Sc/st ಮೀಸಲಾತಿಯನ್ನು 2020 ರ ಜನಗಣತಿ ಅನ್ವಯ ಹೆಚ್ಚಿಸಿ:ದಲಿತ ಮುಖಂಡ ಮಲ್ಲೇಶ ಚೌಗುಲೆ
ಬಾಕ್ಸ: 2020 ರ ಜನಗಣತಿ ಅನ್ವಯ ಪರಿಶಿಷ್ಟರ ಮೀಸಲಾತಿಯನ್ನು ಹೆಚ್ಚಿಸಿ/ ವಾಲ್ಮೀಕಿ ಜನಾಂಗದವರಿಗೆ ಸೂಕ್ತ ಮೀಸಲಾತಿ ದೊರೆಯುತ್ತಿಲ್ಲ/ಬೆಳಗಾವಿ ಜಿಲ್ಲಾ ಮೂಲ ಅಸ್ಪೃಶ್ಯರ ಒಕ್ಕೂಟ ಆಗ್ರಹ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದ್ದು ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಯೋಜನೆ ರೂಪಿಸಿದೆ.ಈ ಹಿನ್ನೆಲೆಯಲ್ಲಿ ಜನವರಿ 10 ರಂದು ಬೆಳಗಾವಿ ನಗರದಲ್ಲಿ ಸಮಾವೇಶವನ್ನು ಏರ್ಪಡಿಸಲಾಗಿದೆ.ಆದ್ದರಿಂದ ಬೆಳಗಾವಿ ನಗರ ಖಾಸಗಿ ಹೋಟೆಲೊಂದರಲ್ಲಿ ಬೆಳಗಾವಿ ಜಿಲ್ಲಾ ಮೂಲ ಅಸ್ಪೃಶ್ಯರ ಒಕ್ಕೂಟ ವತಿಯಿಂದ
ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಮಲ್ಲೇಶ ಚೌಗುಲೆ ಅವರು ನ್ಯಾಯಾಧೀಶ ನಾಗಭೂಷಣ ದಾಸ ಆಯೋಗದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೊಗದಲ್ಲಿ ಮೀಸಲಾತಿಯನ್ನು ನೀಡಲಾಗಿತ್ತು. 2011 ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿಯವರಿಗೆ 15% ಮತ್ತು ಪರಿಶಿಷ್ಟ ಪಂಗಡದವರಿಗೆ 3% ಪ್ರತಿಶತ ದಂತೆ ಒಟ್ಟು 18 ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿದೆ.ಆದರೆ ರಾಜ್ಯದಲ್ಲಿ ಪರಿಶಿಷ್ಟರ ಜನಸಂಖ್ಯೆ ಹೆಚ್ಚಾಗಿದ್ದರಿಂದ 2020 ರ ಜನಗಣತಿ ಅನ್ವಯ ಮೀಸಲಾತಿಯನ್ನು ಹೆಚ್ಚಿಸಬೇಕು.ಹಾಗೂ ಇದುವರೆಗೂ ವಾಲ್ಮೀಕಿ ಜನಾಂಗದವರಿಗೆ ಸೂಕ್ತ ಮೀಸಲಾತಿ ದೊರೆಯುತ್ತಿಲ್ಲ. ಪ್ರಸ್ತುತ ಜನಗಣತಿ ಅನ್ವಯ ಮೀಸಲಾತಿಯ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ರಾಜಶೇಖರ ತಳವಾರ ಮಲ್ಲೇಶ ಕುರಂಗಿ, ಯಲ್ಲಪ್ಪ ಹುದಲ ಭಾವೂಕಣ್ಣ ಭಂಗ್ಯಾಗೋಳ, ಸಂತೋಷ ಹೊಂಗಲ, ರಾವ್ ಬಹದ್ದೂರ್ ಕದಂ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿಂದರು.