Breaking News

Yearly Archives: 2021

ಅಣ್ಣನ ಸಾವಿನ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ತಂಗಿ

ರಾಯಚೂರು: ಅಣ್ಣನ ಮೃತಪಟ್ಟ ಸುದ್ದಿ ಕೇಳುತ್ತಿದ್ದಂತೆ ಆಘಾತಕ್ಕೀಡಾಗಿ ತಂಗಿಯೂ ಸಾವನಪ್ಪಿದ ಮನಕಲಕುವ ಘಟನೆ ತಾಲೂಕಿನ ಹುಣಸಿಹಾಳಹುಡಾದಲ್ಲಿ ಮಂಗಳವಾರ ಜರುಗಿದೆ. ಹುಣಸಿಹಾಳಹುಡಾದ ನರಸಪ್ಪ ಹೀರಾ (65) ಅನಾರೋಗ್ಯದಿಂದ ನಗರದ ನವೀನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅಣ್ಣನ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ತಂಗಿ ಸಿದ್ದಮ್ಮ (50) ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಅಣ್ಣನ ಯೋಗಕ್ಷೇಮ ವಿಚಾರಿಸಲು ಸಿರವಾರದಿಂದ ಬಂದಿದ್ದರು. ಆಸ್ಪತ್ರೆಯಲ್ಲಿ ಅಣ್ಣ ಅಗಲಿದ್ದಾನೆಂಬ ಸುದ್ದಿ …

Read More »

ಅಪಾರ್ಟ್ಮೆಂಟ್​ನಲ್ಲಿ ಅಗ್ನಿ ದುರಂತ: ಸಿಲಿಂಡರ್ ಬಳಸುವಾಗ ಜನ ಮಾಡುವ ತಪ್ಪುಗಳೇನು..?

ಬೆಂಗಳೂರು: ಬೇಗೂರು ಠಾಣಾ ವ್ಯಾಪ್ತಿಯ ಅಶ್ರೀತ್ ಅಪಾರ್ಟ್‌ಮೆಂಟ್​ನಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ ಇಡೀ‌ ಸಿಲಿಕಾನ್ ಸಿಟಿ ಜನರನ್ನೇ ಶಾಕ್​ಗೆ ಒಳಗಾಗುವಂತೆ ಮಾಡಿದೆ. ನಿನ್ನೆ ಮಧ್ಯಾಹ್ನ ದೇವರ ಚಿಕ್ಕನಹಳ್ಳಿಯ ಅಶ್ರೀತ್ ಅಪಾರ್ಟ್‌ಮೆಂಟ್​ನ ಮೂರನೇ ಮಹಡಿಯಲ್ಲಿ ಸಂಭವಿಸಿರೋ ಫೈರ್ ಆಕ್ಸಿಡೆಂಟ್​ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.. ಲಕ್ಷ್ಮಿದೇವಿ ಅನ್ನೋ 82 ವರ್ಷದ ವೃದ್ಧೆ ಹಾಗೂ 51 ವರ್ಷದ ಭಾಗ್ಯ ರೇಖಾ ಅನ್ನೋ ಮಹಿಳೆ ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಭೀಕರ ದುರಂತಕ್ಕೆ ಕಾರಣವೇನು? ಅಪಾರ್ಟ್ಮೆಂಟ್​ನಲ್ಲಿ ಸೇಫ್ಟಿ ಮೆಸರ್ಸ್ ಇರಲಿಲ್ವಾ? …

Read More »

ಗೌರಿ ಲಂಕೇಶ್ ಹತ್ಯೆ, ಮೇಲ್ಮನವಿ ತೀರ್ಪು ಕಾಯ್ದಿರಿಕೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ್ದ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪಿಯ ವಿರುದ್ದ ಸಂಘಟಿತ ಅಪರಾಧ ಪ್ರಕರಣವನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಗೌರಿ ಸಹೋದರಿ ಕವಿತಾ ಲಂಕೇಶ್ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪನ್ನು ಮಂಗಳವಾರ ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (ಕೋಕಾ) 2000ರ ಅಡಿ ಆರೋಪಿ ಮೋಹನ್ ನಾಯಕ್ ವಿರುದ್ಧ ದಾಖಲಿಸಿದ್ದ ಆರೋಪಗಳನ್ನು ಕೈಬಿಟ್ಟಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕವಿತಾ ಲಂಕೇಶ್ ಸಲ್ಲಿಸಿದ್ದ ಮೇಲ್ಮನವಿಯ …

Read More »

ರಾಜ್ಯದಲ್ಲಿ 476 ಬಾರಿ ನಿಷೇಧಿತ ಸ್ಯಾಟಲೈಟ್ ಫೋನ್ ಗಳ ಬಳಕೆಯಾಗಿರುವುದು ಪತ್ತೆ

ಬೆಂಗಳೂರು: 2020ರಿಂದ ಈವರೆಗೂ ರಾಜ್ಯ ಪೊಲೀಸರು ಹಾಗೂ ಕೇಂದ್ರಿಯಾ ತನಿಖಾ ಸಂಸ್ಥೆಗಳಿಂದ ರಾಜ್ಯದಲ್ಲಿ 476 ಬಾರಿ ನಿಷೇಧಿತ ಸ್ಯಾಟಲೈಟ್ ಫೋನ್ ಗಳ ಬಳಕೆಯಾಗಿರುವುದನ್ನು ಪತ್ತೆ ಮಾಡವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಗಳವಾರ ಹೇಳಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ `ಸ್ಯಾಟಲೈಟ್ ನ್’ ಬಳಕೆಯ ಸುದ್ದಿಗಳು ಆಗಾಗ ಮಾಧ್ಯಮಗಳಲ್ಲಿ ಬರುತ್ತಿದ್ದು ಈ ಸಂಶಯದ ಬಗ್ಗೆ ಸರಕಾರ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು …

Read More »

ಇಂದಿನಿಂದ ನಾಲ್ಕು ದಿನ ಮುಂದುವರಿಯಲಿದೆ ಮಳೆಯ ಅಬ್ಬರ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಇಂದಿನಿಂದ ನಾಲ್ಕು ದಿನ ಮಳೆ ಮುಂದುವರಿಯಲಿದೆ. ಬೆಂಗಳೂರು, ದ.ಕ,ಉ.ಕ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ತುಮಕೂರು ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿಯೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ.

Read More »

‘ಬೈಡನ್ ಆಹ್ವಾನದ ಮೇರೆಗೆ ಅಮೆರಿಕ ಪ್ರವಾಸ, ಜಾಗತಿಕ ವಿಚಾರಗಳ ಬಗ್ಗೆ ನಮ್ಮ ಚರ್ಚೆ’ ಅಂದ್ರು ಮೋದಿ

ನವದೆಹಲಿ: ಬೈಡೆನ್ ಅಮೆರಿಕ ಅಧ್ಯಕ್ಷರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಅಮೆರಿಕಾ ಪ್ರವಾಸ ಕೈಗೊಳ್ತಿದ್ದಾರೆ. ಇಂದು ಅಮೆರಿಕಾಕ್ಕೆ ಹೊರಡಲಿರುವ ಮೋದಿ, ಕ್ವಾಡ್‌ ಶೃಂಗ ಸಮ್ಮೇ​ಳನ, ವಿಶ್ವ​ಸಂಸ್ಥೆ 76ನೇ ವಾರ್ಷಿಕ ಸಾಮಾನ್ಯ ಸಭೆ​ಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಜೋ ಬೈಡೆನ್‌ ಜತೆ ದ್ವಿಪಕ್ಷೀಯ ಮಾತು​ಕತೆಯನ್ನೂ ನಡೆಸಲಿದ್ದಾರೆ. ಹೀಗಾಗಿ ಮೋದಿ-ಬೈಡೆನ್ ಭೇಟಿ ಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ಪ್ರಧಾನಿ ಮೋದಿ..ಭೇಟಿ ವೇಳೆ ಗ್ಲೋಬಲ್ ಪಾರ್ಟನರ್​​ಶಿಪ್​​ ಬಗ್ಗೆ ಸಮಗ್ರವಾಗಿ …

Read More »

ಬೆಂಗಳೂರು ಬಸ್​ನಲ್ಲಿ ಗೀತ ಗೋವಿಂದಂ ಸಿನಿಮಾ ಸ್ಟೈಲ್​ನಲ್ಲಿ ಹುಡುಗಿಗೆ ಮುತ್ತು ಕೊಟ್ಟಿದ್ದ ಬಳ್ಳಾರಿಯ ಇಂಜಿನಿಯರ್​ ಬಂಧನ

ಬೆಂಗಳೂರು: ಸಿನಿಮಾ ಸ್ಟೈಲ್‌ನಲ್ಲಿ ಬಸ್‌ನಲ್ಲಿ ಯುವತಿಗೆ ಕಿಸ್ ಕೊಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಯುವತಿಗೆ ಕಿಸ್ ಕೊಟ್ಟಿದ್ದ ಯುವಕನನ್ನು ಬಂಧಿಸಲಾಗಿದೆ. ಬಳ್ಳಾರಿ ಮೂಲದ ಇಂಜಿನಿಯರ್ ಮಧುಸೂದನ್ ರೆಡ್ಡಿ(25)ಯನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಗೀತ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಚಲಿಸುತ್ತಿರುವ ಬಸ್ಸಲ್ಲಿ ಮುತ್ತು ಕೊಡುತ್ತಾರೆ. ಅಂತಹುದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಸಿನಿಮಾ ವೀಕ್ಷಿಸಿ ಪ್ರೇರಣೆಗೊಂಡ ಯುವಕನೋರ್ವ ಚಲಿಸುತ್ತಿದ್ದ ಬಸ್ಸಲ್ಲಿಯೇ ಯುವತಿಗೆ ಗೀತ ಗೋವಿಂದಂ ಸಿನಿಮಾದ ದೃಶ್ಯದ ರೀತಿಯಲ್ಲೇ ಮುತ್ತು …

Read More »

ಬಿಎಸ್ಎಫ್ ಕ್ಯಾಂಪ್​ನಲ್ಲಿ ಕೊರೊನಾ ರಣಕೇಕೆ, ಮೇಘಾಲಯದಿಂದ ಬಂದಿದ್ದ 70 ಯೋಧರಿಗೆ ಕೊರೊನಾ ಸೋಂಕು

ದೇವನಹಳ್ಳಿ: ಬಿಎಸ್ಎಫ್ ಕ್ಯಾಂಪ್‌ನ 70 ಯೋಧರಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಾರಹಳ್ಳಿಯ BSF ಕ್ಯಾಂಪ್ನಲ್ಲಿ ಮೇಘಾಲಯದಿಂದ ಬಂದಿದ್ದ 70 ಯೋಧರಿಗೆ ಕೊರೊನಾ ತಗುಲಿದೆ. ಮೊದಲು 34 ಯೋಧರಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ ಇಂದು ಮತ್ತೆ 36 ಯೋಧರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 2 ದಿನದಲ್ಲಿ 70 ಯೋಧರಿಗೆ ಕೊರೊನಾ ಸೋಂಕು ತಗುಲಿರುವುದು ತಿಳಿದು ಬಂದಿದೆ. ಇನ್ನು 70 ಸೋಂಕಿತರ ಪೈಕಿ …

Read More »

ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ; ಯುವಕನಿಗೆ ಚಾಕು ಇರಿತ

ಬೆಳಗಾವಿ: ಗಣೇಶ ವಿಸರ್ಜನೆಯ ಮೆರವಣಿಗೆ ನೋಡಲು ಬಂದ ಮಹಾರಾಷ್ಟ್ರದ ಮೂಲದ ಯುವಕನಿಗೆ ಕಿಡಿಗೇಡಿಗಳು ಚಾಕು ಇರಿದ ಘಟನೆ ಜಿಲ್ಲೆಯ ಸದಲಗಾ ಪಟ್ಟಣದಲ್ಲಿ ನಡದಿದೆ. ಕೊಲ್ಹಾಪುರ ಮೂಲದ ವಿಶಾಲ್ ಶಿವಡೆ (27) ಚಾಕು ಇರಿತಕ್ಕೊಳಗಾದ ಯುವಕ. ಅಪರಿಚಿತ ಯುವಕರ ಗ್ಯಾಂಗ್ ನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಚಾಕು ಇರಿತದಿಂದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಣೇಶ ವಿಸರ್ಜನೆ ಮೆರವಣಿಗೆ ವೀಕ್ಷಣೆಗೆ ಯುವಕ ಆತನ ಸ್ನೇಹಿತರು ಪಟ್ಟಣಕ್ಕೆ ಬಂದಿದ್ದು ಈ ವೇಳೆ ವೈಯಕ್ತಿಕ …

Read More »

ಅಪಾರ್ಟ್ಮೆಂಟ್​ನಲ್ಲಿ ಅಗ್ನಿ ದುರಂತ: ಸಿಲಿಂಡರ್ ಬಳಸುವಾಗ ಜನ ಮಾಡುವ ತಪ್ಪುಗಳೇನು..?

ಬೆಂಗಳೂರು: ಬೇಗೂರು ಠಾಣಾ ವ್ಯಾಪ್ತಿಯ ಅಶ್ರೀತ್ ಅಪಾರ್ಟ್‌ಮೆಂಟ್​ನಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ ಇಡೀ‌ ಸಿಲಿಕಾನ್ ಸಿಟಿ ಜನರನ್ನೇ ಶಾಕ್​ಗೆ ಒಳಗಾಗುವಂತೆ ಮಾಡಿದೆ. ನಿನ್ನೆ ಮಧ್ಯಾಹ್ನ ದೇವರ ಚಿಕ್ಕನಹಳ್ಳಿಯ ಅಶ್ರೀತ್ ಅಪಾರ್ಟ್‌ಮೆಂಟ್​ನ ಮೂರನೇ ಮಹಡಿಯಲ್ಲಿ ಸಂಭವಿಸಿರೋ ಫೈರ್ ಆಕ್ಸಿಡೆಂಟ್​ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.. ಲಕ್ಷ್ಮಿದೇವಿ ಅನ್ನೋ 82 ವರ್ಷದ ವೃದ್ಧೆ ಹಾಗೂ 51 ವರ್ಷದ ಭಾಗ್ಯ ರೇಖಾ ಅನ್ನೋ ಮಹಿಳೆ ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಭೀಕರ ದುರಂತಕ್ಕೆ ಕಾರಣವೇನು? ಅಪಾರ್ಟ್ಮೆಂಟ್​ನಲ್ಲಿ ಸೇಫ್ಟಿ ಮೆಸರ್ಸ್ ಇರಲಿಲ್ವಾ? …

Read More »