Breaking News

ಬಡವರ, ಹಿಂದುಳಿದವರ, ಯುವಕರ ಪ್ರಗತಿಗಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಸದಾ ಸಿದ್ದ: ಯುವ ನಾಯಕ ರಾಹುಲ್‌ ಜಾರಕಿಹೊಳಿ

Spread the love

 

 

ಬೆಳಗಾವಿ ದಕ್ಷಿಣ, ಉತ್ತರ ಮತಕ್ಷೇತ್ರದ ಮಸೀದಿ, ಮಂದಿರ, ಚರ್ಚ್ ಸೇರಿದಂತೆ ವಿವಿಧ ಸಮುದಾಯದ ಸಮುದಾಯ ಭವನಗಳಿಗೆ ಕುರ್ಚಿ, ಸೌಂಡ್‌ ಸಿಸ್ಟಮ್‌ ಗಳ ವಿತರಣೆ

ಬೆಳಗಾವಿ: ಎಲ್ಲಾ ಸಮಾಜದ ಬಡವರ, ಹಿಂದುಳಿದವರ, ಯುವಕರ ಪ್ರಗತಿಗಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.

 

ನಗರದ ಜಾಧವ ನಗರ ಕಚೇರಿಯಲ್ಲಿ ಬೆಳಗಾವಿ ದಕ್ಷಿಣ, ಉತ್ತರ ಮತಕ್ಷೇತ್ರದ ಮಸೀದಿ, ಮಂದಿರ, ಚರ್ಚ್ ಸೇರಿದಂತೆ ವಿವಿಧ ಸಮುದಾಯದ ಸಮುದಾಯ ಭವನಗಳಿಗೆ 2000 ಸಾವಿರ ಕುರ್ಚಿಗಳು ಮತ್ತು 20 ಸೌಂಡ್ ಸಿಸ್ಟಮ್ ಗಳನ್ನು ವಿತರಿಸಿ ಅವರು ಮಾತನಾಡಿದರು.

 

ಸತೀಶ್ ಜಾರಕಿಹೊಳಿ ಫೌಂಡೇಶನ್ ಬೆಳಗಾವಿ ಜಿಲ್ಲೆಗೆ ಅಷ್ಟೇ ಸಿಮೀತವಾಗಿಲ್ಲ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಯುವಕರಿಗೆ ಪೊಲೀಸ್‌, ಆರ್ಮಿ, ಕೆಎಎಸ್‌, ಐಎಎಸ್‌ ತರಬೇತಿ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡುತ್ತಿದ್ದು, ಯುವಕರು ತರಬೇತಿ ಪಡೆದು ತಮ್ಮ ಜೀವನ ರೂಪಿಸಿಕೊಳ್ಳಬೇಕು. ತಂದೆ, ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರ ಸಲಹೆ ಪಡೆದು ಇನ್ನಷ್ಟು ಜನಕ್ಕೆ ಅನುಕೂಲವಾಗುವ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.

 

ಪ್ರತಿ ತಿಂಗಳು ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ವತಿಯಿಂದ 5000 ಕುರ್ಚಿಗಳು, 50 ಸೌಂಡ್ ಸಿಸ್ಟಮ್ ಗಳನ್ನು ಜಿಲ್ಲೆಯ ವಿವಿಧ ಕ್ಷೇತ್ರಗಳ ಮಸೀದಿ, ಮಂದಿರ, ಚರ್ಚ್ ಸೇರಿದಂತೆ ವಿವಿಧ ಸಮುದಾಯದ ಸಮುದಾಯ ಭವನಗಳಿಗೆ ನೀಡಲಾಗುತ್ತಿದ್ದು, ಮುಂದೆಯೂ ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದರು.

 

ಮಾಜಿ ಶಾಸಕ ರಮೇಶ್ ಕುಡಚಿ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಜನ ಶ್ರೀಮಂತ ರಾಜಕಾರಣಿಗಳು ಇದ್ದಾರೆ. ಎಲ್ಲರಿಗೂ ಜನರ ಕಳಕಳಿ ಇರುವುದಿಲ್ಲ. ಆದರೆ ಯಮಕನಮರಡಿ, ಬೆಳಗಾವಿ ಜನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಂತಹ ಸರಳ, ಸಾಮಾಜಿಕ ಕಳಕಳಿ ಹೊಂದಿದ ನಾಯಕ ಸಿಕ್ಕಿರುವುದು ನಿಮ್ಮ ಅದೃಷ್ಟ ಎಂದರು.

 

ಇಂಜಿನಿಯರಿಂಗ್ ಪದವಿಯಲ್ಲಿ 98% ಅಂಕ ಪಡೆದ ರಾಹುಲ್ ಜಾರಕಿಹೊಳಿ ಅವರು ಜನ ಸೇವೆಗೆ ಮುಂದಾಗಿರುವುದು ಸಮಾಜಕ್ಕೆ ಆದರ್ಶ. ರಾಹುಲ್‌ ಜನ ಸೇವೆ ಜಿಲ್ಲೆಯ ಯುವಕರಲ್ಲಿ ಖುಷಿ ತಂದಿದೆ. ನಮ್ಮಂತ ನಾಯಕರಿಗೂ ಹೆಮ್ಮೆ ಇದೆ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್‌ ಮುಖಂಡ ಪರಶುರಾಮ ಧಗೆ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಮ್ ಎಂ.ಜೆ, ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರ ಆಪ್ತ ಸಹಾಯಕ ಮಲಗೌಡ ಪಾಟೀಲ್, ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ಎಸ್ಸಿ ಘಟಕದ ಅಧ್ಯಕ್ಷ ಅನಂತ್ ಬ್ಯಾಕೂಡ, ರಾಜು ಕೊಲಾ ಸೇರಿದಂತೆ ಬೆಳಗಾವಿ ದಕ್ಷಿಣ, ಉತ್ತರ ಮತಕ್ಷೇತ್ರದ ಅನೇಕ ಮುಖಂಡರು ಇದ್ದರು.

 

ಬೆಳಗಾವಿ ದಕ್ಷಿಣ ಮತಕ್ಷೇತ್ರ: ಇದೇ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮರಗಮ್ಮಾ ಮತ್ತು ಬಾಲಾಜಿ ದೇವಸ್ಥಾನ, ಜೋಶಿ ಗಲ್ಲಿಯ ಮೋಜಿಮ್‌ ಮಸೀದಿ, ದುರ್ಗಾದೇವಿ ದೇವಸ್ಥಾನ, ರೆಹಮತ್‌ ಮಸೀದಿ ಮತ್ತು ಏಕದಂತ ರೇಸಿಡೆಸ್ಸಿ ವೆಲ್ಪರ್‌ ಅಸೋಸಿಯನ್‌, ವಾಲ್ಮೀಕಿ ಭವನ, ಶ್ರೀ ಸಾಯಿ ನಾಗರಿಕ ಸಂಘಟನಾ, ಬನಶಂಕರಿ ದೇವಸ್ಥಾನ, ಭಾರತ ರತ್ನ ಡಾ. ಬಿ.ಆರ್.‌ ಅಂಬೇಡ್ಕರ್‌ ಸಂಘ, ಶ್ರೀ ಜಗದ್ಗುರು ಮೌನೇಶ್ವರ ಸೇವಸ್ಥಾನ, ಶ್ರೀ ಬೀರಲಿಂಗೇಶ್ವರ ಸೇವಸ್ಥಾನ ಪಂಚ ಕಮೀಟಿಗೆ ಕುರ್ಚಿಗಳು ಮತ್ತು ಸೌಂಡ್ ಸಿಸ್ಟಮ್ ಗಳನ್ನು ವಿತರಿಸಲಾಯಿತು.

 

ಬೆಳಗಾವಿ ಉತ್ತರ ಮತಕ್ಷೇತ್ರ: ಉಸ್ಮಾನಿಯಾ ಮಸೀದಿ, ಶ್ರೀ ಸಾಯಿ ಬಾಬಾ ದೇವಸ್ಥಾನ, ಬಸವಣ್ಣ ದೇವಸ್ಥಾನ, ಗಜಾನನ ದೇವಸ್ಥಾನ, ಜೈನ್‌ ಬಸ್ತಿ, ಸಾರ್ವಜನಿಕ ಶ್ರೀ ಗೋಕಲ ಅಷ್ಟಮಿ ಉತ್ಸವ ಮಂಡಳ, ಶ್ರೀ ಗಣೇಶ ಮಂದಿರ ಟ್ರಸ್ಟ್‌ ಕಮಿಟಿ, ತೆಲಗು ಕ್ರಿಶ್ಚಯನ್‌ ಚರ್ಚೆ, ಹರಳಯ್ಯಾ ಸಮಾಜ ಮಂಡಲ, ಮಸ್ಜೀದ್‌ ಈ ತೋಯ್ಬಾ ಮಸೀದಿಗೆ ಕುರ್ಚಿಗಳು ಮತ್ತು ಸೌಂಡ್ ಸಿಸ್ಟಮ್ ಗಳನ್ನು ವಿತರಿಸಲಾಯಿತು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ