Breaking News

Yearly Archives: 2021

ಫಾಸ್ ಟ್ಯಾಗ್ ಬಳಕೆದಾರರಿಗೆ ಕ್ಯಾಷ್‌ಬ್ಯಾಕ್

ಮುಂಬೈ, ಜ.8-ಫಾಸ್ ಟ್ಯಾಗ್ ಯೋಜನೆಯಲ್ಲಿ ಟೋಲ್ ಹಣ ಪಾವತಿಸುವ ವಾಹನ ಮಾಲೀಕರಿಗೆ ಜ.11 ರಿಂದ ಸಿಹಿ ಸುದ್ದಿ ಸಿಗಲಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಟೋಲ್ ಹಾಗೂ ಬಾಂದ್ರಾ-ವೋರ್ಲಿ  ಸೀಲಿಂಕ್ ರಸ್ತೆಗಳ ಟೋಲ್ ಪ್ಲಾಜಾಗಳಲ್ಲಿ ಹಾದು ಹೋಗುವ ವಾಹನ ಮಾಲೀಕರ ಖಾತೆಗೆಶೇ.5 ರಷ್ಟು ಹಣ ಕ್ಯಾಷ್‌ ಬ್ಯಾಕ್ ರೂಪದಲ್ಲಿ ಅವರ ಖಾತೆಗೆ ಜಮೆಆಗಲಿದೆ ಎಂದು ಮಹಾರಾಷ್ಟ್ರ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮ (ಎಂಎಸ್‌ಆರ್‌ಡಿಸಿ) ಪ್ರಕಟಿಸಿದೆ. ಕ್ಯಾಷ್‌ಬ್ಯಾಕ್‌ ಯೋಜನೆಯಿಂದ ಈ ಟೋಲ್‌ಗಳ ಮೂಲಕ ಹೆಚ್ಚಿನ …

Read More »

ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಿದ ಡಿಸಿಎಂ

ರಾಮನಗರ: ರಾಜ್ಯದ ಸರಕಾರಿ ಪದವಿ, ಎಂಜನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 1.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ಪಿಸಿಗಳನ್ನು ನೀಡುವ ಮಹತ್ವದ ನಿರ್ಧಾರವನ್ನು ಸರಕಾರ ಕೈಗೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ವ್ಯಾಪ್ತಿಯ ಹಾಲು ಉತ್ಪಾದಕರ ಕುಟುಂಬಗಳ ಪ್ರತಿಭಾವಂತ ನೂರು ಮಕ್ಕಳಿಗೆ …

Read More »

ಬಸ್ ಗಳಿಗೆ ಡಿಸೇಲ್ ಹಾಕೋದಕ್ಕೆ ಆಗಿದೆ. ಆದ್ರೇ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವ ಕಾರು ಚಾಲಕ ಸಚಿವರ ಸ್ವಂತ ಕಾರಿಗೆ ಹಾಕಿಸಿಕೊಂಡಿದ್ದು ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬೆಳಗಾವಿ : ಸಾರಿಗೆ ಬಸ್ ಗಳ ಡಿಪೋದಲ್ಲಿನ ಬಂಕ್ ಗಳಿರೋದು ಕೇವಲ ಸಾರಿಗೆ ಬಸ್ ಗಳಿಗೆ ಡಿಸೇಲ್ ತುಂಬಿಸೋದಕ್ಕೆ. ಸಾರಿಗೆ ಬಸ್ ಗಳ ಹೊರತಾಗಿ ಮತ್ತಾರಿಗೂ ಇಂಧನ ಹಾಕೋದಿಲ್ಲ. ಹೀಗಿದ್ದೂ ಸಾರಿಗೆ ಸಚಿವರ ಕಾರಿಗೆ ಬಸ್ ಡಿಪೋ ಬಂಕ್ ನಲ್ಲಿಯೇ ಪುಲ್ ಟ್ಯಾಂಕ್ ಮಾಡಿಸಲಾಗಿದೆ. ಇಂತಹ ವೀಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಾಗಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರ ನಡೆಗೆ, ಈಗ ತೀವ್ರ ಚರ್ಚೆಗೆ …

Read More »

ಸಿಲಿಕಾನ್ ಸಿಟಿ’ ಬೆಂಗಳೂರಿನಲ್ಲಿ ಭಾರಿ ಅಗ್ನಿ ಅವಘಡ : ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದ ಕಟ್ಟಡ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಲಕ್ಕಸಂದ್ರದ ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಇಡೀ ಗೋಡನ್ ಗೆ ಬೆಂಕಿ ತಗುಲಿದ್ದು, ಈಗಾಗಲೇ ಐದಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಬಾಪೂಜಿನಗರದ ಹೊಸಗುಡ್ಡದಹಳ್ಳಿಯಲ್ಲಿ ನಡೆದ ಅಗ್ನಿ ಅವಘಡ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ನಡೆದಿದೆ.

Read More »

ಬಿಗ್ ಬಾಸ್’ ನಲ್ಲಿ ಕಾಮನ್ ಮ್ಯಾನ್ ಗೂ ಅವಕಾಶ : ‘ದೊಡ್ಮನೆ’ ಪ್ರವೇಶಿಸೋ ಇಬ್ಬರು ‘ಅದೃಷ್ಟವಂತರು’ ಯಾರು..?

ಸಿನಿಮಾ ಡೆಸ್ಕ್ : ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ 20 ಸ್ಪರ್ಧಿಗಳನ್ನು ಮನೆಯೊಳಗೆ ಕರೆ ತರಲಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಈ ಬಾರಿ ಕಾಮನ್ ಮ್ಯಾನ್ ಗೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ. ಯೆಸ್, ಬಿಗ್ ಬಾಸ್ ಸೀಸನ್ 5 ಹಾಗೂ 6 ರಲ್ಲಿ ಸೆಲೆಬ್ರಿಟಿಗಳ ಹೊರತಾಗಿ ಕಾಮನ್ ಪೀಪಲ್ಸ್ ಗೆ …

Read More »

ಜೀವನ ಮೂರಾಬಟ್ಟೇರಿ, ಅಲ್ಲಿ ನಡೆಯೋದು ಎಲ್ಲಾ ಸುಳ್ಳು : ಇದು ‘ಸರಿಗಮಪ ಹನಮಂತಪ್ಪ’ನ ನೋವಿನ ಸ್ಟೋರಿ

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಆತ ಕನ್ನಡದ ರಿಯಾಲಿಟಿ ಶೋಗಳಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ ಗಾಯಕ. ಸರಿಗಮಪ ಸೀಸನ್ 15ರ ರನ್ನರಪ್. ಆದ್ರೇ ಜೀವನವೇ ಮೂರಾಬಟ್ಟೆರೀ, ಕನ್ನಡದ ಖಾಸಗಿ ವಾಹಿನಿ ಉತ್ತಮ ವೇದಿಕೆ ಕೊಡ್ತು. ಕರುನಾಡಿಗೆ ನನ್ನ ಪರಿಚಯ ಕೂಡ ಮಾಡಿಸಿತು. ಆದ್ರೇ ನೀಡಿದ ಭರವಸೇ, ವಾಸ್ತವವಾಗಿ ಏನೂ ಇಲ್ಲಾರಿ. ನಾನು ಮೊದಲಿನ ತರ ಝೀರೋ ಆಗಿಯೇ ಇದ್ದೇನೆ ಎಂಬುದಾಗಿ ಬೇಸರ ವ್ಯಕ್ತ ಪಡಿಸಿದ್ದಾರೆ. ಹೀಗೆ ಬೇಸರ ವ್ಯಕ್ತ ಪಡಿಸಿರೋದು …

Read More »

BIGG NEWS : ‘ಗೋವಾ’ ಗೆ ತೆರಳುವ ಪ್ರವಾಸಿಗರೇ ಗಮನಿಸಿ : ಬೀಚ್ ನಲ್ಲಿ ಈ ನಿಯಮ ಪಾಲನೆ ಕಡ್ಡಾಯ

ಡಿಜಿಟಲ್ ಡೆಸ್ಕ್ : ಗೋವಾ ಕಡೆ ಟ್ರಿಪ್ ಹೊರಟಿರುವ ಮಂದಿ ಒಂಚೂರು ಗಮನಿಸಿ…ಗೋವಾ ಪ್ರವಾಸೋದ್ಯಮ ಇಲಾಖೆ ಅಲ್ಲಿನ ಬೀಚ್ ಗಳಲ್ಲಿ ಅತಿರೇಕದ ದುರ್ವತನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಅಂಥವರಿಗೆ ಭಾರೀ ದಂಡ ವಿಧಿಸಲು ನಿರ್ಧರಿಸಿದೆ. ಗೋವಾದ ಬೀಚ್ ಗಳಲ್ಲಿ ಯಾವುದೇ ವ್ಯಕ್ತಿ ಮದ್ಯ ಸೇವನೆ ಮಾಡಿದ್ರೆ ಅಂಥವರಿಗೆ 2000 ರೂ ದಂಡ , ಗುಂಪು ಗುಂಪಾಗಿ ಬೀಚ್ ನಲ್ಲಿ ಮದ್ಯ ಸೇವಿಸಿದ್ರೆ 10,000 ರೂ ದಂಡ ವಿಧಿಸಲಾಗುತ್ತದೆ ಎಂದು ಗೋವಾ ಪ್ರವಾಸೋದ್ಯಮ …

Read More »

BREAKING : ‘K-SET’ ಫಲಿತಾಂಶ ಪ್ರಕಟ

ಮೈಸೂರು : ಮೈಸೂರು ವಿಶ್ವವಿದ್ಯಾಲಯ ವು 2020 ರ ಸೆಪ್ಟೆಂಬರ್ ನಲ್ಲಿ ನಡೆಸಲಾಗಿದ್ದಂತ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ(ಕೆ-ಸೆಟ್) ಫಲಿತಾಂಶವನ್ನು ಇಂದು ( ಜನವರಿ 8) ರಂದು ಪ್ರಕಟ ಗೊಳಿಸಿದೆ. ಈ ಕುರಿತಂತೆ ಮೈಸೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದ್ದು, 2020ರ ಸೆಪ್ಟೆಂಬರ್ ನಲ್ಲಿ ನಡೆದಿದ್ದ ಫಲಿತಾಂಶವನ್ನು ಜನವರಿ 8 ರಂದು www.kset.uni-mysore.ac.in ಜಾಲತಾಣದಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ. ರಾಜ್ಯದ 11 ಕೇಂದ್ರಗಳಲ್ಲಿ 41 ವಿಷಯಗಳಿಗೆ 79,717 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 5,495 ಮಂದಿಗೆ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು …

Read More »

ಗವಿಮಠದ ಅಜ್ಜನ ಜಾತ್ರೆಯ ತೇರೆಳೆಯೋದು ಪಕ್ಕಾ; ಮೂರೇ ದಿನಕ್ಕೆ ಸೀಮಿತವಾಗಲಿದೆಯಾ ಜಾತ್ರಾ ಮಹೋತ್ಸವ!?

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ, ಉತ್ತರದ ಸಿದ್ಧಗಂಗೆ ಎಂದೇ ಖ್ಯಾತವಾಗಿರುವ ಕೊಪ್ಪಳ ಗವಿಮಠದ ಅಜ್ಜನ ಜಾತ್ರಾ ಮಹೊತ್ಸವದ ತೇರೆಳೆಯೋದು ಬಹುತೇಕ ಪಕ್ಕಾ ಆಗಿದೆ. ಅಧಿಕೃತವಾಗಿ ಈವರೆಗೆ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲವಾದರೂ ಶುಕ್ರವಾರ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಂಸದ ಕರಡಿ ಸಂಗಣ್ಣ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಮತ್ತು ರಾಘವೇಂದ್ರ ಹಿಟ್ನಾಳರವರು ಜಾತ್ರಾ ಮಹೋತ್ಸವ ಸಂಬಂಧ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಗವಿಮಠದ ಜಾತ್ರೆ, ಭಕ್ತರ ಜಾತ್ರೆ. ಭಕ್ತರ ತೀರ್ಮಾನವೇ ನಮ್ಮ …

Read More »

ವ್ಯಾಯಾಮ ಮಾಡುವ ಮೂಲಕ ಕೆಎಎಸ್​ ಅಧಿಕಾರಿಗಳ ಸಂಘದ ಜಿಮ್​ ಉದ್ಘಾಟಿಸಿದ ಸಿಎಂ

ವ್ಯಾಯಾಮ ಮಾಡುವ ಮೂಲಕ ಕೆಎಎಸ್​ ಅಧಿಕಾರಿಗಳ ಸಂಘದ ಜಿಮ್​ ಉದ್ಘಾಟಿಸಿದ ಸಿಎಂ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ 2021ನೇ ವರ್ಷದ ದಿನಚರಿಯನ್ನು ಬಿಡುಗಡೆ ಮಾಡಿ ಶತಮಾನೋತ್ಸವ ಭವನಕ್ಕೆ ಶಂಕುಸ್ಥಾಪನೆ ಮಾಡಿದ ಸಿಎಂ ಬಿಎಸ್​ ಯಡಿಯೂರಪ್ಪ ಅವರು, ವ್ಯಾಯಾಮ ಮಾಡುವ ಮೂಲಕ ಜಿಮ್ ಉದ್ಘಾಟನೆ ಮಾಡಿದರು. ಈ ವೇಳೆ ವ್ಯಾಯಾಮ ಮಾಡುವ ಮೂಲಕವೇ ಜಿಮ್​ ಉದ್ಘಾಟನೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು ಕಾರ್ಯಕ್ರಮದಲ್ಲಿ ಕೆಎಎಸ್​ ಅಧಿಕಾರಿಗಳು ತಮಗೆ ನಿವೇಶನ ನೀಡುವಂತೆ …

Read More »