ಪ್ರೀತಿ ಕುರುಡು ಎಂಬ ಮಾತಿದೆ. ಎಷ್ಟೇ ಪ್ರಾಯದವರು ಕೂಡ ಪ್ರೀತಿ ಎಂಬ ಬಲೆಗೆ ಬೀಳುತ್ತಾರೆ. ಅದರಂತೆ ಇಲ್ಲೊಬ್ಬಳು ಮಹಿಳೆ ತನ್ನ ಆಪ್ತ ಸ್ನೇಹಿತನ ತಂದೆಯನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. 41 ವರ್ಷದ ಬೆಕಿ ಪ್ರೈಸ್ ಎಂಬಾಕೆ 64 ವರ್ಷದ ಬ್ಲೂ ಪ್ರೈಸ್ರನ್ನು ವಿವಾಹವಾಗಿದ್ದಾಳೆ. ಕ್ಯಾಥರಿನ್ ಲೊಟ್ ಅವರ ಸ್ನೇಹಿತೆಯಾಗಿದ್ದ ಬೆಕಿ ಪ್ರೈಸ್ ಆಕೆಯ ತಂದೆಯನ್ನೇ ವಿವಾಹವಾಗಿದ್ದಾಳೆ. ಪ್ರಾರಂಭದಲ್ಲಿ ಇವರಿಬ್ಬರು ಡೇಟಿಂಗ್ ನಡೆಸುತ್ತಾರೆ. ನಂತರ ಈ ಜೋಡಿಯ ನಡುವೆ ಪ್ರೀತಿ …
Read More »Yearly Archives: 2021
ಕರ್ನಾಟಕದ ಖ್ಯಾತ ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ. ದೇವಿ ಶೆಟ್ಟಿ ಅವರು ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ
: ಕೋಲ್ಕತ: ಕರ್ನಾಟಕದ ಖ್ಯಾತ ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ. ದೇವಿ ಶೆಟ್ಟಿ ಅವರು ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಸೋಮವಾರ ಕೂಡಿಕೊಂಡಿದ್ದಾರೆ. ಲಘು ಹೃದಯಾಘಾತದ ಬಳಿಕ ಈಗಾಗಲೆ ಆಯಂಜಿಯೋಪ್ಲಾಸ್ಟಿಗೆ ಒಳಗಾಗಿರುವ 48 ವರ್ಷದ ಗಂಗೂಲಿ ಅವರಿಗೆ ನೀಡಬೇಕಾಗಿರುವ ಮುಂದಿನ ಚಿಕಿತ್ಸೆಯ ಬಗ್ಗೆ ಅವರು ವೈದ್ಯರ ತಂಡದೊಂದಿಗೆ ಚರ್ಚಿಸಿದ್ದಾರೆ. ಗಂಗೂಲಿ ಅವರ ಹೃದಯ ಚಿಕಿತ್ಸೆಗಾಗಿ ಒಟ್ಟು …
Read More »ಆಕ್ರೋಶಗೊಂಡ ಸಿದ್ದರಾಮಯ್ಯ, ಆಯ್ತು ನೀ ನಡಿ ಎಂದು ಮೈಕ್ ಮುಂದೆ ನಿಂತಿದ್ದ ಜಾಬಣ್ಣವರ ಅವರನ್ನು ನೂಕಿ, ವೇದಿಕೆಯಿಂದ ಕೆಳಗೆ ಕಳುಹಿಸಿದರು.
ಬಾಗಲಕೋಟೆ : ಪ್ರಸ್ತುತ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ತಮ್ಮ ಪಕ್ಷದ ಬೆಂಬಲಿತ ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮದ ವೇಳೆ ನೂತನ ಸದಸ್ಯರೊಬ್ಬರು ತಮ್ಮೂರಿನ ಸಮಸ್ಯೆ ಹೇಳಿಕೊಳ್ಳುವ ವೇಳೆ, ಬಾದಾಮಿಯ ಶಾಸಕರೂ ಆಗಿರುವ ವಿಧಾನಸಭೆಯವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನೂತನ ಸದಸ್ಯನನ್ನು ವೇದಿಕೆಯಿಂದ ನೂಕಿ ಕೆಳಗೆ ಕಳುಹಿಸಿದ ಪ್ರಸಂಗ ಬಾದಾಮಿ ಪಟ್ಟಣದಲ್ಲಿ ಸೋಮವಾರ ನಡೆಯಿತು. ಬಾದಾಮಿಯ ಶಾಸಕರ ಗೃಹ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮವನ್ನು ಸಿದ್ದರಾಮಯ್ಯ …
Read More »ಏನಪ್ಪಾ, ಮೊದಲೇ ಬಂದು ಚೇರ್ ರಿಸರ್ವ್ ಮಾಡ್ಕೊಂಡಿದ್ದೀಯಾ ಎಂದು ಯತ್ನಾಳ್ಗೆ ಕಿಚಾಯಿಸಿದರು ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಬಿಜೆಪಿ ಶಾಸಕರ ಜೊತೆ ಸಭೆ ಆಯೋಜಿಸಿದ್ದರು. ಸಭೆಯಲ್ಲಿ ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದ ಶಾಸಕರ ಜೊತೆ ಸಿಎಂ ಬಿ.ಎಸ್. ಯಡಿಯೂರಪ್ಪ ಚರ್ಚೆ ನಡೆಸಿದರು. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ 35 ಶಾಸಕರ ಜೊತೆ ನಗರದ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದರು. ತಮ್ಮ ಕ್ಷೇತ್ರಗಳಲ್ಲಿ ಶಾಸಕರು ಎದುರಿಸುತ್ತಿರುವ ಸಮಸ್ಯೆ ಹಾಗೂ ಅನುದಾನದ ಬಗ್ಗೆ …
Read More »ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯನ್ನು ಆದರ್ಶವಾಗಿಟ್ಟುಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣ ಸೌಲಭ್ಯಲಕ್ಷ್ಮಿ ಹೆಬ್ಬಾಳಕರ್ ನೀಡುವ ದಿಸೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆದ್ಯತೆ:
ಬೆಳಗಾವಿ – ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯನ್ನು ಆದರ್ಶವಾಗಿಟ್ಟುಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣ ಸೌಲಭ್ಯ ನೀಡುವ ದಿಸೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಕ್ಷೇತ್ರದ ಪಂತ ಬಾಳೇಕುಂದ್ರಿ ಗ್ರಾಮದ ಶ್ರೀ ಮಾರುತಿ ನಗರದಲ್ಲಿ ಸಮಾಜ ಸುಧಾರಕಿ ಹಾಗೂ ಅಕ್ಷರದವ್ವ ಖ್ಯಾತಿಯ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಗೌರವ ನಮನವನ್ನು ಸಲ್ಲಿಸಿ, ನೂತನವಾಗಿ ನಿರ್ಮಾಣಗೊಂಡ ಸಿಸಿ ರಸ್ತೆಯನ್ನು ಸ್ಥಳೀಯ ನಿವಾಸಿಗಳ ಸಮ್ಮುಖದಲ್ಲಿ …
Read More »ನಿಯತಿ ಕೋ ಆಪರೇಟಿವ್ ಸೊಸೈಟಿ ಸೋಮವಾರ ವಿಧ್ಯುಕ್ತವಾಗಿ ಉದ್ಘಾಟನೆಯಾಯಿತು.
ಬೆಳಗಾವಿ – ನಿಯತಿ ಕೋ ಆಪರೇಟಿವ್ ಸೊಸೈಟಿ ಸೋಮವಾರ ವಿಧ್ಯುಕ್ತವಾಗಿ ಉದ್ಘಾಟನೆಯಾಯಿತು. ಪಂಚಾಕ್ಷರಿ ಚೊಣ್ಣದ್ ಮುಖ್ಯ ಅತಿಥಿಗಳಾಗಿ, ಪ್ರದೀಪ್ ಅಷ್ಟೇಕರ್ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದರು. ಸಹಕಾರಿ ಸಂಸ್ಥೆಯೊಂದನ್ನು ನಡೆಸಬೇಕಾದರೆ ನಿರ್ವಹಿಸಬೇಕಾದ ಜವಾಬ್ದಾರಿ ಕುರಿತು ಅತಿಥಿಗಳು ತಿಳಿಸಿದರು. ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. ಸೊಸೈಟಿಯ ಮುಖ್ಯ ಪ್ರಮೋಟರ್ ಡಾ.ಸೋನಾಲಿ ಸರ್ನೋಬತ್, ಸೊಸೈಟಿ ಆರಂಭಿಸಿರುವ ಉದ್ದೇಶ ಮತ್ತು ಯೋಜನೆಗಳ ಮಾಹಿತಿ ನೀಡಿದರು. ಚೇರಮನ್ ರೋಹನ್ ಜುವಳಿ, ವೈಸ್ ಚೇರಮನ್ ಡಾ.ಸಮೀರ್ …
Read More »Big breaking: ಭೂಗತ ಪಾತಕಿ ಛೋಟಾ ರಾಜನ್ ಸೇರಿ ನಾಲ್ವರಿಗೆ ಎರಡು ವರ್ಷ ಜೈಲು ಶಿಕ್ಷೆ
ಮುಂಬೈ: ಭೂಗತ ಪಾತಕಿ ಛೋಟಾ ರಾಜನ್ ಮತ್ತು ಇತರ ಮೂವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಸೋಮವಾರ ಶಿಕ್ಷೆ ವಿಧಿಸಿದೆ. ನಾಲ್ವರಿಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.ನಂದು ವಾಜೇಕರ್ ಎಂಬ ಪನ್ವೇಲ್ ಬಿಲ್ಡರ್ ಗೆ ರಾಜನ್ ಬೆದರಿಕೆ ಒಡ್ಡಿದ್ದ ಪಕರಣ ಹಾಗೂ ರಾಜನ್ ವಾಜೇಕರ್ ನಿಂದ 26 ಕೋಟಿ ರೂಪಾಯಿ ಗಳನ್ನು ಸುಲಿಗೆ ಮಾಡಲು ಯತ್ನಿಸಿದ್ದಎಂದು ಆರೋಪಿಸಲಾಗಿದ್ದ ಪ್ರಕರಣದಲ್ಲಿ ನ್ಯಾಯಾಲು ಶಿಕ್ಷೆ ವಿಧಿಸಿದೆ. ಪ್ರಕರಣದ ಹಿನ್ನಲೆ: ಬಿಲ್ಡರ್ ನನಂದು ವಾಜೇಕರ್ …
Read More »ನಟಿ ರಾಗಿಣಿಗೆ ‘ಬಿಗ್ ಶಾಕ್’: ಜಾಮೀನು ಅರ್ಜಿಗೆ ಸಿಸಿಬಿ ಪರ ವಕೀಲರಿಂದ ಸುಪ್ರಿಂಕೋರ್ಟ್ ನಲ್ಲಿ ಆಕ್ಷೇಪಣೆ
ಬೆಂಗಳೂರು: ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಅವರು ಸದ್ಯ ನಾಯಾಂಗ ಬಂಧನಲ್ಲಿ ಇದ್ದಾರೆ. ಈ ನಡುವೆ ನಟಿ ರಾಗಿಣಿಗೆ ಜಾಮೀನ ನೀಡದಂತೆ ಸಿಸಿಬಿ ಅಧಿಕಾರಿಗಳ ಪರವಾಗಿ ಸುಪ್ರಿಂಕೋರ್ಟ್‌ನಲ್ಲಿ ಸರ್ಕಾರಿ ಅಭಿಯೋಜಕ ತುಶಾರ್ ಮೇಹ್ತಾ ಅವರು ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ. ಈ ಹಿಂದೆ ರಾಗಿಣಿಯವರಿಗೆ ಹೈಕೋರ್ಟ್ ಜಾಮೀನು ನಿರಾಕರಣೆ ಮಾಡಿದ್ದ ಪ್ರಮುಖ ಅಂಶಗಳನ್ನೇ ಇಟ್ಟು ಕೊಂಡು ನಟಿ ರಾಗಿಣಿ ಸುಪ್ರಿಂಕೋರ್ಟ್‌ನಲ್ಲಿ ಜಾಮೀನು ಅರ್ಜಿಗಾಗಿಗಾಗಿ ಸಲ್ಲಿರುವುದಕ್ಕೆ ಸಿಸಿಬಿ …
Read More »7ನೇ ಬಾರಿ ಕೇಂದ್ರ – ರೈತರ ಜೊತೆಗಿನ ಸಭೆ ವಿಫಲ
ನವದೆಹಲಿ : ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಮಸೂಧೆ ವಿರೋಧಿಸಿ ನಡೆಯುತ್ತಿರುವಂತ ಪ್ರತಿಭಟನಾ ನಿರತ ರೈತರೊಂದಿಗೆ, ಕೇಂದ್ರ ಸರ್ಕಾರ ಇಂದು 7ನೇ ಬಾರಿ ನಡೆಸಿದಂತ ಸಭೆ ನಡೆಸಿತು. ಇಂತಹ ಸಭೆಯಲ್ಲಿ ರೈತ ಮಸೂಧೆಗಳ ಮಾರ್ಪಾಡಿಗೆ ಒಪ್ಪಿದಂತ ಕೇಂದ್ರ ಸರ್ಕಾರ, ಮಸೂದೆಗಳನ್ನೇ ರದ್ದು ಪಡಿಸಲು ಒಪ್ಪದ ಹಿನ್ನಲೆಯಲ್ಲಿ, ಇಂದು ನಡೆದ ಸಭೆ ಕೂಡ ವಿಫಲವಾಗಿದೆ. ಇಂದು ಕೇಂದ್ರ – ರೈತರ ಮುಖಂಡರ ಏಳನೇ ಸುತ್ತಿನ ಮಾತುಕತೆಯಲ್ಲಿ ಈ ಮೂರು ಕೃಷಿ …
Read More »2020ನೇ ಸಾಲಿನ ‘ಜಾನಪದ ಅಕಾಡೆಮಿ’ ಬೆಳಗಾವಿ ಜಿಲ್ಲೆ ಮುತ್ತಪ್ಪ ಅಲ್ಲಪ್ಪ ಸವದಿ-ತತ್ವಪದ ಪ್ರಶಸ್ತಿಗೆ ಆಯ್ಕೆ
ಚಾಮರಾಜನಗರ : ಕರ್ನಾಟಕ ಜಾನಪದ ಅಕಾಡೆಮಿಯು 2020ನೇ ಸಾಲಿನ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು 30 ಜಿಲ್ಲೆಗಳ ತಲಾ ಒಬ್ಬ ಜಾನಪದ ಕಲಾವಿದರು ಹಾಗೂ ಇಬ್ಬರನ್ನು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಾತಾ ಬಿ. ಮಂಜಮ್ಮ ಜೋಗತಿ ಅವರು ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ರಾಜ್ಯದ 30 ಜಿಲ್ಲೆಗಳ 30 ಹಿರಿಯ ಜಾನಪದ ಕಲಾವಿದರು …
Read More »