ಬೆಳಗಾವಿ – ಇಲ್ಲಿಯ ಮಾಳಮಾರುತಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಗಾಂಜಾ ಮಾರುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ ಪಾಟೀಲ ನೇತೃತ್ವದ ತಂಡ ಅಶೋಕನಗರ ಇಎಸ್‌ಐ ಆಸ್ಪತ್ರೆಯ ಸಮೀಪ ದಾಳಿ ಮಾಡಿ, ಗಾಂಜಾ ಮಾರಾಟ ಮಾಡುತ್ತಿದ್ದ,
೧) ಸರ್ಫರಾಜ ಸಜರ ಮುಲ್ಲಾ, (೩೫) ಸಾ: ನ್ಯೂ ಗಾಂಧಿನಗರ ಬೆಳಗಾವಿ.
೨) ಜಾಫರ ಹುಸೇನಸಾಬ ಸೊಲ್ಲಾಪೂರ, (೨೪) ಸಾ: ವಡ್ಡರವಾಡಿ ಬೆಳಗಾವಿ,
೩) ನರೇಶ ತಂದೆ ಗೌಡಾ ಲೋಂಡೆ, (೪೮) ಸಾ|| ಗ್ಯಾಂಗವಾಡಿ ಬೆಳಗಾವಿ.
ಇವರನ್ನು ಬಂಧಿಸಿದೆ.
ಬಂಧಿತರಿಂದ ೧ ಕೆಜಿ. ೪೫ ಗ್ರಾಂ ತೂಕದ ಗಾಂಜಾ ಅಂದಾಜು ಬೆಲೆ ರೂ. ೧೦,೪೫೦/-, ಹಣ ೫೦೦/- ರೂ, ಮತ್ತು ನಂಬರ ಪ್ಲೇಟ್ ಇಲ್ಲದ ಸ್ಕೂಟಿ ಒಂದು , ೫,೦೦೦ ರೂ ಇವುಗಳನ್ನು ಜಪ್ತು ಪಡಿಸಿಕೊಂಡು, ತನಿಖೆ ಮುಂದುವರೆಸಲಾಗಿದೆ.
ಈ ಪ್ರಕರಣವನ್ನು ಭೇದಿಸಿದ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಉಪ ಆಯುಕ್ತರು ಶ್ಲಾಘಿಸಿದ್ದಾರೆ.
Laxmi News 24×7