ಬೆಳಗಾವಿ: ” ಖಾಸಗಿ ಮಾರುಕಟ್ಟೆ ನಿರ್ಮಾಣಕ್ಕೆ ಕೆಲವೊಂದು ಅಧಿಕಾರಿಗಳು ಶಾಮೀಲು ಆಗಿದ್ದು, ಇದಕ್ಕೆ ಸರ್ಕಾರವೂ ಸಾಥ್ ನೀಡಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮಾದ್ಯಮರೊಂದಿಗೆ ಮಾತನಾಡಿದ ಅವರು, ರೈತರ ಹಿತದೃಷ್ಟಿಯಿಂದ 50 ಕೋಟಿ ರೂ. ವೆಚ್ಚದಲ್ಲಿ ಕೃಷಿ ಉತ್ಪನ ಮಾರುಕಟ್ಟೆ ನಿರ್ಮಿಸಲಾಗಿದೆ. ಪ್ರಭಾವಿಗಳಿಂದ ಖಾಸಗಿ ಮಾರುಕಟ್ಟೆ ಆರಂಭವಾಗುತ್ತಿದೆ. ಹೀಗಾಗಿ ಎರಡು ಮಾರುಕಟ್ಟೆ ಉಳಿಯುವ ಸಾಧ್ಯತೆ ಕಾಣುತ್ತಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಮಧ್ಯರ್ವತಿಗಳು ಸುಮಾರು 1 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದಾರೆ. ಇದರಿಂದ ಖಾಸಗಿ ಮಾರುಕಟ್ಟೆ ಹೊಡೆತ ಬೀಳಲಿದೆ. ಹೀಗಾಗಿ ನಾವೊಂದು ಪರ್ಯಾಯವಾಗಿ ( ಮೂರನೇಯ ) ಮಾರುಕಟ್ಟೆ ನಿರ್ಮಿಸುವ ಅನಿರ್ವಾಯತೆ ಇದೆ ಎಂದರು.
ಎಪಿಎಂಪಿ ಮಾರುಕಟ್ಟೆಯಲ್ಲಿ ರೈತಗಿರುವ ರಕ್ಷಣೆ, ಖಾಸಗಿ ಮಾರುಕಟ್ಟೆ ಸಿಗೋವುದು ಕಷ್ಟಕರ, ಜಿಲ್ಲಾಧಿಕಾರಿಗಳು ಸಮಯ ಕೇಳಿದ್ದಾರೆ, ಮುಂದಿನ ತೀರ್ಮಾಣದವರೆಗೆ ಕಾಯಬೇಕಿದೆ. ಸರ್ಕಾರವೂ ಸ್ಥಳೀಯ ಶಾಸಕರ ಪರವಾಗಿದೆ ಎಂದರು.
ನಾವು ಮೂರನೇಯ ಮಾರುಕಟ್ಟೆ ನಿರ್ಮಾಣ ಕುರಿತು ಹೋರಾಟ ಅನಿರ್ವಾಯವಾಗಿದೆ. ಸರ್ಕಾರ ಈ ಕುರಿತು ಅನುಮತಿ ನೀಡಬೇಕಿದೆ. ಹೋರಾಟದಿಂದಲೇ ಎಲ್ಲವನ್ನೂ ಪಡೆಯಬೇಕಿದೆ. ಸರ್ಕಾರ ಮೇಲೆ ಯಾವುದೇ ವಿಶ್ವಾಸ ಇಲ್ಲ ಅಸಮಾಧಾನ ವ್ಯಕ್ತಪಡಿಸಿದರು.
ಸಂಘರ್ಷಕ್ಕೆ ಬಿಜೆಪಿಯೇ ಕಾರಣ: ವಿಷ ಬೀಜ ಬಿತ್ತುವವರು ಬಿಜೆಪಿಗರು, ಧರ್ಮಗಳ ನಡುವೆ ಸಂಘರ್ಷ ತಂದು ದೇಶದ ಅಭಿವೃದ್ಧಿ ಮರೆಮಾಚುತ್ತಿದ್ದಾರೆ ಎಂದು ಸರ್ಕಾರ ವಿರುದ್ಧ” ಸತೀಶ” ಕಿಡಿಕಾರಿದ್ದಾರೆ.
ಕೇಸರಿ ಶಾಲು ಧರಿಸಿಕೊಳ್ಳುವವರ ಹಿಂದೆ ದೊಡ್ಡ ಪ್ರಮಾಣ ಹುನ್ನಾರ ಅಡಗಿದೆ. ಇಂತಹ ಸಂಘರ್ಷ ಕಾರ್ಯಗಳನ್ನು ಮಾಡುವುದು ಬಿಜೆಪಿಗರ ಕೆಲಸವಾಗಿದೆ ಎಂದರು.
ಬಿಜೆಪಿ ಅಧಿಕಾರಿಕ್ಕೆ ಬಂದ ಬಳಿಕ ಕೇಂದ್ರ ಹಾಗೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ, ಹೀಗಾಗಿ ಸಂಘರ್ಷದ ದಾಳ ಉರುಳಿಸಿ ಬಿಜೆಪಿಗರು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.