Breaking News

ಬೊಲೆರೊ ಮತ್ತು ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದರು

Spread the love

ಸವದತ್ತಿ: ಇಲ್ಲಿನ ಧಾರವಾಡ ರಸ್ತೆಯಲ್ಲಿರುವ ಪುರಸಭೆ ಕಸ ವಿಲೇವಾರಿ ಸಂಕೀರ್ಣದ ಸಮೀಪ ಶುಕ್ರವಾರ ರಾತ್ರಿ ಬೊಲೆರೊ ಮತ್ತು ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದರು.

ತಾಲ್ಲೂಕಿನ ಚುಂಚನೂರ ಹಾಗೂ ಜಕಬಾಳ ಗ್ರಾಮಗಳ ಕೂಲಿ ಕಾರ್ಮಿಕರು ಧಾರವಾಡ ಜಿಲ್ಲೆಯ ಮೊರಬ್ ಗ್ರಾಮದ ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿ ವಾಪಸಾಗುವಾಗ ಘಟನೆ ನಡೆದಿದೆ.

‘ಡಿಕ್ಕಿಯ ರಭಸಕ್ಕೆ ವಾಹನಗಳು ನುಜ್ಜು ಗುಜ್ಜಾಗಿವೆ. ಮೃತರಲ್ಲಿ ಮೂವರ ಗುರುತಷ್ಟೆ ಪತ್ತೆಯಾಗಿದೆ. ಅವರು ಚುಂಚನೂರ ಗ್ರಾಮದ ಯಲ್ಲವ್ವ ಯಲ್ಲಪ್ಪ ಮುರಕಿಭಾವಿ (65), ಪಾರವ್ವ ಹುರಳಿ (35), ರುಕ್ಮವ್ವ ವಡಕಣ್ಣವರ (35) ಎಂದು ತಿಳಿದುಬಂದಿದೆ. ಬೊಲೆರೊ ಚಾಲಕ ಸಾವಿಗೀಡಾಗಿದ್ದಾರೆ. ಅವರೂ ಸೇರಿ ಮೂವರ ಮಾಹಿತಿ ಸಂಗ್ರಹಿಸಲಾಗುತ್ತಿದೆ.

15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಆಘಾತಗೊಂಡಿದ್ದಾರೆ. ಚೇತರಿಸಿಕೊಂಡ ನಂತರ ಮಾಹಿತಿ ಪಡೆಯಲಾಗುವುದು’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ