Breaking News

Monthly Archives: ಜೂನ್ 2021

ಸ್ವಿಮ್ಮಿಂಗ್ ಪೂಲ್ ನಿರ್ಮಾಣದ ಬಗ್ಗೆ ಉತ್ತರ ಕೊಟ್ಟ ಸಿಂಧೂರಿ

ಮೈಸೂರು: ನಿರ್ಗಮಿತ ಮೈಸೂರು ಡಿ.ಸಿ ರೋಹಿಣಿ ಸಿಂಧೂರಿ ಕಳೆದ ಒಂದು ತಿಂಗಳಿನಿಂದ ಹಲವು ವಿಚಾರಗಳಲ್ಲಿ ಜನಪ್ರತಿನಿಧಿಗಳ ಆರೋಪಗಳಿಗೆ ಗುರಿಯಾಗಿದ್ದರು. ಅದ್ರಲ್ಲಿ ಜಿಲ್ಲಾಧಿಕಾರಿಯ ಸರ್ಕಾರಿ ನಿವಾಸದಲ್ಲಿ ಹೈಟೆಕ್​ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿಸಿದ ವಿಚಾರವೂ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಸಿಂಧೂರಿ ಸರ್ಕಾರಕ್ಕೆ ಉತ್ತರ ಕೊಟ್ಟಿದ್ದಾರೆ. ಡಿಸಿ ಮನೆ ಬಳಿ ಸ್ವಿಮ್ಮಿಂಗ್‌ಪೂಲ್ ನಿರ್ಮಾಣ‌ ಮಾಡಬೇಕೆಂಬುದು ಐದು ವರ್ಷಗಳ ಹಿಂದಿನ ಯೋಜನೆ ಎಂದು ನಿಖಾಧಿಕಾರಿ, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ ಪ್ರಕಾಶ್ ಅವರಿಗೆ ರೋಹಿಣಿ …

Read More »

ಸರ್ಕಾರವೇ ಗೋಹತ್ಯೆ ಮಾಡುತ್ತಿದೆ: ಎಚ್‌ಡಿಕೆ ಆರೋಪ

ಬೆಂಗಳೂರು: ರಾಸುಗಳಿಗೆ ಕಾಲು-ಬಾಯಿ ರೋಗಕ್ಕೆ ಲಸಿಕೆ ನೀಡದೆ ಇರುವುದರಿಂದ ಅವು ನರಳಾಡಿ ಸಾಯುವ ಸನ್ನಿವೇಶ ನಿರ್ಮಾಣವಾಗಿದೆ. ಲಸಿಕೆ ಅಭಿಯಾನ ನಡೆಸದೆ ಸರ್ಕಾರವೇ ಗೋಹತ್ಯೆಗೆ ಕಾರಣವಾಗಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಕುರಿತು ಶನಿವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಕಳೆದ ಅಕ್ಟೋಬರ್‌ನಲ್ಲಿ ಕಾಲು-ಬಾಯಿ ರೋಗಕ್ಕೆ ಲಸಿಕೆ ಅಭಿಯಾನ ನಡೆಯಬೇಕಿತ್ತು. ಕೆಂದ್ರ ಸರ್ಕಾರ ಅಭಿಯಾನ ನಡೆಸಿಲ್ಲ. ರಾಜ್ಯ ಸರ್ಕಾರವೂ ಕೇಳಿಲ್ಲ. ಈಗ ರಾಸುಗಳು ನರಳುತ್ತಿವೆ’ ಎಂದು …

Read More »

ಪೆಟ್ರೋಲ್ ಗರಿಷ್ಠ ದರ; 2ನೇ ಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ!

ಕಾರವಾರ, ಜೂನ್ 06; ದೇಶದಲ್ಲಿ ತೈಲ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗಾಗಲೇ ಹಲವು ಕಡೆ ಪೆಟ್ರೋಲ್ ದರ ಸಾರ್ವಕಾಲಿಕ ಏರಿಕೆಯಾಗಿ 100 ರೂ. ಗಡಿ ದಾಟಿದೆ. ಕರ್ನಾಟಕದಲ್ಲಿ ಕೂಡ ಹಲವು ಜಿಲ್ಲೆಗಳಲ್ಲಿ ದರ ಸೆಂಚುರಿ ಬಾರಿಸುವ ಹೊಸ್ತಿಲಲ್ಲಿದ್ದು, ಚಿಕ್ಕಮಗಳೂರಿನಲ್ಲಿ ಈಗಾಗಲೇ ಲೀಟರ್‌ಗೆ 100.06 ರೂ.ನಂತೆ ಬೆಲೆ ಇದೆ. ಇದರ ನಂತರದ ಸ್ಥಾನದಲ್ಲಿ ಉತ್ತರ ಕನ್ನಡವಿದ್ದು, ಕಾರವಾರದಲ್ಲಿ 99.57 ರೂ.ಗೆ ಬಂದುಮುಟ್ಟಿದೆ. ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಸಿದರೆ ಗಡಿ …

Read More »

ಸಿಎಂ ರಾಜೀನಾಮೆ ಹೇಳಿಕೆ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಹತ್ವದ ಮಾಹಿತಿ

ಹುಬ್ಬಳ್ಳಿ: ಪಕ್ಷದ ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿಯೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಂದ ರಾಜೀನಾಮೆ ಕೊಡಿಸುವ …

Read More »

ರಾತ್ರೋರಾತ್ರಿ ಬೆಂಗಳೂರಿಗೆ ತೆರಳಿದ ಯತ್ನಾಳ್: ಗಂಭೀರ ಸ್ವರೂಪ ಪಡೆದ ಸಿಎಂ ಬದಲಾವಣೆ ಚರ್ಚೆ

ವಿಜಯಪುರ: ಬಿ.ಎಸ್. ಯಡಿಯೂರಪ್ಪ ಸರ್ಕಾರದ ವಿರುದ್ಧ ನಿರಂತರ ಗುಡುತ್ತಲೇ ಇರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶನಿವಾರ ರಾತ್ರೋರಾತ್ರಿ ಬೆಂಗಳೂರಿಗೆ ತೆರಳಿದ್ದಾರೆ. ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೂ, ಯತ್ನಾಳ್ ಬೆಂಗಳೂರು ಭೇಟಿಗೂ ರಾಜಕೀಯ ತಳುಕು ಹಾಕಲಾಗುತ್ತಿದೆ. ವಾರದ ಹಿಂದೆ ಬೆಂಗಳೂರಿನಿಂದ ಮರಳಿದ್ದ ಯತ್ನಾಳ್, ಎಂದಿನಂತೆ ಕೋವಿಡ್ ನಿಯಂತ್ರಣಕ್ಕಾಗಿ ನಿತ್ಯವೂ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶನಿವಾರ ಪರಿಸರ ದಿನಾಚರಣೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಸಿ.ಎಂ. …

Read More »

ರಾಜೀನಾಮೆ ನೀಡಲು ಯಡಿಯೂರಪ್ಪಗೆ ಆರ್ ಎಸ್‌ಎಸ್ ಮನವೊಲಿಸಿದೆ: ವಿಶ್ವನಾಥ್

ಮೈಸೂರು: ದೆಹಲಿ ಹೇಳಿದಂತೆ ಕೇಳುವುದು ಮೊದಲಿಂದಲೂ ಇರುವ ಪರಿಪಾಠ. ರಾಜ್ಯದಲ್ಲಿ ಪರ್ಯಾಯ ನಾಯಕರನ್ನು ಮಾಡುತ್ತಾರೆ ಎಂದಿರುವುದು ಸ್ವಾಗತಾರ್ಹ. ನನಗೆ ಪರ್ಯಾಯ ನಾಯಕರಿದ್ದಾರೆ ಎಂದು ಹೇಳಿರುವುದು ಯಡಿಯೂರಪ್ಪರ ದೊಡ್ಡ ಮಾತು ಎಂದು ಎಂಎಲ್ ಸಿ ವಿಶ್ವನಾಥ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನ, ರಾಜಕೀಯ ನಾಯಕರು ಬಹಳ ವಿಶ್ವಾಸ ಇಟ್ಟುಕೊಂಡು ಬಂದಿದ್ದಾರೆ. ಯಡಿಯೂರಪ್ಪ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಹಿತಕ್ಕಾಗಿ ದೆಹಲಿ ನಾಯಕರ ಮಾತು ಕೇಳಿ ಕೆಳಗಿಳಿಯುತ್ತೇನೆ ಎಂದಿರುವುದನ್ನು ನಾನು ಸ್ವಾಗತ …

Read More »

-ಅನಾಥವಾಗಿದ್ದ ಬೆಳಗಾವಿ ಜಿಲ್ಲಾ ಆಸ್ಪತ್ರೆ,ಭೀಮ್ಸ್ ಈಗ ಮರು ಜೀವ

ಬೆಳಗಾವಿ-ಅನಾಥವಾಗಿದ್ದ ಬೆಳಗಾವಿ ಜಿಲ್ಲಾ ಆಸ್ಪತ್ರೆ,ಭೀಮ್ಸ್ ಈಗ ಮರು ಜೀವ ಪಡೆದುಕೊಂಂಡಿದೆ,ಎಂದಿಗೂ ಪಿಪಿಇ ಕಿಟ್ ಧರಿಸದ,ಕೋವೀಡ್ ವಾರ್ಡು ಎಲ್ಲಿದೆ ಅಂತಾ ಕಣ್ಣೆತ್ತಿಯೂ ನೋಡದ ಭೀಮ್ಸ್ ಅಧಿಕಾರಿಗಳು ಇವತ್ತು ಪಿಪಿಇ ಕಿಟ್ ಧರಿಸಿ ಭೀಮ್ಸ್ ಆಸ್ಪತ್ರೆಯಲ್ಲಿ ರೌಂಡ್ಸ್ ಹಾಕಿದ್ದಾರೆ. ಭೀಮ್ಸ್ ಪ್ರಭಾರಿ ನಿರ್ದೇಶಕ,ಉಮೇಶ ಕುಲಕರ್ಣಿ,ಅಡಳಿತಾಧಿಕಾರಿ ಸಯೀದಾ ಆಫ್ರೀನ್ ಬಳ್ಳಾರಿ,ಡಿಸ್ಟಿಕ್ ಸರ್ಜನ್ ಡಾ. ಸುಧಾಕರ,ಮೆಡಿಕಲ್ ಸುಪ್ರಿಡೆಂಟ್ ದಂಡಗಿ ಸೇರಿದಂತೆ ಬಹುತೇಕ ಭೀಮ್ಸ್ ಆಡಳಿತ ಮಂಡಳಿಯೇ ಇವತ್ತು ಭೀಮ್ಸ್ ಆಸ್ಪತ್ರೆಯಲ್ಲಿ ಹೆಜ್ಜೆ ಇಟ್ಟಿದೆ. ಸರ್ಕಾರ ಭೀಮ್ಸ್ …

Read More »

ಶವ ಪಡೆಯುವ‌ ವಿಚಾರಕ್ಕೆ ಸಮಂಧಿಸಿದಂತೆ ಬೆಳಗಾವಿ ಜಿಲ್ಲಾ ಆಸ್ಪತ್ರೆ ಎದುರು ಮೃತ ವ್ಯೆಕ್ತಿಯ ಸಮಂಧಿಕರು ಹಾಗು ವೈದ್ಯಕೀಯ ಸಿಬ್ಬಂಧಿ ನಡುವೆ ಗಲಾಟೆ

ಬೆಳಗಾವಿ-ಕೊರೊನಾ ಸೊಂಕಿನಿಂದ ಮೃತಪಟ್ಟ ವ್ಯಕ್ತಿ ಶವ ಪಡೆಯುವ‌ ವಿಚಾರಕ್ಕೆ ಸಮಂಧಿಸಿದಂತೆ ಬೆಳಗಾವಿ ಜಿಲ್ಲಾ ಆಸ್ಪತ್ರೆ ಎದುರು ಮೃತ ವ್ಯೆಕ್ತಿಯ ಸಮಂಧಿಕರು ಹಾಗು ವೈದ್ಯಕೀಯ ಸಿಬ್ಬಂಧಿ ನಡುವೆ ಗಲಾಟೆ ನಡೆದಿದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆ ಮುಂಭಾಗ ಬಿಮ್ಸ್ ಸಿಬ್ಬಂದ್ಧಿ- ಸಂಬಂಧಿಗಳ ನಡುವೆ ಒಂದು ಘಂಟೆಗೂ ಹೆಚ್ವು ಕಾಲ ಗಲಾಟೆ,ಗದ್ದಲ,ಮುಂದುವರೆದಿತ್ತು.ಕೊರೊನಾದಿಂದ ಸುರೇಶ ಮೇತ್ರಿ(51) ಕೊರೊನಾದಿಂದ ಸಾವನೊಪ್ಪದ್ದು ಮೃತದೇಹ ಹಸ್ತಾಂತರ ಮಾಡುವ ವಿಚಾರದಲ್ಲಿ ಈ ಗಲಾಟೆ ನಡೆದಿದೆ. ಕಾಕತಿ ಗ್ರಾಮದ ಅಂಬೇಡ್ಕರ್ ಗಲ್ಲಿ ‌ನಿವಾಸಿ …

Read More »

2 ರಾಜ್ಯಗಳು 12 ನೇ ತರಗತಿ ಪರೀಕ್ಷೆಗಳನ್ನು ರದ್ದು!!!

ನವದೆಹಲಿ: ದೇಶದಲ್ಲಿ ಕೋವಿಡ್ -19 ಬಿಕ್ಕಟ್ಟಿನ ಮಧ್ಯೆ ಈವರೆಗೆ 12 ರಾಜ್ಯಗಳು ತಮ್ಮ 12 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿವೆ. ಅದರಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಉತ್ತರಾಖಂಡ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಒಡಿಶಾ, ತಮಿಳುನಾಡು, ಹಿಮಾಚಲ ಪ್ರದೇಶ, ಗೋವಾ ಮತ್ತು ಕರ್ನಾಟಕ ಸೇರಿವೆ. ಇನ್ನು, ಕೇರಳ ಮತ್ತು ಬಿಹಾರದಲ್ಲಿ ಈಗಾಗಲೇ 12 ನೇ ತರಗತಿ ರಾಜ್ಯ ಮಂಡಳಿ ಪರೀಕ್ಷೆಗಳನ್ನು ನಡೆಸಲಾಗಿದೆ. 12 ನೇ ತರಗತಿ ರಾಜ್ಯ ಮಂಡಳಿ ಪರೀಕ್ಷೆಗಳನ್ನು …

Read More »

ರೈತರ ಬಿಡುಗಡೆಗೆ ಆಗ್ರಹಿಸಿ ಪೊಲೀಸ್‌ ಠಾಣೆ ಮುಂದೆ ಟಿಕಾಯತ್‌, ಯಾದವ್‌ ಧರಣಿ

ಟೊಹಾನಾ, ಹರಿಯಾಣ: ಬಂಧಿತ ಇಬ್ಬರು ರೈತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ರೈತ ಮುಖಂಡರಾದ ರಾಕೇಶ್‌ ಟಿಕಾಯತ್, ಗುರ್ನಾಮ್ ಸಿಂಗ್‌ ಚದೂನಿ ಹಾಗೂ ಸಂಯುಕ್ತ ಕಿಸಾನ್‌ ಮೋರ್ಚಾ ಮುಖಂಡ ಯೋಗೇಂದ್ರ ಯಾದವ್ ಅವರು ಫತೇಹಾಬಾದ್‌ನ ಸದರ್‌ ಪೊಲೀಸ್‌ ಠಾಣೆ ಮುಂದೆ ಶನಿವಾರ ರಾತ್ರಿ ಧರಣಿ ನಡೆಸಿದರು. ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಪಂಜಾಬ್‌ ಹಾಗೂ ಹರಿಯಾಣದ ವಿವಿಧೆಡೆ ಶನಿವಾರ ಪ್ರತಿಭಟನೆ ಹಮ್ಮಿಕೊಂಡಿದ್ದವು. ಈ ವೇಳೆ ಫತೇಹಾಬಾದ್‌ನಲ್ಲಿರುವ ಜೆಜೆಪಿ ಶಾಸಕ …

Read More »