ಉತ್ತರ ಪ್ರದೇಶ: ದೇಶದ ಜನತೆ ಒಗ್ಗಟ್ಟಿನಿಂದ ಕೊರೊನಾ ಸೋಂಕಿನ ವಿರುದ್ದ ಹೋರಾಡಲು ಪ್ರಧಾನಿ ಮೋದಿ ದೀಪ ಹಚ್ಚುವ ಅಭಿಯಾನಕ್ಕೆ ಕರೆ ನೀಡಿದ್ದರು. ಆದ್ರೆ ಉತ್ತರಪ್ರದೇಶದ ಬಲರಾಮಪುರದ ಬಿಜೆಪಿ ನಾಯಕಿ ಮಂಜು ತಿವಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ನಿನ್ನೆ 9 ಗಂಟೆ 9 ನಿಮಿಷಕ್ಕೆ ಎಲ್ಲರೂ ಮನೆಯಲ್ಲಿ ದೀಪ ಬೆಳಗಿದರೆ ಈ ನಾಯಕಿ ಅಭಿಯಾನವನ್ನು ವಿಭಿನ್ನವಾಗಿ ಆಚರಿಸಲು ತನ್ನ ಬಳಿ ಇದ್ದ ಗನ್ ತಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ.
ಅಲ್ಲದೇ ಗುಂಡು ಹಾರಿಸುವ ವಿಡಿಯೋ ಮಾಡಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ.
Laxmi News 24×7