ಹೊಸದಿಲ್ಲಿ: “ಕೆಎಸ್‌ಆರ್‌ಟಿಸಿ’ ಪದ ಬಳಕೆಗೆ ಸಂಬಂಧಿಸಿ 7 ವರ್ಷ ನಡೆದ ಕಾನೂನು ಸಮರದಲ್ಲಿ ಕರ್ನಾಟಕಕ್ಕೆ ಸೋಲಾಗಿದೆ. “ಕೆಎಸ್‌ಆರ್‌ಟಿಸಿ’ ಹೆಸರು ಮತ್ತು ಲಾಂಛನ ಕೇರಳದ ಸ್ವತ್ತು ಎಂದು ಟ್ರೇಡ್ ಮಾರ್ಕ್ ರಿಜಿಸ್ಟ್ರಿ ತೀರ್ಪು ನೀಡಿದೆ. ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆ ಆಧಾರದಲ್ಲಿ ಇದನ್ನು ಕೇರಳಕ್ಕೆ ಬಿಟ್ಟುಕೊಡಬೇಕೆಂದು ರಿಜಿಸ್ಟ್ರಿ ತೀರ್ಪಿತ್ತಿದೆ. ಈ ಸಂಬಂಧ 2013ರಲ್ಲೇ ಕಾನೂನು ಸಮರ ಆರಂಭವಾಗಿತ್ತು. “ವಿಚಾರ ಗಮನಕ್ಕೆ ಬಂದಿದ್ದು, ಅಧಿಕೃತ ನೋಟಿಸ್, ತೀರ್ಪಿನ ಪ್ರತಿ ಸಿಕ್ಕಿಲ್ಲ. ಅದು ದೊರೆತ ಬಳಿಕ …
Read More »Yearly Archives: 2021
14 ಲಕ್ಷ ರೂ ಮೌಲ್ಯದ ಅನಧಿಕೃತ ಬೀಜ ಸಂಗ್ರಹ: ಕೃಷಿ ಅಧಿಕಾರಿಗಳಿಂದ ದಾಳಿ
ಗಂಗಾವತಿ: ಕೃಷಿ ಇಲಾಖೆಯ ಅನುಮತಿ ಪಡೆಯದೇ 14ಲಕ್ಷ ರೂ.ಮೌಲ್ಯದ ಬೀಜ, ಗೊಬ್ಬರ ಅನಧಿಕೃತ ಸಂಗ್ರಹ ಮಾಡಿದ ಗೋಡೌನ್ ಮೇಲೆ ಕೃಷಿ ಇಲಾಖೆ ಮತ್ತು ಕೃಷಿ ಜಾಗೃತ ದಳದ ಅಧಿಕಾರಿ ದಾಳಿ ನಡೆಸಿದ್ದಾರೆ. ಸಿಬಿಎಸ್ ವೃತ್ತದ ಸಮೀಪದ ಗೋಡೌನ್ ನಲ್ಲಿ ಶಂಕ್ರಪ್ಪ ಮೇಟಿ ಎಂಬುವವರಿಗೆ ಸೇರಿದ ಮಲ್ಲಿಕಾರ್ಜುನ ಸೀಡ್ಸ್ ಕಂಪನಿ ಹೆಸರಿನಲ್ಲಿದ್ದ ಬೀಜ ಗೊಬ್ಬರ ಅಂಗಡಿಯಲ್ಲಿ ಕೃಷಿ ಇಲಾಖೆಯಿಂದ ಪರವಾನಿಗೆ ಪಡೆಯದೇ ಸುಮಾರು 14 ಲಕ್ಷ ರೂ.ಮೌಲ್ಯದ ಸಜ್ಜಿ ಮೆಕ್ಕೆಜೋಳ ಹಾಗೂ …
Read More »ಬಿಎಸ್ವೈ ನಾಯಕತ್ವ ಬದಲಾವಣೆ ಇಲ್ಲ; ಸಂಪುಟದ ಶೇ.50 ಪುನಾರಚನೆಗೆ ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ಧಾರ!
ಕೊರೋನಾ ಕಾಲದಲ್ಲಿ ಅತಿದೊಡ್ಡ ರಾಜಕೀಯ ಬೆಳವಣಿಗೆ ನಡೆದಿದ್ದು, ನಾಯಕತ್ವ ಬದಲಾವಣೆ ಕೂಗಿನ ಮಧ್ಯೆ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟಕ್ಕೆ ಸರ್ಜರಿ ಮಾಡಲಾಗುವುದು ಎನ್ನಲಾಗಿದೆ. ಸ್ವತಃ ಅಖಾಡಕ್ಕಿಳಿದಿರುವ ಬಿಜೆಪಿ ಹೈಕಮಾಂಡ್ ಆಡಳಿತಕ್ಕೆ ಚುರುಕು ನೀಡಲು ಮುಂದಾಗಿದೆ. ಸಂಪುಟ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಕೈಹಾಕಿದ್ದು, ಬಹುತೇಕ ಸಚಿವರಿಗೆ ಗೇಟ್ ಫಾಸ್ ನೀಡುವ ಸಾಧ್ಯತೆ ಇದೆ. ಹಿರಿಯ ಸಚಿವರಿಗೆ ಪಕ್ಷದ ಹೊಣೆಗಾರಿಕೆ ವಹಿಸಲಾಗುವುದು. ಎರಡನೇ ತಲೆಮಾರಿನ ನಾಯಕರಿಗೆ …
Read More »ಗುತ್ತಿಗೆ ನೌಕರರಿಗೆ ಸರ್ಕಾರದಿಂದ ರಿಸ್ಕ್ ಭತ್ಯೆ ಘೋಷಣೆ; ಸಚಿವ ಸುಧಾಕರ್ ಮಾಹಿತಿ
ಬೆಂಗಳೂರು: ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯದಲ್ಲಿರುವ ಗುತ್ತಿಗೆ ನೌಕರರಿಗೆ ಮಾಸಿಕ ರಿಸ್ಕ್ ಭತ್ಯೆ ಘೋಷಿಸಲಾಗಿದೆ. ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಲ್ಲಿನ 922 ಗುತ್ತಿಗೆ ನೌಕರರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮಾಸಿಕ ಅಪಾಯ ಭತ್ಯೆಯನ್ನು ಘೋಷಿಸಿದೆ. ಸಂಶೋಧನಾ ವಿಜ್ಞಾನಿ, ಸಂಶೋಧನಾ ಸಹಾಯಕರು, ಲ್ಯಾಬ್ ತಂತ್ರಜ್ಞರು, ಡೇಟಾ ಎಂಟ್ರಿ ಆಪರೇಟರುಗಳಿಗೆ 5,000 ರೂ., ದಾದಿಯರಿಗೆ 8,000 ರೂ. ಮತ್ತು ಡಿ ಗ್ರೂಪ್ ನೌಕರರಿಗೆ 10,000 ರೂ. ಅಪಾಯ …
Read More »ತಮಿಳು ಖ್ಯಾತ ನಟ ವಿಶಾಲ್ ವಿರುದ್ಧ ಕಿಡಿಕಾರಿದ ನಟಿ ಗಾಯಿತ್ರಿ ರಘುರಾಮ್
ಬೆಂಗಳೂರು : 5 ದಿನಗಳ ಹಿಂದೆ ತಮಿಳು ಖ್ಯಾತ ನಟ ವಿಶಾಲ್ ತಮಿಳುನಾಡಿನ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನೋರ್ವ ಅತ್ಯಾಚಾರ ಎಸಗಿದ್ದನ್ನು ಕುರಿತು ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸ್ಯಾಂಡಲ್ ವುಡ್ ನ ಮನಸೆಲ್ಲ ನೀನೇ ‘ ಚಿತ್ರದ ನಟಿ , ಕೊರಿಯೋಗ್ರಾಫರ್ , ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಗಾಯಿತ್ರಿ ರಘುರಾಮ್ ವಿಶಾಲ್ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಬರುವಂತೆ ಟ್ವೀಟ್ ಮಾಡಿದ್ದಾರೆ. ವಿಶಾಲ್ ಅವರು …
Read More »ಸೀಡಿ ಪ್ರಕರಣ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದ S.I.T.
ಬೆಂಗಳೂರು,: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಇಬ್ಬರು ಶಂಕಿತ ಆರೋಪಿಗಳು ಸಲ್ಲಿಸಿದ್ದ ಅರ್ಜಿಗೆ ಎಸ್‍ಐಟಿ ಪೊಲೀಸರು ನಗರದ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್‍ಗೆ ತನಿಖೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ಜತೆಗೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ. ಅಶ್ಲೀಲ ಸೀಡಿ ಬೆಳಕಿಗೆ ಬಂದ ಬೆನ್ನಲ್ಲೇ ಪರಾರಿಯಾಗಿರುವ ಶಂಕಿತ ಆರೋಪಿಗಳಾದ ನರೇಶ್‍ಗೌಡ ಹಾಗೂ ಶ್ರವಣ್ ನಿರೀಕ್ಷಣಾ ಜಾಮೀನು ಕೋರಿ …
Read More »ದರೋಡೆಗೆ ಸಂಚು: ಐದು ಮಂದಿ ಬಂಧನ
ಬೆಂಗಳೂರು: ಸಾರ್ವಜನಿಕರನ್ನು ಬೆದರಿಸಿ, ದರೋಡೆಗೆ ಸಂಚು ರೂಪಿಸಿದ್ದ ಆರೋಪದಡಿ ಕುಖ್ಯಾತ ರೌಡಿಗಳ ಸಹಚರರಾದ ಐದು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಸ್ಲೀಂ ಪಾಷಾ (38), ಶೇಖ್ ತನ್ವರ್ (21), ಮಹಮದ್ ಸುಲ್ತಾನ್ (23), ಸೈಯದ್ ಫೈರೋಜ್ (32) ಹಾಗೂ ಇಮ್ರಾನ್ ಪಾಷಾ (34) ಬಂಧಿತರು. ‘ಇವರು ವಿವೇಕನಗರ ಠಾಣಾ ವ್ಯಾಪ್ತಿಯ ಇನ್ಫೆಂಟ್ ಜೀಸಸ್ ಚರ್ಚ್ ಸಮೀಪದ ದಾರಿಯಲ್ಲಿ ಒಂಟಿಯಾಗಿ ಬರುವವರ ಮೇಲೆ ಹಲ್ಲೆ ನಡೆಸಿ, ನಗದು-ಚಿನ್ನಾಭರಣ ದೋಚಲು ಆರೋಪಿಗಳು …
Read More »ಮೆಗಾಸಿಟಿ ವಂಚನೆ ; ಸಚಿವ ಯೋಗೇಶ್ವರ್ ವಿರುದ್ದ ಸಿಐಡಿಗೆ ದೂರು
ಬೆಂಗಳೂರು: ಮೆಗಾಸಿಟಿ ಡೆವಲಪರ್ಸ್ ಕಂಪನಿಯ ಗ್ರಾಹಕರಿಗೆ ವಂಚಿಸಿರುವ ಪ್ರಕರಣದಲ್ಲಿ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಕ್ರಮ ಜರುಗಿಸಿ, ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಮೆಗಾಸಿಟಿ ನಿವೇಶನ ಸದಸ್ಯರ ಹಿತರಕ್ಷಣಾ ಸಂಘದ ಅಧ್ಯಕ್ಷ ರವೀಂದ್ರ ಬೆಲೆಯೂರು ಸಿಐಡಿ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ‘1995-2000ದ ಅವಧಿಯಲ್ಲಿ 9,000 ಜನರಿಂದ ₹ 70 ಕೋಟಿ ಸಂಗ್ರಹಿಸಿ ವಂಚಿಸಿರುವ ಆರೋಪ ಮೆಗಾಸಿಟಿ ಡೆವಲಪರ್ಸ್ ಮೇಲಿದೆ. 25 ವರ್ಷಗಳಾದರೂ ವಂಚನೆಗೊಳಗಾದ ಗ್ರಾಹಕರಿಗೆ ನ್ಯಾಯ ದೊರಕಿಲ್ಲ. ಕೇಂದ್ರ …
Read More »ಮಹಾರಾಷ್ಟ್ರದಿಂದ ಕಳ್ಳ ಮಾರ್ಗವಾಗಿ ಬೆಳಗಾವಿ ಜಿಲ್ಲೆಗೆ ಸಂಚಾರ ಮಾಡುತ್ತಿದ್ದ ರಸ್ತೆಯನ್ನ ಬಂದ್ ಮಾಡಿಸಿದ ಜಿಲ್ಲಾಡಳಿತ
ಬೆಳಗಾವಿ ಜಿಲ್ಲಾಡಳಿತ ಮಹಾರಾಷ್ಟ್ರದಿಂದ ಕಳ್ಳ ಮಾರ್ಗವಾಗಿ ಬೆಳಗಾವಿ ಜಿಲ್ಲೆಗೆ ಸಂಚಾರ ಮಾಡುತ್ತಿದ್ದ ರಸ್ತೆಯನ್ನ ಬಂದ್ ಮಾಡಿಸಿದೆ. ಮಹಾರಾಷ್ಟ್ರದ ನಾಗನೂರು ಹಾಗೂ ಕರ್ನಾಟಕ ರಾಜ್ಯದ ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಕಳ್ಳ ಮಾರ್ಗವನ್ನ ಪೊಲೀಸರು ಗುಂಡಿ ತೋಡುವುದರ ಮೂಲಕ ಬಂದ್ ಮಾಡಿಸಿದ್ದಾರೆ. ಆರ್‌ಟಿಪಿಸಿಆರ್ ವರದಿ ನೆಗೆಟಿವ್ ಇದ್ದರೆ ಮಾತ್ರ ರಾಜ್ಯ ಪ್ರವೇಶ ಹಿನ್ನೆಲೆಯಲ್ಲಿ ಕಳ್ಳ ಮಾರ್ಗದ ಮೂಲಕ ಜನ ಸಂಚಾರ ಮಾಡುತ್ತಿದ್ದರು. ಕೊರೊನಾ ವರದಿ ಇಲ್ಲದೇ ಜನ ಸಂಚಾರ …
Read More »ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದ ಸಿಎಂ B.S.Y.
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಡಾಲರ್ಸ್ ಕಾಲೋನಿಯ ಧವಳಗಿರಿಯ ಮನೆ ನವೀಕರಣ ಹಿನ್ನೆಲೆ ಇಂದು ಮನೆ ನೋಡಲು ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಲಾಕ್‍ಡೌನ್ ಬಗ್ಗೆ ಕೇಳಿದ ಪ್ರಶ್ನೆಗೆ, ಕೊರೊನಾ ನಿಯಂತ್ರಣವಾಗದ ಹಿನ್ನೆಲೆಯಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದು ಉತ್ತರಿಸಿದರು. ಹಳ್ಳಿಗಳಲ್ಲಿ ಇನ್ನೂ ಕೊರೊನಾ ಕಡಿಮೆ ಆಗಿಲ್ಲ. ಲಾಕ್‍ಡೌನ್‍ನಲ್ಲಿ ಏನು ಮಾಡಬೇಕು ಎನ್ನುವುದರ ಬಗ್ಗೆ ಇಂದು ಸಂಜೆ ತೀರ್ಮಾನ ಮಾಡುತ್ತೇವೆ. ಕೈಗಾರಿಕೆಗಳ …
Read More »