Breaking News

ಕ್ರೀಡೆಯಿಂದ ಉತ್ತಮ ಆರೋಗ್ಯ: ಯುವ ನಾಯಕ ರಾಹುಲ್‌

Spread the love

ಬೆಳಗಾವಿ: ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.

ಹೊಸ ವಂಟಮುರಿ ಗ್ರಾಮದಲ್ಲಿ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ನಡೆದ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ಬೆಳಗಾವಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.7

ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮಹತ್ವ ಕೊಟ್ಟಷ್ಟುಕ್ರೀಡೆಗೂ ಮಹತ್ವ ನೀಡಬೇಕು. ಇಂದಿನ ದಿನಮಾನಗಳಲ್ಲಿ ಗ್ರಾಮೀಣ ಕ್ರೀಡೆಗಳು ಮಾಯವಾಗುತ್ತಿದ್ದು, ಇಂತಹ ಕ್ರೀಡೆಗಳನ್ನು ಜೀವಂತವಾಗಿರಸಲು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.

ನಮ್ಮ ತಂದೆಯವರಾದ ಸತೀಶ ಜಾರಕಿಹೊಳಿ ಅವರು ಕೂಡಾ ಕ್ರೀಡೆಗೆ ಸಾಕಷ್ಟು ಪ್ರೋತ್ಸಹ ನೀಡಿದ್ದಾರೆ. ಅಲ್ಲದೇ ಸತೀಶ ಜಾರಕಿಹೊಳಿ ಫೌಂಡೇಶನ್‌ ವತಿಯಿಂದ ಕ್ರೀಡಾಳುಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕಲಿತ ಶಾಲೆ ಹಾಗೂ ಗ್ರಾಮದ ಹೆಸರು ತರಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹೊಸವಂಟಮುರಿ ಗ್ರಾಪಂ ಅಧ್ಯಕ್ಷೆ ಮಹಾದೇವಿ ಚೌಗಲಾ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಿದ್ದು ಸುಣಗಾರ, ರಾಮಣ್ಣಗುಳ್ಳಿ, ರಾಮಪ್ಪಾ ಹಂಚಿನಮನಿ, ಅರುಣನಾಥ ಬುವಾ, ನಿಂಗಪ್ಪಾ ಪಾಟೀಲ, ಲಕ್ಷ್ಮಣ ಮಸ್ತಿ, ಅರೀಫ್‌ ಮುಲ್ಲಾ ಆಗಮಿಸಿದ್ದರು.

ಈ ವೇಳೆ ಸಂತೋಷ ಪಾಟೀಲ, ಗೌಸಸಾಭ ಬೇಪಾರಿ, ಲಕ್ಷ್ಮಣ ಕಟಕಾಂಬಳೆ, ಯಲ್ಲಪ್ಪ ವಣ್ಣೂರಿ, ಸುರೇಶ ಜಿಂಡ್ರಾಳಿ, ನಿಂಗಪ್ಪ ಸ್ಯಾಮನ್ನವರ, ಬಸವರಾಜ ನಾಯಕ, ಕರೆಪ್ಪಾ ಕೊಚ್ಚರಗಿ, ರೋಹಿತ ಕಲರಾ, ಬಿ.ಎ. ದೊಡಮನಿ, ಸುಕಪ್ಪಾ ಪಕಾಲಿ ಸೇರಿದಂತೆ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.


Spread the love

About Laxminews 24x7

Check Also

ಟ್ವಿಟ್ಟರ್ ನಲ್ಲಿ ಅಂಜಲಿ ನಿಂಬಾಳ್ಕರ್ ಫಾಲೋ ಮಾಡಿದ್ ರಾಹುಲ್ ಗಾಂಧಿ

Spread the love ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಟ್ವಿಟ್ಟರ್ ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ