Breaking News

Yearly Archives: 2021

ಇಂದು ಸಹ ಏರಿಕೆ ಕಂಡು ಗರಿಷ್ಠ ಮಟ್ಟದಲ್ಲಿರುವ ಪೆಟ್ರೋಲ್​, ಡೀಸೆಲ್​ ದರ! ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು?

ದೆಹಲಿ: ಇಂದೂ ಸಹ (ಜೂನ್ 4) ಪೆಟ್ರೋಲ್ ​ಮತ್ತು ಡೀಸೆಲ್ ಬೆಲೆ​ ಏರಿಕೆ ಕಂಡಿದೆ. ಜೂನ್​ ತಿಂಗಳ ಪ್ರಾರಂಭದಿಂದ ಇಲ್ಲಿಯವರೆಗೆ 2ನೇ ಬಾರಿ ತೈಲ ದರ ಹೆಚ್ಚಳವಾಗಿದ್ದು, ಇಂದು ಲೀಟರ್​ ಪೆಟ್ರೋಲ್​ ದರದಲ್ಲಿ 27 ಪೈಸೆ ಹಾಗೂ ಲೀಟರ್​ ಡೀಸೆಲ್​ ದರದಲ್ಲಿ 28 ಪೈಸೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 94.49 ರೂಪಾಯಿಂದ 94.76 ರೂಪಾಯಿಗೆ ಏರಿಕೆ ಆಗಿದೆ. ಹಾಗೆಯೇ ಒಂದು …

Read More »

ಮುಂಗಾರು ಹಂಗಾಮು-ಗರಿಗೆದರಿದ ಕೃಷಿ ಚಟುವಟಿಕೆ : ಬಿತ್ತನೆ ಬೀಜ-ರಸಗೊಬ್ಬರಕ್ಕಿಲ್ಲ ಕೊರತೆ

ಗದಗ: ಸತತ ಐದು ವರ್ಷಗಳಿಂದ ಅನಾವೃಷ್ಟಿ, ಅತಿವೃಷ್ಟಿಯಿಂದ ರೈತಾಪಿ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಈ ಬಾರಿ ಮುಂಗಾರು ಪೂರ್ವದಲ್ಲೇ ಮಳೆ ಚುರುಕುಗೊಂಡಿದೆ. ಹೊಸ ಭರವಸೆಯೊಂದಿಗೆ ರೈತರು ಮತ್ತೆ ಜಮೀನುಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರು ಬಿತ್ತನೆಗೆ ಸಜ್ಜುಗೊಳ್ಳುತ್ತಿದ್ದಾರೆ. ಸತತ 5 ವರ್ಷಗಳಿಂದ ಜಿಲ್ಲೆಯ ರೈತರು ಒಂದಿಲ್ಲೊಂದು ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. 2018ರ ವರೆಗೂ ಜಿಲ್ಲೆಯನ್ನು ಬರಗಾಲ ಆವರಿಸಿದ್ದರೆ, 2019 ಮತ್ತು 2020 ರಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ …

Read More »

ಹಾಲು ಸಂಗ್ರಹ 89 ಲಕ್ಷ ಲೀಟರ್‌ಗೆ ಏರಿಕೆ

ಬೆಂಗಳೂರು: ಲಾಕ್‌ಡೌನ್ ನಡುವೆ ಹಾಲು ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೆಎಂಎಫ್‌ (ಕರ್ನಾಟಕ ಹಾಲು ಮಹಾಮಂಡಳ) ದಿನಕ್ಕೆ ಸಂಗ್ರಹಿಸುತ್ತಿರುವ ಒಟ್ಟು ಹಾಲಿನ ಪ್ರಮಾಣ 89 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಮೇ ಮೊದಲ ವಾರದಲ್ಲಿ 70 ಲಕ್ಷ ಲೀಟರ್ ಹಾಲನ್ನು ಒಕ್ಕೂಟಗಳಿಗೆ ರೈತರು ಪೂರೈಸುತ್ತಿದ್ದರು. ಒಂದೇ ವಾರದಲ್ಲಿ ಅದರ ಪ್ರಮಾಣ 82 ಲಕ್ಷ ಲೀಟರ್‌ಗೆ ಏರಿಕೆಯಾಗಿತ್ತು. ಈಗ 89 ಲಕ್ಷ ಲೀಟರ್‌ಗೆ ಮುಟ್ಟಿದೆ. ಜೂನ್ ಮತ್ತು ಜುಲೈನಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ …

Read More »

ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ಯಾಕೇಜ್ ಘೋಷಣೆ: ಶಶಿಕಲಾ ಜೊಲ್ಲೆಯವರಿಂದ ಸಿಎಂಗೆ ಅಭಿನಂದನೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮುಂಚೂಣಿ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 2000 ರೂ. ನೆರವು ಘೋಷಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆ ಸಚಿವೆಯಾಗಿರುವ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು …

Read More »

ಬಿಜೆಪಿ ಸರ್ಕಾರ, ಪಕ್ಷದಲ್ಲಿ ಭಾರೀ ಬದಲಾವಣೆ.? ಕುತೂಹಲ ಮೂಡಿಸಿದ ವಿಜಯೇಂದ್ರ ವರಿಷ್ಠರ ಭೇಟಿ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಂತರ ಅನೇಕ ಬೆಳವಣಿಗೆ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮಾಲೋಚನೆ ನಡೆಸಿದ್ದಾರೆ. ಇವರ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಜೆ.ಪಿ. ನಡ್ಡಾ ಅವರೊಂದಿಗೆ ಸುಮಾರು 20 ನಿಮಿಷ ಕಾಲ ವಿಜಯೇಂದ್ರ ಮಾತುಕತೆ ನಡೆಸಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತಂತೆ ಚರ್ಚೆ …

Read More »

ಸಂಪುಟ ಪುನಾರಚನೆ ಆಗುತ್ತಾ? ನಾಯಕತ್ವ ಬದಲಾವಣೆ ಇದೆಯಾ?

ಬೆಂಗಳೂರು: ರಾಜ್ಯದಲ್ಲಿ ಕರೊನಾ ಹಾವಳಿ ನಡುವೆಯೇ ರಾಜಕೀಯ ವಿಚಾರವೂ ಗರಿಗೆದರಿದ್ದು, ಸಂಪುಟ ಪುನಾರಚನೆ ಮತ್ತು ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ತುಂಬಾ ಮಾತುಗಳು ಕೇಳಿ ಬರುತ್ತಿವೆ. ಇವೆಲ್ಲದಕ್ಕೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಸ್ಪಷ್ಟನೆ ನೀಡಿದ್ದಾರೆ. ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆ ಎರಡೂ ಊಹಾಪೋಹ ಎಂಬ ಸ್ಪಷ್ಟನೆ ನೀಡಿದ್ದಾರೆ. ಮಾತ್ರವಲ್ಲ, ಆ ಥರದ …

Read More »

ರಮೇಶ ಜಾರಕಿಹೊಳಿಗೆ ಪರಬಾಲಚಂದ್ರ ಜಾರಕಿಹೊಳಿಭರ್ಜರಿ ಬ್ಯಾಟಿಂಗ್ ಮತ್ತೆ B.S.Y. ಸಂಪುಟ ಸರ್ತಾರಾ ರಮೇಶ್ ಜಾರಕಿಹೊಳಿ…?

ಬೆಳಗಾವಿ; ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜತೆಗೆ ಸಿಡಿ ಪ್ರಕರಣ ಬಹಿರಂಗದಿಂದ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ತಂದಿಟ್ಟಿದ್ದರು. ಸಿಡಿ ಪ್ರಕರಣ ತನಿಖೆಯನ್ನು ಎಸ್ ಐಟಿ ತಂಡ ನಡೆಸುತ್ತಿದೆ. ಇತ್ತೀಚೆಗೆ ಪೊಲೀಸರ ವಿಚಾರಣೆ ವೇಳೆ ಸಿಡಿಯಲ್ಲಿ ಕಾಣಿಸಿಕೊಂಡಿ ರುವುದು ನಾನೇ, ಅದು ತಮ್ಮತಿ ಸೆಕ್ಸ್​ ಎಂದು ಒಪ್ಪಿಕೊಂಡಿದ್ದ ರಮೇಶ್ ಜಾರಕಿಹೊಳಿ, ಇದೀಗ ಮತ್ತೆ ಸಿಎಂ ಬಿ …

Read More »

ಇಂದು ಕೊರೋನಾ ರಣಕೇಕೆ: 839 ಹೊಸ ಪ್ರಕರಣ, 10 ಸಾವು

ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಅಟ್ಟಹಾಸ ಮೆರೆದಿದೆ. ಇಂದು ಒಂದೇ ದಿನ ಹೊಸದಾಗಿ 839 ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 10 ಸೋಂಕಿತರು ಬಲಿಯಾಗಿದ್ದಾರೆ.   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 839 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 68,621 ಕ್ಕೆ ಏರಿಕೆಯಾಗಿದೆ. ಅಥಣಿ ತಾಲೂಕಿನಲ್ಲಿ 39, ಬೆಳಗಾವಿಯಲ್ಲಿ 291, …

Read More »

ಸಂಪೂರ್ಣ ಲಾಕ್ ಡೌನ್ ಅನಗತ್ಯ ಹೊರಗಡೆ ಬಂದ್ರೆ ಲಾಠಿ ಬಿಸಿ

ಗೋಕಾಕ: ಕೊರೋನಾ ಚೈನ್ ಬ್ರೇಕ್ ಮಾಡಲು ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ವಾರದ ಕೊನೆಯ ಮೂರು,ದಿನ,ಶುಕ್ರವಾರದಿಂದ,ಸೋಮವಾರಮುಂಜಾನೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು, ಇಂತಹ ಸಂದರ್ಭದಲ್ಲಿ ಯಾರು ಕೂಡಾ ಮನೆಯಿಂದ ಹೊರಗಡೆ ಬಾರದೆ ಸಹಕರಿಸುವಂತೆ ಗೋಕಾಕ ನಗರ ಠಾಣೆ ಪಿಎಸ್‌ಐ ಕೆ ವಾಲಿಕಾರ ಇವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.   ಇನ್ನು ಕೊರೋನಾ ಸೋಂಕು ಹರಡದಂತೆ ಬೆಳಗಾವಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು,ಕೊರೋನಾ ನಿಯಂತ್ರಿಸಲು ಪೊಲೀಸರು ಸಾಕಷ್ಟು …

Read More »

ಮೂಡಲಗಿಗೆ ಶೀಘ್ರ ಅಗ್ನಿಶಾಮಕ ಠಾಣೆ ಮಂಜೂರು : ಶಾಸಕ-ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ : ಮೂಡಲಗಿಯಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಯನ್ನು ಮಂಜೂರಾತಿ ಪಡೆಯಲು ಇಷ್ಟರಲ್ಲಿಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗುವುದು ಎಂದು ಶಾಸಕ ಹಾಗೂ ಕಹಾಮ ಅಧ್ಯಕ್ಷರು ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದ್ದಾರೆ. ಕಳೆದ ಮಂಗಳವಾರದಂದು ಅಗ್ನಿಶಾಮಕ ಇಲಾಖೆಯೂ ಹೊರಡಿಸಿದ ನೂತನವಾಗಿ ರಚನೆಯಾಗಿರುವ ಅಗ್ನಿಶಾಮಕ ಠಾಣೆಯ ಪಟ್ಟಿಯಲ್ಲಿ ಮೂಡಲಗಿಯನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಮೂಡಲಗಿಯಲ್ಲಿ ಅತಿ ಶೀಘ್ರವೇ ಅಗ್ನಿಶಾಮಕ ಠಾಣೆಯ ಮಂಜೂರಾತಿ …

Read More »