Breaking News

Daily Archives: ಅಕ್ಟೋಬರ್ 14, 2021

ಕೆಲವು ಗಣಿಗಳನ್ನು ಮುಚ್ಚುವುದು, ಮುಂಗಾರು ಮಳೆಯಿಂದಾಗಿ ಪ್ರವಾಹವು ಕಲ್ಲಿದ್ದಲು ಬಿಕ್ಕಟ್ಟಿಗೆ ಕಾರಣವಾಯಿತು: ಪ್ರಲ್ಹಾದ್ ಜೋಶಿ

(ಜಾರ್ಖಂಡ್): ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಗುರುವಾರ ಕೆಲವು ಗಣಿಗಳನ್ನು ಮುಚ್ಚಲಾಗಿದೆ ಮತ್ತು ಮುಂಗಾರು ಮಳೆಯಿಂದಾಗಿ ಇತರ ಕೆಲವು ಪ್ರವಾಹಗಳು ಬಿಕ್ಕಟ್ಟಿಗೆ ಕಾರಣವಾದವು ಆದರೆ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಭಯಪಡುವ ಅಗತ್ಯವಿಲ್ಲ. ಜಾರ್ಖಂಡ್‌ನ ಚತ್ರ ಜಿಲ್ಲೆಯ ಪಿಪರ್‌ವಾರ್‌ನಲ್ಲಿರುವ ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (ಸಿಸಿಎಲ್) ಅಶೋಕ ಗಣಿಗೆ ಭೇಟಿ ನೀಡಿದ ಜೋಶಿ, ದೇಶದ ವಿದ್ಯುತ್ ಸ್ಥಾವರಗಳು ಅಗತ್ಯ ಪ್ರಮಾಣದ ಕಲ್ಲಿದ್ದಲನ್ನು ಪಡೆಯುವುದನ್ನು ಮುಂದುವರಿಸುತ್ತವೆ ಎಂದು ಹೇಳಿದರು.”ನಾವು ಈಗ ಸುಧಾರಣೆಯನ್ನು ನೋಡುತ್ತಿದ್ದೇವೆ” ಎಂದು ಅವರು …

Read More »

ಕೆಪಿಸಿಸಿಯಿಂದ ಆರು ವರ್ಷಗಳ ಕಾಲ ಉಚ್ಛಾಟಿತ ಆಗಿರುವ ಎಂ.ಎ. ಸಲೀಂ ಡಿ.ಕೆ. ಶಿವಕುಮಾರ್ ಅವರಿಗೆ ಕೈಮುಗಿದು ಕ್ಷಮೆ ಕೋರಿದ್ದಾರೆ.

ಕೆಪಿಸಿಸಿಯಿಂದ ಆರು ವರ್ಷಗಳ ಕಾಲ ಉಚ್ಛಾಟಿತ ಆಗಿರುವ ಎಂ.ಎ. ಸಲೀಂ ಡಿ.ಕೆ. ಶಿವಕುಮಾರ್ ಅವರಿಗೆ ಕೈಮುಗಿದು ಕ್ಷಮೆ ಕೋರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಕುರಿತು ಲಘುವಾಗಿ ಮತ್ತ ಬೇಜವಾಬ್ದಾರಿಯಿಂದ ಮಾತನಾಡಿದ ಕಾರಣ ಸಲೀಂ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿ ಪಕ್ಷದ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಡಾ.ಕೆ. ರೆಹಮಾನ್ ಖಾನ್ ಬುಧವಾರ ಆದೇಶ ಹೊರಡಿಸಿದ್ದರು. ಎಂ.ಎ. ಸಲೀಂ ಕೆಪಿಸಿಸಿ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದರು. “ಡಿ.ಕೆ. …

Read More »

ಬೊಮ್ಮಾಯಿ ತಾಲಿಬಾನ್ ನಾಯಕರಂತೆ ಮಾತಾಡಿದ್ದಾರೆ : ರಾಜ್ಯ ಕಾಂಗ್ರೆಸ್

ಬೆಂಗಳೂರು : ನೈತಿಕ ಪೊಲೀಸ್‍ಗಿರಿಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ರಾಜ್ಯ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‍ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. “ನೈತಿಕತೆಗೆ ಧಕ್ಕೆಯಾದಾಗ ಆಕ್ಷನ್, ರಿಯಾಕ್ಷನ್ ಆಗುತ್ತದೆ,” ಅಂತಾ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದಕ್ಕೆ ಆಕ್ರೋಶ ಹೊರಹಾಕಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ರಾಜ್ಯದಲ್ಲಿ ‘ಅನೈತಿಕ ಪೊಲೀಸ್‍ಗಿರಿ’ ಹೆಸರಲ್ಲಿ ನಡೆಯುತ್ತಿರುವ ಭಯೋತ್ಪಾದಕ …

Read More »

ನೈತಿಕ ಪೊಲೀಸ್‌ಗಿರಿ ಪರ ಸಿಎಂ ಹೇಳಿಕೆ: ಟ್ರೆಂಡ್ ಆದ ‘ರಿಸೈನ್ ಕರ್ನಾಟಕ ಸಿಎಂ’

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರು ಭೇಟಿ ವೇಳೆ ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿ ಹೇಳಿಕೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ‘ರಿಸೈನ್ ಕರ್ನಾಟಕ ಸಿಎಂ’ (#ResignKarnatakaCM) , ‘ಸಿಎಂ ಸಪೋರ್ಟ್ ಮಾರಲ್ ಪೊಲೀಸಿಂಗ್’ (#CMSupportsMoralPolicing) ಹ್ಯಾಷ್‌ಟ್ಯಾಗ್‌ನಡಿ ನೀಡುತ್ತಿರುವ ಪ್ರತಿಕ್ರಿಯೆಗಳು ಟ್ರೆಂಡ್ ಆಗಿವೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹಿತ ಹಲವರು ಮುಖ್ಯಮಂತ್ರಿ ಹೇಳಿಕೆಯನ್ನು ಖಂಡಿಸಿದ್ದಾರೆ. ಅ.13ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ …

Read More »

100 ರೂ.ನಲ್ಲಿ ಬಸ್ ಪೂಜೆ ಮಾಡುವುದು ಹೇಗೆ ಸಾರಿಗೆ ಇಲಾಖೆ: ಸಿಬ್ಬಂದಿ ಆಕ್ರೋಶ

ಬೆಂಗಳೂರು, ಅಕ್ಟೋಬರ್ 14: ನಾಡಿನೆಲ್ಲಡೆ ಸಂಭ್ರಮದ ದಸರಾ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಕೊರೊನಾ ಸೋಂಕು ಪ್ರಕರಣಗಳು ತಗ್ಗಿದ್ದರಿಂದ ದಸರಾ ಆಚರಣೆ ತುಸು ಮೆರುಗನ್ನು ಪಡೆದುಕೊಂಡಿದೆ. ಇಂದು ರಾಜ್ಯಾದ್ಯಂತ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಕಚೇರಿಗಳಲ್ಲಿ, ಮನೆಗಳಲ್ಲಿ, ವಾಹನಗಳಿಗೆ ಆಯುಧ ಪೂಜಾ ಹಬ್ಬವನ್ನು ಬಂಧು ಬಳಗದ ಜೊತೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಆದರೆ ಸದಾ ಸುದ್ದಿಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ …

Read More »

ಕರೋನಾ ಸೇನಾನಿಗಳಿಗೆ ಹಾಗೂ ಕೋವಿಡ್ 19 ಲಸಿಕಾ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ

ಕರೋನಾ ಸೇನಾನಿಗಳಿಗೆ ಹಾಗೂ ಕೋವಿಡ್ 19 ಲಸಿಕಾ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ನಗರದ ಶ್ರೀ ಎಸ್ ಜಿ ಬಾಳೆಕುಂದ್ರಿ ಇಂಜಿನಿಯರಿಂಗ ಕಾಲೇಜು ಸಭಾಗೃಹ ಬೆಳಗಾವಿಯಲ್ಲಿ ಜರುಗಿತು. ಮಾನ್ಯ ಪ್ರಧಾನಿ ಶ್ರೀ ಮೋದಿಜಿ ಹಾಗೂ ಆರೋಗ್ಯ ಇಲಾಖೆಯ ಸತತ ಪ್ರಯತ್ನದಿಂದ ಭಾರತ ದೇಶಾದ್ಯಂತ 100 ಕೋಟಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 30,18,570 ಜನರಿಗೆ ಕೋವಿಡ್ 19 ಲಸಿಕೆ ನೀಡಿದ ಪ್ರಯುಕ್ತ ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಳಗಾವಿ ಜಿಲ್ಲಾ ಆರೋಗ್ಯ …

Read More »

‘ಸಲಗ’ ಚಿತ್ರದ ಫಸ್ಟ್​ ಹಾಫ್​ ರಿಪೋರ್ಟ್​

ಭಾರಿ ನಿರೀಕ್ಷೆ ಮೂಡಿಸಿದ್ದ ‘ಸಲಗ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್​ ಅವರ ನಟನೆ ಮತ್ತು ನಿರ್ದೇಶನ ಹೇಗಿದೆ? ಮಧ್ಯಂತರದವರೆಗೆ ಈ ಸಿನಿಮಾದಲ್ಲಿ ಏನುಂಟು ಏನಿಲ್ಲ ಅಂತ ತಿಳಿಯಲು ಈ ರಿಪೋರ್ಟ್​ ಓದಿ. ರಾಜ್ಯಾದ್ಯಂತ ‘ಸಲಗ’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ನಟ ದುನಿಯಾ ವಿಜಯ್​ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವುದರಿಂದ ಅಭಿಮಾನಿಗಳು ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದು …

Read More »

ಇಂದು ರಿಲೀಸ್ ಆಗಲೇ ಇಲ್ಲ ಕೋಟಿಗೊಬ್ಬ : ಸುದೀಪ್ ಸರ್ ಗೆ ಸತ್ಯ ಗೊತ್ತಿದೆ ಎಂದ ಸೂರಪ್ಪ ಬಾಬು

ಬೆಂಗಳೂರು: ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗದ ಕಾರಣ ಅಭಿಮಾನಿಗಳಲ್ಲಿ ನಟ ಕಿಚ್ಚಾ ಸುದೀಪ್ ಕ್ಷಮೆ ಕೇಳಿದ್ದಾರೆ. ಟ್ವಿಟ್ಟರ್ ನಲ್ಲಿ ಕ್ಷಮೆಯಾಚಿಸಿರುವ ಸುದೀಪ್, ಈಗಾಗಲೇ ಥಿಯೇಟರ್​ಗಳ ಬಳಿ ಆಗಮಿಸಿರುವ ಎಲ್ಲ ಅಭಿಮಾನಿಗಳಿಗೂ ಶೋ ತಡವಾದ ಬಗ್ಗೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ಥಿಯೇಟರ್ ನಲ್ಲಿ ಸಿನಿಮಾ ಇದೆ.. ಆದರೆ ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ತೋರಿಸಲು ಆಗುತ್ತಿಲ್ಲ ಎಂದಿದ್ದಾರೆ.       ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ ಸುದೀಪ್ ಸದ್ಯ …

Read More »

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು: ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಸ್ವಸ್ಥರಾಗಿದ್ದು, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ.ಮನಮೋಹನ್ ಸಿಂಗ್ ಅವರ ಆರೋಗ್ಯ ಬುಧವಾರ ಹದಗೆಟ್ಟಿದೆ. ಡಾ.ನಿತೀಶ್ ನಾಯಕ್ ಅವರ ನೇತೃತ್ವದ ವೈದ್ಯರ ತಂಡದ ಮೇಲ್ವಿಚಾರಣೆಯಲ್ಲಿ ಸಿಂಗ್ ಆರೋಗ್ಯ ತಪಾಸಣೆ ನಡೆಸಲಾಗಿದೆ. ಅವರು ಉಸಿರಾಟದ ತೊಂದರೆಗೊಳಲಾಗಿದ್ದಾರೆ. ಮತ್ತು ಎದೆನೋವು ಕಾಣಿಸಿಕೊಂಡಿದೆ. ಡಾ.ಮನಮೋಹನ್ ಸಿಂಗ್ ಅವರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ನೇತೃತ್ವದ ವೈದ್ಯಕೀಯ ತಂಡ ಕಾರ್ಯೋನ್ಮುಖವಾಗಿದೆ. ಹೆಚ್ಚಿನ ವಿವರಗಳನ್ನು …

Read More »

ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ ಹೆಚ್ಚಿನ ಮಹತ್ವ

ಹಿಂದೂಗಳ ಹಬ್ಬಗಳಲ್ಲಿ ನವರಾತ್ರಿಯೂ ಒಂದು. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳಲ್ಲಿ ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ ಹೆಚ್ಚಿನ ಮಹತ್ವವಿದೆ. ಆಯುಧ ಪೂಜೆಯಂದು ಮನೆಯಲ್ಲಿ ಉಪಯೋಗಿಸುವ ಚೂರಿಯಿಂದ ಹಿಡಿದು ಎಲ್ಲಾ ವಿಧದ ಆಯುಧಗಳನ್ನು ಪೂಜಿಸಲಾಗುತ್ತಿದೆ. ಈ ದಿನ ಮನೆಯನ್ನು ಹೂಗಳಿಂದ ಅಲಂಕಾರ ಮಾಡಲಾಗುತ್ತಿದೆ. ಅಲ್ಲದೇ ಮನೆಯಲ್ಲಿರುವ ವಾಹನಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತಿದೆ. ಆಯುಧ ಪೂಜೆಯ …

Read More »