Breaking News

Yearly Archives: 2021

ತಮ್ಮನ ಸ್ಕೂಟರ್ ರಗಳೆ ಕೇಳಲಾಗದೆ ಅಣ್ಣ ಮಾಡಿದ ಕೆಲಸಕ್ಕೆ ಪೂರ್ತಿ ದೇಶದ ಮೆಚ್ಚುಗೆ

ವಡೋದರಾ: ಈಗಿನ ಮಕ್ಕಳು ಹೈ ಸ್ಕೂಲ್ ಮೆಟ್ಟಿಲು ಹತ್ತಿದಾಕ್ಷಣ ಬೈಕ್ ಅಥವಾ ಸ್ಕೂಟರ್ ಬೇಕು ಎಂದು ಹಠ ಹಿಡಿದು ಬಿಡುತ್ತಾರೆ. ಅದೇ ರೀತಿ ಹಠ ಹಿಡಿದ ತಮ್ಮನ ಸಮಾಧಾನ ಮಾಡಲೆಂದು ಅಣ್ಣ ಮಾಡಿದ ಕೆಲಸ ಇದೀಗ ಪೂರ್ತಿ ದೇಶದಲ್ಲೇ ಸುದ್ದಿಯಾಗುವಂತಾಗಿದೆ. ಗುಜರಾತ್​ನ ವಡೋದರ ಮೂಲಕ ವಿವೇಕ್ (25)ನ ತಮ್ಮ ಎಸ್​ಎಸ್​ಎಲ್​ಸಿ ಓದುತ್ತಿದ್ದನಂತೆ. ಲಾಕ್​ಡೌನ್ ಸಮಯದಲ್ಲಿ ಕೆಲಸವೂ ಸಿಗದೆ ವಿವೇಕ್ ಮನೆಯಲ್ಲೇ ಕುಳತಿದ್ದ. ಆ ವೇಳೆ ಆತನ ತಮ್ಮ ಟ್ಯೂಷನ್​ಗೆ ಹೋಗಿ …

Read More »

ಉಡುಪಿ: ಬಾಗಲಕೋಟೆ ಮೂಲದ ದಂಪತಿಗಳ ಮಗು ಅಪಹರಣ

ಉಡುಪಿ:ಇಲ್ಲಿನ ಕರಾವಳಿ ಬೈಪಾಸ್ ಬಳಿಯ ಶೆಡ್‌ನಲ್ಲಿ ವಾಸಿಸುತ್ತಿರುವ ಬಾಗಲಕೋಟೆ ಮೂಲದ ದಂಪತಿಯ ಮಗುವನ್ನು ಅಪರಿಚಿತರು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ದಂಪತಿಗಳು, ಭಾರತಿ ಮತ್ತು ಅರುಣ್ ಮತ್ತು ಅವರ ಮಗ ಶಿವರಾಜ್ (2.4 ವರ್ಷ) ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲ್ಲೂಕಿನವರು.ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ವಲಸೆ ಕಾರ್ಮಿಕರಾದ ದಂಪತಿಗಳು ಕರಾವಳಿ ಬೈಪಾಸ್ ಬಳಿಯ ಶೆಡ್‌ನಲ್ಲಿ ವಾಸಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯವನೆಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ಇತ್ತೀಚೆಗೆ ದಂಪತಿಗಳಿಗೆ ಪರಿಚಯವಾಗಿದ್ದರು.ಭಾನುವಾರ ಬೆಳಿಗ್ಗೆ, ಅವರು ಚಹಾ ಅಂಗಡಿಗೆ ಕರೆದೊಯ್ಯುತ್ತೇನೆ ಎಂದು …

Read More »

ತಮಿಳು ನಾಮ ಫ‌ಲಕಕ್ಕೆ ಮಸಿ ಬಳಿದು ವಾಟಾಳ್‌ ಪ್ರತಿಭಟನೆ

ಕೆಜಿಎಫ್: ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನನೀಡಬೇಕು ಎಂದು ಆಗ್ರಹಿಸಿ ನಗರದ ಕುವೆಂಪುಬಸ್‌ ನಿಲ್ದಾಣದಲ್ಲಿ ಬರೆಯಲಾಗಿದ್ದ ತಮಿಳುನಾಮಫ‌ಲಕಕ್ಕೆ ಮಸಿ ಬಳಿಯುವ ಮೂಲಕ ಕನ್ನಡಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ನಾಗರಾಜ್‌ಪ್ರತಿಭಟಿಸಿದರು. ಪೂರ್ವಾನುಮತಿ ಇಲ್ಲದೆ ಪ್ರತಿಭಟನೆನಡೆಸಿದ್ದರಿಂದ ವಾಟಾಳ್‌ ನಾಗರಾಜ್‌ ಹಾಗೂಬೆಂಬಲಿಗರನ್ನು ಪೊಲೀಸರು ಬಂಧಿಸಿ ಬೆಮೆಲ್‌ಠಾಣೆಯಲ್ಲಿ ಬಿಡುಗಡೆಗೊಳಿಸಿದರು. ನಗರದಲ್ಲಿರುವಬಸ್‌ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ತಮಿಳುನಾಮಫ‌ಲಕ ಹಾಕಲಾಗಿದೆ ಎಂದು ಕ®ಡ ‌° ಪರಸಂಘಟನೆಗಳ ಮುಖಂಡರು, ವಾಟಾಳ್‌ ನಾಗರಾಜ್‌ಗೆ ತಿಳಿಸಿದ್ದರು. ಈ ಹಿ®ಲೆ ೆ° ಯಲ್ಲಿ ವಾಟಾಳ್‌ …

Read More »

ಬುಧವಾರ ಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಜಿಲ್ಲೆಯ ರೈತರೊಬ್ಬರ ಶವ ಪತ್ತೆ

ವಿಜಯಪುರ : ಬುಧವಾರ ಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಜಿಲ್ಲೆಯ ರೈತರೊಬ್ಬರ ಶವ ಪತ್ತೆಯಾಗಿದೆ. ಆಲಮೇಲ ತಾಲೂಕಿನ ಕುರಬತಹಳ್ಳಿ ಗ್ರಾಮದ ಬಸಣ್ಣ ಅಂಬಾಗೋಳ (55) ಕರಬತಹಳ್ಳಿ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕರಬತಹಳ್ಳಿ ಹಳ್ಳ ತುಂಬಿಬಂದಿತ್ತು. ಹಳ್ಳದ ಪ್ರವಾಹ ಲೆಕ್ಕಿಸದೇ ಮನೆಗೆ ಮರಳಲು ಹಳ್ಳಕ್ಕೆ ಇಳಿದಾಗ ನೀರಿನ ಸೆಳವಿಗೆ ಸಿಕ್ಕು ರೈತ ಕೊಚ್ಚಿಕೊಂಡು ಹೋಗಿದ್ದರು. ವಿಷಯ ತಿಳಿಯುತ್ತಲೇ ಬುಧವಾರ ದಿಂದಲೇ ಕೊಚ್ಚಿಕೊಂಡು ಹೋಗಿದ್ದ ರೈತನಿಗಾಗಿ ತಾಲೂಕ ಆಡಳಿತದ ನೇತೃತ್ವದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ …

Read More »

ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿರಾಯ

ಧಾರವಾಡ: ಶೂರ್ಪನಖಿಯ ಮೂಗನ್ನು ಲಕ್ಷ್ಮಣನು ಖಡ್ಗದಿಂದ ಕತ್ತರಿಸಿದರೆ, ಆಧುನಿಕ ಯುಗದಲ್ಲಿ ಬಾಯಿಂದಲೇ ಪತ್ನಿಯ ಮೂಗು ಕತ್ತರಿಸಿದ ಪತಿರಾಯ. ರಾಮ-ಲಕ್ಷ್ಮಣರನ್ನು ಮೋಹಿಸಿ ಬಂದ ಶೂರ್ಪನಕಿ ಮೂಗನ್ನು ಲಕ್ಷ್ಮಣ ಖಡ್ಗದಿಂದ ಕತ್ತರಿಸಿದ ಪುರಾಣದ ಕಥೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಇಲ್ಲೊಬ್ಬ ಆಧುನಿಕ ಪತಿ ಬಾಯಿಯಿಂದಲೇ ತನ್ನ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸುವ ಮೂಲಕ ವಿಕೃತಿ ಮೆರೆದಿದ್ದಾನೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಉಮೇಶ ಗುಂಡಗುದರಿ ಹೆಂಡತಿ ಗೀತಾಳ ಮೂಗು ಕಚ್ಚಿದ ಪಾಪಿ …

Read More »

ಕುಡಿದ ಮತ್ತಿನಲ್ಲಿ ಕಾರು ಚಾಲಕನಿಂದ ಸರಣಿ ಅಪಘಾತ

ಚಿಕ್ಕಮಗಳೂರು : ಕುಡಿದ ಮತ್ತಿನಲ್ಲಿ ಕಾರು ಚಾಲಕನೋರ್ವ ಯದ್ವಾ ತದ್ವಾ ಕಾರು ಚಲಾಯಿಸಿ ಸರಣಿ ಅಪಘಾತ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೃಷ್ಣಾಪುರ ಬಳಿ ರವಿವಾರ ಸಂಭವಿಸಿದೆ. ವೋಕ್ಸ್ ವೆಗನ್ ಪೋಲೋ ಕಾರು ಚಾಲಕನೋರ್ವ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿದ ಪರಿಣಾಮ ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗದ ಚಕ್ರ ಕಳಚಿ ಬಿದ್ದಿದೆ ಈ ವೇಳೆ ಕಾರಿನ ಏರ್ ಬ್ಯಾಗ್ ಓಪನ್ ಆದ …

Read More »

ಆಧಾರ್ ನೋಂದಣಿ ಮತ್ತು ತಿದ್ದುಪಡಿಗೆ ಗ್ರಾಮ ಮಟ್ಟದಲ್ಲಿ ಕೇಂದ್ರ: ರಾಜ್ಯ ಸರ್ಕಾರದಿಂದ ತೀರ್ಮಾನ

ಗ್ರಾಮೀಣ ಪ್ರದೇಶದ ಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು, ಈ ಕುರಿತು ಈಗಾಗಲೇ ಆದೇಶ ಹೊರಬಿದ್ದಿದೆ. ಆಧಾರ್ ಬಹುತೇಕ ಎಲ್ಲ ಸೇವೆಗಳಿಗೆ ಅನಿವಾರ್ಯವಾಗಿದ್ದು, ಕೊರೊನಾ ಲಸಿಕೆ ಪಡೆಯಲು ಸಹ ಆಧಾರ್ ಸಂಖ್ಯೆ ಬೇಕಾಗುತ್ತದೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಕೆಲವರು ಇನ್ನೂ ಸಹ ಆಧಾರ್ ನೋಂದಣಿ ಮಾಡದ ಕಾರಣ ಅನಾನುಕೂಲವಾಗಿದೆ. ಆಧಾರ್ ನೋಂದಣಿ ಮಾಡಿಸಲು ಅಥವಾ ತಿದ್ದುಪಡಿಗಾಗಿ …

Read More »

ಬ್ಲಾಕ್ ಮೇಲ್ ಅಲ್ಲ, ವಂಚನೆ ಪ್ರಕರಣದ ರಹಸ್ಯ ಬಿಚ್ಚಿಟ್ಟ ನಟ ದರ್ಶನ್ ಹೇಳಿದ್ದೇನು ಗೊತ್ತಾ.?

ಮೈಸೂರು: ನಟ ದರ್ಶನ್ ಅವರ ಹೆಸರಲ್ಲಿ 25 ಕೋಟಿ ರೂಪಾಯಿ ಸಾಲ ಪಡೆಯಲು ಸ್ನೇಹಿತರು ಬ್ಯಾಂಕಿಗೆ ಅರ್ಜಿ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ದರ್ಶನ್ ಬಳಿ ಬಂದು ವಿಚಾರಣೆ ನಡೆಸಿದ್ದಾರೆ. ತಾನು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡ ಮಹಿಳೆ ದರ್ಶನ್ ಬಳಿ ನಿಮ್ಮ ಹೆಸರಿನಲ್ಲಿ 25 ಕೋಟಿ ರೂಪಾಯಿಗಳನ್ನು ಪಡೆಯಲು ಅರ್ಜಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ದರ್ಶನ್ ಲೋನ್ ಗಾಗಿ ಯಾವುದೇ ಅರ್ಜಿ ಹಾಕಿಲ್ಲ. ಅವರ ಸ್ನೇಹಿತರು ಕೂಡ ಅರ್ಜಿ …

Read More »

ಹೀರೋ ಘೋಷಣೆ ಮಾಡಿದ ಹೊಂಬಾಳೆ; ‘ರಿಚರ್ಡ್ ಆಂಟನಿ’ಯಾಗಿ ಬರ್ತಿದ್ದಾರೆ ಸಿಂಪಲ್ ಸ್ಟಾರ್

ಸ್ಯಾಂಡಲ್ ವುಡ್ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಮ್ಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಘೋಷಣೆ ಮಾಡುತ್ತಿದೆ. ಬಹುನಿರೀಕ್ಷೆಯ ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆಗೆ ಸಜ್ಜಾಗುತ್ತಿರುವ ಹೊಂಬಾಳೆ, ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ ನಲ್ಲಿ ‘ಸಲಾರ್’ ಸಿನಿಮಾವನ್ನು ನಿರ್ಮಾಣ ಮಾಡಿತ್ತಿದೆ. ಪುನೀತ್ ರಾಜ್ ಕುಮಾರ್ ಮತ್ತು ಪವನ್ ಕುಮಾರ್ ಜೋಡಿಯ ‘ದ್ವಿತ್ವ’ ಟೈಟಲ್ ಪೋಸ್ಟರ್ ಅನ್ನು ಇತ್ತೀಚಿಗಷ್ಟೆ ಪ್ರಕಟಿಸಿದೆ. ಇದರ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡುವ …

Read More »

ಹುಷಾರ್..! ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ಧರೆ ಬೆಂಗಳೂರಿನ ಪುಟ್ಟ ಮಕ್ಕಳು

ಬೆಂಗಳೂರು: ಕೊರೋನಾ ಮಹಾಮಾರಿಯು ಮಕ್ಕಳ ಮಾನಸಿಕತೆ ಮೇಲೆ ಪ್ರಭಾವ ಬೀರುತ್ತಿದೆ. ಕೊರೋನಾ ಎಂದರೆ ಭಯ ಬೀಳುವ ಸನ್ನಿವೇಶ ಎದುರಾಗುದೆ. ಬೆಂಗಳೂರು ನಗರದಲ್ಲಿನ ಮಕ್ಕಳಿಗೆ ಕೊರೋನಾ ಬಗೆಗಿನ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮೊದಲ ಅಲೆಯ ಸಂಧರ್ಭದಲ್ಲಿ ಕೊರೋನಾಗೆ ಹೆದರಿ ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ವರದಿಯಾಗಿದ್ದವು. ಎರಡನೇ ಅಲೆಯಲ್ಲೂ ಇಂಥ ಘಟನೆಗಳು ವರದಿಯಾಗಿವೆ‌. ಇದೀಗ ಮೂರನೇ ಅಲೆಯಲ್ಲಿ ಮಕ್ಕಳು ಇಂಥಾ ಮಾನಸಿಕ ಖಿನ್ನತೆಗೆ ಒಳಗಾಗ್ತಿರುವುದರ ಬಗ್ಗೆ ಮಕ್ಕಳ ರೋಗ …

Read More »