ಗೋಕಾಕ ತಾಲೂಕಿನ ಗೊಡಚಿನ ಮಲ್ಲಿ ಸಮೀಪ ರಾಜ ರಸ್ತೆ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಗಾಯಗೊಂಡ ಸುಮಾರು 20ಕ್ಕೂ ಹೆಚ್ಚು ಗಾಯಾಳುಗಳು ನಗರದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಎಲ್ಲಾ ಗಾಯಾಳುಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪುತ್ರ ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಭೆಟ್ಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು.
ಈ ಅಪಘಾತದಲ್ಲಿ ಗಾಯಗೊಂಡ ಹೆಚ್ಚಿನ ಸಂಖ್ಯೆ ಗಾಯಾಳುಗಳ ಹೆಸರು ವಿಳಾಸ ಪಡೆದು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದೀಡಿರ ಭೆಟ್ಟಿ ನೀಡಿದ ಯುವನಾಯಕ ರಾಹುಲ್ ಜಾರಕಿಹೊಳಿ ಅವರು , ಗಾಯಾಳುಗಳ ಆರೋಗ್ಯದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಗಾಯಾಳುಗಳಿಗೆ ಎಲ್ಲ ವೈದ್ಯಕೀಯ ಸೌಕರ್ಯಗಳನ್ನು ವದಗಿಸುವಂತೆ ಮನವಿ ಮಾಡಿದರು.
Laxmi News 24×7