Breaking News

Daily Archives: ಏಪ್ರಿಲ್ 18, 2021

ಲಸಿಕೆ ಪಡೆದ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್

ಬೆಳಗಾವಿ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ನಗರದ ವಂಟಮುರಿ ಕಾಲನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ (ಏ.18) ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡರು. ಇದಕ್ಕೂ ಎಂಟು ವಾರಗಳ ಮುಂಚೆ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಅನ್ನು‌‌ ಅವರು ಪಡೆದುಕೊಂಡಿದ್ದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ; ಆದ್ದರಿಂದ ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲರೂ ಲಸಿಕೆಯನ್ನು …

Read More »

ಕೊರೋನ ಸಂಕಷ್ಟ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ: ಡಿ.ಕೆ.ಶಿವಕುಮಾರ್

ಬೆಂಗಳೂರು, ಎ. 18: ಒಂದೂವರೆ ವರ್ಷದಿಂದಲೂ ಎದುರಾಗಿರುವ ಕೊರೋನ ಸಂಕಷ್ಟವನ್ನು ನಿಭಾಯಿಸಲಾಗದಿದ್ದ ಮೇಲೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಆಗ್ರಹಿಸಿದ್ದಾರೆ. ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಮುಗಿಯುವವರೆಗೂ ರಾಜ್ಯದ ಎಲ್ಲ ಜನರಿಗೂ ಉಚಿತ ಆರೋಗ್ಯ ಸೇವೆ ಒದಗಿಸಬೇಕು. ಕೋವಿಡ್ ಆರಂಭದಿಂದ ಈವರೆಗೂ ಪ್ರತಿಪಕ್ಷವಾಗಿ ಕಾಂಗ್ರೆಸ್ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಜಾರಿಗೊಳಿಸಲಾದ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ. ಗಂಟೆ ಹೊಡಿಯಿರಿ, …

Read More »

‘ದೇಶದಲ್ಲೇ ಅತಿಹೆಚ್ಚು ಆಸ್ಪತ್ರೆ ನಮ್ಮಲ್ಲಿವೆ, ಆದರೂ ಸರ್ಕಾರ ಕೈಚೆಲ್ಲಿ ಕೂತಿದೆ’

ಬೆಂಗಳೂರು: ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಆಸ್ಪತ್ರೆಗಳಿವೆ. ದೇಶದಲ್ಲೇ ತಜ್ಞವೈದ್ಯರು ನಮ್ಮಲ್ಲಿದ್ದಾರೆ ಹಾಗಿದ್ದರೂ ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದ ಸರ್ಕಾರ ಕೈಚೆಲ್ಲಿ ಕೂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕಿಡಿಕಾರಿದ್ದಾರೆ. ಇಂದು ನಗರದಲ್ಲಿ ಮಾತನಾಡಿದ ಡಿಕೆಎಸ್​ ಸರ್ಕಾರಕ್ಕೆ ಯಾವುದೇ ಸರಿಯಾದ ಯೋಜನೆ ಇಲ್ಲ. ಹೋಟೆಲ್​ಗಳನ್ನ ವಶಕ್ಕೆ ಪಡೆದು 10 ಸಾವಿರ ಬೆಡ್​ಗಳನ್ನ ಮಾಡಿದ್ರು. ಆದರೂ ರಾಜ್ಯಲ್ಲಿ ಬೆಡ್​ ಇಲ್ಲ. ರೆಮ್ಡೆಸಿವಿರ್ ಇಂಜೆಕ್ಷನ್​ ಸಿಗ್ತಿಲ್ಲ. ಆಸ್ಪತ್ರೆಗಳಲ್ಲಿ‌ ಹಾಸಿಗೆಗಳು ಸಿಗ್ತಿಲ್ಲ ಅಧಿಕಾರಿಗಳು ಏನು …

Read More »

24ಕ್ಕೂ ಹೆಚ್ಚು IAS ಅಧಿಕಾರಿಗಳಿಗೆ ಕೊರೊನಾ ಸೋಂಕು; ಆಡಳಿತದ ಮೇಲೆ ಎಫೆಕ್ಟ್

ನವದೆಹಲಿ: ಕೊರೊನಾ ವೈರಸ್​ ದೇಶದ ಸಿವಿಲ್ ಸರ್ವೀಸ್ ಅಧಿಕಾರಿಗಳ ಮೇಲೆ ಸವಾರಿ ಮಾಡ್ತಿದೆ. ಆತಂಕಕಾರಿ ವಿಚಾರ ಏನಂದ್ರೆ ಕೇಂದ್ರ ಆರೋಗ್ಯ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳ ಪ್ರಮುಖ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2 ಡಜನ್​​ಗೂ ಹೆಚ್ಚು ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿದೆ ಅಂತಾ ವರದಿಯಾಗಿದೆ. ಇದರಿಂದಾಗಿ ಕೊರೊನಾ ವಿರುದ್ಧದ ಹೋರಾಟಕ್ಕೆ ಹಾಗೂ ಸುಭದ್ರ ಆಡಳಿತಕ್ಕೆ ದೊಡ್ಡ ಮಟ್ಟದಲ್ಲಿಯೇ ಹೊಡೆತ ಬೀಳುತ್ತಿದೆ. ಕಳೆದ 15 ದಿನಗಳಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಅಧಿಕಾರಿ …

Read More »

ಅಬ್ಬರಿಸಿದ ಮ್ಯಾಕ್ಸ್‌ವೆಲ್‌, ಎಬಿಡಿ : ಕೋಲ್ಕತ್ತಾಗೆ 205 ರನ್ ಗಳ ಗುರಿ ನೀಡಿದ ರಾಯಲ್ ಚಾಲೆಂಜರ್ಸ್

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 10ನೇ ಪಂದ್ಯವು ಇಂದು ಚೆನ್ನೈನ ಎಮ್.ಎ. ಚಿದಂಬರಂ ಮೈದಾನದಲ್ಲಿ ನಡೆಯುತ್ತಿದೆ. ಎರಡು ಪಂದ್ಯಗಳನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್, ಕೋಲ್ಕತ್ತಾ ವಿರುದ್ಧ ಸೆಣೆಸಾಡುತ್ತಿದೆ. ಹತ್ತು ರನ್‌ ಗಳಿಸಸೋ ಮೊದಲೇ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್‌ಸಿಬಿ ತಂಡಕ್ಕೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಸರೆಯಾಗಿ ನಿಂತು 49 ಎಸೆತಗಳಲ್ಲಿ 9 ಫೋರ್‌ ಮತ್ತು 3 ಸಿಕ್ಸರ್‌ …

Read More »

ಕೊರೋನದಿಂದ ಮಿತಿಮೀರಿದ ಸಾವು; ಸುಟ್ಟು ಭಸ್ಮವಾಯಿತು ವಿದ್ಯುತ್ ಚಿತಾಗಾರ ಮಷಿನ್

ಸೊಲ್ಲಾಪುರ: ಮಹಾಮಾರಿ ಕೊರೋನಾದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈ ಸಮಯದಲ್ಲಿ ಸತ್ತವರ ಶವ ಸುಡಲು ಇದ್ದ ವಿದ್ಯುತ್ ಚಿತಾಗಾರದ ಮಷಿನ್‌ ಸುಟ್ಟುಹೋದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ನಗರದಲ್ಲಿ ಇಂದು ನಡೆದಿದೆ. ಹೀಗಾಗಿ ಶವಗಳನ್ನ ಸುಡೋದಕ್ಕೂ ಸೊಲ್ಲಾಪುರ ಮಹಾನಗರ ಪಾಲಿಕೆ ಅಧಿಕಾರಿಗಳು ಪರದಾಟ ನಡೆಸುತ್ತಿದ್ದಾರೆ. ಸೊಲ್ಲಾಪುರ ನಗರದಲ್ಲಿ ಡೆಡ್ಲಿ ಕೊರೋನಾದಿಂದ ಪ್ರತಿನಿತ್ಯ 30ಕ್ಕೂ ಅಧಿಕ ಜನರ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಗರದಲ್ಲಿದ್ದ ವಿದ್ಯುತ್ ಚಿತಾಗಾರದ ಮಷಿನ್‌ ಸುಟ್ಟುಹೋದ ಪರಿಣಾಮ ಗ್ಯಾಸ್ …

Read More »

ವೀಕೆಂಡ್​ ಮೋಜಿಗೆ ಬಂದಿದ್ದ ಯುವಕ-ಯುವತಿ ಜಲಪಾತದಿಂದ ಕೆಳಗೆ ಬಿದ್ದು ದಾರುಣ ಸಾವು

ಮಡಿಕೇರಿ ; ಇಲ್ಲಿಗೆ ಸಮೀಪದ ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಇಬ್ಬರು ದಾರುಣವಾಗಿ ಸಾವಿಗೀಡಾಗಿದ್ದಾರೆ. ಮೃತರನ್ನು ಶಶಿಕುಮಾರ್​ (32) ಮತ್ತು ದಿವ್ಯ (20) ಎಂದು ಗುರುತಿಸಲಾಗಿದೆ. ಮೃತ ಶಶಿ ಕುಮಾರ್‌ ಸುಂಟಿಕೊಪ್ಪದ ಗುತ್ತಿಗೆದಾರ ರಾಮ ಎಂಬುವವರ ಪುತ್ರನಾಗಿದ್ದು ಅನೇಕ ವರ್ಷಗಳಿಂದ ಬೆಂಗಳೂರಿನ ಕಂಪೆನಿಯಲ್ಲಿ ಕೆಲಸ ಮಾಡುತಿದ್ದ. ಯುವತಿ ದಿವ್ಯಾ ಕೂಡ ಸುಂಟಿಕೊಪ್ಪದವಳೇ ಆಗಿದ್ದಾಳೆ ಸೋಮವಾರಪೇಟೆ ತಾಲೂಕಿನ ಮಲ್ಲಳ್ಲಿ ಜಲಪಾತದಲ್ಲಿ ಇಂದು ಬೆಳಗ್ಗೆ 9.30 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. …

Read More »

ನಾಳೆ ಬೆಂಗಳೂರಿಗರಿಗೆ ಕಾದಿದೆ ‘ಲಾಕ್’ ಶಾಕ್..!

ಬೆಂಗಳೂರು,ಏ.18- ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಡಿವಾಣ ಹಾಕುವ ಕಾರಣಕ್ಕಾಗಿ ನಾಳೆಯ ಸಭೆಯ ಬಳಿಕ ಪ್ರತ್ಯೇಕ ಮಾರ್ಗಸೂಚಿಯನ್ನು ಜಾರಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಲಾಕ್‍ಡೌನ್, ಸೆಮಿಲಾಕ್ ಡೌನ್ ಇಲ್ಲವೇ ವಾರಂತ್ಯದ ಲಾಕ್‍ಡೌನ್ (ವೀಕ್ ಎಂಡ್) ಜಾರಿಯಾಗುವುದು ಬಹುತೇಕ ಖಚಿತ ಎಂಬ ಸುಳಿವನ್ನು ಪರೋಕ್ಷವಾಗಿ ನೀಡಿದ್ದಾರೆ. ಕೊರೊನಾ ಪಾಸಿಟಿವ್ ಹಿನ್ನಲೆಯಲ್ಲಿ ಮಣಿಪಾಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ …

Read More »

ರೇವ್ ಪಾರ್ಟಿ ಆಯೋಜನೆ; ಮಹಿಳಾ ಹೆಡ್ ಕಾನ್ಸ್ ಟೇಬಲ್ ಅಮಾನತು

ಮಂಗಳೂರು: ಕೊರೊನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಜಾರಿಯಾಗುತ್ತಿದ್ದಂತೆಯೇ ಭರ್ಜರಿ ರೇವ್ ಪಾರ್ಟಿ ಆಯೋಜನೆ ಮಾಡಿ, ಪುತ್ರನ ಅಕ್ರಮಗಳಿಗೆ ಬೆಂಬಲ ನೀಡಿದ್ದ ಆರೋಪ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್, ಎಕನಾಮಿಕ್, ನಾರ್ಕೊಟಿಕ್ ಠಾಣೆ ಮಹಿಳಾ ಹೆಡ್ ಕಾನ್ಸ್ ಟೇಬಲ್ ಓರ್ವರನ್ನು ಅಮಾನತು ಮಾಡಲಾಗಿದೆ. ಶ್ರೀಲತಾ ಅಮಾನತಾದ ಮಹಿಳಾ ಕಾನ್ಸ್ ಟೇಬಲ್. ರಾಜ್ಯದ 8 ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಯಾಗುತ್ತಿದ್ದಂತೆ ಏಪ್ರಿಲ್ 10ರಂದು ಹಾಸನ ಜಿಲ್ಲೆಯ ಹೈದೂರು ಗ್ರಾಮದ ರೆಸಾರ್ಟ್ ನಲ್ಲಿ ರಾಜಾರೋಷವಾಗಿ ರೇವ್ …

Read More »

ಕೊರೊನಾ ಗೈಡ್ ಲೈನ್ ಉಲ್ಲಂಘಿಸಿ ಪರೀಕ್ಷೆ: ರ್ಯಾಂಕ್ ಬಂದವರಿಗೆ ಬಹುಮಾನದ ಆಮಿಷ – ಕರಿಯರ್ ಅಕಾಡೆಮಿ ಮೇಲೆ ಪೊಲೀಸರ ದಾಳಿ

ಧಾರವಾಡ: ಕೊರೊನಾ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಪರೀಕ್ಷೆ ನಡೆಸುತ್ತಿದ್ದ ವಿದ್ಯಾಕಾಶಿ ಕರಿಯರ್ ಅಕಾಡೆಮಿ ಮೇಲೆ ಪೊಲೀಸರು ದಾಳಿ ನಡೆಸಿ ಪರೀಕ್ಷೆ ನಿಲ್ಲಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದೂ ಅಲ್ಲದೇ ರ್ಯಾಂಕ್ ಬಂದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿ, ಸಂಸ್ಥೆ ಪರೀಕ್ಷೆ ನಡೆಸುತ್ತಿತ್ತು. ಬಹುಮಾನದ ಆಸೆಗಾಗಿ ನೂರಾರು ವಿದ್ಯಾರ್ಥಿಗಳು ಕೊರೊನಾ ಭೀಕರತೆ ನಡುವೆಯೂ ಜೀವದ ಹಂಗುತೊರೆದು ಪರೀಕ್ಷೆ ಬರೆಯಲು ಬಂದಿದ್ದಾರೆ. ಸ್ಪರ್ಧಾತ್ಮಕ ಮಾದರಿ ಪರೀಕ್ಷೆ ಇದಾಗಿದ್ದು, ಪ್ರಥಮ ಬಹುಮಾನವಾಗಿ 75,000 …

Read More »