ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ದಾಖಲೆಗಳಿಲ್ಲದೇ ಮಾತನಾಡುತ್ತಿದ್ದಾರೆ. ಯಾವುದೇ ದಾಖಲೆಗಳಿಲ್ಲದೇ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮೀರ್ ಅಹ್ಮದ್, ಬೆಡ್ ಬ್ಲಾಕಿಂಗ್ ಹಗರಣದಲ್ಲಿ ನಿಮ್ಮದೇ ಶಾಸಕ ಸತೀಶ್ ರೆಡ್ಡಿ ಪಿಎ ಶಾಮೀಲಾಗಿದ್ದಾರೆ ಇದಕ್ಕೇನು ಉತ್ತರಿಸುತ್ತೀರಿ ತೇಜಸ್ವಿ ಸೂರ್ಯ? ತಪ್ಪುಗಳಾದಾಗ ನಿಮಗೆ ಕೇವಲ ಮುಸ್ಲಿಂಮರು ಮಾತ್ರ ಕಾಣುತ್ತಾರೆ. ನಿಮ್ಮಲ್ಲಿ ಅದೆಷ್ಟು ವಿಷ ಇಟ್ಟುಕೊಂಡಿದ್ದೀರಿ. ವಾರ್ ರೂಂ …
Read More »Yearly Archives: 2021
ಆತ ಅಮಾವಾಸ್ಯೆ ಗಿರಾಕಿ -ತೇಜಸ್ವಿ ಸೂರ್ಯ ವಿರುದ್ಧ ಡಿ.ಕೆ. ಶಿವಕುಮಾರ್ ಕಿಡಿ
ಬೆಂಗಳೂರು: ‘ಬೆಡ್ ಬ್ಲಾಕ್ ದಂಧೆ ಪ್ರಕರಣದಲ್ಲಿ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ಪ್ರಕರಣ ಬಯಲು ಮಾಡಿದ ಸಂಸದ ತೇಜಸ್ವಿ ಸೂರ್ಯ, ಒಂದು ಕೋಮಿನ 17 ಜನರನ್ನು ಮಾತ್ರ ಉಲ್ಲೇಖಿಸಿರುವುದು ಹಾಗೂ ಪ್ರಕರಣದಲ್ಲಿ ಬಿಜೆಪಿ ಶಾಸಕರ ಕೈವಾಡದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ತೇಜಸ್ವಿ ಸೂರ್ಯ ಓದಿಕೊಂಡಿರುವವನು. ಒಳ್ಳೆಯ ಕೆಲಸ ಮಾಡಿದ್ದಾನೆ ಎಂದುಕೊಂಡಿದ್ದೆ. ಆತ ಅಮಾವಾಸ್ಯೆ ಗಿರಾಕಿ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಳೆಸನ್ನು ಕರೆದುಕೊಂಡು …
Read More »ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಆಪರೇಷನ್ ಆಕ್ಸಿಜನ್, ತಪ್ಪಿದ ಭಾರೀ ಅನಾಹುತ, ಉಳಿಯಿತು 200 ಸೋಂಕಿತರ ಜೀವ
ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವೈದ್ಯರು ಹಾಗೂ ಇಡೀ ಆಸ್ಪತ್ರೆ ಸಿಬ್ಬಂದಿಯ ಮುನ್ನೆಚ್ಚರಿಕೆ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದ ಬೆಂಗಳೂರಿನಲ್ಲಿ ಸಂಭವೀಯ ಬಹುದೊಡ್ಡ ಆಕ್ಸಿಜನ್ ಕೊರತೆ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಈ ದುರಂತ ತಪ್ಪಿದ್ದು, ಇಡೀ ರಾತ್ರಿ ಡಿಸಿಎಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದ್ದು, ಈ ಮೂಲಕ ವೆಂಟಿಲೇಟರ್ ಹಾಗೂ ಆಕ್ಸಿಜನ್ ಬೆಡ್‌ಗಳ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಒಟ್ಟು 200 (100 ಬೆಡ್ ಐಸಿಯು …
Read More »ಮೃತಪಟ್ಟ ಕೋವಿಡ್ ರೋಗಿಯ ಶವವನ್ನು ರಸ್ತೆಯಲ್ಲೇ ಬಿಟ್ಟು ಹೋದ ಆಸ್ಪತ್ರೆ
ಸೂರತ್:ಕೋವಿಡ್ ಪಾಸಿಟಿವ್ ರೋಗಿಯ ಶವವನ್ನು ರಸ್ತೆಯಲ್ಲಿ ಬಿಟ್ಟಿದ್ದಕ್ಕಾಗಿ ಸೂರತ್‌ನ ಪಾಂಡೇಸರ ಪ್ರದೇಶದ ಖಾಸಗಿ ಆಸ್ಪತ್ರೆಯ ವಿರುದ್ಧ ದೂರು ದಾಖಲಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ವೈರಲ್ ಆಗಿದ್ದು, ಮೃತರು ಒಡಿಶಾ ಮೂಲದವರು ಎಂದು ತಿಳಿದುಬಂದ ನಂತರ ಸಮುದಾಯದ ಸದಸ್ಯರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಮೃತರು ಪಾಂಡೇಸರದ ಪ್ರಿಯಾ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಮಗನ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬವು ಒಂದು ಪರೀಕ್ಷೆಗೆ …
Read More »ಬಾಲಿವುಡ್ ನಟಿ ಸನ್ನಿಲಿಯೋನ್ ಕೂಡ ವಲಸೆ ಕಾರ್ಮಿಕರ ನೆರವಿಗೆ
ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ನಿಂದ ಭಾರತ ನಲುಗುತ್ತಿದೆ. ಇದರ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಕೆಲವೆಡೆ ಲಾಕ್ ಡೌನ್ ಮಾಡಿರುವ ಪರಿಣಾಮ ಅನೇಕ ಮಂದಿ ವಲಸೆ ಕಾರ್ಮಿಕರು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಇಂತವರಿಗೆ ಅನೇಕ ಮಂದಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅಂತೆಯೇ ಇದೀಗ ಬಾಲಿವುಡ್ ನಟಿ ಸನ್ನಿಲಿಯೋನ್ ಕೂಡ ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದಾರೆ. ಬಾಲಿವುಡ್ ನಟಿ ಸನ್ನಿಲಿಯೋನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಸದಾ ಕಷ್ಟಕ್ಕೆ ಮಿಡಿಯುವ ಸನ್ನಿ …
Read More »ಎಲೆಕ್ಷನ್ ಡ್ಯೂಟಿಗೆ ಹಾಜರಾಗಿದ್ದ 2 ಸಾವಿರ ಜನರು ಕೊರೊನಾಗೆ ಬಲಿ – 700ಕ್ಕೂ ಹೆಚ್ಚು ಶಿಕ್ಷಕರು
ಲಕ್ನೊ: ಚುನಾವಣೆ ಡ್ಯೂಟಿಗೆ ಹಾಜರಾಗಿದ್ದ ಸುಮಾರು ಎರಡು ಸಾವಿರ ಉದ್ಯೋಗಿಗಳು ಕೊರೊನಾಗೆ ಬಲಿಯಾಗಿದ್ದಾರೆ. ಇದರಲ್ಲಿ 700ಕ್ಕೂ ಹೆಚ್ಚು ಜನರು ಶಿಕ್ಷಕರಿದ್ದಾರೆ ಎಂದು ಪತ್ರಿಕೆಯೊಂದು ವರದಿಯಾಗಿದೆ. ಕೊರೊನಾ ಎರಡನೇ ಅಲೆಯ ನಡುವೆಯೂ ಉತ್ತರ ಪ್ರದೇಶದಲ್ಲಿ ಪಂಚಾಯ್ತಿ ಚುನಾವಣೆ ನಡೆದಿದೆ. ಆದ್ರೆ ಡ್ಯೂಟಿಗೆ ಹಾಜರಾಗಿದ್ದ ಬಹುತೇಕ ನೌಕರರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸದ್ಯ 706 ಶಿಕ್ಷಕರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಈ ಸಂಖ್ಯೆ ಸಾವಿರದ ಗಡಿ ದಾಟುವ ಆತಂಕವನ್ನ ಶಿಕ್ಷಣ ಇಲಾಖೆ ಹೊರ …
Read More »ಬೆಡ್ ಸಿಗದೇ ವಿಧಾನಸೌಧಕ್ಕೇ ಸೋಂಕಿತೆಯನ್ನು ಕರೆತಂದ ಕುಟುಂಬಸ್ಥರು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸ್ಥಿತಿ ಕೇಳುವವರಿಲ್ಲದಂತಾಗಿದೆ. ಒಂದೆಡೆ ಆಸ್ಪತ್ರೆಗಳಿಗೆ ಅಲೆದಾಡಿದರೂ ಬೆಡ್ ಸಿಗುತ್ತಿಲ್ಲ, ಇನ್ನೊಂದೆಡೆ ಸಾವನ್ನಪ್ಪಿದರೆ ಚಿತಾಗಾರವೂ ಸಿಗದ ಘೋರ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಬೆಡ್ ಸಿಗದ ಕಾರಣ ಸೋಂಕಿತ ಮಹಿಳೆಯೊಬ್ಬರು ಆಂಬುಲೆನ್ಸ್ ನಲ್ಲಿ ವಿಧಾನಸೌಧಕ್ಕೆ ಆಗಮಿಸಿರುವ ಘಟನೆ ನಡೆದಿದೆ. ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಕಳೆದ ಎರಡುದಿನಗಳಿಂದ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಿಗೂ ಅಲೆದಾಡಿದರೂ ಬೆಡ್ ವ್ಯವಸ್ಥೆ ಸಿಕ್ಕಿಲ್ಲ. ಇದರಿಂದ ಬೇಸತ್ತ ಕುಟುಂಬದವರು ಸೋಂಕಿತ ಮಹಿಳೆಯನ್ನು …
Read More »ಕೊರೊನಾ `ನಿಯಮ ಗಾಳಿಗೆ ತೂರಿ ಲಸಿಕೆಗೆ ಕ್ಯೂ’ ನಿಂತ ಜನ
ಕೋಲಾರ : ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದೆ. ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಅಂತಾ ಹೇಳುತ್ತಲೆ ಇದೆ. ಆದ್ರೆ ಸರ್ಕಾರಿ ಕಚೇರಿಗಳಲ್ಲೇ ಇದರ ಪಾಲನೆ ಆಗುತ್ತಿಲ್ಲ. ಲಸಿಕಾ ಕೇಂದ್ರಗಳಲ್ಲೂ ಕೂಡ ಜನರು ಸಾಮಾಜಿಕ ಅಂತರ ಮರೆತು ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇದನ್ನ ತಡೆಯಬೇಕಿದ್ದ ಅಧಿಕಾರಿಗಳು ಮಾತ್ರ ಎಸಿ ರೂಮಿನಲ್ಲಿ ತಂಪಾಗಿ ಕುಳಿತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಕೋಲಾರದ ಲಸಿಕಾ ಕೇಂದ್ರ..! ಹೌದು..! ಇಲ್ಲಿನ ಇಟಿಸಿಎಂ ಆಸ್ಪತ್ರೆ …
Read More »ನನ್ನ ಹೆಂಡತಿಗೆ ವೆಂಟಿಲೇಟರ್ ಕೊಡಿಸೋಕೆ ಆಗ್ತಿಲ್ಲ- ಮೈಸೂರು ಡಿಹೆಚ್ಓ
ಮೈಸೂರು: ಕೊರೊನಾ ಸೋಂಕಿತರಿಗೆ ಬೆಡ್ ಹಂಚಿಕೆ ವಿಚಾರದಲ್ಲಿ ಮೈಸೂರು ಡಿಹೆಚ್ಓ ಅಸಹಾಯಕರಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಕೊರೊನಾ ಸೋಂಕಿತರ ಸಂಬಂಧಿಕರೊಡನೆ ಮಾತನಾಡಿರುವ ಮೈಸೂರು ಡಿಹೆಚ್ಓ, ನನ್ನ ಕೈ ಸೋತೋಗಿದೆ. ನನ್ನ ಹೆಂಡತಿಗೆ ವೆಂಟಿಲೇಟರ್ ಕೊಡಿಸಲು ನನಗೆ ಯೋಗ್ಯತೆ ಇಲ್ಲ. ನೀವು ಯಾರಿಗೆ ಬೇಕಾದ್ರು ಕಂಪ್ಲೇಂಟ್ ಕೊಡಿ. ಇವತ್ತೇ ಮನೆಗೆ ಕಳುಹಿಸಿದರು ನಾನು ಹೋಗಲು ರೆಡಿ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ನನ್ನಿಂದ ವೆಂಟಿಲೇಟರ್ ಅರೆಂಜ್ ಮಾಡಲು ಆಗಲ್ಲ ಎಂದು ಬೇಸರ …
Read More »ಚಾಮರಾಜನಗರ ದುರಂತ :ಯಾರೂ ಸಹ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ.- ಸಚಿವ ಸುರೇಶ್ ಕುಮಾರ್
ಚಾಮರಾಜನಗರ : ಚಾಮರಾಜನಗರದಲ್ಲಿ ನಿನ್ನೆ ಬುಧವಾರ ಬೆಳಿಗ್ಗೆ 9 ಗಂಟೆಯಿಂದ ಇಂದು ಗುರುವಾರ ಬೆಳಿಗ್ಗೆ 9 ಗಂಟೆಯ ಅವಧಿಯಲ್ಲಿ 15 ಮಂದಿ ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. ಇದಲ್ಲದೆ ಕೋವಿಡ್ ಅಲ್ಲದ ಆದರೆ ಕೋವಿಡ್ ಲಕ್ಷಣವುಳ್ಳ 5 ಮಂದಿ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಇವರ್ಯಾರೂ ಸಹ ಆಕ್ಸಿಜನ್ ಕೊರತೆಯಿಂದ ಸತ್ತಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಕೊರೋನಾ ರೋಗಿಗಳು ಸತ್ತಿದ್ದಾರೆ. …
Read More »