ತೀರ್ಥಹಳ್ಳಿ : ಶಾಸಕ ಆರಗ ಜ್ಞಾನೇಂದ್ರ ಅವರ ಕಾರು ಚಾಲಕನಿಗೆ ಕೊರೋನಾ ಸೋಂಕು ತಗುಲಿದ್ದು, ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರು ಚಾಲಕನಿಗೆ ಕಳೆದ ಎರಡು ದಿನಗಳಿಂದ ಜ್ವರ ಕಾಣಿಸಿ ಕೊಂಡಿದ್ದರ ಹಿನ್ನೆಲೆ ಪರೀಕ್ಷೆ ಮಾಡಲಾಯಿತು. ಆಗ ಪಾಸಿಟಿವ್ ಬಂದಿದೆ ಎಂದು ಶಾಸಕ ಆರಗ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಆರಗ ಜ್ಞಾನೇಂದ್ರ ಹಾಗೂ ಜೊತೆಯಲ್ಲಿದ್ದ ಆಪ್ತ ಸಹಾಯಕ ಹೊದಲ ಬಸವರಾಜ್, ತಾಪಂ ಸದಸ್ಯ ಕುಕ್ಕೆ ಪ್ರಶಾಂತ ಇವರು ಕೂಡಾ ಕೊರೋನಾ ಪರೀಕ್ಷೆ ಮಾಡಿಸಿ ಕೊಂಡಿದ್ದಾರೆ.
ಭಾರತದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ಇಟಲಿ, ಬ್ರಿಟನ್, ಅಮೆರಿಕ, ಬ್ರೆಜಿಲ್‌ನಲ್ಲಿ ಹೇಗಿದೆ?…
ಈ ಮೂವರ ವರದಿ ನೆಗೆಟಿವ್ ಬಂದಿದೆ. ಆದರೂ ಮುಂಜಾಗ್ರತಾ ದೃಷ್ಟಿಯಿಂದ ತಾವು ಕೆಲವು ದಿನ ಕ್ವಾರಂಟೈನ್‌ಗೆ ಒಳಗಾಗುತ್ತಿದ್ದು, ಸಾರ್ವಜನಿಕರು ಸದ್ಯಕ್ಕೆ ತಮ್ಮ ಭೇಟಿಗೆ ಬರಬಾರದು ಎಂದು ಶಾಸಕರು ವಿನಂತಿಸಿದ್ದಾರೆ.
ದೇಶದಲ್ಲಿ ದೀಪಾವಳಿ ವೇಳೆಗೆ ಕೊರೋನಾ ನಿಯಂತ್ರಣಕ್ಕೆ’!…
ಈಗಾಗಲೇ ಹಲವು ರಾಜಕೀಯ ಮುಖಂಡರಿಗೆ ಕೊರೋನಾ ತಗುಲಿದೆ. ಹಲವು ಮುಖಂಡರು ಈಗಾಗಲೇ ಇದರಿಂದ ಚೇತರಿಸಿಕೊಂಡಿದ್ದಾರೆ. ಅನೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.