Breaking News

ಸೌಭಾಗ್ಯ ಲಕ್ಷ್ಮಿ ಶುಗರ್ಸ್ &ಸಂತೋಷ್ ಜಾರಕಿಹೊಳಿ ಅವರ್ ವತಿಯಿಂದ ಹಾಪ್ ಪಿಚ್ ಕ್ರಿಕೆಟ್ ಟೂರ್ನಮೆಂಟ್

Spread the love

ಗೋಕಾಕ: ಶ್ರೀ ಸಂತೋಷ್ ಜಾರಕಿಹೊಳಿ ಅವರು ಇತ್ತೀಚಿಗೆ ಸುಮಾರು ಸಮಾಜ ಮುಖಿ ಕಾರ್ಯಕ್ರಮ ಗಳಿಗೆ ಚಾಲನೆ ನೀಡುತ್ತಿದ್ದಾರೆ.

 

ಜಾರಕಿಹೊಳಿ ಅವರು ಅಂದ್ರೆ ಎಂದು ಕೊಡುವ ಕೈ ದೇವರ ಗುಡಿಗಳು, ಜನರ, ಸಂಕಷ್ಟ, ಸಕ್ಕರೆ ಕಾರ್ಖಾನೆ ಸಿಬ್ಬಂದಿಗಳಿಗೆ ಕೊಡುವ ಗೌರವ್ , ಶಾಲಾ ಕಾಲೇಜು ಗಳ ಬಗ್ಗೆ ಕಾಳಜಿ, ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ,

 

ಇದೆ ರೀತಿ ಪಟ್ಟಿ ಗಳನ್ನ ಹೇಳುತ್ತಾ ಹೋದ್ರೆ ಕಮ್ಮಿನ್ನೆ ಅನ್ನಬಹುದು ಆದ್ರೂ ಇವು ಯಾವು ಕೂಡ ಅಷ್ಟರ ಮಟ್ಟಿಗೆ ಪ್ರಚಾರಕ್ಕೆ ಬಂದಿಲ್ಲ ಹಾಗೂ ಇದನ್ನ ಪ್ರಚಾರ ಮಾಡ ಬೇಡಿ ಅಂತಾ ಕೂಡ ಸಂತೋಷ್ ಜಾರಕಿಹೊಳಿ ಅವರು ಹೇಳಿದ್ದಾರೆ,

 

ಆದರೂ ಕೂಡ ಅವರ್ ಅಭಿಮಾನಿ ಬಳಗ ಹಾಗೂ ಅವರ್ ಮಿತ್ರ ವೃಂದ ನಮ್ಮ ವಾಹಿನಿಗೆ ಮಾಹಿತಿಗಳನ್ನ ಕೊಡುತ್ತಾರೆ.

ಹೌದು ಇಂದು ಹಿರೆನಂದಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರಾ ನಿಮಿತ್ತ ವಾಗಿ ಗ್ರಾಮದ ಜನರು ಖುಷಿಯಾಗಿ ಆಚರಣೆ ಮಾಡಲಿ ಎಂಬ ಉದ್ದೆಶ ದಿಂದ ಹಾಫ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ಅನ್ನಾ ಯುವಕರ ಗೋಸ್ಕರ ಇಂದಿನಿಂದ ಪ್ರಾರಂಭ ವಾಗಿದೆ

ಇನ್ನು ಈ ಒಂದು ಕ್ರಿಕೆಟ್ ಪಂದ್ಯಾವಳಿಗೆ ಪ್ರಥಮ ಬಹುಮಾನ ಕೂಡ ಶ್ರೀ ಸಂತೋಷ್ ಜಾರಕಿಹೊಳಿ ಅವರೇ ನೀಡಲಿದ್ದಾರೆ

ಇನ್ನು ಈ ಒಂದು ಕಾರ್ಯಕ್ಕೆ ಒಂದು ಕಡೆ ಸಂತೋಷ್ ಜಾರಕಿಹೊಳಿ ಅವರು ಆದ್ರೆ ಇನ್ನೊಂದು ಕಡೆಯಿಂದ ಇವರು ಹೇಳಿದ ಆದೇಶ ಗಳನ್ನ ಅಚ್ಚುಕಟ್ಟಾಗಿ ಪಾಲನೆ ಮಾಡುವ ಪ್ರಶಾಂತ ಪಾಟೀಲ ಅವರ್ ಪಾತ್ರವೂ ಕೂಡ ಬಹು ಮುಖ್ಯವಾಗಿದೆ.

ಇನ್ನು ಈ ಒಂದು ಹಾಪ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಎಲ್ಲ ಜವಾಬ್ದಾರಿ ಕೂಡ ಅವರೇ ನಿಭಾಯಿಸುತ್ತಿದ್ದಾರೆ.

ಈ ಒಂದು ಕಾರ್ಯಕ್ರಮಕ್ಕೆ ಗ್ರಾಮದ ಮುಖಂಡರು ,ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಸಿಬ್ಬಂದಿ ವರ್ಗ , ಹಾಗೂ ಸಂತೋಷ್ ಜಾರಕಿಹೊಳಿ ಅವರ ಅಭಿಮಾನಿ ಬಳಗದ ಕಾರ್ಯ ವೈಖ್ರಿ ತುಂಬಾ ಇದೆ ಅಷ್ಟೇ ಅಲ್ಲದೆ ಇವತ್ತು ಶನಿವಾರ ಆದ ಕಾರಣ ಆಟ ಆಡಲು ಬಂದ ಆಟ ಗಾರರಿಗೆ ಪ್ರತಿ ಶನಿವಾರ ಅನ್ನ ಸಂತರ್ಪಣೆ ಮಾಡುವ ಕಾರ್ಯ ಇವತ್ತು ಕ್ರಿಕೆಟ್ ಗ್ರೌಂಡ್ ನಲ್ಲೇ ನಡೆಯಿತು .

ಇನ್ನು ಇದೇರೀತಿ ಸಮಾಜ ಮುಖಿ ಕಾರ್ಯಗಳನ್ನ ಮಾಡುತ್ತಾ ಯುವಕರ ಜೊತೆ ಯುವಕ ರಾಗಿ, ಹಿರಿಯಕಿರಿಯ ರ ಜೊತೆ ಮನೆ ಮಗ ನಾಗಿ ಸಂತೋಷ್ ಜಾರಕಿಹೊಳಿ ಅವರು ಇದ್ದಾರೆ ಎಂದು ಅಲ್ಲಿ ಸೇರಿದ ಜನ ನಮ್ಮ ವಾಹಿನಿಗೆ ತಿಳಿಸಿದ್ದಾರೆ.

ಸುಮಾರು 30ಕ್ಕೂ ಹೆಚ್ಚು ತಂಡಗಳು ಈ ಒಂದು ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಸೇರಿದ್ದು ಇದು ಯಶಸ್ವಿ ಯಾಗಲಿ ಇದೆ ರೀತಿ ಮತ್ತಷ್ಟು ಕ್ರಿಡೇ ಗಳಿಗೆ ಪ್ರೋತ್ಸಾಹ ಸಿಗಲಿ ಎಂಬುದೇ ನಮ್ಮ ವಾಹಿನಿಯ ಆಶಯ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ