ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಎಷ್ಟಿದೆ ಎಂದರೆ ವಿಧಾನಸೌಧದ ನೌಕರರು ಕೆಲಸ ಕೊಡಿಸುವ ಡೀಲಿಗಿಳಿಯುತ್ತಾರೆ ಎಂದು ಕಾಂಗ್ರೆಸ್ ಆರೋಪಿಸಿದೆ, ಭ್ರಷ್ಟಜನತಾಪಾರ್ಟಿ ಎಂಬ ಹ್ಯಾಷ್ ಟ್ಯಾಗ್ ನಡಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಸಹಾಯಕನ ಮೇಲಾದ ಐಟಿ ದಾಳಿಯೇ ಎಲ್ಲವನ್ನೂ ಹೇಳುತ್ತಿದೆ. ಸಾರಿಗೆ ನೌಕರನಾಗಿದ್ದವನು ಯಡಿಯೂರಪ್ಪ ಸಹಾಯಕನಾದ ಮಾತ್ರಕ್ಕೆ 2000 ಕೋಟಿ ಆಸ್ತಿಯ ಒಡೆಯ ಎಂದಾದರೆ, ರೈಸ್ ಮಿಲ್‌ನಲ್ಲಿ ಲೆಕ್ಕ ಬರೆಯುತ್ತಿದ್ದವರು ಇನ್ನೆಷ್ಟು ಕೋಟಿ …
Read More »Daily Archives: ಅಕ್ಟೋಬರ್ 8, 2021
ಹಾನಗಲ್ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ
ಹಾವೇರಿ: ಜಿಲ್ಲೆಯ ಹಾನಗಲ್ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಶಿವರಾಜ ಸಜ್ಜನರ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಹಾನಗಲ್ ಪಟ್ಟಣದ ಕುಮಾರೇಶ್ವರ ಮಠದಿಂದ ಮೆರವಣಿಗೆ ಆರಂಭವಾಗಿತ್ತು. ಸಚಿವರಾದ ಮುರುಗೇಶ ನಿರಾಣಿ, ಶಿವರಾಮ ಹೆಬ್ಬಾರ, ಬಿ.ಸಿ.ಪಾಟೀಲ, ರಾಜುಗೌಡ, ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಅನೇಕರು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.
Read More »ಬೆಂಗಳೂರಿನ ರಸ್ತೆಗುಂಡಿಗೆ ಮತ್ತೊಂದು ಬಲಿ.. ಟಿಪ್ಪರ್ ಹರಿದು ಮಹಿಳೆ ಸ್ಥಳದಲ್ಲೇ ಸಾವು
ಬೆಂಗಳೂರು: ನಗರದಲ್ಲಿ ರಸ್ತೆಗುಂಡಿಗೆ ಸಾಮಾನ್ಯ ಜನರು ಬಲಿಯಾಗುತ್ತಿರುವ ದುರ್ಘಟನೆಗಳು ಮುಂದುವರೆದಿದ್ದು, ಇಂದು ಕೂಡ ಓರ್ವ ಮಹಿಳೆ ರಸ್ತೆಗುಂಡಿ ತಪ್ಪಿಸಲು ಹೋಗಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ಅಪಘಾತ ನಡೆದಿದ್ದು, ದ್ವಿ-ಚಕ್ರ ವಾಹನದಲ್ಲಿ ಬರುತ್ತಿದ್ದ ಮಹಿಳೆ ಮೇಲೆ ಹರಿದ ಟಿಪ್ಪರ್ ಲಾರಿ ಹರಿದಿದೆ. ಒಂದೇ ಕುಟುಂಬದ ಮೂವರು ಬೈಕ್ನಲ್ಲಿ ಚಲಿಸುತ್ತಿದ್ದ ವೇಳೆ ರಸ್ತೆಗುಂಡಿಯನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಮಹಿಳೆ ಮೇಲೆ ಟಿಪ್ಪರ್ …
Read More »ಮೋದಿ ರಾಜಕೀಯ ಸೇವೆಗೆ ಧನ್ಯವಾದ ಅರ್ಪಿಸಲು ಕಮಲ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ
ತುಮಕೂರು: ತುಮಕೂರು ಜಿಲ್ಲಾ ಬಿಜೆಪಿ ವತಿಯಿಂದ ಇಂದು ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಂಜಿನ ಮೆರವಣಿಗೆ ಮೂಲಕ ಪ್ರಧಾನಿ ಮೋದಿಯವರ ರಾಜಕೀಯ ಸೇವೆಗೆ ಬಿಜೆಪಿ ಕಾರ್ಯಕರ್ತರು ಧನ್ಯವಾದ ಅರ್ಪಿಸಿದ್ದಾರೆ. ಸೇವಾ ಮತ್ತು ಸಮರ್ಪಣಾ ಅಭಿಯಾನ ಹೆಸರಿನಲ್ಲಿ ಪಂಜಿನ ಮೆರವಣಿಗೆ ನಡೆಯಿತು, ಹನುಮಂತಪುರದ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಂಜು ಹಿಡಿದು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ವೇಳೆ 20 ವರ್ಷ ಸಾರ್ಥಕ ರಾಜಕೀಯ ಸೇವೆ …
Read More »ಐಟಿ ದಾಳಿ ಬೆನ್ನಲ್ಲೇ ಬಿಎಸ್ವೈ ಆಪ್ತನಿಗೆ CM ಸಿಎಂ ಕಚೇರಿಯಿಂದ ಗೇಟ್ಪಾಸ್..!
ಬೆಂಗಳೂರು: ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರ ಆಪ್ತ ಉಮೇಶ್ ಅವರಿಗೆ ಸಿಎಂ ಕಚೇರಿ ಡ್ಯೂಟಿಯಿಂದ ಗೇಟ್ ಪಾಸ್ ನೀಡಲಾಗಿದೆ. ಓಓಡಿ ಆದೇಶವನ್ನ ರಾಜ್ಯ ಸರ್ಕಾರ ರದ್ದುಗೊಳಿಸಿ, ಉಮೇಶ್ ಅವರಿಗೆ ಶಾಕ್ ನೀಡಿದೆ. ಅದರಂತೆ ಉಮೇಶ್ ಅವರ ಅನ್ಯ ಸೇವೆ ನಿಯೋಜನೆಯನ್ನು ಬಿಎಂಟಿಸಿ ವಾಪಸ್ ಪಡೆದಿದೆ. ಸರ್ಕಾರದ ಆದೇಶದಿಂದ ಇನ್ಮುಂದೆ ಉಮೇಶ್ ಅವರು ಸಿಎಂ ಸಚಿವಾಲಯದಲ್ಲಿ ಅನ್ಯಸೇವೆ ಆಧಾರದ ಮೇಲೆ ಕರ್ತವ್ಯ …
Read More »‘ಮಾತುಕೊಟ್ಟ ಬಿಎಸ್ವೈ ಮಾತಿಗೆ ತಪ್ಪಿ ಮನೆಯಲ್ಲಿ ಕುಳ್ತಿದ್ದಾರೆ’ -ಗುಡುಗಿದ ಪ್ರಸನ್ನಾನಂದಪುರಿ ಸ್ವಾಮೀಜಿ
ಬೆಳಗಾವಿ: ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5 ಮೀಸಲಾತಿಯನ್ನ ನೀಡಬೇಕು ಎಂಬ ಎಸ್ಟಿ ಸಮುದಾಯದ ಬಹುವರ್ಷಗಳ ಬೇಡಿಕೆ ಈಡೇರುಸುವಂತೆ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಈಗಾಗಲೇ ಅಕ್ಟೋಬರ್ 20ಕ್ಕೆ ಗಡುವು ನೀಡಿದ್ದಾರೆ. ಈ ನಡುವೆ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು, ‘ಜನ ಜಾಗೃತಿಗಾಗಿ ಜನ ಸ್ಪಂದನ’ ಕಾರ್ಯಕ್ರಮ ನಡೆಸಿ ಸಮುದಾಯದ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಇಂದು ಜಿಲ್ಲೆಯ ಸವದತ್ತಿ ತಾಲೂಕಿನ …
Read More »ಮೀನು ಹಿಡಿಯಲು ತೆರಳಿದ್ದ ಯುವಕನೋರ್ವ ನಾಪತ್ತೆ: ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ ಅಧಿಕಾರಿಗಳು
ಮೂಡಲಗಿ: ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕನೋರ್ವ ಗುರುವಾರ ರಾತ್ರಿ ನಾಪತ್ತೆಯಾಗಿರುವ ಘಟನೆ ಕಮಲದನ್ನಿಯಲ್ಲಿ ನಡೆದಿದೆ. ಉದಯ ಪರಿಶುರಾಮ ಹಾದಿಮನಿ (17) ನಾಪತ್ತೆಯಾದ ಯುವಕ. ಮೂಡಲಗಿ ತಾಲೂಕಿನ ಕಮಲದಿನ್ನಿಯ, ಘಟಪ್ರಭಾ ನದಿಯಲ್ಲಿ ಯುವಕ ನಿನ್ನೆ ಸಂಜೆ ವೇಳೆಗೆ ಮೀನು ಹಿಡಿಯಲು ಹೋಗಿದಾಗ ಆಕಸ್ಮಿಕ ಜಾರಿ ಬಿದಿದ್ದು, ನೀರಿನ ರಭಸಕ್ಕೆ ಉದಯ ಕೊಚ್ಚಿ ಹೋಗಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಗ ನಾಪತ್ತೆ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು …
Read More »ಬಾಗಲಕೋಟೆಯಲ್ಲಿ IT ದಾಳಿ ಅಂತ್ಯ; ತುಮಕೂರಲ್ಲಿ ಮುಂದುವರಿದ ಶೋಧಕಾರ್ಯ
ಬಾಗಲಕೋಟೆ/ ತುಮಕೂರು: ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿರುವ ಐಟಿ ಅಧಿಕಾರಿಗಳು ಇಂದು ಕೂಡ ಹಲವು ಭಾಗಗಳಲ್ಲಿ ದಾಳಿಯನ್ನ ಮುಂದುವರಿಸಿದ್ದಾರೆ. ಅದರಂತೆ ತುಮಕೂರು ಜಿಲ್ಲೆಯಲ್ಲಿ ಇಂದು ಕೂಡ ದಾಳಿ ಕಂಟಿನ್ಯೂ ಆಗಿದೆ. ಕೊರಟಗೆರೆ ತಾಲೂಕಿನ ಸಿಂಗ್ರಿಹಳ್ಳಿ ಬಳಿಯ ಸತ್ಯನಾರಾಯಣ ಕನ್ಸ್ಟ್ರಕ್ಷನ್ ಪ್ರೈ.ಲಿ. ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸ್ಎನ್ಸಿ ಕಂಪನಿಯ ಕಡತಗಳ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಎಸ್ಎನ್ಸಿ ಎತ್ತಿನಹೊಳೆ ಯೋಜನೆಯ ಪೈಪ್ ಲೈನ್ ಕಾಮಗಾರಿಯನ್ನ ನಡೆಸುತ್ತಿದೆ. ಅದರಂತೆ …
Read More »ಶವ ಹುಡುಕಲು ಹೋದವರು ಶಾರ್ಟ್ ಸರ್ಕ್ಯೂಟ್‌ಗೆ ಬಲಿ : ಕೃಷ್ಣಾ ನದಿಯಲ್ಲಿ ನಾಲ್ವರ ದುರ್ಮರಣ
ಮುದ್ದೇಬಿಹಾಳ : ಜಿಲ್ಲೆಯ ಕೃಷ್ಣಾ ನದಿಯಲ್ಲಿ ಈಜಲು ಹೋಗಿ, ನೀರು ಪಾಲಾದ ವ್ಯಕ್ತಿಯ ಶವ ಹುಡುಕಲು ಹೋಗಿದ್ದ ಮೂವರು ವಿದ್ಯುತ್ ಶಾರ್ಟ್ ಸಕ್ಯೂರ್ಟ್‌ಗೆ ಬಲಿಯಾಗಿ, ಒಟ್ಟು ನಾಲ್ವರು ಮೃತಪಟ್ಟ ಧಾರುಣ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಹತ್ತಿರದ ಕೃಷ್ಣಾ ನದಿಯಲ್ಲಿ ಗುರುವಾರ ಸಂಜೆ ಸಂಭವಿಸಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹರನಾಳದ ಶಿವಪ್ಪ ಸಿದ್ದಪ್ಪ ಅಬಳೂರ (78) ಎಂಬಾತ ಕೃಷ್ಣಾ ನದಿಯಲ್ಲಿ ಈಜಲು ಹೋದಾಗ ಮೃತಪಟ್ಟಿದ್ದರು. ಈ ವೃದ್ಧನ …
Read More »ಊಟ ಮಾಡಿ ಕುಳಿತ್ತಿದ್ದ ಸಹೋದರರ ಮೇಲೆ ಏಕಾಏಕಿ ಬಿದ್ದ ಗೋಡೆ : ಓರ್ವ ಸಾವು, ಇನ್ನೋರ್ವನಿಗೆ ಗಾಯ
ದಾವಣಗೆರೆ: ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿ, ಇನ್ನೊಬ್ಬರು ಗಾಯಗೊಂಡಿರುವ ಘಟನೆ ಗುರುವಾರ ದಾವಣಗೆರೆ ತಾಲೂಕಿನ ನರಗನಹಳ್ಳಿಯಲ್ಲಿ ಸಂಭವಿಸಿದೆ. ನರಗನಹಳ್ಳಿ ಗ್ರಾಮದ ಮಂಜುನಾಥ್(48) ಮೃತಪಟ್ಟವರು. ಮೃತ ಮಂಜುನಾಥ್ ಸಹೋದರ ಪರಶುರಾಮ್ (42)ಎಂಬುವರು ಗಾಯಗೊಂಡಿದ್ದಾರೆ. ಮಧ್ಯಾಹ್ನ ಊಟ ಮಾಡಿದ ನಂತರ ಸಹೋದರರಿಬ್ಬರು ಮಾತನಾಡಿಕೊಂಡು ಕೂತಿದ್ದ ಸಂದರ್ಭದಲ್ಲಿ ಏಕಾಏಕಿ ಗೋಡೆ ಕುಸಿದು ಬಿದ್ದಿದೆ. ತೀವ್ರ ಗಾಯಗೊಂಡ ಮಂಜುನಾಥ್‌ನನ್ನು ಆಸ್ಪತ್ರೆಗೆ ಕರೆ ತರುವ ವೇಳೆ ದಾರಿ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ. …
Read More »