Breaking News

ರಾಹುಲ್ ಗಾಂಧಿ ಮೇಲೆ ಅತ್ಯಾಚಾರ ಮಾಡ್ತಿದ್ದಾರೆ- ನಲಪಾಡ್

Spread the love

ಬೆಂಗಳೂರು: ರಾಹುಲ್ ಗಾಂಧಿ ಅತ್ಯಾಚಾರ ಮಾಡ್ತಿದ್ದಾರೆ ಎಂದು ಕರ್ನಾಟಕ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್​​ ಗಂಭೀರ ಆರೋಪ ಮಾಡಿದ್ದಾರೆ.

ಇ.ಡಿ ಅಧಿಕಾರಿಗಳು ರಾಹುಲ್ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿ ಕಾಂಗ್ರೆಸ್ ನಾಯಕರು ಬೃಹತ್ ಜಾಥಾವನ್ನು ನಗರದಲ್ಲಿ ನಡೆಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ಆಕ್ರೋಶ ಹೊರಹಾಕಿದ ನಲಪಾಡ್​​, ರಾಹುಲ್​​ ಮೇಲೆ ಅತ್ಯಾಚಾರ ಮಾಡ್ತಿದ್ದಾರೆ. ಅತ್ಯಾಚಾರ ಎಂದರೇ ರೇಪ್​​ ಅಲ್ಲ ದೌರ್ಜನ್ಯ. ನಮ್ಮ ಮಾಜಿ ಅಧ್ಯಕ್ಷರ ಮೇಲೆ ದೌರ್ಜನ್ಯ ಮಾಡುತ್ತಿರೋ ಖಂಡನೀಯ.

ನಮ್ಮ ಮಾಜಿ ಅಧ್ಯಕ್ಷ ಮೇಲೆ ದೌರ್ಜನ್ಯ ಮಾಡಿದರೇ ದೇವರು ಒಳ್ಳೆದು ಮಾಡೋದಿಲ್ಲ. ಇದನ್ನು ಇಡೀ ದೇಶದ ಜನರು ನೋಡ್ತಿದ್ದಾರೆ.. ಇ.ಡಿ-ಐ.ಟಿ ಏಜೆನ್ಸಿಗಳನ್ನು ಇಟ್ಟುಕೊಂಡು ಏನ್​ ಆಟವಾಡುತ್ತಿದ್ದಾರೆ ಅನ್ನೋದನ್ನು ದೇವರು ಕೂಡ ನೋಡ್ತಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ಜನರೇ 2023 ಮತ್ತು 2024ರ ಚುನಾವಣೆಯಲ್ಲಿ ನೀಡುತ್ತಾರೆ. ಪೊಲಿಟಿಕಲ್​ ಅಜೆಂಡಾ ಇಟ್ಟುಕೊಂಡು ಈ ರೀತಿ ಮಾಡ್ತಿದ್ದಾರೆ ಎಂದು ನಲಪಾಡ್ ಆರೋಪಿದರು.


Spread the love

About Laxminews 24x7

Check Also

ಶಾಸಕ ಕೆ.ಸಿ.ವಿರೇಂದ್ರ ಪಪ್ಪಿಗೆ ಸೇರಿದ 50.33 ಕೋಟಿ ಮೌಲ್ಯದ 40 ಕೆ.ಜಿ. ಚಿನ್ನದ ಗಟ್ಟಿ ವಶ: ಇಡಿ

Spread the love ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್‌ ದಂಧೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ