Breaking News

2028ರ ಸಾರ್ವತ್ರಿಕ ಚುನಾವಣೆಗೆ ಈ ಬಾಗಲಕೋಟೆ ಉಪ ಚುನಾವಣೆ ಶ್ರೀಕಾರ : ಶರಣು ತಳ್ಳಿಕೇರಿ

Spread the love

ಬಾಗಲಕೋಟೆ ಉಪಚುನಾವಣೆ : ಬಿಜೆಪಿಯಿಂದ ಚುನಾವಣಾ ಪೂರ್ವ ಕಾರ್ಯಾಗಾರ

ಬಾಗಲಕೋಟೆ: ಹಿಂದೂ ವಿರೋಧಿ ಕಾಂಗ್ರೆಸ್ಸ ಸರಕಾರವನ್ನು ಕಿತ್ತೊಗೆಯಲು ರಾಜ್ಯದ ಜನ ತುದಿಗಾಲಿನ ಮೇಲೆ ನಿಂತಿದ್ದಾರೆ, 2028 ಸಾರ್ವತ್ರಿಕ ಚುನಾವಣೆಗೆ ಬಾಗಲಕೋಟ ಉಪ ಚುನಾವಣೆ ಶ್ರೀಕಾರ ಹಾಕಲಿದೆ ಎಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿಗಳಾದ ಶರಣು ತಳ್ಳಿಕೇರಿ ಹೇಳಿದರು.
ಅವರು ನಗರದ ಬಿ.ವಿ.ವಿ.ಸಂಘ ನೂತನ ಸಭಾಭವನದಲ್ಲಿ ಶುಕ್ರವಾರ ಭಾರತೀಯ ಜನತಾ ಪಾರ್ಟಿಯಿಂದ ನಡೆದ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣಾ ಪೂರ್ವಬಾವಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಉಪ ಚುನಾವಣೆ ಗೆಲ್ಲುವ ಮೂಲಕ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದೆ ಬರುತ್ತೆ ಎಂಬ ಸಂದೇಶವನ್ನು ಸಾರೋಣ, ಬಾಗಲಕೋಟೆ ಹಿಂದೂತ್ವದ ಗಟ್ಟಿ ನೆಲವಾಗಿದ್ದು, ಈ ಹಿಂದೂ ವಿರೋಧಿ ಸರಕಾರ ತನ್ನ ಹಗರಣ, ಆಡಳಿತ ವೈಪಲ್ಯ, ಅಭಿವೃದ್ಧಿಯ ಕಾರ್ಯಗಳೆ ಇಲ್ಲದಿರುವ ಕಾಂಗ್ರೆಸ್ ಸರಕಾರ ರಾಜ್ಯದ ಜನತಗೆ ಬೇಡವಾಗಿದೆ, ಬಾಗಲಕೋಟೆ ಅಭಿವೃದ್ದಿ ಕಂಡಿದ್ದು ಶಾಸಕರಾಗಿದ್ದ ಡಾ.ವೀರಣ್ಣ ಚರಂತಿಮಠ ಅವರ ಅವದಿಯಲ್ಲಿ, ಯಾರಿಂದ ಅಭಿವೃದ್ಧಿ ಸಾದ್ಯ ಎಂಬ ಸತ್ಯ ಬಾಗಲಕೋಟೆ ಜನತೆ ಗೋತ್ತಿದೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರದಿಂದ ಕೆಳಗೆ ಇಳಿಯುವ ಸಂದರ್ಭದಲ್ಲಿ ಅನುಕಂಪ ಪಡೆಯುವ ಸಲುವಾಗಿ ಕುರಿಕಾಯುವವರು ನೆನೆಪಾಗುತ್ತಾರೆ, ದೇವರಾಜ ಅರಸು ಅವರ ದಾಖಲೆಯನ್ನು ಮಿರಿಸಿರುವೆ ಎಂಬ ಅಹಂಕಾರದಲ್ಲಿರುವ ಅವರು ಏರಡು ಸಾರಿ ಮುಖ್ಯಮಂತ್ರಿಯಾದರೂ ಕುರಿಕಾಯುವರಿಗೆ ಕೋಟ್ಟಿರುವ ಸಾಧನೆ ಶೂನ್ಯ, ರಾಜ್ಯದಲ್ಲಿ ಇಲ್ಲಿವರೆಗೂ ಆಕಸ್ಮಿಕ ಸಾವವನ್ನಪ್ಪಿದ 90 ಸಾವಿರ ಕುರಿಗಳಲ್ಲಿ ಬರಿ 30 ಸಾವಿರ ಕುರಿಗಳಿಗೆ ಪರಿಹಾರ ಕೊಟ್ಟಿದ್ದಾರೆ ಇನ್ನೂ 45ಕೋಟಿ ರೂ ಪರಿಹಾರ ಕೊಡುವಂತ ಕೆಲಸ ಸಿದ್ದರಾಮಯ್ಯನವರಿಂದ ಆಗಿಲ್ಲ, ಮೊದಲು ಕುರಿಕಾಯುವವರಿಗೆ ನ್ಯಾಯ ಕೊಡಿ ಎಂದ ಅವರು ಬಾಗಲಕೋಟೆ ರಾಜಕೀಯ ಪುನರ್ಜನ್ಮ ನೀಡಿದ ಬಾಗಿಲಕೋಟೆಗೆ ತಮ್ಮ ಕೊಡುಗೆ ಶೂನ್ಯವಾಗಿದೆ ಎಂದರು.

ಬೆಳಗಾವಿ ವಿಭಾಗದ ಪ್ರಭಾರಿ ಸಂಜಯ ಪಾಟೀಲ ಮಾತನಾಡಿ ಬಾಗಲಕೋಟೆ ಉಪ ಚುನಾವಣೆ ಇದೊಂದು ಧರ್ಮ ಯುದ್ದ, ಈ ಧರ್ಮಯುದ್ದಲ್ಲಿ ಗೇಲವು ಶತಸಿದ್ದವಾಗಿದೆ, ಹಿಂದೂಗಳಿಗಾಗಿ ಇರುವ ಏಕೈಕ ರಾಷ್ಟ್ರ ಭಾರತ, ಗರ್ವದಿಂದ ವಂದೇ ಮಾತರಂ ಹೇಳುವವರು ಬಿಜೆಪಿ ಕಾರ್ಯಕರ್ತರು ಮಾತ್ರ ಅದು ನಮ್ಮ ಹೆಮ್ಮೆ, ಬಿಜೆಪಿಯವರು ಮುಸ್ಲೀಂ ವಿರೋಧಿಗಳಲ್ಲ, 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಮುಸ್ಲೀಂ ಸಮುದಾಯವನ್ನು ಬರಿ ತನ್ನ ಓಟ ಬ್ಯಾಂಕ ಮಾಡಿಕೋಂಡ್ಡಿದ್ದಾರೆ ಹೊರತು ಅವರಿಗಾಗಿ ನೀಡಿರುವ ಕೋಡುಗೆ ಶೂನ್ಯ, ಇದನ್ನು ಎಲ್ಲರೂ ಅರ್ಥ ಮಾಡಿಕೋಳ್ಳಬೇಕು. ಬಾಗಲಕೋಟೆ ಜನ ಅತ್ಯಂತ ಬುದ್ದಿವಂತರು, ಅಭಿವೃದ್ಧಿಪರ, ಬಿಜೆಪಿ ಪರವಾಗಿದ್ದಾರೆ ಎಂದರು.
ಬೈಲಹೊಂಗಲದ ಮಾಜಿ ಶಾಸಕ ವಿಶ್ವನಾಥ ಪಾಟೀಲ ಮಾತನಾಡಿ ಅಭಿವೃದ್ಧಿ ಇಲ್ಲದ ಹಗರಣಗಳ ಸರಕಾರವಾಗಿದೆ ಎಂದರು.

ಚುನಾವಣಾ ಉಸ್ತುವಾರಿ ಅರುಣ ಶಹಾಪುರ ಮಾತನಾಡಿ ಬಾಗಲಕೋಟೆ ಉಪ ಚುನಾವಣೆಯಲ್ಲಿ ನಾವು ಗೆದ್ದೆ ಗೆಲ್ಲುತ್ತೆವೆ, ಆ ಸಾಮರ್ಥ ಬಿಜೆಪಿ ಕಾರ್ಯಕರ್ತರಿಗೆ ಇದೆ, ಬಾಗಲಕೋಟೆ ಸರ್ವಾಂಗೀಣ ಅಬಿವೃದ್ಧಿ ಕಾಣಲು ಬಿಜೆಪಿ ಸರಕಾರ ಹಾಗೂ ಶಾಸಕರಾಗಿದ್ದ ಡಾ. ವೀರಣ್ಣ ಚರಂತಿಮಠ ಅವರು ಕಾರಣ, ಬಾಗಲಕೋಟೆ ಜನತಗೆ ತಮ್ಮ ಸುರಕ್ಷತೆ ಹಾಗೂ ಅಭಿವೃದ್ಧಿಯ ಅರಿವು ಇದೆ, ಈಗಾಗಿ ಅವರು ಬಿಜೆಪಿಯನ್ನು ಖಂಡಿತ ಗೆಲ್ಲಿಸುತ್ತಾರೆ, 2028ರ ಚುನಾವಣೆಗೆ ಶ್ರೀಕಾರವೇ ಬಾಗಲಕೋಟೆ ಉಪಚುನಾವಣೆ ಎಂದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ವಹಿಸಿದ್ದರು. ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡಗೌಡರÀ, ಡಾ.ಕೆ.ಬಸವರಾಜ ಕ್ಯಾವಟರ್, ಸುಭಾಸ ಪಾಟೀಲ. ಬಸವರಾಜ ಯಂಕಂಚಿ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣುರ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಮಲ್ಲೇಶ ವೈಜಾಪುರ, ಕಲ್ಲಪ್ಪ ಭಗವತಿ, ಉಮೇಶ ಹಂಚಿನಾಳ, ಸೇರಿದಂತೆ ಅನೆಕರು ವೇದಿಕೆ ಮೇಲೆ ಇದ್ದರು.
ಕಾರ್ಯಾಗಾರದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ವಿಸ್ತಾರಕರು ಸೇರಿದಂತೆ 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.


Spread the love

About Laxminews 24x7

Check Also

ಆದಿ ರೇಣುಕಾಚಾರ್ಯರ ತತ್ವಗಳಿಗೆ ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನ: ಗದ್ದಿಗೌಡರ

Spread the loveಬಾಗಲಕೋಟೆ: ವೀರಶೈವ ಧರ್ಮದ ಸಂಸ್ಥಾಪಕರಾದ ಆದಿ ಜಗದ್ಗುರು ರೇಣುಕಾಚಾರ್ಯರು, ಇವರ ತತ್ವ, ಬದುಕಿನ ಚರಿತ್ರೆ, ಮತ್ತು ಧಾರ್ಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ