೆ ವರ್ಕ್ ಫ್ರಮ್ ಹೋಂ

ನವದೆಹಲಿ : ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್ ಹೇರಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯ ಎಲ್ಲಾ ನೌಕರಿಗೆ ಶುಕ್ರವಾರದವರೆಗೆ ವರ್ಕ್​ ಫ್ರಮ್​ ಹೋಂ ನೀಡಲಾಗಿದೆ. “ಈ ಅವಧಿಯಲ್ಲಿ ಕಚೇರಿಯ ಸುಗಮ ಕಾರ್ಯನಿರ್ವಹಣೆಗೆ ಮನೆಯಿಂದ ಕೆಲಸ ಮಾಡುವವರು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಲಭ್ಯವಿರಬೇಕು. ರಾಜ್ಯಸಭಾ ಸಚಿವಾಲಯದ ಎಲ್ಲಾ ವರ್ಗದ ನೌಕರರು, ಕಚೇರಿಯಲ್ಲಿ ಕೆಲಸ ಮಾಡುವ ಅವಶ್ಯಕತೆಗಳಿಗೆ ಒಳಪಟ್ಟು, 20.04.2021 ರಿಂದ 23.04.2021 ರವರೆಗೆ ಮನೆಯಿಂದ ಕೆಲಸ ಮಾಡಬಹುದು. ಆಡಳಿತಾತ್ಮಕ ತುರ್ತು …

Read More »

ರಾಜ್ಯದ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ರದ್ದು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನದ ಆಧಾರದಲ್ಲಿ ಪಾಸ್ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು,1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಿ ಶಿಕ್ಷಣ ಇಲಾಖೆ …

Read More »

ಕರ್ನಾಟಕದಲ್ಲಿ ಕರೋನ ರಣಕೇಕೆ, ವಿವಾದಕ್ಕೆ ಕಾರಣವಾಗಿದೆ ರಾಜ್ಯಪಾಲ ವಜೂಬಾಯಿ ವಾಲಾರ ಈ ನಡೆ

ಬೆಂಗಳೂರು: ಕರ್ನಾಟಕದಲ್ಲಿ ಕರ್ನಾಟಕದಲ್ಲಿ ಕರೋನ ರಣಕೇಕೆ ಹಾಕುತ್ತಿದ್ದು, ಈ ನಡುವೆ ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜ್ಯದ ಕರೋನಾ ಮಾಹಿತಿ ನೀಡಿದರು. ಈ ವೇಳೇ ರಾಜ್ಯಪಾಲರು ಹಾಗೂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಅವರು ಚರ್ಚೆ ನಡೆಸುತ್ತಿರುವ ವೇಳೆಯಲ್ಲಿ ಗುಜರಾತ್ ನ ಕರೋನಾ ಸ್ಥಿತಿಗತಿ ಪ್ರಸಾರವಾಗುತ್ತಿರುವ ಖಾಸಗಿ ಮಾಧ್ಯಮವೊಂದರ ವರದಿಯ ಫೋಟೋ …

Read More »

ಬೆಂಗಳೂರಿಗೆ ಉಸ್ತುವಾರಿ ಸಚಿವರೇ ಇಲ್ಲದಂತಾಗಿದೆ: ರಾಮಲಿಂಗಾ ರೆಡ್ಡಿ

ಬೆಂಗಳೂರು: ಬೆಂಗಳೂರಿಗೆ ಸೇರಿದ ಹಲವು ಸಚಿವರು ಇದ್ದರೂ ಬೆಂಗಳೂರು ಉಸ್ತುವಾರಿ ಯಾರು ಎನ್ನುವುದೇ ಈಗಿರುವ ಪ್ರಶ್ನೆ. ಮಹತ್ವವಾದ ಬೆಂಗಳೂರು ಉಸ್ತುವಾರಿ ಖಾತೆಯನ್ನು ಮುಖ್ಯಮಂತ್ರಿ ಹೊಂದಿದ್ದು, ಅವರಿಗೆ ಬೇರೆ ಹೊಣೆಯೇ ಹೆಚ್ಚಿರಬೇಕಾದರೆ ಮತ್ತು ಅವರಿಗೆ ಎರಡು ಬಾರಿ ಕೊವಿಡ್ ಬಂದು ಆಸ್ಪತ್ರೆ ಸೇರಿರಬೇಕಾದರೆ ಈ ಮಹಾಸಮರದ ವಿರುದ್ಧದ ನೇತೃತ್ವ ವಹಿಸಬೇಕಾದ ನಾಯಕರೇ ಇಲ್ಲವಾಗಿದ್ದಾರೆ ಎಂಬ ಅಂಶವನ್ನು ತಮ್ಮ ಸಲಹಾ ಪಟ್ಟಿಯಲ್ಲಿ ಸೇರಿಸುವ ಮೂಲಕ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಟಾಂಗ್ …

Read More »

ಕೊರೊನಾ ಸೋಂಕು ಮತ್ತು ಬಸ್ ಮುಷ್ಕರ: ಬೆಂಗಳೂರು ವಿವಿ ಪರೀಕ್ಷೆಗಳು ಮುಂದೂಡಿಕೆ

ಬೆಂಗಳೂರು, ಏಪ್ರಿಲ್ 19: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಹೆಚ್ಚಳದಿಂದಾಗಿ ಏ.19, 20 ಮತ್ತು 21ರಿಂದ ನಡೆಯಬೇಕಿದ್ದ ಪದವಿ ಮತ್ತು ಸ್ನಾತಕೋತ್ತರ ಪದವಿಯ ಸೆಮಿಸ್ಟರ್ ಪರೀಕ್ಷೆಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಮುಂದೂಡಿದೆ. ಬೆಂಗಳೂರು ವಿಶ್ವವಿದ್ಯಾನಿಲಯವು ಪದವಿ ಕೋರ್ಸ್‌ಗಳ ಮೊದಲ, ಮೂರನೇ ಮತ್ತು ಐದನೇ ಸೆಮಿಸ್ಟರ್ ಪರೀಕ್ಷೆಗಳು, ಸ್ನಾತಕೋತ್ತರ ಪದವಿಯ ಮೊದಲ ಹಾಗೂ ಮೂರನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಂ.ಎ, ಎಂ.ಎಸ್ಸಿ ಮತ್ತು ಎಂಕಾಮ್ ಸೇರಿದಂತೆ …

Read More »

ಮೇ 1ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಬಹುದು

ನವದೆಹಲಿ, ಏಪ್ರಿಲ್ 19: ದೇಶದಲ್ಲಿ ಮೂರನೇ ಹಂತದ ಕೊರೊನಾ ಲಸಿಕಾ ಅಭಿಯಾನವು ಮೇ 1ರಿಂದ ಆರಂಭಗೊಳ್ಳಲಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಲು ಅರ್ಹ ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ದೇಶದಲ್ಲಿ ಒಂದು ವರ್ಷದಿಂದಲೂ ಕೊರೊನಾ ಲಸಿಕೆ ಅಭಿವೃದ್ಧಿಯಲ್ಲಿ ಭಾರತ ಸರ್ಕಾರ ಪರಿಶ್ರಮ ಪಡುತ್ತಿದೆ. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚೆಚ್ಚು ಭಾರತೀಯರು ಲಸಿಕೆ ಪಡೆಯಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಪ್ರಧಾನಿ ನರೇಂದ್ರ …

Read More »

ನೀತಿಪಾಠ ಹೇಳುವ ಮೋದಿ, ಕೊರೊನಾ ಸಂದಿಗ್ಧತೆಯಲ್ಲೂ ಬಂಗಾಳದಲ್ಲಿ ಜನ ಕಂಡು ಖುಷಿಪಟ್ಟಿದ್ದೇಕೆ?

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ರಾಜಕಾರಣಿಗಳು ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ನ್ಯಾಯಾಲಯ ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿತು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೊರೊನಾ ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿವೆ. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಉಪದೇಶ ನೀಡುವ ಪ್ರಧಾನಿ ನರೇಂದ್ರ ಮೋದಿಯವರೇ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದಲ್ಲಿ ಹೆಚ್ಚು …

Read More »

21 ಸಾರಿಗೆ ನೌಕರರ ಅಮಾನತು :ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ

ವಿಜಯಪುರ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಜಿಲ್ಲೆಯಲ್ಲಿ ಮುಷ್ಕರ ನಿರತ ನೌಕರರ ಪೈಕಿ ಸೋಮವಾರ 21 ಸಿಬ್ಬಂದಿಯನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ತಿಳಿಸಿದ್ದಾರೆ. ಕರ್ತವ್ಯಕ್ಕೆ ಗೈರುಹಾಜರು ಆಗಿರುವುದು ಮತ್ತು ಕರ್ತವ್ಯಕ್ಕೆ ಬರುವವರಿಗೆ ತೊಂದರೆ ಮಾಡಿ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಮುದ್ದೇಬಿಃಆಳ …

Read More »

ಈ ಊರಿಗೆ 2 ಸಂಸದರು, 2 ಶಾಸಕರು : ಆಸ್ಪತ್ರೆಗೆ ಹೋಗಬೇಕಾದರೆ 25 ಕಿ.ಮೀ. ಸಂಚರಿಸಬೇಕು!

ಕುಂದಾಪುರ: ಈ ಪಂಚಾಯತ್‌ ಎರಡು ಲೋಕಸಭಾ ಕ್ಷೇತ್ರ, ಎರಡು ವಿಧಾನಸಭಾ ಕ್ಷೇತ್ರ, ಇಬ್ಬರು ಸಂಸದರು, ಇಬ್ಬರು ಶಾಸಕರ ವ್ಯಾಪ್ತಿಯಲ್ಲಿ ಬರುತ್ತದೆ. ಆದ್ದರಿಂದ ಊರು ಸರ್ವ ಸೌಲಭ್ಯಗಳನ್ನೂ ಹೊಂದಿರಬೇಕಿತ್ತು. ಆದರೆ ಇಲ್ಲಿನ ಜನರಿಗೆ ಏನಾದರೂ ಅನಾರೋಗ್ಯ ತಲೆದೋರಿದರೆ ತುರ್ತು ಚಿಕಿತ್ಸೆಗೆ 20-25 ಕಿ.ಮೀ. ದೂರ ಬರಬೇಕು; ಅದೂ ಸಣ್ಣ ಆಸ್ಪತ್ರೆಗೆ. ದೊಡ್ಡ ಆಸ್ಪತ್ರೆ ಆಗಬೇಕೆಂದರೆ 45 ಕಿ.ಮೀ. ದೂರ ಹೋಗಬೇಕು. ಇದು ಉಡುಪಿ – ಚಿಕ್ಕಮಗಳೂರು, ಶಿವಮೊಗ್ಗ ಲೋಕಸಭಾ ಕ್ಷೇತ್ರ, ಕುಂದಾಪುರ, …

Read More »

ಖಾತೆದಾರರಿಗೆ ಕೆವೈಸಿ ಸಮಸ್ಯೆ : ಬ್ಯಾಂಕ್‌ಗಳಲ್ಲಿ ವಿವರ ಅಪ್‌ಡೇಟ್‌ಗೆ ತಾಕೀತು

ಹೊಸದಿಲ್ಲಿ/ಮುಂಬಯಿ: “ನಿಮ್ಮ ಗ್ರಾಹಕರನ್ನು ಅರಿಯಿರಿ’ (ಕೆವೈಸಿ) ವಿವರಗಳನ್ನು ಅಪ್‌ಡೇಟ್‌ ಮಾಡಲಾಗಿಲ್ಲ ಎಂಬ ಕಾರಣಕ್ಕೆ ಸರಕಾರಿ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಜತೆಗೆ ಹಿರಿಯ ನಾಗರಿಕರಿಗೆ ಸಿಗಬೇಕಾಗಿದ್ದ ಪಿಂಚಣಿ ಪಾವತಿ ಮೇಲೆಯೂ ಇದು ಪ್ರತಿಕೂಲ ಪರಿಣಾಮ ಬೀರಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಿಗೆ ಇಂಥ ಅನುಭವವಾಗುತ್ತಿದೆ. ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ ಎಸ್‌ಬಿ ಖಾತೆ ಹೊಂದಿದ್ದ ವ್ಯಕ್ತಿಗೆ ತತ್‌ಕ್ಷಣವೇ ಕೆವೈಸಿ ವಿವರ ಅಪ್‌ಡೇಟ್‌ ಮಾಡಬೇಕು. …

Read More »