Breaking News

Monthly Archives: ಏಪ್ರಿಲ್ 2021

RSS ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಕೊರೊನಾವೈರಸ್!

ನಾಗ್ಪುರ್, ಏಪ್ರಿಲ್ 10: ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಹರಡುವಿಕೆ ವೇಗ ಹೆಚ್ಚುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕೊವಿಡ್-19 ಸೋಂಕು ತಗುಲಿರುವು ಹಿನ್ನೆಲೆ ಮೋಹನ್ ಭಾಗವತ್ ಅವರನ್ನು ನಾಗ್ಪುರದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಅವರ ಜೊತೆಗೆ ಸಂಪರ್ಕಕ್ಕೆ ಬಂದಿದ್ದವರು ಸ್ವಯಂಪ್ರೇರಿತರಾಗಿ ಕೊರೊನಾವೈರಸ್ ಸೋಂಕಿನ ತಪಾಸಣೆ …

Read More »

ಬೆಳಗಾವಿ ವಿಚಾರದಲ್ಲಿನ ಶಿವಸೇನೆ ಹೇಳಿಕೆಗೆ ಕಾಂಗ್ರೆಸ್‌ ನಿಲುವೇನು?: ಬಿಜೆಪಿ

ಬೆಂಗಳೂರು: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಶಿವಸೇನೆಯ ಹೇಳಿಕೆ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದ ನಿಲುವು ಏನು ಎಂದು ಬಿಜೆಪಿ ರಾಜ್ಯ ಘಟಕ ಟ್ವಿಟರ್‌ನಲ್ಲಿ ಪ್ರಶ್ನಿಸಿದೆ. ‘ಬೆಳಗಾವಿಯು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’ ಎಂಬ ಅಲ್ಲಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿಕೆ ಕುರಿತು ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ ರಾಜ್ಯ ಘಟಕ, ‘ಪಕ್ಕದ ರಾಜ್ಯದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್‌ ಮೈತ್ರಿಯಲ್ಲಿವೆ. ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿರೋಧ ಪಕ್ಷದ …

Read More »

ಸದ್ಯಕ್ಕೆ ನೈಟ್ ಕರ್ಫ್ಯೂ, ಉಪಚುನಾವಣೆ ಮುಗಿತಿದ್ದಂತೆ ಕಠಿಣ ನಿರ್ಬಂಧ ಜಾರಿ ಸಾಧ್ಯತೆ

ರಾಜ್ಯದಲ್ಲಿ ಕೊರೋಣಾ ಎರಡನೆಯ ಅಲೆ ಆತಂಕವನ್ನುಂಟುಮಾಡಿದೆ. ದಿನೇದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಸೋಂಕು ಹೆಚ್ಚಾಗಿ ಕಂಡುಬರುತ್ತಿರುವ 8 ಮಹಾನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ನೈಟ್ ಕರ್ಫ್ಯೂ ನಿಂದ ಪ್ರಯೋಜನವಿಲ್ಲ, ರಾತ್ರಿ ಜನ ಸಂಚಾರ ವಿರಳವಾಗಿರುತ್ತದೆ. ಈ ಸಂದರ್ಭದಲ್ಲಿ ಕೊರೋನಾ ಹರಡುವುದಿಲ್ಲ ಎಂದೆಲ್ಲ ಟೀಕೆಗಳು ಕೇಳಿಬರುತ್ತಿವೆ. ಆದರೆ, ಇದಿನ್ನು ಸ್ಯಾಂಪಲ್ ಮಾತ್ರ. ಸದ್ಯಕ್ಕೆ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಹಂತಹಂತವಾಗಿ ಉಳಿದ ನಗರಗಳಿಗೂ ವಿಸ್ತರಿಸಲಾಗುವುದು. ಉಪ ಚುನಾವಣೆ ಮುಗಿಯುತ್ತಿದ್ದಂತೆ …

Read More »

ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ

ಬೆಂಗಳೂರು: ಶನಿವಾರದಿಂದ (ಏ. 10) ಇದೇ 20ರವರೆಗೆ ‘ಕೊರೊನಾ ಕರ್ಫ್ಯೂ’ (ರಾತ್ರಿ ಕರ್ಫ್ಯೂ) ಜಾರಿಗೆ ಬರಲಿರುವ ನಗರಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಎಲ್ಲ ವಾಣಿಜ್ಯ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ- ಮಣಿಪಾಲ, ಬೀದರ್‌, ಕಲಬುರ್ಗಿ ಮತ್ತು ತುಮಕೂರು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದೆ. …

Read More »

ಲಾಡ್ಜ್‌ನಲ್ಲಿ ಮಹಿಳೆ ಆತ್ಮಹತ್ಯೆ: ಜತೆಗಿದ್ದ ವ್ಯಕ್ತಿಯ ಸ್ಥಿತಿ ಗಂಭೀರ

ಗೋಣಿಕೊಪ್ಪಲು: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ಶುಕ್ರವಾರ ಸಂಜೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜತೆಯಲ್ಲಿದ್ದ ತೋಲಂಡ ಸುಭಾಷ್ ಚಂಗಪ್ಪ ಎಂಬುವವರೂ ಆತ್ಮಹತ್ಯೆಗೆ ಯತ್ನಿಸಿ, ಬದುಕುಳಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಸುಭಾಷ್ ಚಂಗಪ್ಪ ಲಾಡ್ಜ್‌ನಲ್ಲಿ ಕೊಠಡಿ ಪಡೆಯುವಾಗ ನಾಪೋಕ್ಲು ಸಮೀಪದ ಪೇರೂರು ಗ್ರಾಮದ ವಿಳಾಸ ನೀಡಿದ್ದಾರೆ. ಮೃತ ಮಹಿಳೆಯ ಕೊಠಡಿಯಲ್ಲಿ ಐಡಿ ಕಾರ್ಡ್ ಹಾಗೂ ಮೊಬೈಲ್ ದೊರೆತ್ತಿದ್ದು, ಇದರಲ್ಲಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಎಂದಿದ್ದು, ಹೆಸರು …

Read More »

ಡಿಸಿಎಂ ಗೋವಿಂದ ಕಾರಜೋಳಗೆ ಮತ್ತೆ ಕೋವಿಡ್‌ ಸೋಂಕು

ಮುಧೋಳ(ಬಾಗಲಕೋಟೆ ಜಿಲ್ಲೆ): ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮತ್ತೆ ಕೊರೊನಾ ಸೋಂಕು ತಗುಲಿದ್ದು, ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಅವರು ಗುಣಮುಖರಾಗುತ್ತಿದ್ದು ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಅವರಿಗೆ ನಾಲ್ಕು ದಿನ ವಿಶ್ರಾಂತಿಯ ಅಗತ್ಯವಿದೆ’ ಎಂದು ಮಣಿಪಾಲ ಆಸ್ಪತ್ರೆ ಮುಖ್ಯಸ್ಥ ಡಾ.ಸುರ್ದಶನ ಬಲ್ಲಾಳ್ ತಿಳಿಸಿದ್ದಾರೆ. ಕಳೆದ ವರ್ಷವೂ ಅವರಿಗೆ ಸೋಂಕು ತಗುಲಿತ್ತು, ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು.

Read More »

ಕಂಡ ಕಂಡವರಿಗೆ ಕರೆದು ಕರೆದು ಪ್ರಶಸ್ತಿ ವಿತರಣೆ ಮಾಡಿದ ಸಚಿವರು,ಜಲಶಕ್ತಿ ಅಭಿಯಾನ ಸಮಾರಂಭದಲ್ಲಿ ಮಹಾಯಡವಟ್ಟು

ಹುಬ್ಬಳ್ಳಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆಯಿಂದ ಹುಬ್ಬಳ್ಳಿಯಲ್ಲಿಂದು ರಾಜ್ಯ ಮಟ್ಟದ ಜಲಶಕ್ತಿ ಅಭಿಯಾನ ಸಮಾರಂಭ ಜರುಗಿತು. ಡೆನಿಸನ್ಸ್ ಹೋಟೆಲ್ ಆವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಉದ್ಘಾಟನೆ ಮಾಡಿದರು. ಆದರೆ ಅರ್ಥಪೂರ್ಣವಾಗಿ ನಡಯಬೇಕಾದ ಸಮಾರಂಭದಲ್ಲಿ ಸಚಿವರು ಕಂಡ ಕಂಡವರಿಗೆ ಕರೆದು ಕರೆದು ಪ್ರಶಸ್ತಿ ವಿತರಣೆ ಮಾಡುವ ಮೂಲಕ ಮಹಾ ಯಡವಟ್ಟು ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಮಾರಂಭದಲ್ಲಿ ಕೆರೆ, ಕಲ್ಯಾಣಿ, ನಾಲಾ ಪುನಶ್ಚೇತನ, ಗೋಕಟ್ಟೆ …

Read More »

ಸಾರಿಗೆ ನೌಕರರ ಮೂಲ ವೇತನ ಎಷ್ಟು? ಆರಂಭಿಕ ಸಂಬಳ ಎಷ್ಟು ಸಿಗುತ್ತೆ?

ಬೆಂಗಳೂರು: ಸಾರಿಗೆ ನೌಕರರು 6ನೇ ವೇತನ ಆಯೋಗ ಶಿಫಾರಸ್ಸಿನ ಪ್ರಕಾರ ಸಂಬಳ ಜಾರಿ ಮಾಡುವಂತೆ ಪಟ್ಟು ಹಿಡಿದು ಮುಷ್ಕರ ಮಾಡುತ್ತಿದ್ದಾರೆ. ಈ ನಡುವೆ ನೌಕರರ ಸಂಬಳದ ಬಗ್ಗೆ ತಪ್ಪು ವರದಿಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಇಂದು ಯಾರಿಗೆ ಎಷ್ಟು ಆರಂಭಿಕ ವೇತನ ನೀಡಲಾಗುತ್ತದೆ ಎಂಬ ವಿವರವನ್ನು ಬಿಡುಗಡೆ ಮಾಡಿದೆ.   ಚಾಲಕರು ಮೂಲ ವೇತನ – 12,400 ರೂ. ಮೂಲ ತುಟ್ಟಿಭತ್ಯೆ – 5,611 ರೂ. ಒಟ್ಟು ಮೂಲ …

Read More »

2021ರ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿಯ ವೇಗಿ ಹರ್ಷಲ್ ಪಟೇಲ್ ಮುಂಬೈ ವಿರುದ್ಧ ಇತಿಹಾಸ ನಿರ್ಮಿಸಿದ್ದಾರೆ.

ಚೆನ್ನೈ: 2021ರ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿಯ ವೇಗಿ ಹರ್ಷಲ್ ಪಟೇಲ್ ಮುಂಬೈ ವಿರುದ್ಧ ಇತಿಹಾಸ ನಿರ್ಮಿಸಿದ್ದಾರೆ. 5 ಬಾರಿಯ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ತಂಡದ ವಿರುದ್ಧ ಇಲ್ಲಿಯಯವರೆಗೆ ಯಾರೂ 5 ವಿಕೆಟ್ ಪಡೆದಿರಲಿಲ್ಲ. ಆದರೆ ಈ ಬಾರಿ ಹರ್ಷಲ್ ಪಟೇಲ್ 5 ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಹರ್ಯಾಣದ ಮಧ್ಯಮ ವೇಗಿ ಬೌಲರ್ ಹರ್ಷಲ್ ಪಟೇಲ್ ಅವರನ್ನು ಕೊಹ್ಲಿ 5ನೇಯವರಾಗಿ ಬೌಲಿಂಗ್ ಇಳಿಸಿದ್ದರು. ಹರ್ಷಲ್ …

Read More »

ಕಾಂಗ್ರೆಸ್ ಪಕ್ಷದ ಇತಿಹಾಸವೇ, ಈ ದೇಶದ ಇತಿಹಾಸ ” ಶ್ರೀ ಸತೀಶಣ್ಣಾ ಜಾರಕಿಹೊಳಿಯವರ ಪರ ಬೃಹತ್ ಪ್ರಚಾರ ಸಭೆ

ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಹಿನ್ನಲೆಯಲ್ಲಿ ಇವತ್ತು ಬಡಸ್ ಕೆ ಎಚ್ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಡಿ ಕೆ ಶಿವಕುಮಾರವರ ನೇತ್ರತ್ವದಲ್ಲಿ ಶ್ರೀ ಸತೀಶಣ್ಣಾ ಜಾರಕಿಹೊಳಿಯವರ ಪರ ಬೃಹತ್ ಪ್ರಚಾರ ಸಭೆಯನ್ನು ಕೈಗೊಳ್ಳಲಾಯಿತು. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಅವಲೋಕಿಸುವ ಮುಖೇನ ಪ್ರಚಾರಕ್ಕೆ ಚಾಲನೆಯನ್ನು ನೀಡಲಾಯಿತು. ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟಂತಹ ಕೊಡುಗೆಗಳನ್ನು ಸ್ಮರಿಸುತ್ತಾ ಅನೇಕ ಮಹನೀಯರು ಹಗಲು ರಾತ್ರಿಯನ್ನದೇ ದೇಶಕ್ಕಾಗಿ ದುಡಿದು ದೇಶವನ್ನು ಸುಭದ್ರವಾಗಿ …

Read More »