Breaking News

Daily Archives: ಅಕ್ಟೋಬರ್ 14, 2021

ಎರಡೂವರೆ ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ‘ಸಲಗ’ ಇಂದು ರಾಜ್ಯಾದ್ಯಂತ ಬಿಡುಗಡೆ

ಎಷ್ಟು ಟೆನ್ಶನ್ ಇದೆ ಗೊತ್ತಾ? ರಾತ್ರಿಯಲ್ಲಾ ನಿದ್ದೆ ಇಲ್ಲ. ಮೂರು ಗಂಟೆಗೆ ಎದ್ದು ಕೆಲಸ ಮಾಡುತ್ತಿದ್ದೇವೆ. ಆ ಅನುಭವವನ್ನು ಬಾಯ್ಮಾತಿನಲ್ಲಿ ಹೇಳುವುದು ಕಷ್ಟ. ಅದು ಅನುಭವಿಸಿದವರಿಗೇ ಗೊತ್ತು. ಇನ್ನೊಬ್ಬರಿಗೆ ಶಾಪವಾಗಿಯೂ ಕೊಡುವುದಕ್ಕೆ ಸಾಧ್ಯವಿಲ್ಲ …’ ಎಂದು ನಕ್ಕರು ‘ದುನಿಯಾ’ ವಿಜಯ್. ಎರಡೂವರೆ ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ‘ಸಲಗ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತು ವಿಜಯ್ಗೆ ಸಹಜವಾಗಿಯೇ ಟೆನ್ಶನ್ ಇದೆ. ಏಕೆಂದರೆ, ಈ ಚಿತ್ರಕ್ಕೆ ಅವರು ನಾಯಕರಷ್ಟೇ ಅಲ್ಲ, …

Read More »

ಸಲ್ಮಾನ್ ಖಾನ್ ನಿರ್ಮಿಸಿ ನಟಿಸುತ್ತಿರುವ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ

ಕೆಜಿಎಫ್ ಚಾಪ್ಟರ್ 1 ಚಿತ್ರದೊಂದಿಗೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ರವಿ ಬಸ್ರೂರ್‌ಗೆ ಬಾಲಿವುಡ್‌ನಿಂದ ಹೆಚ್ಚು ಆಫರ್ ಬರ್ತಿದೆ. ಒಂದರ ಹಿಂದೆ ಮತ್ತೊಂದು ಎನ್ನುವಂತೆ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡ್ತಿದ್ದಾರೆ ಬಸ್ರೂರ್. ಇದೀಗ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರ್ಮಿಸಿ ನಟಿಸುತ್ತಿರುವ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನಿರ್ದೇಶಿಸುತ್ತಿದ್ದಾರೆ. ಈ ಕುರಿತು ಸ್ವತಃ ರವಿ ಬಸ್ರೂರ್ ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ”ಭಾರತದ ಬಾಯಿಜಾನ್ ಸಲ್ಮಾನ್ ಖಾನ್ ಜೊತೆ …

Read More »

ಟಿಳಕವಾಡಿ ಪೊಲೀಸರ ಕಾರ್ಯಾಚರಣೆ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಬಂಧನ

ಬೆಳಗಾವಿ ನಗರದಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಆರೋಪಿಯನ್ನು ಬಂಧಿಸಿರುವ ಟಿಳಕವಾಡಿ ಠಾಣೆ ಪೊಲೀಸರು 9 ಲಕ್ಷ ರೂ. ಮೌಲ್ಯದ 11 ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ. ಖಡೇಬಜಾರ ಉಪವಿಭಾಗ ಎಸಿಪಿ ಚಂದ್ರಪ್ಪ ಹಾಗೂ ಪಿಐ ಟಿಳಕವಾಡಿ ರಾಘವೇಂದ್ರ ಹವಾಲದಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿ ಮಕಬುಲ ಅಹ್ಮದ @ಅಸ್ಲಂ. ತಂದೆ ಮೆಹಬೂಸಾಬ ಬಿಕ್ಕನಬಾಯಿ (೨೭) (ಸಾ|| ಬೀರಬಲ್ ಓಣಿ ಹುಬ್ಬಳ್ಳಿ ಹಾಲಿ: ಹಾಲಿ ಹಳೆ ಹುಬ್ಬಳ್ಳಿ) …

Read More »

ಬಾಲಕನ ಹೊಟ್ಟೆಯ ಮೇಲೆ ಹರಿದ ಕಬ್ಬು ತುಂಬಿದ ಟ್ರ್ಯಾಕ್ಟರ್

ಹಾವೇರಿ: ಕಬ್ಬಿನ ಟ್ರ್ಯಾಕ್ಟರ್ ಬಾಲಕನ ಹೊಟ್ಟೆಯ ಮೇಲೆ ಹರಿದು ತೀವ್ರವಾಗಿ ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ರಾಣೇಬೆನ್ನೂರ ರಸ್ತೆಯ ಬಳಿ ನಡೆದಿದೆ.   ಪಟ್ಟಣದ ಗಣೇಶ ವಡ್ಡರ (11) ವರ್ಷದ ಬಾಲಕನ ಮೇಲೆ ಹಿಂಬದಿಯ ಟ್ರ್ಯಾಲಿ ಹರಿದಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ಬಾಲಕನನ್ನು ಗುತ್ತಲ ಸಮುದಾಯ ಆರೋಗ್ಯ ಕೇಂದ್ರದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ತೀವ್ರವಾಗಿ ನರಳುತ್ತಾ ಬಿದ್ದಿದ್ದ ಬಾಲಕನ ಸ್ಥಿತಿ ಕಂಡು ಮಾಹಿಳಾ ಸಂಬಂಧಿಯೊಬ್ಬರು …

Read More »

ವಿದ್ಯುತ್ ರಿಪೇರಿ ವೇಳೆ ಶಾಕ್ ತಗುಲಿ ಲೈನ್​ಮ್ಯಾನ್​ ಸಾವು;

ಬಾಗಲಕೋಟೆ: ವಿದ್ಯುತ್​​ ಶಾಕ್​​ ತಗುಲಿ ವಿದ್ಯುತ್​ ಕಂಬದಲ್ಲೇ ಹೆಸ್ಕಾಂ ಗುತ್ತಿಗೆದಾರನ ಅಡಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಾವನ್ನಪ್ಪಿದ ಘಟನೆ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಬಳಿ ನಡೆದಿದೆ. ಬದಾಮಿ ತಾಲೂಕಿನ ಬಿ.ಎನ್ ಜಾಲಿಹಾಳ ಗ್ರಾಮದ ನಿವಾಸಿ ಹನುಮಂತ ಮುಕಾಶಿ (33) ಮೃತ ಕಾರ್ಮಿಕ. ಹೆಸ್ಕಾಂ ಗುತ್ತಿಗೆದಾರನ ಅಡಿ ಈತ ಕೆಲಸ ಮಾಡುತ್ತಿದ್ದ. ಇಂದು ಟ್ರಾನ್ಸ್​​​ಫರ್ಮ್​​ ಕೂರಿಸಲು ಮುಂದಾಗಿದ್ದ ವೇಳೆ ಅವಘಡ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಸಂದರ್ಭದಲ್ಲಿ …

Read More »