ಬೆಂಗಳೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಎಸ್ಎಸ್ಎಲ್ಸಿ ಮರು ಪರೀಕ್ಷೆಯ ಫಲಿತಾಂಶವನ್ನ ಪ್ರಕಟಿಸಿದ್ದಾರೆ. ಈ ವೇಳೆ ಪರೀಕ್ಷೆಯ ಫಲಿತಾಂಶದ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವರು 27.9.2021 ರಿಂದ 29.09.2021 ಪರೀಕ್ಷೆ ನಡೆಸಲಾಯ್ತು. 352 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು. 53155 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ರು. 29522 ಉತ್ತೀರ್ಣರಾಗಿ ಶೇ. 55.54 ಫಲಿತಾಂಶ ತಂದು ಕೊಟ್ಟಿದ್ದಾರೆ ಎಂದರು. ಹೊಸಬರು 18,417 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ರು, ಅವರಲ್ಲಿ 9182 ಉತ್ತೀರ್ಣರಾಗಿದ್ದಾರೆ. ರಿಪೀಟರ್ಸ್ 23334 ನೋಂದಾಯಿಸಿಕೊಂಡಿದ್ರು. …
Read More »Monthly Archives: ಅಕ್ಟೋಬರ್ 2021
ಪ್ರಧಾನಿ ಮೋದಿ ಬಡವರನ್ನ ಮರೆಯೊಲ್ಲ : ಸಿಎಂ ಬೊಮ್ಮಾಯಿ
ಬೆಂಗಳೂರು: 70 ವರ್ಷದಲ್ಲಿ ಯಾರಾದರು ಪ್ರಧಾನಿಗಳು ಬಡವರ ಔಷಧಿ ಬಗ್ಗೆ ಯೋಚನೆ ಮಾಡಿದ್ದರಾ ? ಎಂದು ಪ್ರಶ್ನಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು.ಜನೌಷಧ ಅನುಷ್ಠಾನ ಮಾಡೋದು ಸುಲಭವಲ್ಲ. ಆದರೆ, ಮೋದಿಯವರು ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದರು. ಭಾನುವಾರ ಬಸವನಗುಡಿಯ ಜನೌಷಧಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಬೊಮ್ಮಾಯಿ, ಪ್ರಧಾನಿ ಮೋದಿಯವರು ಇಂಜಿನ್ ಹಾಗೆ ದೇಶವನ್ನು ಮುಂದೆ ನಿಂತು ನಡೆಸುತ್ತಾರೆ. ನಮ್ಮ ಪ್ರಧಾನಿ ಬಡವರಲ್ಲಿ ಬಡವರನ್ನ ಮರೆಯೊಲ್ಲ. ಅದಕ್ಕೆ ಉದಾಹರಣೆ ಜನೌಷಧಿ. …
Read More »ಅಸಮಾಧಾನ ಶಮನ; ನಾಮಪತ್ರ ಹಿಂತೆಗೆಸಲು ಕಸರತ್ತು
ಹಾವೇರಿ: ದಿ.ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾಗಿರುವ ಹಾನಗಲ್ಲ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಕೊನೆಗೊಂಡಿದ್ದು, ಈಗ ಪ್ರಚಾರ ಕಾರ್ಯ ಜೋರಾಗಿ ನಡೆದಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಟಿಕೆಟ್‌ಗಾಗಿ ಕಾಂಗ್ರೆಸ್, ಬಿಜೆಪಿಯಲ್ಲಿದ್ದ ಅಸಮಾಧಾನ ಶಮನಗೊಂಡಿದ್ದು, ಮಗ್ಗಲು ಮುಳ್ಳಾಗಿರುವ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಹಿಂತೆಗೆಸಲು ಕಸರತ್ತು ಶುರುವಾಗಿದೆ. ಅ.11ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅ.13 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದರಿಂದ ಅಂತಿಮವಾಗಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿ ಉಳಿಯಲಿದ್ದಾರೆಂಬುದು ಕೂತೂಹಲ ಮೂಡಿಸಿದೆ. …
Read More »ಸಂಪೂರ್ಣವಾಗಿ ಬಿಎಸ್‌ವೈ ಮುಗಿಸಲು ಬಿಜೆಪಿಯಿಂದ ‘ಟಾರ್ಗೆಟ್ BSY’ ಯೋಜನೆ: ಕಾಂಗ್ರೆಸ್
ಬೆಂಗಳೂರು: ಮುಂದಿನ ಚುನಾವಣೆಯೊಳಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa)ರನ್ನು ಸಂಪೂರ್ಣವಾಗಿ ಮುಗಿಸುವ ‘ಟಾರ್ಗೆಟ್ BSY’ ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ವ್ಯಂಗ್ಯವಾಡಿದೆ. #B JPvsBSY ಹ್ಯಾಶ್ ಟ್ಯಾಗ್ ಬಳಸಿ ಭಾನುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಪಕ್ಷ ಕಟ್ಟಿದವರನ್ನು ಮುಗಿಸುವುದು ಬಿಜೆಪಿಯ ಹೊಸ ಟ್ರೆಂಡ್!’ ಎಂದು ಟೀಕಿಸಿದೆ. ‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ(BJP) ಸದಾ ಮಲತಾಯಿ ಮಗನಂತೆ ನಡೆಸಿಕೊಂಡಿದೆ. ಅಧಿಕಾರದಲ್ಲಿದ್ದಾಗಲೂ ಬಿಜೆಪಿ ಬಿಎಸ್ವೈರನ್ನು ಕಾಡಿತ್ತು, ಅಧಿಕಾರ …
Read More »ನವೆಂಬರ್ ಮೊದಲ ವಾರದಲ್ಲಿ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ? ದೆಹಲಿಯಲ್ಲೇ ಬೀಡುಬಿಟ್ಟ ರಮೇಶ್ ಜಾರಕಿಹೊಳಿ
ಬೆಳಗಾವಿ: ನವೆಂಬರ್ ಮೊದಲ ವಾರದಲ್ಲಿ ಕರ್ನಾಟಕ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಆಗುವ ಬಗ್ಗೆ ಸುಳಿವು ಲಭಿಸಿದೆ. ಈ ಸುಳಿವು ಸಿಗುತ್ತಿದ್ದಂತೆ ಶಾಸಕ ರಮೇಶ್ ಜಾರಕಿಹೊಳಿ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಈ ಸಲ ಶತಾಯಗತಾಯ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಜಾರಕಿಹೊಳಿ ಯೋಜನೆ ರೂಪಿಸಿಕೊಂಡಿದ್ದಾರೆ. ಕಳೆದ 3 ದಿನದಿಂದ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಇದ್ದಾರೆ. ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ. ಕೊಟ್ಟ ಮಾತಿನಂತೆ ಮತ್ತೆ ಸಚಿವ ಸ್ಥಾನವನ್ನು …
Read More »ಜಮೀರ್ ಅಹಮದ್‌ಗೆ ಉತ್ತರಪ್ರದೇಶ ಚುನಾವಣೆ ಪ್ರಚಾರದ ಉಸ್ತುವಾರಿ?
ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮದ್ ಅವರು ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದು, ಸೋಮವಾರ ಪ್ರಿಯಾಂಕಾ ಗಾಂಧಿಯವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಪ್ರಿಯಾಂಕಾ ಗಾಂಧಿಯವರ ಕಚೇರಿಯಿಂದ ಜಮೀರ್‌ಗೆ ಕರೆ ಮಾಡಿ ಭೇಟಿಗೆ ಸಮಯ ನೀಡಲಾಗಿದೆ. ಉತ್ತರಪ್ರದೇಶದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪ್ರಭಾವವಿರುವ ಕ್ಷೇತ್ರಗಳಲ್ಲಿ ಜಮೀರ್ ಆಹಮದ್‌ಗೆ ಪ್ರಚಾರದ ಹೊಣೆ ನೀಡುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತಬ್ಯಾಂಕ್‌ಗೆ ಒವೈಸಿ ಲಗ್ಗೆ ಇಡಲು ಕಾರ್ಯತಂತ್ರ ರೂಪಿಸಿದ್ದು, ಅದಕ್ಕೆ ಪ್ರತಿಯಾಗಿ ಜಮೀರ್ …
Read More »ಭಾರೀ ಮಳೆಗೆ ನೋಡನೋಡುತ್ತಲೇ ನೆಲಕಚ್ಚಿದ ಮನೆ.. ಪವಾಡವೆಂಬಂತೆ ಪಾರಾದ ಐವರು
ದಾವಣಗೆರೆ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರೋ ಪರಿಣಾಮ ಮನೆಯೊಂದು ಕ್ಷಣಾರ್ಧದಲ್ಲೇ ಕುಸಿದು ಮನೆಯಲ್ಲಿದ್ದವರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿರುವ ಘಟನೆ ಜಿಲ್ಲೆಯ ಐಗೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಗೊಲ್ಲರಹಟ್ಟಿಯ ಪಡಿತರ ಧಾನ್ಯ ವಿತರಕ ಸಿದ್ದಪ್ಪ ಎಂಬುವರ ಮನೆ ಕುಸಿತಗೊಂಡಿದ್ದು ಸಿದ್ದಪ್ಪ ದಂಪತಿ, ಇಬ್ವರು ಮಕ್ಕಳು ಹಾಗೂ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿ ಐವರು ಕುಳಿತಿರುವಾಗ ನೋಡನೋಡುತ್ತಲೇ ಮನೆ ಕುಸಿದು ಬಿದ್ದಿದೆ ಎನ್ನಲಾಗಿದೆ. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಧವಸ, …
Read More »ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಭೂ ಕಂಪನ: ಆತಂಕದಲ್ಲಿ ಜನತೆ
ಕಲಬುರಗಿ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿದೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಮತ್ತು ತೇಗಲತಿಪ್ಪಿ ಗ್ರಾಮದಲ್ಲಿ ಲಘು ಭೂಕಂಪನವಾಗಿತ್ತು. ಗಡಿಕೇಶ್ವರ ಗ್ರಾಮದಲ್ಲಿ ಅನೇಕ ತಿಂಗಳಿಂದ ಭೂಮಿಯಿಂದ …
Read More »ಭಾರಿ ಮಳೆಗೆ ಮುಳುಗಿದ ಸೇತುವೆ
ಭಾರತೀನಗರ: ಭಾರಿ ಮಳೆಯಿಂದಾಗಿ ಹನುಮಂತನಗರ ಸಮೀಪವಿರುವ ಹೆಬ್ಬಾಳ ಚನ್ನಯ್ಯನಾಲೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಭಾನುವಾರ ಸುರಿದ ಭಾರಿ ಮಳೆಗೆ ಹನುಮಂತನಗರ ಸಮೀಪದ ಹೆಬ್ಬಾಳ ಚನ್ನಯ್ಯ ನಾಲೆ ಸೇತುವೆ ಮೇಲೆ ಮಳೆಯ ನೀರು ನಿಂತಿದ್ದರಿಂದ ಸಾರ್ವಜನಿಕರು ವಾಹನಗಳಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಶತತ 2 ಗಂಟೆಗಳ ಸುರಿದ ಭಾರಿ ಮಳೆಗೆ ಭಾರತೀನಗರ-ಮಂಡ್ಯ ರಸ್ತೆ ಮಾರ್ಗವಾಗಿ ಬರುವ ಹನುಮಂತನಗರ ರಸ್ತೆ ಸಮೀಪದಲ್ಲಿರುವ ಹೆಬ್ಬಾಳ ಚನ್ನಯ್ಯನಾಲೆ ಸೇತುವೆ ಮೇಲೆ ಮಳೆ ನೀರು …
Read More »ಜೆಡಿಎಸ್ ಬಗ್ಗೆ ಮಾತನಾಡುವುದೇ ಇಲ್ಲ , ಆದ್ರೂ ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ: ಸಿದ್ದರಾಮಯ್ಯ
ಮಂಡ್ಯ: ನಾನು ಜೆಡಿಎಸ್ ಬಗ್ಗೆ ಮಾತನಾಡುವುದೇ ಇಲ್ಲ. ಆದರೆ ಎಚ್.ಡಿ.ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ. ನಾನು ಏನು ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬಗ್ಗೆ ಮಾತನಾಡದಿದ್ದರೆ ಸಿದ್ದರಾಮಯ್ಯಗೆ ನಿದ್ರೆ ಬರಲ್ಲ ಎಂದು ಎಚ್‌ಡಿಕೆ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರ ಬಗ್ಗೆ ಮಾತನಾಡುವುದನ್ನು ಬಿಟ್ಟಿದ್ದೇನೆ. ಏಕೆಂದರೆ ನನ್ನ ಮಾತುಗಳನ್ನು ಕೋಮುವಾದಿ ಬಣ್ಣ ಕಟ್ಟಿ ತಿರುಚುತ್ತಾರೆ. ಟೀಕೆ ಮಾಡಿದರೆ …
Read More »