ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾದ ‘ಕಿತ್ತೂರು ಕರ್ನಾಟಕ ‘ಘೊಷಣೆ ಕುರಿತು ಸಂಪುಟದಲ್ಲಿ ರ್ಚಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್-ಕರ್ನಾಟಕ ಭಾಗವನ್ನು ‘ಕಲ್ಯಾಣ ಕರ್ನಾಟಕ’ ಎಂದು ಘೊಷಣೆ ಮಾಡಿರುವಂತೆ ಬೆಳಗಾವಿ ಭಾಗವನ್ನು ‘ಕಿತ್ತೂರು ಕರ್ನಾಟಕ’ ಎಂದು ಘೊಷಿಸುವ ಕುರಿತು ಸಚಿವ ಸಂಪುಟದಲ್ಲಿ ರ್ಚಚಿಸಲಾಗುವುದು. ಆ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. ಅ.23ರಿಂದ …
Read More »Daily Archives: ಅಕ್ಟೋಬರ್ 21, 2021
ಮಹರ್ಷಿ ವಾಲ್ಮೀಕಿ ಜಯಂತಿ ವೇಳೆ ಝಳಪಳಿಸಿದ ತಲ್ವಾರ್, ಮಚ್ಚು ಲಾಂಗ್..!
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಗೌಡಗೇರಾ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಪ್ರಯುಕ್ತ ತಲ್ವಾರ್, ಮಚ್ಚು ಕೈಯಲ್ಲಿ ಹಿಡಿದು ಯುವಕರು ಕುಣಿದು ಕುಪ್ಪಳಿಸಿದ್ದಾರೆ. ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಡಿಜೆ ಮೆರವಣಿಗೆ ಆಯೋಜನೆ ಮಾಡಿರುವುದಲ್ಲದೆ ಶಸ್ತ್ರಾಸ್ತ್ರ ಬಳಕೆ ಪ್ರದರ್ಶನ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಮೆರವಣಿಗೆಯುದ್ದಕ್ಕೂ ತಲ್ವಾರ್ ಹಿಡಿದು ಯುವಕರು ಸ್ಟೆಪ್ ಹಾಕಿದ್ದಾರೆ. ಪೊಲೀಸ್ ಇಲಾಖೆಯ ಆದೇಶಕ್ಕಿಲ್ಲ ಕವಡೆಕಾಸಿನ ಕಿಮ್ನತ್ತು ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಕೆಂಬಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …
Read More »PUC 600ಕ್ಕೆ 599 ಅಂಕ ಪಡೆದು ವೈದ್ಯೆಯಾಗಬೇಕೆಂದು ಕನಸು ಕಂಡಿದ್ದ ಯುವತಿ ವಿದ್ಯಾಭ್ಯಾಸಕ್ಕೆ ಕುತ್ತು!
ಮಂಡ್ಯ: ಆಕೆಗೆ ಡಾಕ್ಟರ್ (Doctor) ಆಗಬೇಕು ಅನ್ನೋ ಬೆಟ್ಟದಷ್ಟು ಆಸೆ. ನಲ್ಲೂ ಕೂಡ ಆಕೆಯೆ ಮುಂದು. ಆಕೆ ದ್ವಿತೀಯ ಪಿಯುಸಿಯಲ್ಲಿ (Second PUC) 600ಕ್ಕೆ 599 ಅಂಕ ಪಡೆದ ಪ್ರತಿಭಾನ್ವಿತೆ. ಆದ್ರೆ ಅವಳಪ್ಪನಿಗೆ ಎರಡೂ ಕಿಡ್ನಿ ವೈಫಲ್ಯ (Kidney Failure) ಆದ ಪರಿಣಾಮ ಆಕೆಯ ಕನಸು ಕಮರಿ ಹೋದಂತಾಗಿದೆ. ಆರ್ಥಿಕ ಸಂಕಷ್ಟದಿಂದ ಆ ಯುವತಿಯ ವಿದ್ಯಾಭ್ಯಾಸ ಅಂತ್ಯಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಹೌದು, ಮಂಡ್ಯದ ಬಿ ಹೊಸಹಳ್ಳಿ ಗ್ರಾಮದ ಕಾಳೇಗೌಡ …
Read More »70ನೇ ವಯಸ್ಸಲ್ಲಿ ಮಗುವನ್ನು ಹೆತ್ತಳಾ ಈ ತಾಯಿ! ಮುದ್ದು ಕಂದನ ಕಂಡು ಕುಣಿದುಕುಪ್ಪಳಿಸಿದ ದಂಪತಿ
ಗಾಂಧಿನಗರ (ಗುಜರಾತ್): ಕೆಲ ತಿಂಗಳ ಹಿಂದಷ್ಟೇ ಪಂಜಾಬ್‌ನ 70 ವರ್ಷದ ಆಸುಪಾಸಿನ ಮಹಿಳೆಯೊಬ್ಬರು ಮಗುವನ್ನು ಹೆತ್ತು ಭಾರಿ ಸುದ್ದಿಮಾಡಿದ್ದರು. ಇದೀಗ ಅದೇ ವಯಸ್ಸಿನ ಇನ್ನೋರ್ವ ಮಹಿಳೆ ಮೊದಲ ಕಂದನನ್ನು ಪಡೆದಿದ್ದಾರೆ. ಮುದ್ದು ಕಂದನನ್ನು ನೋಡಿ ಈ ದಂಪತಿ ಕುಣಿದು ಕುಪ್ಪಳಿಸಿದ್ದಾರೆ. ಗುಜರಾತ್‍ನ ಕಛ್‍ನ ಜೀವುಬೆನ್ ವಾಲಾಭಾಯಿ ರಬರಿ ಅವರು ಮಗುವನ್ನು ಹೆತ್ತವರು. ರಾಪರ್ ತಾಲ್ಲೂಕಿನ ಮೋರಾ ಗ್ರಾಮದ ನಿವಾಸಿಯಾಗಿರುವ ಈ ದಂಪತಿಗೆ ಮದುವೆಯಾಗಿ 45ನೇ ವಯಸ್ಸಿಗೆ ಈ ಮಗು ಜನಿಸಿದೆ. …
Read More »ಬೆಳೆ ವಿಮೆ ಸೌಲಭ್ಯ : ರೈತ ಸಮುದಾಯಕ್ಕೆ ಇಲ್ಲಿದೆ ಬಹುಮುಖ್ಯ ಮಾಹಿತಿ
ದಾವಣಗೆರೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ ಜಾರಿಗೊಳಿಸಿದ್ದು, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರು ನೋಂದಾಯಿಸಿಕೊಳ್ಳಬಹುದು ಎಂದು ಜಂಟಿಕೃಷಿ ನಿರ್ದೇಶಕರು ಸೂಚನೆ ನೀಡಿದ್ದಾರೆ. ಬೆಳೆಸಾಲ ಪಡೆದ ರೈತರಿಗೆ ಬೆಳೆಸಾಲ ಮಂಜೂರು ಮಾಡುವಾಗ, ಕಡ್ಡಾಯವಾಗಿ ಬೆಳೆವಿಮೆಗೆ ಒಳಪಡಿಸಲಾಗುವುದು, ಬೆಳೆ ಸಾಲ ಪಡೆಯದ ಇಚ್ಚೆಯುಳ್ಳ ರೈತರು ಅರ್ಜಿಯೊಂದಿಗೆ ಭೂಮಿ …
Read More »ದೆಹಲಿ ಸರ್ಕಾರ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50 ಸಾವಿರ ಪರಿಹಾರ ನೀಡಿದ-ಅರವಿಂದ ಕೇಜ್ರಿವಾಲ್
ಹೊಸದಿಲ್ಲಿ: ಅಕಾಲಿಕ ಮಳೆಗೆ ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50,000 ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಘೋಷಿಸಿದ್ದಾರೆ. ಪರಿಹಾರದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ದೆಹಲಿ ಸಿಎಂ ಹೇಳಿದರು. ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50 ಸಾವಿರ ಪರಿಹಾರ ನೀಡುವುದಾಗಿ ನಾನು ಆದೇಶ ಹೊರಡಿಸಿದ್ದೇನೆ ಎಂದು ಅವರು ಹೇಳಿದರು. ಕಂದಾಯ ಅಧಿಕಾರಿಗಳು ನಡೆಸಿದ ಸಮೀಕ್ಷೆಯ …
Read More »ಕಲಘಟಗಿ ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಿಸುವ ಹೆಸರಲ್ಲಿ ಮರಗಳಿಗೆ ಕೊಡಲಿ ಪೆಟ್ಟು :ಪರಿಸರ ಪ್ರೇಮಿಗಳ ವಿರೋಧ
ಕಲಘಟಗಿ:ತಾಲೂಕ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಿಸುವ ಹೆಸರನಲ್ಲಿ ಅನೇಕ ಮರಗಳ ಮಾರಣಹೋಮ ನಡೆದಿದೆ ವಿಷಯ ತಿಳಿದ ಪರಿಸರ ಪ್ರೇಮಿಗಳು ಮತ್ತು ಪಟ್ಟಣದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಿದ್ದಾರೆ ಪಟ್ಟಣದ ಸರ್ಕಾರಿ ನೌಕರ ಭವನದ ಆವರಣದಲ್ಲಿರುವ 30 ರಿಂದ 50 ವರ್ಷದಿಂದ ಹೆಮ್ಮರವಾಗಿ ಬೆಳೆದು ಉತ್ತಮ ಗಾಳಿ, ಪರಿಸರ ನೀಡುವ ಮರಗಳಿಗೆ ಕೊಡಲಿ ಪೆಟ್ಟು ಹಾಕಿ ಕಡಿಯಲು ಹೊರಟಿರುವದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ ತಾಲ್ಲೂಕ ನೌಕರರ …
Read More »ಮೀಸಲಾತಿ ನಿರೀಕ್ಷೆಯಲ್ಲಿರುವ ಸಮುದಾಯಗಳಿಗೆ ಸಿಎಂ ಬೊಮ್ಮಾಯಿ ಗುಡ್ ನ್ಯೂಸ್
ಬೆಂಗಳೂರು : ಮೀಸಲಾತಿ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಹಿಸುದ್ದಿ ನೀಡಿದ್ದು, ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ವಾಲ್ಮೀಕಿ ಸಮುದಾಯ ಸೇರಿ ವಿವಿಧ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದು, …
Read More »2ನೇ ಮದುವೆ ಕಾರಣಕ್ಕೆ ವಿಚ್ಛೇದಿತ ಪತ್ನಿಗೆ ಜೀವನಾಂಶ ತಪ್ಪಿಸುವಂತಿಲ್ಲ: ಹೈಕೋರ್ಟ್
ಬೆಂಗಳೂರು: “ಇಸ್ಲಾಮಿನಲ್ಲಿ ಮದುವೆ ಎಂಬುದು ಒಂದು ಕರಾರು ಆಗಿದೆ. ಹಾಗಂತ, ಎರಡನೇ ಪತ್ನಿ ಹಾಗೂ ಆಕೆಯಿಂದ ಹುಟ್ಟಿದ ಮಕ್ಕಳ ನಿರ್ವಹಣೆ ಮಾಡಬೇಕಿರುವ ಹಿನ್ನಲೆಯಲ್ಲಿ ವಿಚ್ಛೇದನ ನೀಡಿದ ಮೊದಲ ಪತ್ನಿಗೆ ಜೀವನಾಂಶ ನೀಡುವ ಹೊಣೆಗಾರಿಕೆಯಿಂದ ಪತಿ ತಪ್ಪಿಸಿಕೊಳ್ಳುವಂತಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭುವನೇಶ್ವರಿ ನಗರದ ಎಜಾಜುರ್ ರೆಹ್ಮಾನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್. …
Read More »