Breaking News

TRP ಲಿಸ್ಟ್​ ರಿಲೀಸ್​: ಟಾಪ್​ 5 ಲಿಸ್ಟ್​ನಲ್ಲಿರೋ ಕನ್ನಡದ ಧಾರಾವಾಹಿಗಳು ಯಾವುವು..?

Spread the love

ಧಾರಾವಾಹಿಯ ತಂಡದವರು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಹೊಸ ವರ್ಷದ ಮೊದಲ ವಾರದ ಟಿಆರ್​ಪಿ ಲಿಸ್ಟ್​ ಹೊರ ಬಂದಿದ್ದು, ನಿಮ್ಮ ಕುತೂಹಲದ ಕಣ್ಗಳಿಗೆ ಉತ್ತರ ಇಲ್ಲಿದೇ. ಒಂದೊಳ್ಳೆಯ ಕಂಟೆಂಟ್​ನ್ನ ಜನರಿಗೆ ತಲುಪಿಸಲು ಸಾಕಷ್ಟು ಪರಿಶ್ರಮಪಡುವ ಧಾರಾವಾಹಿಗಳು ಏನೇ ಎಫರ್ಟ್​ ಹಾಕಿದ್ರು ಕೊನೆಯದಾಗಿ ಆ ಸೀರಿಯಲ್​ ಎಷ್ಟರಮಟ್ಟಿಗೆ ವೀಕ್ಷಕರು ಮನ ಗೆದ್ದಿದೆ ಅನ್ನೋದು ಇಂಪಾರ್ಟಂಟ್​. ಟಾಪ್​ 5 ಲಿಸ್ಟ್​ನಲ್ಲಿ ಯಾವೆಲ್ಲ ಸೀರಿಯಲ್​ಗಳು ಸ್ಥಾನ ಪಡೆದುಕೊಂಡಿವೆ ಎಂಬುದ್ರ ಬಗ್ಗೆ ಮಾಹಿತಿ ಇಲ್ಲಿದೇ ನೋಡಿ. ​

ಪುಟ್ಟಕ್ಕನ ಮಕ್ಕಳು ಪ್ರಾರಂಭವಾದ ಮೊದಲ ವಾರದಿಂದ ಕೂಡ ನಂಬರ್ ಒನ್​​ ಸ್ಥಾನವನ್ನ ಯಾರಿಗೂ ಬಿಟ್ಟು ಕೊಡದೇ ಕಿರುತೆರೆಯಲ್ಲಿ ಅದ್ಧೂರಿತನದಿಂದ ಸಾಗುತ್ತಿದ್ದಾಳೆ ಪುಟ್ಟಕ್ಕ. ಸದ್ಯ ಟಿಆರ್​ಪಿ ಲಿಸ್ಟ್​ನಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿರುವ ಪುಟ್ಟಕ್ಕನ ಮಕ್ಕಳು 12.4 ರೇಟಿಂಗ್​ ಪಡೆದು ರಾರಾಜಿಸುತ್ತಿದ್ದಾಳೆ.

 

ಇನ್ನೂ ಗಟ್ಟಿಮೇಳ ಧಾರಾವಾಹಿ ದಿನಕೊಂದು ಟ್ವಿಸ್ಟ್​ ಜೊತೆಗೆ ಬಜಾರಿ ಅಮುಲ್ಯಾ ಹಾಗೂ ವೇದಾಂತ್​ ಮುನಿಸು, ಪ್ರೀತಿ ಪ್ರೇಮದ ಸನ್ನಿವೇಶಗಳು ವೀಕ್ಷಕರನ್ನ ಸೇಳೆಯುತ್ತಿವೆ. ಸದ್ಯ ತಾಯಿ ಮಕ್ಕಳ ಎಮೋಷನಲ್​ ಕಂಟೆಂಟ್​ಗೆ ಜನರು ಫಿದಾ ಆಗಿದ್ದು, ಪ್ರತಿಯೊಂದು ಸೀನ್​ ಸಖತ್​ ಬ್ಯೂಟಿಫುಲ್​ ಆಗಿ ಮೂಡಿ ಬರುತ್ತಿವೆ.ವಶಿಷ್ಠ ಕುಟುಂಬದ ಆಧಾರ ಸ್ತಂಭ ವೈದೇಹಿ ಸುಹಾಸಿನಿಯ ಕುತಂತ್ರದಿಂದ ತನ್ನ ಇಡೀ ಕುಟುಂಬವನ್ನ ಕಳೆದುಕೊಂಡಿದ್ದು, ಮತ್ತೇ ತನ್ನ ಸುಂದರವಾದ ಪರಿವಾರವನ್ನ ನಿರ್ಮಾಣ ಮಾಡಿಕೊಳ್ಳಲು ಪಡಬಾರದ ಕಷ್ಟ ಪಡುತ್ತಿದ್ದಾಳೆ. ಇತ್ತ ಸುಹಾಸಿನಿಗೆ ವೈದೇಹಿ ವಾಪಸ್​ ಬಂದಿರುವ ಸುಳಿವು ಸಿಕ್ಕಿದೆ. ಮತ್ತೊಂದು ಕಡೆ ವೇದಾಂತ್​​ ಅಜ್ಜಿ ಆಸ್ಪತ್ರೆ ಸೇರಿದ್ದಾರೆ. ತುಂಬಾನೇ ಇಂಟ್ರಸ್ಟಿಂಗ್​ ಆಗಿ ಸಾಗುತ್ತಿದ್ದು, ಇದೇ ಕಾರಣಕ್ಕೆ 11.9 ಟಿವಿಆರ್​ ಪಡೆದು 2ನೇ ಸ್ಥಾನಗಳಿಸಿದೆ ಗಟ್ಟಿಮೇಳ.

 

ಇನ್ನೂ ಮೂರನೇ ಸ್ಥಾನವನ್ನ ಹಿಟ್ಲರ್​ ಕಲ್ಯಾಣ ಅಲಂಕರಿಸಿದೆ. ಲೀಲಾ-ಎಜೆ ಬಾಳಲ್ಲಿ ಪ್ರೇಮದ ತಂಗಾಳಿ ಸುಳಿಯುತ್ತಿದ್ದು, ಇಬ್ಬರ ಪೇರ್​​ ಜನರಿಗೆ ಸಖತ್​​ ಇಷ್ಟ ಆಗಿದೆ. ಸದ್ಯ ಲೀಲಾಳನ್ನ ದುರ್ಗಾ ಕಿಡ್ನಾಪ್​ ಮಾಡಿಸಿದ್ದಳು. ನಮ್ಮ ಹಿರೋ ಎಜೆ ಲೀಲಾ ರಕ್ಷಣೆ ಮಾಡಿ ಮನೆಗೆ ವಾಪಸ್​ ಕರೆದುಕೊಂಡು ಬಂದಿದ್ದಾನೆ. ಲೀಲಾ ದುರ್ಗಾ ಕುತಂತ್ರವನ್ನ ಎಜೆ ಮುಂದೆ ಸಾಬಿತು ಪಡೆಸುತ್ತಾಳ ಅನ್ನೋದೇ ಸದ್ಯದ ಟ್ವಿಸ್ಟ್​.

ನಾಲ್ಕನೇ ಸ್ಥಾನದಲ್ಲಿ ಜೊತೆ ಜೊತೆಯಲಿ ಇದೆ. ರಾಜನಂದಿನಿ ರಹಸ್ಯ, ಆರ್ಯನ ಅರ್ಧ ಸತ್ಯಗಳ ನಡುವೆ ಗೊಂದಲದಲ್ಲಿದ್ದಾಳೆ ಅನು. ಈ ಎಲ್ಲಾ ರಹಸ್ಯ, ಒದ್ದಾಟಗಳನ್ನ ಪಕ್ಕಕ್ಕಿಟ್ಟು ಸಂಕ್ರಾಂತಿ ಹಬ್ಬದ ಸಂಭ್ರಮವನ್ನ ಸವಿಯುತ್ತಿ ವರ್ಧನ್​ ಹಾಗೂ ಸಿರಿಮನೆ ಕುಟುಂಬ.

 

ಇನ್ನೂ ಐದನೇ ಸ್ಥಾನವನ್ನ ಸತ್ಯ ಅಲಂಕರಿಸಿದ್ದಾಳೆ. ದಿವ್ಯಾಳ ದುರಾಸೆಗೆ ತನ್ನ ಪ್ರೀತಿಯನ್ನ ಬಲಿಕೊಟ್ಟಿದ್ದಾಳೆ ನಮ್ಮ ಸತ್ಯ. ಇತ್ತ ಅಮುಲ್​ ಬೇಬಿ ದಿವ್ಯಾ-ಸತ್ಯಾ ನಡುವೆ ಸಿಲುಕಿದ್ದಾನೆ. ತ್ರಿಕೊನ ಪ್ರೇಮದಲ್ಲಿ ಸಾಗುತ್ತಿರುವ ಕತೆ ಪ್ರೇಕ್ಷಕರಿಗೆ ಹತ್ತಿರವಾಗಿದೆ. ಹೀಗೇ ಎಲ್ಲಾ ಧಾರಾವಾಹಿ ಕೂಡ ನಾ ಮುಂದು ತಾ ಮುಂದು ಎಂಬಂತೆ ಸಖತ್​ ಸ್ಪೀಡ್​ನಲ್ಲಿ ಮುನ್ನಗ್ತಾಯಿದ್ದು.. ಟಿಆರ್​ಪಿ ಕೂಡ ಅದೇ ಸ್ಪೀಡ್​ನಲ್ಲಿ ಓಡ್ತಾಯಿದೆ.


Spread the love

About Laxminews 24x7

Check Also

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ

Spread the love ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ ಬಿಎಸ್ಎಫ್ ಯೋಧ ದಗಡು ಪೂಜಾರಿ ರಜೆಯ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ