ಪಬ್ಲಿಕ್ ಟಿವಿ ವರದಿಗಾರನ ಸಾವು.. ಅಪ್ಪನ ಪ್ರೀತಿ ಏನು ಎಂದು ಅರಿಯುವ ಮುನ್ನವೇ ಅಪ್ಪನನ್ನು ಕಳೆದುಕೊಂಡ 1 ವರ್ಷದ ಕಂದ.
ರಾಮನಗರದ ಪಬ್ಲಿಕ್ ಟಿವಿ ವರದಿಗಾರರೊಬ್ಬರು ಇಂದು ಕರ್ತವ್ಯ ಮುಗಿಸಿ ಬೆಂಗಳೂರಿಗೆ ತೆರಳುವ ಸಮಯದಲ್ಲಿ ಅಪಘಾತದಲ್ಲಿ ಸಾವನಪ್ಪಿದ್ದಾರೆ.. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಮಾದ್ಯಮದವರು ಕೂಡ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.. ಅದೇ ರೀತಿ ನಿನ್ನೆ ಪಾದರಾಯನಪುರ ಘಟನೆಯ ವರದಿ ಮಾಡಿ ಮರಳುವ ಸಂದರ್ಭದಲ್ಲಿ ಅವರು ಈ ಘಟನೆ ನಡೆದಿದೆ..
ಹೌದು ಪಬ್ಲಿಕ್ ಟಿವ್ ವರದಿಗಾರರಾದ ಹನುಮಂತು ಸಾವನಪ್ಪಿರುವ ದುರ್ದೈವಿ.. ರಾಮನಗರದ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಪಾದರಾಯನಪುರ ಘಟನೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ಸುದ್ದಿ ಮಾಡಿ ಬರುತ್ತಿದ್ದ ಸಂಧರ್ಭದಲ್ಲಿ ಹಿಂದಿನಿಂದ ಬಂದ ATM ವಾಹನ ಡಿಕ್ಕಿ ಹೊಡೆದು ಸಾವನಪ್ಪಿದ್ದಾರೆ.. ರಾಮನಗರದ ಕಾರಾಗೃಹದ ಬಳಿಯೇ ಈ ಘಟನೆ ನಡೆದಿದೆ..
ಹನುಮಂತು ಮೂರು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು.. ಒಂದು ವರ್ಷದ ಮಗು ಇದ್ದು, ವಿವಾಹವಾಗಿ ಮೂರು ವರ್ಷವಾಗಿತ್ತು. ಒಂದು ವರ್ಷದ ಮಗು ಕೂಡ ಇದ್ದು, ಅಪ್ಪನ ಪ್ರೀತಿ ಏನು ಎಂದು ಅರಿಯುವ ಮುನ್ನವೇ ಅಪ್ಪನನ್ನು ಕಳೆದುಕೊಂಡಿದೆ..
ಹನುಮಂತು ಅವರು ಕಳೆದ 6 ವರ್ಷಗಳಿಂದಲೂ ರಾಮನಗರ ವದಿಗಾರರಾಗಿ ಪಬ್ಲಿಕ್ ಟಿ ವಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹನುಮಂತು ನಿಧನಕ್ಕೆ ಪತ್ರಕರ್ತ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಅವರ ಕುಟುಂಬದ ನೋವು ಮುಗಿಲು ಮುಟ್ಟಿದೆ.. ಹನುಮಂತು ಅವರ ಆತ್ಮಕ್ಕೆ ಶಾಂತಿ ಸಿಗಲಿ.. ಆ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಭಗವಂತ..