Breaking News

Yearly Archives: 2021

ಟೀಂ ಇಂಡಿಯಾ ಕಟ್ಟಿದ್ದು ‘ದಾದ’ ಅಲ್ಲ, ದ್ರಾವಿಡ್: ಕುತೂಹಲ ಕೆರಳಿಸಿದ ರೈನಾ ಮಾತು

ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರ ಸುರೇಶ್ ರೈನಾ ತಮ್ಮ ಆತ್ಮಕತೆ ‘ಬಿಲೀವ್’ ಪುಸ್ತಕದಲ್ಲಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಟೀಂ ಇಂಡಿಯಾ ಕಟ್ಟಿದ್ದು, ಸೌರವ್ ಗಂಗೂಲಿ, ಧೋನಿ ಅಲ್ಲ, ಬದಲಾಗಿ ರಾಹುಲ್ ದ್ರಾವಿಡ್ ಎನ್ನುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ‘ದಾದ’ ಒಬ್ಬರೇ ತಂಡ ಕಟ್ಟಿದರು ಎಂದು ನಾನೆಲ್ಲಿಯೂ ಹೇಳಿಕೊಂಡಿಲ್ಲ ಎಂದ ರೈನಾ ದ್ರಾವಿಡ್ ಬಗ್ಗೆ ವಿಶೇಷವಾಗಿ ಹೊಗಳಿದ್ದಾರೆ. ‘ರಾಹುಲ್ ನಮಗೆ ಕುಟುಂಬ ಸದಸ್ಯರಂತಿದ್ದರು. ಕಿರಿಯ ಆಟಗಾರರಿಗಾಗಿ ಯಾವತ್ತೂ …

Read More »

ನಟ ಚೇತನ್ ವಿರುದ್ಧ ಕುಣಿಗಲ್ ಠಾಣೆಯಲ್ಲಿ ದೂರು ದಾಖಲು

ತುಮಕೂರು: ಬ್ರಾಹ್ಮಣ ಸಮುದಾಯದ ವಿರುದ್ದ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ನಟ ಚೇತನ್ ವಿರುದ್ದ ಕುಣಿಗಲ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಚೇತನ್ ಹೇಳಿಕೆಯಿಂದ ಬ್ರಾಹ್ಮಣ ಸಮುದಾಯದ ಗೌರವಕ್ಕೆ ಧಕ್ಕೆ ಉಂಟಾಗಿದೆ. ಅವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನ ಮಾಡಿದ್ದಾರೆ ಎಂದು ಶ್ರೀರಾಮ ಸೇವಾ ಮಂಡಳಿ ಹಾಗೂ ಬ್ರಾಹ್ಮಣ ಸಂಘ ದೂರು ನೀಡಿದೆ. ಕೂಡಲೆ ನಟ ಚೇತನ್ ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.     ಅಂದ್ಹಾಗೆ …

Read More »

5 ಲಕ್ಷ ಲಂಚ ಸ್ವೀಕರಿಸಿದ್ದ ಏಎಸ್‌ಐ ಮನೆ ಮೇಲೆ ಏಸಿಬಿ ದಾಳಿ

ಬೆಂಗಳೂರು : ಲಂಚದ ಪಡೆದ ಆರೋಪದಡಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ದಯಾನಂದ ಸ್ವಾಮಿ ಅಮಾನತುಗೊಂಡ ಬೆನ್ನಲೇ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿರುವ ಮನೆ ಮೇಲೆ 15 ಮಂದಿ ಅಧಿಕಾರಿಗಳ ತಂಡವು ದಾಳಿ ನಡೆಸಿದೆ‌. ಮನೆಯಲ್ಲಿ ದೊರೆತ ದಾಖಲಾತಿ ಪತ್ರಗಳನ್ನು ಪರಿಶೀಲಿಸುತ್ತಿದೆ. ಚರಾಸ್ತಿ ಹಾಗೂ ಸಿರಾಸ್ತಿ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಸುಮಾರು 6 ಕೋಟಿ ರೂ. …

Read More »

ಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಶೇ.3.05ಕ್ಕೆ ಇಳಿಕೆ

ಬೆಂಗಳೂರು: ಕೊರೊನಾದಿಂದ ಸಂಕಷ್ಟದಿಂದ ಸಿಲುಕಿದ್ದ ಬೆಂಗಳೂರಿಗರಿಗೆ ಸಿಹಿ ಸುದ್ದಿ ಮಧ್ಯೆ ಆತಂಕ ಸುದ್ದಿ ಎದುರಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಕಡಿಮೆ ಆಗಿದೆ. ಆದರೆ ಪಾಸಿಟಿವಿಟಿ ಪ್ರಮಾಣದಲ್ಲಿ ಏರಿಳಿಕೆ ಆಗ್ತಿದೆ. 5% ಒಳಗಡೆಯೇ ಏರಿಳಿಕೆ ಆಗ್ತಿದೆ. ನಿನ್ನೆ ಬೆಂಗಳೂರಿನಲ್ಲಿ 3.05% ಗೆ ಪಾಸಿಟಿವಿಟಿ ರೇಟ್ ಇಳಿಕೆಯಾಗಿದೆ. ಕಳೆದ 10 ದಿನಗಳಿಂದ ಪಾಸಿಟಿವಿಟಿ ರೇಟ್ ಒಂದೊಂದೆ ಪರ್ಸೆಂಟ್ ಇಳಿಕೆಯಾಗುತ್ತಿದೆ. ಇಂದು ಕೂಡ ಬೆಂಗಳೂರಿನಲ್ಲಿ ಕಡಿಮೆ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ …

Read More »

ಬಿಎಸ್ ವೈ, ವಿಜಯೇಂದ್ರ ಸೇರಿ 6 ಜನರ ವಿರುದ್ಧ EDಗೆ ದೂರು: ಏನಿದು ಕೋಟಿ ಹಣ -ವಾಟ್ಸಪ್ ವಿವಾದ?

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಪಕ್ಷದೊಳಗಿನ ಬಿಕ್ಕಟ್ಟು, ಕೋವಿಡ್ ನಿರ್ವಹಣೆ ನಡುವೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ, ಅಧಿಕಾರು ದುರುಪಯೋಗ ಆರೋಪಕ್ಕೆ ಸಂಬಂಧಿಸಿ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಸೇರಿ ಆರು ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಗೆ ದೂರು ನೀಡಲಾಗಿದೆ. ಟಿ.ಜೆ.ಅಬ್ರಾಹಂ ಎನ್ನುವವರು ದೂರು ನೀಡಿದ್ದು, ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ಅಡಿಯಲ್ಲಿ ದೂರು ದಾಖಲಿಸಿಕೊಳ್ಳುವಂತೆ ಮನವಿ …

Read More »

ದೆಹಲಿ ಕೋಮು ಗಲಭೆ: ಜೆಎನ್‌ಯು, ಜಾಮಿಯಾ ವಿದ್ಯಾರ್ಥಿಗಳಿಗೆ ದೆಹಲಿ ಹೈಕೋರ್ಟ್‌ ಜಾಮೀನು

ನವದೆಹಲಿ: ಕಳೆದ ವರ್ಷದ ಫೆಬ್ರುವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಮತ್ತು ದೇವಂಗನಾ ಕಲಿತಾ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಲಯದ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ. ಈ ಮೂವರು ವಿದ್ಯಾರ್ಥಿಗಳನ್ನು ಕಳೆದ ವರ್ಷ ಮೇ ತಿಂಗಳಲ್ಲಿ ‘ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ’ ಅಡಿ ಪೊಲೀಸರು ಬಂಧಿಸಿದ್ದರು. …

Read More »

ಮನೆ ಅಂದ್ಮೇಲೆ ಜಗಳ, ವೈಮನಸ್ಸು ಇರುತ್ತದೆ: ಶಶಿಕಲಾ ಜೊಲ್ಲೆ

ಹಾವೇರಿ: ರಾಜ್ಯದಲ್ಲಿ ಯಡಿಯೂರಪ್ಪ ಅವರೆ ಸಿಎಂ ಆಗಿ ಮುಂದುವರೆಯುತ್ತಾರೆ. ಕೋವಿಡ್ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆ ಕೂಡ ಯಡಿಯೂರಪ್ಪ ನೇತೃತ್ವದಲ್ಲಿ  ನಡೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದೆಯೂ ನಮ್ಮ ಸರ್ಕಾರವೆ ಅಧಿಕಾರಕ್ಕೆ ಬರುತ್ತದೆ. ಮನೆ ಅಂದ್ಮೇಲೆ ಜಗಳ, ವೈಮನಸ್ಸು ಇರುತ್ತವೆ. ಅದರಂತೆ ಪಕ್ಷದಲ್ಲಿ ಏನಾದರೂ ಆಗಿರಬಹುದು. ಪಕ್ಷದ ಹಿರಿಯರು ಅವುಗಳನ್ನ …

Read More »

ಬೆಳಗಾವಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಯುವಕರ ಗುಂಪು….

ಬೆಳಗಾವಿ- ನಿನ್ನೆ ರಾತ್ರಿ ಹೊತ್ತು,ಅಟೋ ರಿಕ್ಷಾದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ಯುವಕರಿಗೆ ಮನೆಗೆ ಹೋಗುವಂತೆ ಸೂಚಿಸಿದ ಪೋಲೀಸ್ ಪೇದೆಗಳ ಮೇಲೆ ಯುವಕರ ಗುಂಪೊಂದು ದಾಳಿ ಮಾಡಿದ ಘಟನೆ ಬೆಳಗಾವಿ ದರ್ಬಾರ್ ಗಲ್ಲಿಯಲ್ಲಿ ನಡೆದಿದೆ. ಪೋಲೀಸರು ಬರುತ್ತಿದ್ದಂತೆಯೇ ರಿಕ್ಷಾದಲ್ಲಿದ್ದ ಕೆಲವು ಯುವಕರು ಮನೆಗೆ ಹೋಗಿದ್ದಾರೆ,ಆದ್ರೆ ಇಬ್ಬರು ಯುವಕರು ಪೋಲೀಸರ ಜೊತೆ ವಾದಕ್ಕಿಳಿದು,ಪೋಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇಬ್ಬರು ಯುವಕರು ಪೋಲೀಸರ ಜೊತೆ ವಾದ ಶುರು ಮಾಡುತ್ತಿದ್ದಂತೆಯೇ,ಅಲ್ಲಿ ಯುವಕರ ಗುಂಪು ಜಮಾವಣೆಯಾಗಿದೆ.ಎಲ್ಲರೂ ಸೇರಿ …

Read More »

ಇಂಧನ ಟ್ಯಾಂಕರ್ ಓಡಿಸುವ ಮಲಯಾಳಿ ಹುಡುಗಿ: ಭೇಷ್ ಎನ್ನುತ್ತಿರುವ ನೆಟ್ಟಿಗರು

ಕಳೆದ ಮೂರು ವರ್ಷಗಳಿಂದ ನಾನು ಟ್ಯಾಂಕರ್ ಲಾರಿಯನ್ನು ಓಡಿಸುತ್ತಿರುವುದನ್ನು ಯಾರೂ ನೋಡಿಲ್ಲ ಎಂಬುದನ್ನು ನನಗೆ ನಂಬಲಿಕ್ಕೇ ಆಗುವುದಿಲ್ಲ’ ಎಂದು ನಗುತ್ತಾಳೆ ಡೆಲಿಶಾ ಡೇವಿಸ್. ಕೇರಳದ ತ್ರಿಶೂರ್ ಜಿಲ್ಲೆಯ ಕಂದಸಂಕದವು ಎಂಬಲ್ಲಿನ 23 ವರ್ಷ ವಯಸ್ಸಿನ ಯುವತಿ, ಕೆಲವು ವಾರಗಳ ಹಿಂದೆ ಎರ್ನಾಕುಲಂನ ಇರುಂಪನಮ್‍ನ ಹಿಂದುಸ್ಥಾನ್ ಪೆಟ್ರೋಲಿಯಂ ಎಲ್‍ಪಿಜಿ ಪ್ಲಾಂಟ್‍ನಿಂದ ಮಲಪ್ಪುರಂ ಜಿಲ್ಲೆಯ ತಿರೂರ್‌ಗೆ ಟ್ಯಾಂಕರ್ ಓಡಿಸುವ ಮೂಲಕ ಸುದ್ದಿ ಮಾಡಿದ್ದರು.   ‘ಸಾಮಾನ್ಯವಾಗಿ, ಡೀಸೆಲ್ ಅಥವಾ ಪೆಟ್ರೋಲ್ ತೆಗೆದುಕೊಂಡು ಹೋಗುವ …

Read More »

ರವೀಂದ್ರ ಕಲಾಕ್ಷೇತ್ರಕ್ಕೆ ಬಂದ ವಿಜಯ್​ ಪಾರ್ಥಿವ ಶರೀರ, ಸ್ನೇಹಿತನ ತೋಟದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ​ ನಟ ಸಂಚಾರಿ ವಿಜಯ್​ ಅವರು ಮಂಗಳವಾರ ಮುಂಜಾನೆ 3.34ಕ್ಕೆ ಬನ್ನೇರುಘಟ್ಟ ರಸ್ತೆಯ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. ಬೆಳಗ್ಗೆ 8ಕ್ಕೆ ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ವಿಜಯ್​ ಅವರ ಪಾರ್ಥಿವ ಶರೀರವನ್ನು ತರಲಾಗಿದ್ದು, ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಇಂದು ಬೆಳಗ್ಗೆ 10.30ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್​ರ ಅಂತಿಮ ದರ್ಶನಕ್ಕೆ ಸರ್ಕಾರದ ಕಡೆಯಿಂದಲೇ ವ್ಯವಸ್ಥೆ ಮಾಡಲಾಗಿದ್ದು, ನಂತರ ಹುಟ್ಟೂರು ಚಿಕ್ಕಮಗಳೂರಿನ ಕಡೂರು …

Read More »